Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಮಗದೊಂದು ಹೊಸ ಸೌಲಭ್ಯ: ಬಳಕೆದಾರರಿಗೆ ಸಾಕಷ್ಟು ಅನುಕೂಲ!

ವಾಟ್ಸಾಪ್‌ ದಿನನಿತ್ಯವೂ ಒಂದಲ್ಲಾ ಒಂದು ವಿಚಾರದಲ್ಲಿ ಸುದ್ದಿಯಲ್ಲಿರುತ್ತದೆ. ಇದಕ್ಕೆ ಕಾರಣ ಕೆಲವೇ ದಿನಗಳ ಅಂತರದಲ್ಲಿ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಿರುವುದು. ಇದರ ನಡುವೆ ಮತ್ತೆ ವಾಟ್ಸಾಪ್‌ ತನ್ನೆಲ್ಲಾ ಬಳಕೆದಾರರಿಗೂ ಹೊಸ ಹಾಗೂ ವಿಶೇಷ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿದೆ.

ಹೌದು, ವಾಟ್ಸಾಪ್‌ನಲ್ಲಿ ಇನ್ಮುಂದೆ ಹೊಸ ಅಧಿಕೃತ ಚಾಟ್ ಕಾಣಿಸಿಕೊಳ್ಳಲಿದೆ. ಅದೂ ಸಹ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಒಟ್ಟಿಗೆ ಲಭ್ಯವಾಗುತ್ತಿರುವುದು ವಿಶೇಷ. ಈ ಸೌಲಭ್ಯದ ಮೂಲಕ ಬಳಕೆದಾರರು ತಾವು ಪಡೆಯುವ ಮೆಸೆಜ್‌ನ ಅಧಿಕೃತತೆಯನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಿದ್ರೆ, ಈ ಅಧಿಕೃತ ಚಾಟ್‌ ಬ್ಯಾಡ್ಜ್‌ ಯಾವ ಬಣ್ಣದಲ್ಲಿ ಇರಲಿದೆ?, ಇದರಿಂದ ಆಗುವ ಅನುಕೂಲಗಳೇನು? ಎಂಬ ಹಲವು ಮಾಹಿತಿಗಾಗಿ ಈ ಲೇಖನ ಓದಿರಿ.

ವಾಟ್ಸಾಪ್‌ನಲ್ಲಿ ಮಗದೊಂದು ಹೊಸ ಸೌಲಭ್ಯ: ಬಳಕೆದಾರರಿಗೆ ಸಾಕಷ್ಟು ಅನುಕೂಲ!

ವಾಟ್ಸಾಪ್‌ನಲ್ಲಿ ಅಧಿಕೃತ ಚಾಟ್: ವಾಟ್ಸಾಪ್‌ ಸಂಬಂಧಿತ ವಿಷಯಗಳನ್ನು ಟ್ರ್ಯಾಕ್‌ ಮಾಡುವ WABetaInfo ಈ ಸಂಬಂಧ ವರದಿಯೊಂದನ್ನು ಮಾಡಿದ್ದು, ಅದರಂತೆ ಅಧಿಕೃತ ಚಾಟ್ ಅನ್ನು ಹಸಿರು ಬ್ಯಾಡ್ಜ್‌ನಿಂದ ಗುರುತಿಸಲಾಗುತ್ತದೆ ಎಂದು ತಿಳಿಸಿದೆ. ಹಾಗೆಯೇ ಈ ಪರಿಶೀಲಿಸಿದ ಬ್ಯಾಡ್ಜ್‌ಗಳಿಂದ ಬರುವ ಮೆಸೆಜ್‌ ಅನ್ನು ಕಾನೂನುಬದ್ಧ ಎಂದು ಪರಿಗಣಿಸಲಾಗುತ್ತದೆ.

ವಾಟ್ಸಾಪ್‌ ಅಧಿಕೃತ ಚಾಟ್ ಉದ್ದೇಶ ಏನು?: ಸಾಮಾನ್ಯವಾಗಿ ವಾಟ್ಸಾಪ್‌ನಲ್ಲಿ ಹಲವಾರು ಗೊತ್ತಿರುವ ಹಾಗೂ ಗೊತ್ತಿರದವರು ಮೆಸೆಜ್‌ ಮಾಡುತ್ತಾರೆ. ಅದರಲ್ಲೂ ಇದನ್ನು ಕೆಲವರು ಬಂಡವಾಳ ಮಾಡಿಕೊಂಡು ಸಾಮಾನ್ಯ ಜನರಿಗೆ ಮೋಸ ಮಾಡುತ್ತಿದ್ದಾರೆ, ಫಿಶಿಂಗ್ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಈ ಎಲ್ಲಾ ಸಮಸ್ಯೆ ಬಗೆಹರಿಸುವ ಉದ್ದೇಶದಿಂದಾಗಿ ವಾಟ್ಸಾಪ್ ಈ ಮಹತ್ವದ ನಿರ್ಧಾರ ಮಾಡಿದೆ.

ಇದರೊಂದಿಗೆ ಈ ಅಧಿಕೃತ ಚಾಟ್‌ ವಿಭಾಗದಲ್ಲಿ ಬಳಕೆದಾರರು ಇತ್ತೀಚಿನ ಮಾಹಿತಿಯನ್ನು ಹುಡುಕದೆಯೇ ನೋಟಿಫಿಕೇಶನ್‌ನೊಂದಿಗೆ ಸುಲಭವಾಗಿ ಈ ಮೆಸೆಜ್‌ ವಿಭಾಗಕ್ಕೆ ಎಂಟ್ರಿಯಾಗಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೆಯೇ ಯಾವುದೇ ನೋಟಿಫಿಕೇಶನ್‌ ಸ್ವೀಕರಿಸಲು ಬಯಸದಿದ್ದರೆ ಸುಲಭವಾಗಿ ಆರ್ಕೈವ್ ಮಾಡಬಹುದಾದ ಅಥವಾ ಮ್ಯೂಟ್ ಮಾಡಬಹುದಾದ ಆಯ್ಕೆಯನ್ನೂ ಸಹ ನೀಡಲಾಗುತ್ತದಂತೆ.

ವಾಟ್ಸಾಪ್‌ನಲ್ಲಿ ಮಗದೊಂದು ಹೊಸ ಸೌಲಭ್ಯ: ಬಳಕೆದಾರರಿಗೆ ಸಾಕಷ್ಟು ಅನುಕೂಲ!

ಇನ್ನುಳಿದಂತೆ ಈ ಅಧಿಕೃತ ಚಾಟ್ ಪ್ರಸ್ತುತ ಕೆಲವು ಬಳಕೆದಾರರಿಗೆ ಪರೀಕ್ಷಾರ್ಥವಾಗಿ ಲಭ್ಯವಿದ್ದು, ಈ ಫೀಚರ್ಸ್‌ ಅನ್ನು ಪ್ರಸಾರ ಮಾಡಲು ಕಂಪೆನಿಯು ಯಾದೃಚ್ಛಿಕ ಸಂಪರ್ಕಗಳನ್ನು ಆಯ್ಕೆ ಮಾಡಿಕೊಂಡಿರುವಂತೆ ತೋರುತ್ತಿದೆ ಎಂದು ತಿಳಿದುಬಂದಿದೆ. ಹೀಗಾಗಿ ಬಳಕೆದಾರರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ವಾಟ್ಸಾಪ್‌ ಅಸ್ಪಷ್ಟವಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಹಾಗೆಯೇ ವಾಟ್ಸಾಪ್‌ ತನ್ನ ಬಳಕೆದಾರರಿಗೆ ಶಾರ್ಟ್‌ ವೀಡಿಯೊ ಮೆಸೆಜ್ ರೆಕಾರ್ಡ್ ಮಾಡಲು ಮತ್ತು ಶೇರ್‌ ಮಾಡಿಕೊಳ್ಳಲು ಅನುಮತಿಸುವ ಹೊಸ ಫೀಚರ್ಸ್‌ನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಆದರೆ, ಈ ಶಾರ್ಟ್‌ ವೀಡಿಯೊವನ್ನು ಉಳಿಸಲು ಅಥವಾ ಇತರ ಸಂಪರ್ಕಗಳಿಗೆ ಫಾರ್ವರ್ಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದೂ ಸಹ ಹೇಳಲಾಗುತ್ತಿದೆ.

ಇದರ ನಡುವೆ ವಾಟ್ಸಾಪ್‌ ವಿಂಡೋಸ್‌ಗಾಗಿ ಹೊಸ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಪರಿಚಯಿಸಿದ್ದು, ಇದು ಮೊಬೈಲ್ ಆವೃತ್ತಿಯಂತೆಯೇ ಇಂಟರ್ಫೇಸ್ ಅನ್ನು ಹೊಂದಿದೆ. ಈ ಮೂಲಕ ಬಳಕೆದಾರರು ಈಗ ಎಂಟು ಜನರೊಂದಿಗೆ ಗುಂಪು ವಿಡಿಯೋ ಕರೆಗಳನ್ನು ಮತ್ತು 32 ಜನರೊಂದಿಗೆ ಆಡಿಯೊ ಕರೆಗಳನ್ನು ಹೋಸ್ಟ್ ಮಾಡಬಹುದು.

ವಾಟ್ಸಾಪ್‌ನಲ್ಲಿ ಮಗದೊಂದು ಹೊಸ ಸೌಲಭ್ಯ: ಬಳಕೆದಾರರಿಗೆ ಸಾಕಷ್ಟು ಅನುಕೂಲ!

ಈ ವಿಶೇಷ ಫೀಚರ್ಸ್‌ ಪ್ರಸ್ತುತ ಇತ್ತೀಚಿನ iOS\ಬೀಟಾ ಆವೃತ್ತಿಯಲ್ಲಿ ಅಭಿವೃದ್ಧಿ ಹಂತದಲ್ಲಿದ್ದು, ಇದೂ ಸಹ ಎಂಡ್‌ ಟು ಎಂಡ್‌‌ ಎನ್‌ಕ್ರಿಪ್ಟ್ ಆಗಿರುತ್ತದೆ ಎಂದು ತಿಳಿದುಬಂದಿದೆ. ಆದರೆ, ಈ ಫೀಚರ್ಸ್‌ ಅನ್ನು ಎಂದಿನಿಂದ ಅಧಿಕೃತವಾಗಿ ಪ್ರಾರಂಭಿಸಲಾಗುತ್ತದೆ ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ಇದರೊಂದಿಗೆ ಕೆಲವು ದಿನಗಳ ಹಿಂದೆ ಐಓಎಸ್‌ ಬಳಕೆದಾರರಿಗೆ ವಾಟ್ಸಾಪ್ ಸ್ಟೇಟಸ್‌ ವಿಭಾಗದಲ್ಲಿ ವಾಯ್ಸ್‌ ನೋಟ್‌ ಸೌಲಭ್ಯವನ್ನು ಕಲ್ಪಿಸಿದೆ.

Best Mobiles in India

English summary
A new official chat will appear on WhatsApp. Through this facility users can know the authenticity of the message they receive.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+