WhatsApp ಸ್ಟೇಟಸ್‌ನಲ್ಲಿ ಹೊಸ ಫೀಚರ್ಸ್!: ಬಳಸುವುದು ಹೇಗೆಂದು ತಿಳಿಯಿರಿ
ವಾಟ್ಸಾಪ್ ಇತ್ತೀಚೆಗೆ ಬಳಕೆದಾರರು ಸಂತಸಪಡುವ ಅತ್ಯಾಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದೆ. ಅದರಂತೆ ಈ ಹಿಂದೆ ಆಂಡ್ರಾಯ್ಡ್ ಡಿವೈಸ್‌ಗಳಿಗೆ ಪರಿಚಯಿಸಲಾಗಿದ್ದ ಸೌಲಭ್ಯವನ್ನು ಇದೀಗ ಐಓಎಸ್ ಬಳಕೆದಾರರಿಗೂ ಲಭ್ಯವಾಗಿಸಿದ್ದು, ಈ ಮೂಲಕ ವಾಟ್ಸಾಪ್ ಸ್ಟೇಟಸ್ ಅನ್ನು ಇನ್ನಷ್ಟು ರಂಜನೀಯವಾಗಿಸಬುಹುದು.
ಹೌದು, ಆಪಲ್ ಫೋನ್ ಬಳಕೆದಾರರು ವಾಟ್ಸಾಪ್‌ನಲ್ಲಿ ಈಗಾಗಲೇ ಹಲವು ಫೀಚರ್ಸ್‌ಗಳನ್ನು ಬಳಕೆ ಮಾಡುತ್ತಿದ್ದಾರೆ. ಅದರಂತೆ ಈಗ ಹೊಸದಾಗಿ ಸ್ಟೇಟಸ್ ವಿಭಾಗದಲ್ಲಿ ಮತ್ತೊಂದು ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಈ ಮೂಲಕ ವೈಯುಕ್ತೀಕರಿಸಿದ ವಾಯ್ಸ್ ನೋಟ್ (Voice Status feature) ಅನ್ನು ಶೇರ್ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಏನಿದು ಹೊಸ ಫೀಚರ್ಸ್, ಇದನ್ನು ಐಫೋನ್‌ನಲ್ಲಿ ಸಕ್ರಿಯಗೊಳಿಸುವುದು ಹೇಗೆ? ಎಂಬ ಮಾಹಿತಿ ಇಲ್ಲಿದೆ ನೋಡಿ.

ಆಂಡ್ರಾಯ್ಡ್ ಬಳಕೆದಾರರಿಗೆ ಕಳೆದ ತಿಂಗಳು ಸ್ಟೇಟಸ್ ವಿಭಾಗದಲ್ಲಿ ಈ ವಾಯ್ಸ್ ನೋಟ್ ಹಂಚಿಕೊಳ್ಳುವ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಇದು ಅತ್ಯಂತ ಯಶಸ್ವಿಯಾದ ಹಿನ್ನೆಲೆ ಐಫೋನ್ ಬಳಕೆದಾರರು ಸಹ ಈ ಸೌಲಭ್ಯವನ್ನು ಪಡೆದುಕೊಳ್ಳಲು ಕಾತುರದಿಂದ ಕಾಯುತ್ತಿದ್ದರು. ಅದರಂತೆ ವಾಟ್ಸಾಪ್ ಇದೀಗ ಐಫೋನ್ ಬಳಕೆದಾರರಿಗೂ ಈ ಸೌಲಭ್ಯ ಕಲ್ಪಿಸಿದೆ. ಹೀಗಾಗಿ ಐಫೋನ್ ಬಳಕೆದಾರರು ವಾಯ್ಸ್ ಮೆಸೆಜ್ ಅನ್ನು ರೆಕಾರ್ಡ್ ಮಾಡಿಕೊಂಡು ಮತ್ತು ಶೇರ್ ಮಾಡಬಹುದಾಗಿದೆ.
ವಾಟ್ಸಾಪ್ ಅಪ್‌ಡೇಟ್ ಮಾಡಿ: ವಾಟ್ಸಾಪ್‌ನ 23.5.77 ಆವೃತ್ತಿಯೊಂದಿಗೆ ಈ ವಾಯ್ಸ್ ಸ್ಟೇಟಸ್ ಫೀಚರ್ಸ್ ಕಾಣಿಸಿಕೊಳ್ಳಲಿದ್ದು, ಈ ಮೂಲಕ ಐಫೋನ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಪ್‌ಸ್ಟೋರ್‌ಗೆ ಹೋಗಿ ವಾಟ್ಸಾಪ್ ಆಪ್ ಅನ್ನು ಈ ಆವೃತ್ತಿಗೆ ಅಪ್‌ಡೇಟ್ ಮಾಡಬೇಕಿದೆ. ಇದಾದ ನಂತರ ಸ್ಟೇಟಸ್ ವಿಭಾಗದಲ್ಲಿ ವಿಶೇಷವಾದ ಅನುಭವ ಪಡೆದುಕೊಳ್ಳಬಹುದು. ಹಾಗಿದ್ರೆ, ನೀವು ವಾಟ್ಸಾಪ್ ಅಪ್‌ಡೇಟ್ ಮಾಡಿದ ನಂತರ ಹೇಗೆ ಬಳಕೆ ಮಾಡಿಕೊಳ್ಳುವುದು ಎಂಬುದನ್ನು ವಿವರಿಸಿದ್ದೇವೆ ಓದಿರಿ.

ಹಂತ 1: ಮೊದಲು ನಿಮ್ಮ ಐಫೋನ್‌ನಲ್ಲಿ ವಾಟ್ಸಾಪ್ ಆಪ್ ಓಪನ್ ಮಾಡಿ. ನಂತರ ಡಿಸ್‌ಪ್ಲೇ ಕೆಳ ಭಾಗದಲ್ಲಿರುವ ಸ್ಟೇಟಸ್ ಟ್ಯಾಬ್‌ಗೆ ಹೋಗಿ. ಅಲ್ಲಿ ಕೆಳಗಿನ ಬಲ ಮೂಲೆಯಲ್ಲಿರುವ ಪೆನ್ಸಿಲ್ ಐಕಾನ್‌ನೊಂದಿಗೆ ಕಾಣಿಸಿಕೊಳ್ಳುವ ಬಟನ್ ಮೇಲೆ ಟ್ಯಾಪ್ ಮಾಡಿ. ಇದಾದ ನಂತರ ವಾಯ್ಸ್ ಮೆಸೆಜ್ ಅನ್ನು ರೆಕಾರ್ಡ್ ಮಾಡಲು ಮೈಕ್ರೋಫೋನ್ ಐಕಾನ್ ಮೇಲೆ ಟ್ಯಾಪ್ ಮಾಡಿ.
ಹಂತ 2: ರೆಕಾರ್ಡ್ ಮಾಡುವ ವೇಳೆ ನೀವು ಮೈಕ್ರೋಫೋನ್ ಐಕಾನ್ ಅನ್ನು ದೀರ್ಘವಾಗಿ ಹಿಡಿದಿಟ್ಟುಕೊಳ್ಳಬೇಕಾಗುತ್ತದೆ. ಇನ್ನು ನೀವು ಈ ವಾಯ್ಸ್ ನೋಟ್ ವಿಭಾಗದಲ್ಲಿ 30 ಸೆಕೆಂಡುಗಳವರೆಗೆ ಮಾತ್ರ ರೆಕಾರ್ಡ್ ಮಾಡಬಹುದು ಎಂಬುದು ನಿಮ್ಮ ಗಮನಕ್ಕೆ ಇರಲಿ. ಇದಾದ ನಂತರ ಐಕಾನ್ ಮೇಲಿನ ನಿಮ್ಮ ಬೆರಳನ್ನು ತೆಗೆಯಿರಿ.
ಹಂತ 3: ಬಳಿಕ ಒಮ್ಮೆ ನೀವು ಮಾಡಿ ರೆಕಾರ್ಡ್ ಅನ್ನು ಆಲಿಸಿ. ಅದು ಸರಿ ಇದ್ದರೆ ಹಂಚಿಕೊಳ್ಳಿ, ಇಲ್ಲವಾದರೆ ಮತ್ತೊಮ್ಮೆ ರೆಕಾರ್ಡ್ ಮಾಡಿ ಶೇರ್ ಮಾಡಿ. ಇದಕ್ಕಾಗಿ ನೀವು ಸ್ಟೇಟಸ್ ವಿಭಾಗದಲ್ಲಿ ಕಾಣಿಸಿಕೊಳ್ಳುವ ಸೆಂಡ್ ಐಕಾನ್ ಮೇಲೆ ಟ್ಯಾಪ್ ಮಾಡಿದರೆ ಸಾಕು ನಿಮ್ಮ ಸಂಪರ್ಕದಲ್ಲಿ ಇರುವವರಿಗೆ ಈ ಮೆಸೆಜ್ ಕಾಣಿಸಿಕೊಳ್ಳುತ್ತದೆ.
ಆಪಲ್ ಬಳಕೆದಾರರು ಈ ಸೌಲಭ್ಯ ಮಾತ್ರವಲ್ಲದೇ ಕೆಲವು ದಿನಗಳಲ್ಲಿ ಪಿಕ್ಚರ್ ಇನ್ ಪಿಕ್ಚರ್ (ಪಿಐಪಿ) ಮೋಡ್ ಸೌಲಭ್ಯವನ್ನೂ ಸಹ ಪಡೆದುಕೊಳ್ಳಬಹುದು ಎಂದು ವಾಟ್ಸಾಪ್‌ತಿಳಿದಿದೆ. ಈ ಮೂಲಕ ಐಒಎಸ್ ಬಳಕೆದಾರರು ವಾಟ್ಸಾಪ್ ವಿಡಿಯೋ ಕರೆ ಸಮಯದಲ್ಲಿ ವಿಡಿಯೋವನ್ನು ವಿರಾಮಗೊಳಿಸದೆಯೇ ಬಹು ಕಾರ್ಯಗಳನ್ನು ನಿರ್ವಹಿಸಲು ಅವಕಾಶ ಸಿಗಲಿದೆ.

ಇದಿಷ್ಟೇ ಅಲ್ಲದೆ ವಾಟ್ಸಾಪ್ ಇನ್ನಷ್ಟು ಹೊಸ ಫೀಚರ್ಸ್‌ಗಳ ಮೇಲೆ ಕಾರ್ಯನಿರ್ವಹಿಸುತ್ತಿದ್ದು, ಇವುಗಳನ್ನು ಆಪ್‌ನ ಭವಿಷ್ಯದ ನವೀಕರಣಗಳಲ್ಲಿ ಬಿಡುಗಡೆ ಮಾಡಲು ಯೋಜಿಸಿದೆ. ಅದರಲ್ಲಿ ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳಲ್ಲಿ ಸ್ಪ್ಲಿಟ್ ವ್ಯೂ, ವಿಂಡೋಸ್‌ಗಾಗಿ ಕಾಲ್ ಲಿಂಕ್ ಫೀಚರ್ಸ್, ಗ್ರೂಪ್ ಕರೆಗಳ ಸಮಯವನ್ನು ನಿಗದಿಪಡಿಸುವ ಸೌಲಭ್ಯ ಸೇರಿದಂತೆ ಇನ್ನಿತರೆ ಫೀಚರ್ಸ್‌ಗಳು ಇವೆ.


Click it and Unblock the Notifications








