Home
ಸುದ್ದಿಜಾಲ

Whatsapp ನಲ್ಲಿ ಇದೀಗ 'ಹೆಚ್‌ಡಿ' ಫೀಚರ್ಸ್‌... ಬಳಕೆ ಹೇಗೆ?

ವಾಟ್ಸಾಪ್‌ (Whatsapp) ಬಳಕೆದಾರರು ಕೆಲವು ದಿನಗಳ ಹಿಂದೆಯಷ್ಟೇ ಸ್ಕ್ರೀನ್‌ ಶೇರ್‌ ಫೀಚರ್ಸ್‌ (Screen share features) ಪಡೆಯುವ ಮೂಲಕ ಬಹಳ ಖುಷಿಯಲ್ಲಿದ್ದರು ಈ ನಡುವೆ ಮತ್ತೊಂದು ಹೊಸ ಫೀಚರ್ಸ್‌ ಅನ್ನು ಘೋಷಣೆ ಮಾಡಲಾಗಿದ್ದು, ಫೋಟೋ ಪ್ರಿಯರಿಗೆ ಇದಂತೂ ಹೆಚ್ಚಿನ ಸಂತಸ ಉಂಟು ಮಾಡಿದೆ.

ಹೌದು, ವಾಟ್ಸಾಪ್‌ ಬಳಕೆದಾರರು ಈ ಮೊದಲು ಉತ್ತಮ ರೆಸಲ್ಯೂಶನ್‌ ಇರುವ ಫೋಟೋ ಕಳುಹಿಸಬೇಕು ಎಂದರೆ ಅದನ್ನು ಡಾಕ್ಯೂಮೆಂಟ್ ಫಾರ್ಮ್ಯಾಟ್‌ನಲ್ಲಿ ಕಳುಹಿಸಬೇಕಿತ್ತು. ಇದು ಕೆಲವರಿಗೆ ಬಹಳ ಗೊಂದಲ ಉಂಟು ಮಾಡುತ್ತಿತ್ತು. ಆದರೆ, ಇನ್ಮುಂದೆ ಇದ್ಯಾವುದೇ ಸಮಸ್ಯೆ ಇರುವುದಿಲ್ಲ. ನೀವು ಸೆರೆಹಿಡಿದ ಯಾವುದೇ ಫೋಟೋಗಳನ್ನು ಅದೇ ರೆಸಲ್ಯೂಶನ್‌ನಲ್ಲಿ ನಿಮಗೆ ಬೇಕೆಂದವರಿಗೆ ಕಳುಹಿಸಬಹುದಾಗಿದೆ. ಹಾಗಿದ್ರೆ, ಬನ್ನಿ ವಾಟ್ಸಾಪ್‌ನ ಈ ಫೀಚರ್ಸ್‌ ಏನು ಎಂದು ತಿಳಿಯೋಣ.

Whatsapp ನಲ್ಲಿ ಇದೀಗ 'ಹೆಚ್‌ಡಿ' ಫೀಚರ್ಸ್‌... ಬಳಕೆ ಹೇಗೆ?

ವಾಟ್ಸಾಪ್‌ ಮೂಲಕ ಹೆಚ್‌ಡಿ ಫೋಟೋ ಕಳುಹಿಸಬಹುದು: ಆಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ಇನ್ಮುಂದೆ ಹೆಚ್‌ಡಿ ಫೋಟೋಗಳನ್ನು (HD photo) ಕಳುಹಿಸಲು ವಾಟ್ಸಾಪ್‌ ಅನುಮತಿಸಿದೆ. ಕಂಪನಿಯು ಜೂನ್‌ನಲ್ಲಿ ಐಓಎಸ್‌ ಹಾಗೂ ಆಂಡ್ರಾಯ್ಡ್‌ ಬೀಟಾ ಪರೀಕ್ಷೆಗಾಗಿ ಈ ಫೀಚರ್ಸ್‌ ಅನ್ನು ಹೊರತಂದಿತ್ತು. ಆದರೆ, ಈಗ ಈ ವಿಶೇಷ ಫೀಚರ್ಸ್‌ ಬಳಕೆದಾರರಿಗೆ ಲಭ್ಯ ಆಗುತ್ತಿದೆ.

ಈ ಸಂಬಂಧ ಮೆಟಾ ಸಿಇಓ ಮಾರ್ಕ್ ಜುಕರ್‌ಬರ್ಗ್ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಮಾಹಿತಿ ನೀಡಿದ್ದಾರೆ. ವಾಟ್ಸಾಪ್ ಶೇರಿಂಗ್‌ ಫೋಟೋ ಇದೀಗ ಅಪ್‌ಗ್ರೇಡ್ ಅನ್ನು ಪಡೆದುಕೊಂಡಿದೆ. ಈಗ ನೀವು ಹೆಚ್‌ಡಿ ನಲ್ಲಿ ಕಳುಹಿಸಬಹುದು ಎಂದು ಬರೆದಿದ್ದಾರೆ. ಈ ಮೂಲಕ ಸಾಕಷ್ಟು ಬಳಕೆದಾರರು ಹೆಚ್‌ಡಿ ಫೋಟೋಗಳನ್ನು ಕಳುಹಿಸುವ ಮೂಲಕ ಸಂತಸ ಹೊರಹಾಕಿದ್ದಾರೆ.

ಈ ನಡುವೆ ಹೆಚ್‌ಡಿ ಫೋಟೋಗಳು ಮುಂದಿನ ಕೆಲವು ವಾರಗಳಲ್ಲಿ ಜಾಗತಿಕವಾಗಿ ಹೊರಹೊಮ್ಮುತ್ತಿದೆ ಮತ್ತು ಹೆಚ್‌ಡಿ ವಿಡಿಯೋಗಳ ಆಯ್ಕೆಯು ಶೀಘ್ರದಲ್ಲೇ ಬರಲಿದೆ ಎಂದು ವಾಟ್ಸಾಪ್ ಸಹ ಮಾಹಿತಿ ನೀಡಿದೆ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಆನಂದಿಸಲು ನೀವು ಈಗ ಹೆಚ್ಚಿನ ರೆಸಲ್ಯೂಶನ್‌ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಆಯ್ಕೆಯನ್ನು ಹೊಂದಿದ್ದೀರಿ. ಇದು ಎಂಡ್‌ ಟು ಎಂಡ್‌ ಅನ್ನು ಹೊಂದಿದೆ ಎಂದು ತಿಳಿಸಲಾಗಿದೆ.

ವಾಟ್ಸಾಪ್‌ನಲ್ಲಿ ಹೆಚ್‌ಡಿ ಫೋಟೋಗಳನ್ನು ಕಳುಹಿಸುವುದು ಹೇಗೆ?
ಹಂತ 1: ಹೆಚ್‌ಡಿ ಫೋಟೋ ಕಳುಹಿಸಲು ಮೊದಲು ನೀವು ವಾಟ್ಸಾಪ್‌ ಓಪನ್‌ ಮಾಡಿ, ನಂತರದಲ್ಲಿ ಚಾಟ್ ವಿಭಾಗ ಓಪನ್ ಮಾಡಿ. ಬಳಿಕ ಫೋನ್‌ನಲ್ಲಿ ಸ್ಟೋರೇಜ್‌ ಆಗಿರುವ ಫೋಟೋಗಳನ್ನು ಪ್ರವೇಶಿಸಲು ಕ್ಯಾಮರಾ ಐಕಾನ್ ಅಥವಾ ಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ಹಂತ 2: ಇದಾದ ನಂತರದಲ್ಲಿ ಅಗತ್ಯವಿದ್ದರೆ ಶೀರ್ಷಿಕೆಯನ್ನು ಸೇರಿಸಿ ಮತ್ತು ಸೆಂಡ್‌ ಎಂಬ ಆಯ್ಕೆ ಮೇಲೆ ಟ್ಯಾಪ್‌ ಮಾಡಿ. ಈ ವೇಳೆ ನೀವು ವಾಟ್ಸಾಪ್‌ನಲ್ಲಿ ಪಾಪ್-ಅಪ್ ನಲ್ಲಿ ಫೋಟೋವನ್ನು ಸ್ಟ್ಯಾಂಡರ್ಡ್ ಗುಣಮಟ್ಟ (1,365x2,048 ಪಿಕ್ಸೆಲ್‌) ಅಥವಾ ಹೆಚ್‌ಡಿ ಗುಣಮಟ್ಟ (2,000x3,000 ಪಿಕ್ಸೆಲ್‌ಗಳು) ನಲ್ಲಿ ಕಳುಹಿಸಲು ಬಯಸುತ್ತೀರಾ ಎಂದು ಕೇಳುತ್ತದೆ. ಈ ವೇಳೆ ನಿಮಗೆ ಯಾವುದು ಅಗತ್ಯವೋ ಅದನ್ನು ಟ್ಯಾಪ್‌ ಮಾಡಿ. ಈ ಕೆಲಸ ಮಾಡಿದ ನಂತರ ನೀವು ಹೆಚ್‌ಡಿ ಫೋಟೋಗಳನ್ನು ಕಳುಹಿಸಿದ್ರೆ ಕೆಳಗಿನ ಎಡ ಮೂಲೆಯಲ್ಲಿ ಹೆಚ್‌ಡಿ ಎಂದು ಕಾಣಿಸಿಕೊಳ್ಳುತ್ತದೆ.

Whatsapp ನಲ್ಲಿ ಇದೀಗ 'ಹೆಚ್‌ಡಿ' ಫೀಚರ್ಸ್‌... ಬಳಕೆ ಹೇಗೆ?

ಇನ್ನು ವಾಟ್ಸಾಪ್‌ ಮೂಲಕ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವಾಗ 'ಸ್ಟ್ಯಾಂಡರ್ಡ್ ಕ್ವಾಲಿಟಿ' ಡೀಫಾಲ್ಟ್ ಆಯ್ಕೆಯಾಗಿ ಮುಂದುವರಿಯುತ್ತದೆ ಎಂದು ವಾಟ್ಸಾಪ್‌ ತಿಳಿಸಿದ್ದು, ಹೆಚ್ಚುವರಿಯಾಗಿ, ಬಳಕೆದಾರರು ಕಡಿಮೆ ಬ್ಯಾಂಡ್‌ವಿಡ್ತ್ ಸಂಪರ್ಕವನ್ನು ಹೊಂದಿರುವಾಗ ಫೋಟೋವನ್ನು ಸ್ವೀಕರಿಸಿದರೆ, ಅವರು ಪ್ರಮಾಣಿತ ಆವೃತ್ತಿಯನ್ನು ಇರಿಸಿಕೊಳ್ಳಲು ಅಥವಾ ಅದನ್ನು ಹೆಚ್‌ಡಿಗೆ ಅಪ್‌ಗ್ರೇಡ್ ಮಾಡಲು ಫೋಟೋ-ಬೈ-ಫೋಟೋ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇನ್ನು ವಾಟ್ಸಾಪ್‌ ಸ್ಕ್ರೀನ್ ಶೇರ್‌ ಫೀಚರ್ಸ್‌ ಅನ್ನು ಸಹ ಎಲ್ಲಾ ಬಳಕೆದಾರರಿಗೆ ನೀಡಿದ್ದು, ಇದು ಝೂಮ್‌ ಹಾಗೂ ಇನ್ನಿತರೆ ಹಲವು ಮೀಟಿಂಗ್‌ ಆಪ್‌ಗಳಂತೆ ಕೆಲಸ ಮಾಡುತ್ತದೆ. ಈ ಫೀಚರ್ಸ್‌ ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಇನ್ನಿತರೆ ವೃತ್ತಿಪರರಿಗೆ ಸಹಾಕವಾಗಲಿದೆ. ಅದರಲ್ಲೂ ಅಜ್ಜ-ಅಜ್ಜಿಯರಿಗೆ ಫೋನ್‌ ಅನ್ನು ಹೇಗೆ ಬಳಕೆ ಮಾಡಬೇಕು ಹಾಗೂ ಯಾವ ಆಪ್‌ನಲ್ಲಿ ಏನನ್ನು ಮಾಡಬೇಕು ಎಂದು ತಿಳಿಸಿಕೊಡಲು ಇದು ಅತ್ಯಂತ ಸೂಕ್ತ ಎಂದು ವಾಟ್ಸಾಪ್‌ ಹೇಳಿದೆ.

Best Mobiles in India

English summary
Any captured photos can be sent to anyone you want in the same resolution. WhatsApp has introduced HD features for this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+