Whatsapp: ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್; ಇನ್ಮುಂದೆ ಸಂಖ್ಯೆಯಿಂದಲ್ಲ ಹೆಸರಿನ ಮೂಲಕ ಕರೆ ಮಾಡಿ
ವಾಟ್ಸಾಪ್ (Whatsapp) ಈಗಾಗಲೇ ಸಾಕು ಎನ್ನುವಷ್ಟು ಫೀಚರ್ಸ್ ಅನ್ನು ಪರಿಚಯಿಸುವ ಮೂಲಕ ಬಳಕೆದಾರರಿಗೆ ವಿವಿಧ ರೀತಿಯಲ್ಲಿ ಪ್ರಯೋಜನ ನೀಡುತ್ತಾ ಬಂದಿದೆ. ಈ ನಡುವೆ ಮತ್ತೆ ಅತ್ಯಾಕರ್ಷಕ ಫೀಚರ್ಸ್ ಅನ್ನು ನೀಡಲು ಮುಂದಾಗಿದ್ದು, ಈ ಮೂಲಕ ನಿಮ್ಮ ಗೌಪ್ಯತೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.
ಹೌದು, ಇಂದಿನ ದಿನಗಳಲ್ಲಿ ಯಾರೊಂದಿಗೂ ಏನನ್ನೇ ಹಂಚಿಕೊಂಡರೂ ಕಷ್ಟ. ಮುಂದಿನ ದಿನಗಳಲ್ಲಿ ಅದು ನಮಗೇ ತಿರುಗುಬಾಣವಾಗುತ್ತದೆ. ಅದರಂತೆ ವಾಟ್ಸಾಪ್ ಈ ರೀತಿಯ ಸಮಸ್ಯೆಗೆ ಮುಕ್ತಿಯಾಡಲು ಮುಂದಾಗಿದ್ದು, ಇನ್ಮುಂದೆ ನೀವು ಯಾರೇ ವಾಟ್ಸಾಪ್ ಬಳಕೆದಾರರ ಜೊತೆ ಸಂವಹನ ಮಾಡಬೇಕು ಎಂದರೆ ಫೋನ್ ನಂಬರ್ ಬದಲಿಗೆ ಹೆಸರಿನ ಮೂಲಕ ಸಂಪರ್ಕ ಮಾಡಬಹುದು. ಹಾಗಿದ್ರೆ, ಏನಿದು ಹೊಸ ಫೀಚರ್ಸ್?, ಇದು ಹೇಗೆ ಕೆಲಸ ಮಾಡಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್: ಎಲ್ಲಾ ರೀತಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಬೆಸ್ಟ್ ಆಪ್ ಎಂದರೆ ಅದು ವಾಟ್ಸಾಪ್. ಯಾಕೆಂದರೆ ಇದು ಹೆಚ್ಚಿನ ಭದ್ರತಾ ಫೀಚರ್ಸ್ ಅನ್ನು ಪಡೆದುಕೊಂಡಿದೆ. ಈ ಮೂಲಕ ಬಳಕೆದಾರರು ಯಾವುದೇ ಭಯವಿಲ್ಲದೆ ಎಲ್ಲಾ ರೀತಿಯ ಖಾಸಗಿ ವಿಚಾರವನ್ನು ಈ ಆಪ್ ಮೂಲಕ ಇತರರೊಂದಿಗೆ ಹಂಚಿಕೊಳ್ಳಬಹುದು. ಈ ನಡುವೆ ಈಗ ಪರಿಚಯಿಸಲಾಗುತ್ತಿರುವ ಹೊಸ ಫೀಚರ್ಸ್ ಇನ್ನಷ್ಟು ಹೆಚ್ಚಿನ ಭದ್ರತೆಯ ಭರವಸೆ ನೀಡುತ್ತದೆ.
ಬಳಕೆದಾರರು ಈವರೆಗೆ ವೈಯಕ್ತಿಕ ಫೋನ್ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ವಾಟ್ಸಾಪ್ ನಲ್ಲಿ ಇತರರನ್ನು ಹುಡುಕುತ್ತಿದ್ದರು. ಆದರೆ, ಇನ್ಮುಂದೆ ಬಳಕೆದಾರರ ಹೆಸರನ್ನು (usernames) ಸರ್ಚ್ ಮಾಡುವ ಮೂಲಕ ಅವರೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ. ಅಂದರೆ, ಸಂಖ್ಯೆ ಇಲ್ಲದೆಯೇ ಸ್ನೇಹಿತರು ಮತ್ತು ಇತರೆ ಸಂಪರ್ಕಗಳೊಂದಿಗೆ ಸಂಪರ್ಕ ಸಾಧಿಸಬಹುದು ಎಂದು Wabetainfo ವರದಿ ಮಾಡಿದೆ.

ಇದರೊಂದಿಗೆ Wabetainfo ಹೊಸ ಫೀಚರ್ಸ್‌ನ ಸ್ಕ್ರೀನ್‌ಶಾಟ್ ಅನ್ನು ಶೇರ್ ಮಾಡಿಕೊಂಡಿದೆ. ಇದು ನಿಮಗೆ ಹೆಸರು, ಬಳಕೆದಾರ ಹೆಸರು ಮತ್ತು ಫೋನ್ ಸಂಖ್ಯೆಯ ಮೂಲಕ ಜನರನ್ನು ಸರ್ಚ್ ಮಾಡಲು ಅನುಮತಿಸುತ್ತದೆ. ಈ ಮೂಲಕ ಯಾರೆಲ್ಲಾ ತಮ್ಮ ಫೋನ್ ಸಂಖ್ಯೆಯನ್ನು ಬಹಿರಂಗಪಡಿಸಲು ಇಷ್ಟಪಡುವುದಿಲ್ಲವೋ ಅವರು ಬಳಕೆದಾರ ಹೆಸರನ್ನು ಕ್ರಿಯೇಟ್ ಮಾಡಿ ಈ ಮೂಲಕ ಇತರರೊಂದಿಗೆ ಸಂಪರ್ಕದಲ್ಲಿ ಇರಬಹುದಾಗಿದೆ.
ಕೆಲವು ವರದಿಯ ಪ್ರಕಾರ, ಬಳಕೆದಾರರು ತಮ್ಮ ಬಳಕೆದಾರ ಹೆಸರನ್ನು ಯಾವುದೇ ಸಮಯದಲ್ಲಿ ರಚಿಸುವ, ತೆಗೆದುಹಾಕುವ ಅಥವಾ ಬದಲಾಯಿಸುವ ಆಯ್ಕೆಯನ್ನು ಹೊಂದಿರುತ್ತಾರೆ ಎನ್ನಲಾಗಿದೆ. ಈ ಮೂಲಕ ಈ ಫೀಚರ್ಸ್ ಮೇಲೆ ಬಳಕೆದಾರರಿಗೆ ಸಂಪೂರ್ಣ ನಿಯಂತ್ರಣವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದೆ. ಬಳಕೆದಾರರು ತಮ್ಮ ಆದ್ಯತೆಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಬಹುದು ಎನ್ನುವುದನ್ನು ಈ ಮೂಲಕ ತಿಳಿಸಲಾಗಿದೆ.
ಎಂದಿನಿಂದ ಈ ಸೇವೆ ಲಭ್ಯ?: ಸರ್ಚ್ ಲಿಸ್ಟ್‌ನಲ್ಲಿ ಬಳಕೆದಾರರ ಹೆಸರನ್ನು ಸರ್ಚ್ ಮಾಡುವ ಫೀಚರ್ಸ್ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಈ ಫೀಚರ್ಸ್ ವಾಟ್ಸಾಪ್‌ನ ಭವಿಷ್ಯದ ನವೀಕರಣದಲ್ಲಿ ಪರಿಚಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್ ಮತ್ತು ಐಓಎಸ್ ನಲ್ಲಿ ಯಾವುದಕ್ಕೆ ಈ ಸೇವೆ ಲಭ್ಯವಿರುತ್ತದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ.

ಸೀಕ್ರೆಟ್ ಕೋಡ್ ಫೀಚರ್ : ಈ ಬೆಳವಣಿಗೆ ನಡುವೆ ಕೆಲವು ದಿನಗಳ ಹಿಂದೆ ವಾಟ್ಸಾಪ್ ಸೀಕ್ರೆಟ್ ಕೋಡ್ ಫೀಚರ್ ಅನ್ನೂ ಸಹ ಪರಿಚಯಿಸಿದೆ. ಈ ಫೀಚರ್ಸ್ ಲಾಕ್ ಮಾಡಲಾದ ವೈಯಕ್ತಿಕ ಚಾಟ್‌ಗಳನ್ನು ರಹಸ್ಯ ಕೋಡ್‌ನೊಂದಿಗೆ ಸ್ವಲ್ಪ ಹೆಚ್ಚು ಶಕ್ತಿಯುತವಾಗಿ ಮತ್ತು ಸುರಕ್ಷಿತವಾಗಿ ಮರೆಮಾಡಬಹುದಾಗಿದೆ. ಅಂದರೆ ಬೇರೆಯವರಿಗೆ ನಿಮ್ಮ ಫೋನ್ ಪಾಸ್‌ವರ್ಡ್ ಗೊತ್ತಿದ್ದರೂ ಸಹ ವಾಟ್ಸಾಪ್‌ಖಾಸಗಿ ಚಾಟ್ ಅನ್ನು ಓಪನ್ ಮಾಡಲು ಸಾಧ್ಯವಾಗುವುದಿಲ್ಲ.
ಈಗಾಗಲೇ ಈ ಸೇವೆ ಎಲ್ಲಾ ಬಳಕೆದಾರರಿಗೆ ಲಭ್ಯ ಇದೆ. ವಾಟ್ಸಾಪ್‌ನ ಸರ್ಚ್ ಬಾರ್‌ನಲ್ಲಿ ಈ ರಹಸ್ಯ ಕೋಡ್ ಅನ್ನು ಸರಿಯಾಗಿ ನಮೂದಿಸುವ ಮೂಲಕ ಮಾತ್ರ ಲಾಕ್ ಆಗಿರುವ ಚಾಟ್‌ಗಳನ್ನು ನೀವು ವೀಕ್ಷಣೆ ಮಾಡಬಹುದಾಗಿದೆ. ಇತರ ಲಿಂಕ್ ಮಾಡಲಾದ ಡಿವೈಸ್‌ಗಳಲ್ಲಿನ ಚಾಟ್‌ಗಳನ್ನು ಸಹ ಈ ರೀತಿಯಲ್ಲಿ ಲಾಕ್ ಮಾಡಲು ವಾಟ್ಸಾಪ್ ಅನುಮತಿ ನೀಡಿದೆ. ಪ್ರಮುಖ ವಿಷಯ ಏನೆಂದರೆ ನೀವು ನೆನಪಿಟ್ಟುಕೊಳ್ಳಲು ಸುಲಭವಾದ ಕೆಲವು ಸಂಖ್ಯೆ ಅಥವಾ ಚಿಹ್ನೆಗಳನ್ನು ಈ ವೇಳೆ ಬಳಕೆ ಮಾಡಿಕೊಳ್ಳಿ.


Click it and Unblock the Notifications








