WhatsApp ನಲ್ಲಿ ಈ ನಾಲ್ಕು ಫೀಚರ್ಸ್ ನಿಮ್ಮನ್ನು ನಿಬ್ಬೆರಗಾಗಿಸುತ್ತವೆ: ಯಾವಾಗ ಲಭ್ಯ!?
ವಾಟ್ಸಾಪ್ ಪ್ರಮುಖ ಮೆಸೆಜಿಂಗ್ ಆಪ್‌ಗಳಲ್ಲಿ ಅಗ್ರಸ್ಥಾನದಲ್ಲಿದ್ದು, ಇದು ಬಳಕೆದಾರರಿಗೆ ವಿವಿಧ ರೀತಿಯ ಪ್ರಯೋಜನಗಳನ್ನು ನೀಡುತ್ತಾ ಬರುತ್ತಿದೆ. ಈ ನಡುವೆ ಬಳಕೆದಾರರಿಗೆ ನಾಲ್ಕು ಪ್ರಮುಖ ಫೀಚರ್ಸ್‌ಗಳು ಲಭ್ಯವಾಗುತ್ತಿದ್ದು, ಇದರಿಂದಾಗಿ ವಾಟ್ಸಾಪ್‌ನಲ್ಲಿ ಹೊಸ ಅನುಭವ ಪಡೆದುಕೊಳ್ಳಬಹುದು.
ಹೌದು, ಬಳಕೆದಾರರ ಉತ್ತಮ ಅನುಭವಕ್ಕಾಗಿ ವಾಟ್ಸಾಪ್(WhatsApp) ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಇದೆ. ಈ ನಡುವೆ ವಾಟ್ಸಾಪ್ ಸಂಬಂಧಿ ವಿಷಯಗಳನ್ನು ವರದಿ ಮಾಡುವ WABetaInfo ಅಚ್ಚರಿ ಮಾಹಿತಿ ಬಹಿರಂಗಪಡಿಸಿದ್ದು, ಈ ಮೂಲಕ ವಾಟ್ಸಾಪ್ ಅಗತ್ಯ ಫೀಚರ್ಸ್‌ಗಳ ಮೇಲೆ ಕೆಲಸ ಮಾಡುತ್ತಿದೆ ಎಂದು ತಿಳಿದುಬಂದಿದೆ. ಜೊತೆಗೆ ಕೆಲವೇ ದಿನಗಳಲ್ಲಿ ಈ ಎಲ್ಲಾ ಫೀಚರ್ಸ್ ಎಲ್ಲಾ ಬಳಕೆದಾರರಿಗೆ ಲಭ್ಯ ಆಗಲಿವೆ. ಹಾಗಿದ್ರೆ, ಯಾವುವು ಆ ಹೊಸ ಫೀಚರ್ಸ್ ಎಂಬ ಬಗ್ಗೆ ತಿಳಿಯಲು ಈ ಲೇಖನ ಓದಿರಿ.

ಪಾಸ್‌ವರ್ಡ್ ರಿಮೈಂಡರ್ ಫೀಚರ್ಸ್: ಆಂಡ್ರಾಯ್ಡ್ ಹಾಗೂ ಐಓಎಸ್ ಬಳಕೆದಾರರಿಗೆ ಪಾಸ್‌ವರ್ಡ್ ಜ್ಞಾಪನೆ ಫೀಚರ್ಸ್ ಅನ್ನು ಪರಿಚಯಿಸಲಾಗುತ್ತಿದೆ. ಈ ಫೀಚರ್ಸ್ ಬಳಕೆದಾರರಿಗೆ ತಮ್ಮ ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್ ಪಾಸ್‌ವರ್ಡ್‌ಅನ್ನು ಪರಿಶೀಲಿಸಲು ಅನುಮತಿ ನೀಡಲಿದ್ದು, ಹೊಂದಾಣಿಕೆಯಾಗದಿದ್ದಲ್ಲಿ ಅದನ್ನು ಬದಲಾಯಿಸಲು ಸುಲಭವಾಗಿ ಅನುಕೂಲ ಮಾಡಿಕೊಡಲಿದೆ.
ಅಂದರೆ ವೈಯಕ್ತಿಕ ಪಾಸ್‌ವರ್ಡ್ ಅಥವಾ ಅವರಿಗೆ ಮಾತ್ರ ತಿಳಿದಿರುವ 64 ಅಂಕಿಯ ಎನ್‌ಕ್ರಿಪ್ಶನ್ ಕೀಯನ್ನು ಆರಿಸುವ ಮೂಲಕ ಬಳಕೆದಾರರು ತಮ್ಮ ಬ್ಯಾಕ್‌ಅಪ್‌ಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ಸುರಕ್ಷಿತಗೊಳಿಸಬಹುದು. ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಎನ್‌ಕ್ರಿಪ್ಟ್ ಮಾಡಿದ ಬ್ಯಾಕಪ್‌ಗಳನ್ನು ಓದುವ ಅಥವಾ ಅನ್‌ಲಾಕಿಂಗ್ ಕೀಯನ್ನು ಪ್ರವೇಶಿಸುವ ಸಾಮರ್ಥ್ಯವನ್ನು ಮೂರನೇ ವ್ಯಕ್ತಿಗಳು ಹೊಂದಿರುವುದಿಲ್ಲ ಎಂದು ವರದಿಯಿಂದ ತಿಳಿದುಬಂದಿದೆ.
ವಿಡಿಯೋ ಕಾಲ್ ಸಮಯದಲ್ಲಿ ಸ್ಕ್ರೀನ್ ಶೇರಿಂಗ್: ಇದೀಗ ವಾಟ್ಸಾಪ್ ಹೊಸ ಸ್ಕ್ರೀನ್ ಹಂಚಿಕೆ ಫೀಚರ್ಸ್ ಅನ್ನು ಪರಿಚಯಿಸಿದೆ. ಇದು ಬಳಕೆದಾರರಿಗೆ ವಿಡಿಯೋ ಕರೆಗಳ ಸಮಯದಲ್ಲಿ ತಮ್ಮ ಡಿಸ್‌ಪ್ಲೇಯನ್ನು ಶೇರ್ ಮಾಡಿಕೊಳ್ಳಲು ಅನುಮತಿ ನೀಡುತ್ತದೆ. ಈ ಫೀಚರ್ಸ್ ಪಡೆಯಲು ಅರ್ಹರಾದ ನಂತರ ಬಳಕೆದಾರರು ಕರೆ ಕಂಟ್ರೋಲ್ ವಿಭಾಗದಲ್ಲಿ ಹೊಸ ಐಕಾನ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಸ್ಕ್ರೀನ್ ಶೇರಿಂಗ್ ಫೀಚರ್ಸ್ ಅನ್ನು ಒಮ್ಮೆ ಸಕ್ರಿಯಗೊಳಿಸಿದ ನಂತರ, ಅವರ ಪರದೆಯ ಮೇಲೆ ಪ್ರದರ್ಶಿಸಲಾದ ವಿಷಯವನ್ನು ರೆಕಾರ್ಡ್ ಮಾಡಲಾಗುತ್ತದೆ ಮತ್ತು ಸ್ವೀಕರಿಸುವವರೊಂದಿಗೆ ಅದನ್ನು ಶೇರ್ ಮಾಡಲಾಗುತ್ತದೆ. ಆದರೆ ಈ ಫೀಚರ್ಸ್ ಮೇಲೆ ಬಳಕೆದಾರರು ಸಂಪೂರ್ಣ ಕಂಟ್ರೋಲ್ ಅನ್ನು ಹೊಂದಿರುತ್ತಾರೆ ಎಂದು ತಿಳಿದುಬಂದಿದೆ. ಅಂದರೆ ಯಾವುದೇ ಸಮಯದಲ್ಲಿ ಸ್ಕ್ರೀನ್ ಹಂಚಿಕೆ ಪ್ರಕ್ರಿಯೆಯನ್ನು ನಿಲ್ಲಿಸಬಹುದು. ಜೊತೆಗೆ ಬಳಕೆದಾರರ ಸ್ಪಷ್ಟ ಒಪ್ಪಿಗೆಯೊಂದಿಗೆ ಮಾತ್ರ ಇದನ್ನು ಸಕ್ರಿಯಗೊಳಿಸಲಾಗುತ್ತದೆ.
ಯೂಸರ್ ನೇಮ್ ಆಯ್ಕೆ: ವಾಟ್ಸಾಪ್ ಬಳಕೆದಾರರು ತಮ್ಮ ಖಾತೆಗಳಿಗೆ ವಿಶಿಷ್ಟವಾದ ಬಳಕೆದಾರ ಹೆಸರುಗಳನ್ನು ಆಯ್ಕೆ ಮಾಡಲು ಯೂಸರ್ ನೇಮ್ ಫೀಚರ್ಸ್ ಅನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ವಾಟ್ಸಾಪ್ ಕೆಲಸ ಮಾಡುತ್ತಿದೆ. ಸದ್ಯಕ್ಕೆ ಇದು ಲಭ್ಯ ಇಲ್ಲದಿದ್ದರೂ ಸಹ ಮುಂದಿನ ದಿನಗಳಲ್ಲಿ ಬಳಕೆದಾರರು ಸೆಟ್ಟಿಂಗ್‌ವಿಭಾಗದಲ್ಲಿ ಕಾಣಿಸಿಕೊಳ್ಳುವ ಪ್ರೊಫೈಲ್ ಮೆನುವಿನಲ್ಲಿ ಈ ಫೀಚರ್ಸ್ ಅನ್ನು ನೋಡಬಹುದು ಎಂದು ತಿಳಿದುಬಂದಿದೆ.
ಇನ್ನು ಈ ವಿಶೇಷ ಫೀಚರ್ಸ್ ಬಳಕೆದಾರರ ಖಾತೆಗಳಿಗೆ ಗೌಪ್ಯತೆಯನ್ನು ಹೆಚ್ಚು ಮಾಡಲಿದೆ. ಅಂದರೆ ಸಂಪರ್ಕಗಳನ್ನು ಗುರುತಿಸಲು ಕೇವಲ ಫೋನ್ ಸಂಖ್ಯೆಗಳನ್ನು ಅವಲಂಬಿಸುವ ಬದಲು ಬಳಕೆದಾರರು ಯೂಸರ್ ನೇಮ್ ಆಯ್ಕೆ ಮಾಡುವ ಸುಲಭವಾಗಿ ಜನರನ್ನು ಹುಡುಕಬಹುದಾಗಿದೆ. ಹೀಗಾಗಿ ಸುಲಭ ಹಾಗೂ ಸರಳ ರೀತಿಯಲ್ಲಿ ಫೋನ್‌ನಂಬರ್‌ಗಳ ಅಗತ್ಯ ಇಲ್ಲದೆ ಬೇಕಾದವರ ಜೊತೆ ಸಂಪರ್ಕದಲ್ಲಿ ಇರಬಹುದಾಗಿದೆ.

ಮರುವಿನ್ಯಾಸಗೊಳಿಸಲಾದ ಸೆಟ್ಟಿಂಗ್ ವಿಭಾಗದ ಪೇಜ್: ವಾಟ್ಸಾಪ್‌ನ ಮುಂದಿನ ದಿನಗಳ ಪ್ರಮುಖ ಫೀಚರ್ಸ್ ಏನೆಂದರೆ ಸೆಟ್ಟಿಂಗ್ ವಿಭಾಗದ ಪೇಜ್ ಬೇರೆಯದೇ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ಆಂಡ್ರಾಯ್ಡ್ ಆವೃತ್ತಿಗಾಗಿ ಹೊಸ ಸೆಟ್ಟಿಂಗ್‌ಗಳ ಇಂಟರ್ಫೇಸ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಫೀಚರ್ಸ್ ಅಭಿವೃದ್ಧಿ ಹಂತದಲ್ಲಿದ್ದು ಇನ್ನೂ ಸಹ ಬೀಟಾ ಪರೀಕ್ಷಕರಿಗೆ ಲಭ್ಯವಾಗಿಲ್ಲ.
ಇನ್ನು ಈ ಸುಧಾರಿತ ಇಂಟರ್ಫೇಸ್ ಮೂರು ಹೊಸ ಪ್ರೊಫೈಲ್ ಶಾರ್ಟ್‌ಕಟ್‌ಗಳನ್ನು ಪರಿಚಯಿಸಲಿದ್ದು, ಅದರಲ್ಲಿ ಪ್ರೊಫೈಲ್, ಗೌಪ್ಯತೆ ಮತ್ತು ಸಂಪರ್ಕಗಳು ಎಂಬ ಆಯ್ಕೆ ಕಾಣಿಸಿಕೊಳ್ಳುತ್ತವೆ. ಈ ಶಾರ್ಟ್‌ಕಟ್‌ಗಳಿಂದಾಗಿ ವಾಟ್ಸಾಪ್ ಬಳಕೆದಾರರು ವ್ಯಾಪಕವಾಗಿ ಸ್ಕ್ರಾಲ್ ಮಾಡುವ ಅಗತ್ಯವಿಲ್ಲ. ಇದಲ್ಲದೆ, ವಾಟ್ಸಾಪ್ ಸೆಟ್ಟಿಂಗ್‌ಗಳಲ್ಲಿ ಸ್ಟಾರ್ ಹಾಕಿದ ಮೆಸೆಜ್‌ಗಳು ಮತ್ತು ಲಿಂಕ್ ಮಾಡಿದ ಡಿವೈಸ್‌ಗಳಿಗೆ ಶಾರ್ಟ್‌ಕಟ್‌ಗಳನ್ನು ಸಂಯೋಜಿಸಲು ಉದ್ದೇಶಿಸಲಾಗಿದೆ.


Click it and Unblock the Notifications








