Subscribe to Gizbot

ಹುರ್ರೇ! ವಾಟ್ಸಾಪ್ ವಾಯ್ಸ್ ಕಾಲಿಂಗ್ ಇನ್ನು ವಿಂಡೋಸ್ ಫೋನ್‌ಗೂ

Written By:

ವಿಂಡೋಸ್ ಫೋನ್‌ಗಳಿಗಾಗಿ ವಾಟ್ಸಾಪ್ ವಾಯ್ಸ್ ಕಾಲಿಂಗ್ ಅಭಿವೃದ್ಧಿ ಹಂತದಲ್ಲಿದೆ ಎಂದು ವರದಿಗಳಿಂದ ದೃಢೀಕರಿಸಲಾಗಿದೆ.

ಹುರ್ರೇ! ವಾಟ್ಸಾಪ್ ವಾಯ್ಸ್ ಕಾಲಿಂಗ್ ಇನ್ನು ವಿಂಡೋಸ್ ಫೋನ್‌ಗೂ

ವಾಟ್ಸಾಪ್‌ನ ಬೆಂಬಲ ತಂಡವು ವಿಂಡೋಸ್ ಫೋನ್ ಬಳಕೆದಾರರಿಗೆ ನೀಡಿದ ಉತ್ತರದಲ್ಲಿ, ನಿಮ್ಮ ಪ್ಲಾಟ್‌ಫಾರ್ಮ್ (ವಿಂಡೋಸ್ ಫೋನ್) ಗಾಗಿ ವಾಟ್ಸಾಪ್ ಕಾಲಿಂಗ್ ಕಾರ್ಯವು ಇನ್ನೂ ಪ್ರಗತಿಯಲ್ಲಿದೆ ಎಂಬುದಾಗಿ ಹೇಳಿತ್ತು.

ಇದನ್ನೂ ಓದಿ: ಜೀವನ ಶೈಲಿಯನ್ನೇ ಬದಲಾಯಿಸಿದ ವಾಟ್ಸಾಪ್ 10 ಅದ್ಭುತಗಳು

ಇನ್ನು ವಾಟ್ಸಾಪ್ ವಾಯ್ಸ್ ಕಾಲಿಂಗ್ ವಿಂಡೋಸ್ ಫೋನ್‌ಗಳಿಗೆ ಯಾವಾಗ ಬರಲಿದೆ ಎಂಬುದನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ವಿಂಡೋಸ್ ಫೋನ್‌ಗಳಿಗೆ ಈ ವಾಯ್ಸ್ ಕಾಲಿಂಗ್ ಫೀಚರ್ ಯಾವಾಗ ಬರಲಿದೆ ಎಂಬುದನ್ನು ನಾವು ತಿಳಿಸಲಾಗುವುದಿಲ್ಲ ಆದರೆ ವಿಂಡೋಸ್ ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಇದನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಿದ್ದೇವೆ ಎಂದು ತಂಡ ತಿಳಿಸಿದೆ.

ಹುರ್ರೇ! ವಾಟ್ಸಾಪ್ ವಾಯ್ಸ್ ಕಾಲಿಂಗ್ ಇನ್ನು ವಿಂಡೋಸ್ ಫೋನ್‌ಗೂ

ಸದ್ಯಕ್ಕೆ ವಾಟ್ಸಾಪ್ ವಾಯ್ಸ್ ಕಾಲಿಂಗ್ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಾಗುತ್ತಿದೆ. ವಾಟ್ಸಾಪ್‌ನ ಸಹಸ್ಥಾಪಕರಾದ ಬ್ರಿಯಾನ್ ಏಕ್ಟನ್ ಪ್ರಕಾರ, ಕೆಲವೇ ವಾರಗಳಲ್ಲಿ ವಾಟ್ಸಾಪ್‌ನ ಈ ಫೀಚರ್ ಐಓಎಸ್ ಬಳಕೆದಾರರಿಗೂ ಲಭ್ಯವಾಗಲಿದೆ ಎಂದಾಗಿದೆ.

ಹುರ್ರೇ! ವಾಟ್ಸಾಪ್ ವಾಯ್ಸ್ ಕಾಲಿಂಗ್ ಇನ್ನು ವಿಂಡೋಸ್ ಫೋನ್‌ಗೂ

ಇನ್ನು ಐಓಎಸ್ ಅಥವಾ ವಿಂಡೋಸ್ ಯಾವುದು ಮೊದಲು ಈ ಫೀಚರ್ ಅನ್ನು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಹುರ್ರೇ! ವಾಟ್ಸಾಪ್ ವಾಯ್ಸ್ ಕಾಲಿಂಗ್ ಇನ್ನು ವಿಂಡೋಸ್ ಫೋನ್‌ಗೂ

ಇನ್ನು ಆಂಡ್ರಾಯ್ಡ್ ಬಳಕೆದಾರರು ವಾಯ್ಸ್ ಕಾಲಿಂಗ್‌ಗಾಗಿ ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ.

English summary
It has been confirmed that WhatsApp voice calling for Windows phones is in the developmental stage at present. In a mailed reply by the support team of WhatsApp to a user of a Windows phone, it was written, "WhatsApp Calling for your platform (Windows Phone) is still in the works.".
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot