Home
ಸುದ್ದಿಜಾಲ

ಹೊಸ ವರ್ಷದಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್ ಕೆಲಸ ಮಾಡಲ್ಲ!

ವಿಶ್ವದಲ್ಲಿಯೇ ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಇನ್‌ಸ್ಟಂಟ್‌ ಮೆಸೆಜ್‌ ಆಪ್‌ ವಾಟ್ಸಪ್ ಇದೀಗ ತನ್ನ ಬಳಕೆದಾರರಿಗೆ ಬಿಗ್ ಶಾಕ್‌ ನೀಡಿದೆ. ಇದೇ ಜನವರಿ 1, 2021 ರಿಂದ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದಿಲ್ಲ ಎಂದು ಇತ್ತೀಚಿಗಿನ ವರದಿಯೊಂದು ಹೇಳಿದೆ.

ವಾಟ್ಸಪ್

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಮೆಸೆಜಿಂಗ್ ಆಪ್‌ ಇದೇ ಜನವರಿ 1, 2021 ರಿಂದ ಕೆಲವು ಆಂಡ್ರಾಯ್ಡ್‌ ಹಾಗೂ ಐಫೋನ್‌ಗಳಿಗೆ ಸಪೋರ್ಟ್‌ ಮಾಡುವುದಿಲ್ಲ ಎಂದು ವರದಿಯೊಂದರಿಂದ ತಿಳಿದುಬಂದಿದೆ. ಆಪಲ್‌ ಐಓಎಸ್‌ 9 ಅಥವಾ ಆಂಡ್ರಾಯ್ಡ್‌ 4.0.3 ಓಎಸ್‌ ಗಿಂತ ಹಿಂದಿನ ಆಪರೇಟಿಂಗ್ ಸಿಸ್ಟಮ್‌ ಬೆಂಬಲದ ಸ್ಮಾರ್ಟ್‌ಫೋನ್‌ಗಳಲ್ಲಿ ಇನ್ಮುಂದೆ ವಾಟ್ಸಾಪ್‌ ಕೆಲಸ ನಿಲ್ಲಿಸಲಿದೆ ಎನ್ನಲಾಗಿದೆ.

ಈ ಐಫೋನ್‌ಗಳಲ್ಲಿ ವಾಟ್ಸಾಪ್‌ ಸ್ಟಾಪ್‌

ಈ ಐಫೋನ್‌ಗಳಲ್ಲಿ ವಾಟ್ಸಾಪ್‌ ಸ್ಟಾಪ್‌

ಆಪಲ್‌ ಐಓಎಸ್‌ 9 ಓಎಸ್‌ಗಿಂತ ಹಿಂದಿನ ಆಪರೇಟಿಂಗ್ ಸಿಸ್ಟಮ್ ವಾಟ್ಸಾಪ್ ಸಪೋರ್ಟ್‌ ನಿಲ್ಲಿಸಲಿದೆ. ಹೀಗಾಗಿ ಐಫೋನ್ 4S, ಐಫೋನ್ 5, ಐಫೋನ್ 5S, ಐಫೋನ್ 5C, ಐಫೋನ್ 6 ಮತ್ತು ಐಫೋನ್ 6S ಫೋನ್‌ಗಳು ಸಪೋರ್ಟ್‌ ಕಳೆದುಕೊಳ್ಳುವ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿವೆ. ಬಳಕೆದಾರರು ವಾಟ್ಸಾಪ್ ಮೆಸೇಜಿಂಗ್ ಅಪ್ಲಿಕೇಶನ್ ಬಳಸುವುದನ್ನು ಮುಂದುವರಿಸಲು ಆಪರೇಟಿಂಗ್ ಸಿಸ್ಟಮ್ ಅನ್ನು ಐಒಎಸ್ 9 ಅಥವಾ ಆ ನಂತರದ ಆವೃತ್ತಿಗೆ ಅಪ್‌ಗ್ರೇಡ್‌ ಮಾಡುವುದು.

ಈ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ವಾಟ್ಸಾಪ್‌ ಸಪೋರ್ಟ್‌ ನಿಲ್ಲಲಿದೆ

ಈ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ವಾಟ್ಸಾಪ್‌ ಸಪೋರ್ಟ್‌ ನಿಲ್ಲಲಿದೆ

ಆಂಡ್ರಾಯ್ಡ್ 4.0.3 ಓಎಸ್‌ ಗಿಂತ ಹಿಂದಿನ ಆವೃತ್ತಿಯ ಓಎಸ್‌ ಫೋನ್‌ಗಳಲ್ಲಿ ವಾಟ್ಸಾಪ್‌ ಇನ್ನು ಕಾರ್ಯನಿಲ್ಲಿಸಲಿದೆ. ಹೀಗಾಗಿ HTC ಡಿಸೈರ್, ಎಲ್‌ಜಿ ಆಪ್ಟಿಮಸ್ ಬ್ಲ್ಯಾಕ್, ಮೊಟೊರೊಲಾ ಡ್ರಾಯಿಡ್ ರೇಜರ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S2 ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸೇವೆ ಸ್ಥಗಿತವಾಗಲಿದೆ. ಆದ್ದರಿಂದ, ಬಳಕೆದಾರರು ತಮ್ಮ Android ಫೋನ್ ಆಂಡ್ರಾಯ್ಡ್ 4.0.3 ಆವೃತ್ತಿಯಲ್ಲಿ ಚಾಲನೆಯಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಓಎಸ್‌ ಅಪ್‌ಡೇಟ್‌ ಸಾಧ್ಯವಿದ್ದರೇ ನೂತನ ಓಎಸ್‌ಗೆ ಅಪ್‌ಡೇಟ್‌ ಮಾಡಿಕೊಳ್ಳಬಹುದು.

ಓಎಸ್‌

ಇನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿಯೂ ವಾಟ್ಸಾಪ್ ಕೆಲವು ವಿಂಡೊಸ್ ಓಎಸ್‌ ಬೆಂಬಲಿತ ಫೋನ್‌ಗಳಲ್ಲಿ ಹಾಗೂ 2.3.7 ಓಎಸ್‌ ವರ್ಷನ್‌ನಲ್ಲಿ ಮತ್ತು ಅದಕ್ಕಿಂತಲೂ ಹಿಂದಿನ ಓಎಸ್‌ಆಂಡ್ರಾಯ್ಡ್‌ ಫೋನ್‌ಗಳಿಗೆ ಸಪೋರ್ಟ್‌ ನಿಲ್ಲಿಸಿತ್ತು. ಹಾಗೆಯೇ ಆಪಲ್ ಐಫೋನ್ ಐಓಎಸ್‌ iOS 8 ಓಎಸ್‌ ನಲ್ಲಿ ಕಾರ್ಯನಿರ್ವಹಿಸುವ ಐಫೋನ್‌ಗಳಲ್ಲಿಯೂ ವಾಟ್ಸಪ್ ಸೇವೆ ನಿಲ್ಲಿಸುವುದಾಗಿ ಹೇಳಿತ್ತು.

Best Mobiles in India

English summary
WhatsApp support will end for iPhones not running on at least iOS 9 or Android phones running on operating systems older than Android 4.0.3.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+