ವಾಟ್ಸಾಪ್‌ನಲ್ಲಿ ವಾವ್ ಎನಿಸುವ ಫೀಚರ್ಸ್: ಒಂದೇ ವಾಟ್ಸಾಪ್ ಖಾತೆ 4 ಫೋನ್‌ಗಳಲ್ಲಿ ಬಳಕೆ!
ವಾಟ್ಸಾಪ್‌ನಲ್ಲಿ ವಾವ್ ಎನಿಸುವ ಅದೆಷ್ಟೋ ಫೀಚರ್ಸ್‌ಗಳನ್ನು ಇಂದು ನಾವು ಬಳಕೆ ಮಾಡುತ್ತಿದ್ದೇವೆ. ಈ ನಡುವೆ ಮತ್ತೊಂದು ವಿಶೇಷ ಫೀಚರ್ಸ್ ಅನ್ನು ಬಳಕೆದಾರರಿಗೆ ಲಭ್ಯವಾಗಿಸುತ್ತಿದ್ದು, ಈ ಮೂಲಕ ಒಂದೇ ನಂಬರ್ ಇರುವ ಖಾತೆಯನ್ನು ಹಲವು ಫೋನ್‌ಗಳಲ್ಲಿ ಬಳಕೆ ಮಾಡುವ ಸಾಮರ್ಥ್ಯವನ್ನು ಬಳಕೆದಾರರು ಪಡೆಯಲಿದ್ದಾರೆ. ಇದರಿಂದ ಸಾಕಷ್ಟು ಅನುಕೂಲ ಆಗಲಿದೆ.
ಹೌದು, ಪ್ರಮುಖ ಮೆಸೆಜಿಂಗ್ ಆಪ್ ಆಗಿರುವ ವಾಟ್ಸಾಪ್‌ನಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಈ ವಿಶೇಷ ಫೀಚರ್ಸ್ ಅನ್ನು ಕೆಲವೇ ದಿನಗಳಲ್ಲಿ ವಾಟ್ಸಾಪ್ ಬಳಕೆದಾರರು ಬಳಸಿಕೊಳ್ಳಬಹುದಾಗಿದೆ. ಹಾಗಿದ್ರೆ, ಒಂದೇ ಖಾತೆಯನ್ನು ಹೇಗೆ ವಿವಿಧ ಫೋನ್‌ಗಳಿಗೆ ಲಿಂಕ್ ಮಾಡುವುದು?, ಇದರಿಂದ ಖಾಸಗಿತನಕ್ಕೆ ಯಾವುದೇ ಸಮಸ್ಯೆ ಆಗುವುದಿಲ್ಲವೇ? ಎಂಬಿತ್ಯಾದಿ ಮಾಹಿತಿಗಾಗಿ ಈ ಲೇಖನ ಓದಿರಿ.

ಒಂದೇ ವಾಟ್ಸಾಪ್ ಖಾತೆ ಹಲವು ಫೋನ್‌ಗಳಲ್ಲಿ: ಈ ಮೊದಲು ಒಂದು ವಾಟ್ಸಾಪ್ ಖಾತೆಯನ್ನು ಒಂದೇ ಫೋನ್‌ನಲ್ಲಿ ಬಳಕೆ ಮಾಡಬೇಕಾಗಿತ್ತು ಅಥವಾ ಕ್ಯೂಆರ್ ಕೋಡ್ ಬಳಕೆ ಮಾಡಿಕೊಂಡು ಲ್ಯಾಪ್‌ಟಾಪ್ ಅಥವಾ ಸಿಸ್ಟಂನಲ್ಲಿ ವೆಬ್ ಆವೃತ್ತಿಯ ವಾಟ್ಸಾಪ್ ಬಳಕೆ ಮಾಡಬೇಕಾಗಿತ್ತು. ಆದರೆ, ಇನ್ಮುಂದೆ ನಾಲ್ಕು ಫೋನ್‌ಗಳಲ್ಲಿ ಈ ಒಂದೇ ಖಾತೆಯನ್ನು ಬಳಕೆಮಾಡುವ ಅವಕಾಶ ಲಭ್ಯವಾಗುತ್ತಿರುವುದರಿಂದ ಒಂದಕ್ಕಿಂತ ಹೆಚ್ಚು ಫೋನ್ ಹೊಂದಿರುವವರಿಗೆ ಬಹಳ ಪ್ರಯೋಜನಕಾರಿಯಾಗಿದೆ.
ಯಾರಿಗೆಲ್ಲಾ ಈ ಫೀಚರ್ಸ್ ಲಭ್ಯ?: ಈ ವಿಶೇಷ ಫೀಚರ್ಸ್ ಅನ್ನು ಎಲ್ಲಾ ಬಳಕೆದಾರರಿಗೂ ಲಭ್ಯವಾಗಿಸುತ್ತಿವೆ ವಾಟ್ಸಾಪ್. ಅಂದರೆ ಪ್ರಪಂಚದಾದ್ಯಂತ ಇರುವ ಆಂಡ್ರಾಯ್ಡ್ ಹಾಗೂ ಐಓಎಸ್ ಬಳಕೆದಾರರು ಈ ಸೇವೆ ಪಡೆದುಕೊಳ್ಳಬಹುದು ಎಂದು ಮಾಹಿತಿ ನೀಡಿದೆ. ಜೊತೆಗೆ ಒಂದು ವಾಟ್ಸಾಪ್ ಖಾತೆಯನ್ನು ಬಳಸಿಕೊಂಡು ಸೈನ್ ಔಟ್ ಮಾಡದೆಯೇ ಫೋನ್‌ಗಳ ನಡುವೆ ಬದಲಾಯಿಸಬಹುದು ಎಂದು ಉಲ್ಲೇಖಿಸಿದೆ.
ವಿಶೇಷ ಏನೆಂದರೆ ಒಂದು ಡಿವೈಸ್‌ನಲ್ಲಿ ಚಾಟ್ ಅನ್ನು ಎಲ್ಲಿ ನಿಲ್ಲಿಸಿದ್ದರೋ ಅದೇ ಚಾಟ್ ಅನ್ನು ಮತ್ತೊಂದು ಡಿವೈಸ್‌ನಲ್ಲಿ ಮುಂದುವರೆಸಬಹುದಾಗಿದೆ. ಅದರಲ್ಲೂ ವ್ಯಾಪಾರಿಗಳಿಗೆ ಇದು ಅತ್ಯಾನುಕೂಲವಾಗಲಿದ್ದು, ಬ್ಯುಸಿನೆಸ್ ಖಾತೆಯ ಅಡಿಯಲ್ಲಿ ತಮ್ಮ ಫೋನ್‌ಗಳಿಂದ ನೇರವಾಗಿ ಗ್ರಾಹಕರಿಗೆ ಪ್ರತಿಕ್ರಿಯಿಸಲು ಇದು ಅನುವು ಮಾಡಿಕೊಡುತ್ತದೆ. ಈ ವಿಶೇಷ ಫೀಚರ್ಸ್‌ನಲ್ಲಿ ಖಾಸಗಿತನಕ್ಕೆ ಧಕ್ಕೆ ಆಗುತ್ತದೆಯಾ ಎಂಬ ಆತಂಕ ಸಹ ನಿಮಗೆ ಬೇಡ.

ವಾಟ್ಸಾಪ್ ಈ ಹಿಂದಿನಿಂದಲೂ ಹೇಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ವಿಷಯಕ್ಕೆ ಮಹತ್ವ ನೀಡುತ್ತದೆಯೋ ಅದೇ ರೀತಿ ನೀವು ಯಾವುದೇ ಫೋನ್‌ನಲ್ಲಿ ನಿಮ್ಮ ವಾಟ್ಸಾಪ್ ಖಾತೆ ಬಳಕೆ ಮಾಡಿದರೂ ಸಹ ಅತ್ಯಂತ ಸುರಕ್ಷತೆಯಿಂದ ಚಾಟ್ ಪ್ರಕ್ರಿಯೆ ನಡೆಸಬಹುದಾಗಿದೆ. ಕಳೆದ ವರ್ಷ ನಾವು ಜಾಗತಿಕವಾಗಿ ಬಳಕೆದಾರರಿಗೆ ತಮ್ಮ ಎಲ್ಲಾ ಡಿವೈಸ್‌ಗಳಲ್ಲಿ ಮೆಸೆಜ್ ಕಳುಹಿಸುವ ಸಾಮರ್ಥ್ಯವನ್ನು ಪರಿಚಯಿಸಿದ್ದೇವೆ. ಹಾಗೆಯೇ ಈ ಹೊಸ ಫೀಚರ್ಸ್ ಪರಿಚಯಿಸುವ ಮೂಲಕ ಇದನ್ನು ಇನ್ನಷ್ಟು ಇನ್ನಷ್ಟು ಸುಧಾರಿಸುತ್ತಿದ್ದೇವೆ ಎಂದು ವಾಟ್ಸಾಪ್ ತಿಳಿಸಿದೆ.
ಹಂತ 1: ಮೊದಲು ನೀವು ವಾಟ್ಸಾಪ್ ಸೆಟ್ಟಿಂಗ್ ವಿಭಾಗಕ್ಕೆ ತಲುಪಿ ಅಲ್ಲಿ ಮೋರ್ ಆಪ್ಷನ್ ಮೇಲೆ ಟ್ಯಾಪ್ ಮಾಡಿ. ನಂತರ ಅಲ್ಲಿ ಲಿಂಕ್ಡ್ ಡಿವೈಸ್ ಎಂಬ ಹೊಸ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ. ಇದಾದ ನಂತರ ಈ ಫೀಚರ್ಸ್ ಅನ್ನು ಸಕ್ರಿಯಗೊಳಿಸಲು ಡಿಸ್‌ಪ್ಲೇ ಮೇಲೆ ಕಾಣಿಸಿಕೊಳ್ಳುವ ಸೂಚನೆಗಳನ್ನು ಅನುಸರಿಸಬಹುದು.
ಹಂತ 2: ನಂತರದಲ್ಲಿ ನಿಮ್ಮ ಪ್ರಾಥಮಿಕ ಫೋನ್ ಅನ್‌ಲಾಕ್ ಮಾಡಿ. ನಿಮ್ಮ ಡಿವೈಸ್ ಬಯೋಮೆಟ್ರಿಕ್ ದೃಢೀಕರಣವನ್ನು ಹೊಂದಿದ್ದರೆ, ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. ನೀವು ಬಯೋಮೆಟ್ರಿಕ್ ದೃಢೀಕರಣವನ್ನು ಸಕ್ರಿಯಗೊಳಿಸದಿದ್ದರೆ, ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು ಬಳಸುವ ಪಿನ್ ಅನ್ನು ನಮೂದಿಸಬೇಕಾಗುತ್ತದೆ.

ಹಂತ 3: ಬಳಿಕ ನೀವು ಲಿಂಕ್ ಮಾಡಲು ಬಯಸುವ ಫೋನ್ ಡಿಸ್‌ಪ್ಲೇ ಮೇಲೆ ನಿಮ್ಮ ಪ್ರಾಥಮಿಕ ಫೋನ್ ಅನ್ನು ಪಾಯಿಂಟ್ ಮಾಡಿ ಮತ್ತು ಅಲ್ಲಿ ಕಂಡುಬರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ. ಈ ಮಾರ್ಗವನ್ನು ಅನುಸರಿಸುವ ಮೂಲಕ ನೀವು ಸುಭವಾಗಿ ನಾಲ್ಕು ಫೋನ್‌ಗಲ್ಲಿ ನಿಮ್ಮ ವಾಟ್ಸಾಪ್ ಖಾತೆಯನ್ನು ಸಕ್ರಿಯಗೊಳಿಸಿಕೊಳ್ಳಬಹುದು.
ನೀವು ಈ ಪ್ರಕ್ರಿಯೆಯನ್ನು ಮುಗಿಸಿದ ನಂತರ ಪ್ರತಿ ಲಿಂಕ್ ಮಾಡಲಾದ ಫೋನ್ ಸ್ವತಂತ್ರವಾಗಿ ವಾಟ್ಸಾಪ್‌ಗೆ ಸಂಪರ್ಕಗೊಳ್ಳುತ್ತದೆ ಎಂದು ವಾಟ್ಸಾಪ್ ನಿಮಗೆ ಮಾಹಿತಿ ನೀಡುತ್ತದೆ. ಇದರೊಂದಿಗೆ ವೈಯಕ್ತಿಕ ಸಂದೇಶಗಳು, ಮೀಡಿಯಾ ಫೈಲ್‌ಗಳು ಮತ್ತು ಕರೆಗಳು ಅಂತ್ಯದಿಂದ ಕೊನೆಯವರೆಗೆ ಎನ್‌ಕ್ರಿಪ್ಟ್ ಆಗಿರುತ್ತವೆ ಎಂದು ತಿಳಿಸಲಿದ್ದು, ನಿಮ್ಮ ಪ್ರಾಥಮಿಕ ಫೋನ್ ದೀರ್ಘ ಕಾಲದವರೆಗೆ ನಿಷ್ಕ್ರಿಯವಾಗಿದ್ದರೆ ಎಲ್ಲಾ ಸಂಪರ್ಕಗೊಂಡ ಕಂಪ್ಯಾನಿಯನ್ ಡಿವೈಸ್‌ಗಳಲ್ಲಿ ಆಟೋಮ್ಯಾಟಿಕ್ ಆಗಿ ಲಾಗ್ ಔಟ್ ಮಾಡಲಾಗುತ್ತದೆ ಎಂದು ವಾಟ್ಸಾಪ್ ಉಲ್ಲೇಖಿಸುತ್ತದೆ.
ಎಂದಿನಿಂದ ಲಭ್ಯ?: ಈ ವಿಶೇಷ ಫೀಚರ್ಸ್ ಬಳಕೆಯನ್ನು ನೀವು ಮುಂದಿನ ವಾರದಿಂದ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದು ಸುಲಭವಾದ ಪ್ರಕ್ರಿಯೆಯಾಗಿದ್ದು, ಈ ಮೊದಲು ಹೇಗೆ
ವೆಬ್ ಬ್ರೌಸರ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ವಾಟ್ಸಾಪ್ ಅನ್ನು ಲಿಂಕ್ ಮಾಡಿ ಬಳಕೆ ಮಾಡಲಾಗುತ್ತಿತ್ತೋ ಅದೇ ರೀತಿ ಫೋನ್‌ಗಳಲ್ಲಿ ಬಳಕೆ ಮಾಡಬಹುದಾಗಿದೆ. ಹಾಗಿದ್ರೆ, ಸುಲಭ ರೀತಿಯಲ್ಲಿ ಹೇಗೆ ಲಿಂಕ್ ಮಾಡುವುದು ಎನ್ನುವುದನ್ನು ತಿಳಿದುಕೊಳ್ಳಿ.


Click it and Unblock the Notifications








