ವಾಟ್ಸಾಪ್‌ನಲ್ಲಿ ಹೊಸ ಫೀಚರ್!; ಫೋನ್ ಸಂಖ್ಯೆಗಳ ಬದಲಿಗೆ ಹೆಸರು ಕಾಣಿಸಲಿದೆ!
ವಾಟ್ಸಾಪ್ ಪ್ರತಿ ಕ್ಷಣವೂ ಬಳಕೆದಾರರ ಭದ್ರತೆ ಬಗ್ಗೆಯೇ ಆಲೋಚಿಸುತ್ತದೆ ಎನ್ನುವುದಕ್ಕೆ ಯಾವಾಗಲೂ ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಿರುವುದೇ ಸಾಕ್ಷಿ. ಅದರಂತೆ ಬಳಕೆದಾರರ ಸುರಕ್ಷತೆಗಾಗಿ ಹೊಸ ನವೀಕರಣಗಳನ್ನು ಬಿಡುಗಡೆ ಮಾಡುವಲ್ಲಿ ವಾಟ್ಸಾಪ್ ಮುಂಚೂಣಿಯಲ್ಲಿದ್ದು, ಇದೀಗ ಮತ್ತೊಂದು ಹೊಸ ಸೌಲಭ್ಯದ ಬಗ್ಗೆ ವಾಟ್ಸಾಪ್ ಘೋಷಣೆ ಮಾಡಿದೆ.
ಹೌದು, ಬಳಕೆದಾರರು ವಾಟ್ಸಾಪ್ ಗ್ರೂಪ್‌ನಲ್ಲಿ ಯಾವುದೇ ಅಪರಿಚಿತ ಸಂಪರ್ಕದಿಂದ ಸಂದೇಶವನ್ನು ಸ್ವೀಕರಿಸಿದರೂ ಸಹ ಕಳುಹಿಸಿದವರು ಯಾರೆಂದು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಇದು ದೊಡ್ಡ ಸೌಲಭ್ಯವಲ್ಲವಾದರೂ ಬಳಕೆದಾರರಿಗೆ ಸಾಕಷ್ಟು ಪ್ರಯೋಜನ ನೀಡಲಿದೆ. ಹಾಗಿದ್ರೆ, ಈ ಹೊಸ ಫೀಚರ್ಸ್‌ನಿಂದ ಏನೆಲ್ಲಾ ಲಾಭ?, ಎಂದಿನಿಂದ ಬಳಕೆದಾರರಿಗೆ ಲಭ್ಯ? ಎಂಬ ಮಾಹಿತಿಗಾಗಿ ಈ ಲೇಖನ ಓದಿ.

ಗ್ರೂಪ್‌ನಲ್ಲಿನ ಭಾಗವಹಿಸುವವರಿಗೆ ವಾಟ್ಸಾಪ್ ಹೊಸ ಅಪ್‌ಡೇಟ್ ಅನ್ನು ಹೊರತರುತ್ತಿದ್ದು, ಇದು ಚಾಟ್ ಪಟ್ಟಿಯೊಳಗೆ ಬಳಕೆದಾರರ ಫೋನ್ ಸಂಖ್ಯೆ ಬದಲಿಗೆ ಪುಶ್ ಹೆಸರುಗಳನ್ನು ತೋರಿಸಲಿದ್ದು, ಈ ಮೂಲಕ ಮೆಸೆಜ್ ಮಾಡಿದ್ದು ಯಾರು ಎಂದು ತಕ್ಷಣವೇ ತಿಳಿದುಕೊಳ್ಳಬಹುದಾಗಿದೆ. ಈ ಫೀಚರ್ಸ್ ಅನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ಪರಿಚಯಿಸಲಾಗಿದ್ದು, ಬಳಕೆದಾರರಿಗೆ ಸಾಕಷ್ಟು ಇದು ಸಾಕಷ್ಟು ಅನುಕೂಲ ಮಾಡಿಕೊಡಲಿದೆ.
ಈ ಫೀಚರ್ಸ್ ಮೂಲಕ ಬಳಕೆದಾರರು ಯಾವುದೇ ಗ್ರೂಪ್‌ನಲ್ಲಿನ ಯಾರದೇ ನಂಬರ್ ಅನ್ನು ಸೇವ್ ಮಾಡದೇ ಇದ್ದರೂ ಸಹ ಅವರು ಯಾರು ಎಂದು ತಿಳಿದುಕೊಳ್ಳುವುದು ಸಾಕಷ್ಟು ಸುಲಭವಾಗಲಿದೆ. ಅಂದರೆ ಮೊಬೈಲ್ ಸಂಖ್ಯೆಯನ್ನು ಬಳಕೆದಾರ ಹೆಸರಿನೊಂದಿಗೆ ಬದಲಾಯಿಸಲಿದೆ ಎಂದು ವಾಟ್ಸಾಪ್‌ನ ಎಲ್ಲಾ ಹೊಸ ಸೌಲಭ್ಯ ಹಾಗೂ ಫೀಚರ್ಸ್‌ಗಳನ್ನು ಟ್ರ್ಯಾಕ್ ಮಾಡುವ Wabetinfo ವರದಿ ಮಾಡಿದೆ.
ಈ ಫೀಚರ್ ನ ಇನ್ನೊಂದು ವಿಶೇಷತೆ ಏನೆಂದರೆ ದೊಡ್ಡ ಗ್ರೂಪ್ ಹೊಂದಿರುವವರು ಅನೇಕ ಸದಸ್ಯರನ್ನು ಹೊಂದಿರುತ್ತಾರೆ. ಆದರೆ, ಈ ಎಲ್ಲರ ಹೆಸರುಗಳನ್ನು ನೆನಪಿನಲ್ಲಿ ಇಡುವುದು ಅಥವಾ ಎಲ್ಲರ ಸಂಖ್ಯೆಗಳನ್ನು ಫೋನ್‌ನಲ್ಲಿ ಸೇವ್ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಹೊಸ ಫೀಚರ್ಸ್‌ನಲ್ಲಿ ಸಂಖ್ಯೆಯ ಬದಲಿಗೆ ಹೆಸರನ್ನು ತೋರಿಸಲಾಗುವುದರಿಂದ ಯಾರು ಮೆಸೆಜ್ ಕಳುಹಿಸಿದ್ದಾರೆ ಎಂಬುದನ್ನು ತ್ವರಿತವಾಗಿ ತಿಳಿದುಕೊಳ್ಳಬಹುದು.

ಈ ಗ್ರೂಪ್‌ನಲ್ಲಿ ಹೆಸರು ಕಂಡುಬಂದರೆ ಫೋನ್ ಸಂಖ್ಯೆ ಎಲ್ಲಿ ಹೋಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. ಈ ಹೊಸ ಅಪ್‌ಡೇಟ್‌ನಲ್ಲಿ ಚಾಟ್ ಬಬಲ್ ಸಂಖ್ಯೆಗಳ ಬದಲಿಗೆ ಹೆಸರು ಕಾಣಿಸಲಿದ್ದು, ಫೋನ್ ಸಂಖ್ಯೆಯು ಮತ್ತೊಂದು ಲೇಬಲ್‌ನಲ್ಲಿ ಕಾಣಿಸಿಕೊಳ್ಳುತ್ತದೆ. ಹಾಗೆಯೇ ಈ ಸೌಲಭ್ಯವು ಆಂಡ್ರಾಯ್ಡ್ ಬಳಕೆದಾರರಿಗೆ ಇತ್ತೀಚಿನ ವಾಟ್ಸಾಪ್ 2.23.5.12 ಅಪ್‌ಡೇಟ್‌ನಲ್ಲಿ ಮತ್ತು iOS ಬಳಕೆದಾರರಿಗೆ ಇತ್ತೀಚಿನ 23.5.0.73 ಅಪ್‌ಡೇಟ್‌ನಲ್ಲಿ ಲಭ್ಯವಾಗಲಿದ್ದು, ಪರೀಕ್ಷೆಯ ನಂತರ ಎಲ್ಲಾ ಬಳಕೆದಾರರಿಗೂ ಲಭ್ಯವಿರುತ್ತದೆ ಎಂದು ತಿಳಿದುಬಂದಿದೆ.
ಇದರ ನಡುವೆ ಕೆಲವು ದಿನಗಳ ಹಿಂದಷ್ಟೇ ಗ್ರೂಪ್ ಅಡ್ಮಿನ್‌ಗಳಿಗೆ ಅನುಕೂಲ ಆಗುವ ಹೊಸ ಫೀಚರ್ಸ್ ಬಗ್ಗೆಯೂ ಘೋಷಣೆ ಮಾಡಿದೆ. ಅದರ ಪ್ರಕಾರ ಗ್ರೂಪ್ ಅಡ್ಮಿನ್‌ಗಳು ಹೊಸದಾಗಿ ಗ್ರೂಪ್‌ಗೆ ಎಂಟ್ರಿಯಾಗಲು ಮುಂದಾಗುವವರನ್ನು ಗ್ರೂಪ್‌ಗೆ ಸೇರಿಸಿಕೊಳ್ಳಬೇಕೆ? ಅಥವಾ ಬೇಡವೇ? ಎಂಬ ಬಗ್ಗೆ ನಿರ್ಧಾರ ಮಾಡಬಹುದಾಗಿದೆ. ಇದಕ್ಕೆ ಹೊಸ ಸದಸ್ಯರನ್ನು ಅನುಮತಿಸು(Approve New Participants) ಎಂಬ ಹೆಸರಿಡಲಾಗಿದೆ. ಈ ಬಗ್ಗೆ WABetaInfo ವರದಿ ಮಾಡಿದೆ.

ಸಾಮಾನ್ಯವಾಗಿ ವಾಟ್ಸಾಪ್ ಬಳಕೆದಾರರು ಹಲವು ಉದ್ದೇಶಗಳಿಗಾಗಿ ಗ್ರೂಪ್‌ಗಳನ್ನು ರಚಿಸಲಿದ್ದು, ಸಾಕಷ್ಟು ಹೊಸ ಹೊಸ ಬಳಕೆದಾರರು ಗ್ರೂಪ್‌ಗೆ ಲಿಂಕ್‌ಗಳ ಮೂಲಕ ಎಂಟ್ರಿಯಾಗುತ್ತಾರೆ. ಆದರೆ, ಗ್ರೂಪ್ ಅಡ್ಮಿನ್ ಯಾರೆಲ್ಲಾ ಗ್ರೂಪ್‌ನಲ್ಲಿ ಇದ್ದಾರೆ ಎಂದು ಸುಲಭವಾಗಿ ತಿಳಿಯುವುದಿಲ್ಲ. ಹೀಗಾಗಿ ಗ್ರೂಪ್‌ಗೆ ಯಾರು ಸೇರಬೇಕು ಎಂಬುದನ್ನು ಈ ಫೀಚರ್ಸ್ ಮೂಲಕ ಗ್ರೂಪ್ ಅಡ್ಮಿನ್ ನಿರ್ಧಾರ ಮಾಡಬಹುದಾಗಿದೆ.


Click it and Unblock the Notifications








