ವಾಟ್ಸಾಪ್ ಗ್ರೂಪ್‌ನಿಂದ ಉದ್ಯೋಗಕ್ಕೆ ನೇಮಕ
ಹೊಸ ಸಂವಹನ ಮಾಧ್ಯಮಗಳು ಕೆಲವರಿಗೆ ಕಿರಿ ಕಿರಿ ಅಂತ ಗೋಳಾಡುತ್ತಾರೆ. ಅಲ್ಲದೇ ಇತರರನ್ನು ಏನಪ್ಪಾ ಅವ್ನು ಯಾವಾಗಲು FB, ಟ್ವಿಟರ್, ವಾಟ್ಸಾಪ್ ಅಂತ ಮೊಬೈಲ್‌ಗೆ ಪುರುಸೊತ್ತನ್ನೇ ಕೊಡಲ್ಲ ಅಂತ ಬೈಯುವುದು ಉಂಟು. ಆದ್ರೆ ಅದು ತಪ್ಪು ಕಲ್ಪನೆ ಎಂದು ನೀವೀಗ ನಂಬಲೇ ಬೇಕು. ಕಾರಣ 6 ವಿದ್ಯಾರ್ಥಿಗಳು ಕೇವಲ ವಾಟ್ಸಾಪ್ ಗ್ರೂಪ್‌ನಿಂದ ಸಂದರ್ಶನಕ್ಕೆ ಒಳಗಾಗಿ ಪ್ರತಿಷ್ಠಿತ ಜಾಹಿರಾತು ಕಂಪನಿಗೆ ಉದ್ಯೋಗ ತರಬೇತಿಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.
ಓದಿರಿ :ವಾಟ್ಸಾಪ್ ಬಳಕೆದಾರರು ಎಚ್ಚರ ವಹಿಸಲೇಬೇಕಾದ 10 ಮೆಸೇಜ್‌ಗಳು

ವಾಟ್ಸಾಪ್ ಮೂಲಕ ಸಂದರ್ಶನ
ಮುಂಬೈನ ಕ್ಸೇವಿಯರ್ ಸಂವಹನ ಸಂಸ್ಥೆಯ ಕೆಲವು ವಿದ್ಯಾರ್ಥಿಗಳು ತಮ್ಮ ಉದ್ಯೋಗ ತರಭೇತಿಯನ್ನು "ದಿ ಇಂಟರ್ನ್‌ಶಿಪ್" ಎಂಬ ವಾಟ್ಸಾಪ್ ಗ್ರೂಪ್‌ನಲ್ಲಿ ಪಡೆಯಲು ಮುಂದಾಗಿದ್ದಾರೆ.

ಗುರಗಾಂವ್ ಸೃಜನಶೀಲ ನಿರ್ದೇಶಕರು
ಗುರಗಾಂವ್ ಸೃಜನಶೀಲ ನಿರ್ದೇಶಕರೊಬ್ಬರು ಮುಂಬೈನ ಕೆಲವು ವಿದ್ಯಾರ್ಥಿಗಳನ್ನು ವಾಟ್ಸಾಪ್‌ನಲ್ಲಿ ಉದ್ಯೋಗ ತರಭೇತಿಗಾಗಿ ಸಂದರ್ಶನ ನಡೆಸಿದ್ದಾರೆ.

ಸಂದರ್ಶನ
ವಿದ್ಯಾರ್ಥಿಗಳನ್ನು ತಮ್ಮ ಸ್ವಯಂ ಮೂಲ ಸೌಕರ್ಯಗಳಲ್ಲಿ ಸಂದರ್ಶನ ನಡೆಸಿದರೆ ಹೆಚ್ಚು ಸೃಜನಶೀಲರನ್ನ ಹೊಂದುವುದು ಸಾಧ್ಯವಾಗುತ್ತದೆ. ಅಲ್ಲದೇ ಈ ವಿಧಾನದಿಂದ ಸಮಯವನ್ನು ಉಳಿಸಿ, ಟ್ರಾವೆಲ್ ಮಾಡುವ ಎನರ್ಜಿಯನ್ನು ಉಳಿಸಬಹುದು ಎಂದು ಚಿಂತಿಸಿದ್ದಾರೆ.

ಜಾಹಿರಾತು ಸಂಸ್ಥೆ
ವಾಟ್ಸಾಪ್‌ನಲ್ಲಿ ಸಂದರ್ಶನ ಮಾಡಿದ ಜಾಹಿರಾತು ಸಂಸ್ಥೆ ಸಂದರ್ಶನಕ್ಕೊಳಗಾದ ಆರು ವಿದ್ಯಾರ್ಥಿಗಳನ್ನು ಉದ್ಯೋಗ ತರಬೇತಿಗೆ ನೇಮಿಸಿಕೊಂಡಿದೆ.

ಇತರೆ ಸಾಮಾಜಿಕ ಜಾಲತಾಣಗಳು
ಸಂವಹನ ಜಾಲತಾಣಗಳಾದ ಸ್ಕೈಪಿ, ಗೂಗಲ್ ಹ್ಯಾಂಗೌಟ್ಸ್, ಲಿಂಕ್‌ಡಿನ್, ಟ್ವಿಟರ್, ಫೇಸ್‌ಬುಕ್ ಸಾಮಾಜಿಕ ಜಾಲತಾಣಗಳು ಸಹ ನೇಮಕಾತಿ ಪ್ರಕ್ರಿಯೆಯಲ್ಲಿ ಕ್ಯಾಂಪಸ್ ಸಂದರ್ಶನಗಳನ್ನು ಮೊದಲ ಬಾರಿಗೆ ವಾಟ್ಸಾಪ್ ಸಂದರ್ಶನದ ಮೂಲಕ ಮಾಡಲು ಇನ್ನುಮುಂದೆ ಫ್ಯಾನ್ಸಿಯಾಗಿ ಬಳಸುತ್ತವೆ.

ಸೈ ಪದ್ವಾಲ್
ಉದ್ಯೋಗ ತರಬೇತಿದಾರರನ್ನು (Interns) ತೆಗೆದುಕೊಂಡ ಸೈ ಪದ್ವಾಲ್, ಸಂದರ್ಶನ ಒಂದು ರೀತಿಯಲ್ಲಿ ನಿಜವಾದ ಸಂಭಾಷಣೆ ಆಗಿರಲು ಯಾವುದೇ ಯೋಚನೆ ಇರಲಿಲ್ಲ. "ವಾಟ್ಸಾಪ್ ಸಂದರ್ಶನ ಒಂದು ರೀತಿಯಲ್ಲಿ ಹೊಸತಾಗಿ ಹಾಗೂ ವಿಶಿಷ್ಟವಾಗಿತ್ತು. 'ಬಿಲ್" ಹಾಗೆ ಒಂದು ಮೇಮ್ಸ್ ರಚಿಸಲು ಹೇಳಿದ್ದವು. ಈ ವೇದಿಕೆಯೇ ಮುಂದೆ ನಮಗೆ ಅನುಕೂಲಕರವಾಗಿ ಹೊಂದಿಕೊಂಡಿತು." ಎಂದು ಹೇಳಿದ್ದಾರೆ.

ಬೊದಿಸತ್ವ ದಾಸ್‌ಗುಪ್ತ
JWT ಹಿರಿಯ ಸೃಜನಶೀಲ ನಿರ್ದೇಶಕರಾದ 'ಬೊದಿಸತ್ವ ದಾಸ್‌ಗುಪ್ತ' ರವರು ವಿದ್ಯಾರ್ಥಿಗಳನ್ನು ಸಂದರ್ಶನ ನಡೆಸಿದರು. "ವಿದ್ಯಾರ್ಥಿಗಳ ರೆಸ್ಯೂಮ್ ಅವರು ಎಷ್ಟು ಸೃಜನಶೀಲರು ಎಂಬುದನ್ನು ಹೇಳಲು ಕಷ್ಟಕರವಾಗಿರುತ್ತದೆ. ಸೃಜನಶೀಲರು ಅವರ ವಯಕ್ತಿಕ ಪ್ರದೇಶದಲ್ಲಿ ಕೆಲಸ ನಿರ್ವಹಿಸಲು ಇಷ್ಟಪಡುತ್ತಾರೆ. ಆದ್ದರಿಂದ ವಾಟ್ಸಾಪ್‌ನಲ್ಲಿ ಕೆಲವು ಟಾಸ್ಕ್‌ಗಳನ್ನು ನೀಡಲಾಗಿದೆ. ಇದರಿಂದ ಯಾರು ಸೃಜನಶೀಲರಾಗಿ ಅಲೋಚಿಸುತ್ತಾರೆ ಎಂದು ತಿಳಿಯಲು ಸಾಧ್ಯ ಎಂದಿದ್ದಾರೆ.

ಸ್ಕೈಪಿ ಮತ್ತು ಗೂಗಲ್ ಹ್ಯಾಂಗೌಟ್ಸ್
ಒಂದು ವೇಳೆ ವಾಟ್ಸಾಪ್ ಸಂದರ್ಶನ ಐಐಟಿ, ಐಐಟಿ-ಬಾಂಬೆ ಟೆಕ್ ಪ್ರೊಫೈಲ್‌ಗಳಿಗೆ ಕೆಲಸ ನಿರ್ವಹಿಸದಿದ್ದಲ್ಲಿ ಸ್ಕೈಪಿ ಮತ್ತು ಗೂಗಲ್ ಹ್ಯಾಂಗೌಟ್ಸ್‌ಗಳ ಉಪಯೋಗ ಪಡೆಯಲಾಗುತ್ತದೆಯಂತೆ. ಕಾರಣ ವಿದ್ಯಾರ್ಥಿಗಳಿಗೆ ಆನ್‌ಲೈನ್ ನಿರಂತರ ಸಂವಹನ ಮಾಧ್ಯಮವಾಗಿದೆ ಎಂದು ಹೇಳಲಾಗಿದೆ.

ನೇಮಕಾತಿ
ಕೆಲವೊಂದು ನೇಮಕಾತಿ ಮಾಡುವವರು ಕ್ಯಾಂಪಸ್‌ಗಳಿಗೆ ಬರಲು ಸಾಧ್ಯವಿಲ್ಲ. ಅಂತಹವರು ಆನ್‌ಲೈನ್ ಸಂದರ್ಶನ ನೆಡೆಸಬಹುದು ಎಂದು ಐಐಟಿ-ಬಾಂಬೆ ನೇಮಕಾತಿ ಮ್ಯಾನೇಜರ್ ಹೇಳಿದ್ದಾರೆ.

ಗಿಜ್‌ಬಾಟ್

ಗಿಜ್‌ಬಾಟ್
ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್ ಮಾಡಿ ಫೇಸ್‌ಬುಕ್ ಪೇಜ್ ಮತ್ತು ಓದಿರಿ ವೆಬ್‌ಸೈಟ್ ಗಿಜ್‌ಬಾಟ್.ಕನ್ನಡ.ಕಾಂ


Click it and Unblock the Notifications








