ವಾಟ್ಸಾಪ್ ಬಳಕೆದಾರರಿಗೆ ಶೀಘ್ರದಲ್ಲೇ ಗುಡ್‌ನ್ಯೂಸ್; ಇದು DP ಗೆ ಸಂಬಂಧಿಸಿದ ವಿಷಯ!
ಮೆಟಾ ಮಾಲೀಕತ್ವದ ಜನಪ್ರಿಯ ಇನ್‌ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಹಲವು ಉಪಯುಕ್ತ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ಆಪ್ತ ಎನಿಸಿದೆ. ವಾಟ್ಸಾಪ್ ತನ್ನ ಪ್ರತಿ ಹೊಸ ಅಪ್‌ಡೇಟ್ ಆವೃತ್ತಿಯಲ್ಲಿ ಏನಾದರೊಂದು ಅನುಕೂಲಕರ ಫೀಚರ್ಸ್ ಅನ್ನು ಸೇರ್ಪಡೆ ಮಾಡುತ್ತ ಸಾಗಿದೆ. ಸದ್ಯ ವಾಟ್ಸಾಪ್ ಮತ್ತೊಂದು ಹೊಸ ಅಚ್ಚರಿಯ ಆಯ್ಕೆಯನ್ನು ಸೇರ್ಪಡೆ ಮಾಡುವ ಸೂಚನೆ ಹೊರಹಾಕಿದ್ದು, ಬಳಕೆದಾರರ ಕುತೂಹಲ ಹೆಚ್ಚಿಸಿದೆ.
ಹೌದು, ಜನಪ್ರಿಯ ವಾಟ್ಸಾಪ್ ಇದೀಗ AI ಮೂಲಕ ಪ್ರೋಫೈಲ್ ಫೋಟೋ ರಚಿಸುವ ಆಯ್ಕೆ ಪರಿಚಯಿಸುವ ತಯಾರಿಯಲ್ಲಿ ಇದ್ದು, ಈ ಆಯ್ಕೆ ಮೂಲಕ ಬಳಕೆದಾರರು ತಮ್ಮ ಪ್ರೋಫೈಲ್ ಫೋಟೋ ರಚಿಸಬಹುದಾಗಿದೆ. ಆಂಡ್ರಾಯ್ಡ್ v2.24.11.17 ಆವೃತ್ತಿಯಲ್ಲಿ ವಾಟ್ಸಾಪ್ ಬೀಟಾ ಬಳಕೆದಾರರಿಗೆ ಈ ಹೊಸ ಫೀಚರ್ ಲಭ್ಯ ಇರಲಿದೆ ಎಂದು WABetaInfo ವರದಿ ಮಾಡಿದೆ.

ಲಭ್ಯವಾದ ಮಾಹಿತಿ ಪ್ರಕಾರ, ಬಳಕೆದಾರರು ವಾಟ್ಸಾಪ್ ಆಪ್‌ನಲ್ಲಿ ಪ್ರೋಫೈಲ್ ಫೋಟೋ ಸೆಟ್ಟಿಂಗ್‌ಗಳಲ್ಲಿ ಪೆನ್ಸಿಲ್ ತರಹದ ಎಡಿಟ್ ಟ್ಯಾಬ್ ಆಯ್ಕೆ ಅನ್ನು ಕ್ಲಿಕ್ ಮಾಡಿದಾಗ ಈ ಟೂಲ್ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ವಾಟ್ಸಾಪ್ ಸಂಸ್ಥೆಯು ಅದಕ್ಕೆ ಅವತಾರ್ ತರಹ, ಮೀಸಲಾದ ಟ್ಯಾಬ್‌ನಲ್ಲಿ ಕಾಣಿಸಬಹುದು ಎನ್ನಲಾಗಿದೆ.
ಅಂದಹಾಗೆ AI ಮೂಲಕ ಪ್ರೊಫೈಲ್ ಚಿತ್ರ ಜನರೇಟರ್ ಮಾಡಿದಾಗ ಬಹುತೇಕ ಅದು ಸ್ಟಿಕ್ಕರ್‌ಗಳಂತೆ ಕಾಣಬಹುದು ಎನ್ನಲಾಗಿದೆ. ಅಲ್ಲದೇ ಬಳಕೆದಾರರು ಅಗತ್ಯ ವಿವರಣೆ ಟೈಪ್ ಮಾಡುವ ಮೂಲಕ ಬಳಕೆದಾರರು ಬಯಸಿದ ರೀತಿಯಲ್ಲಿ ಪ್ರೋಫೈಲ್ ಫೋಟೋವನ್ನು ರಚಿಸಲು ಅವಕಾಶ ನೀಡಲಿದೆ ಎನ್ನಲಾಗಿದೆ.
ಇನ್ನು ವಾಟ್ಸಾಪ್‌ನ ಈ ನೂತನ ಫೀಚರ್ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿ ಇದೆ. ಅಲ್ಲದೇ ಕೆಲವು ಪ್ರದೇಶಗಳಲ್ಲಿ ಈ ಆಯ್ಕೆ ಶೀಘ್ರದಲ್ಲೇ ವಾಟ್ಸಾಪ್ ಸೇರ್ಪಡೆ ಆಗಬಹುದು. ಮೆಟಾ ಸಂಸ್ಥೆಯು ಇನ್ನೂ AI ಮೂಲಕ ರಚಿಸಿದ ಸ್ಟಿಕ್ಕರ್‌ಗಳನ್ನು ದೇಶದಲ್ಲಿ ತರಬೇಕಿದೆ. ಇದು ಬಳಕೆದಾರರಿಗೆ AI ಮೂಲಕ ವಾಟ್ಸಾಪ್‌ನಲ್ಲಿ ಕಸ್ಟಮ್ ಶೇರ್ ಮಾಡಬಹುದಾದ ಸ್ಟಿಕ್ಕರ್‌ಗಳನ್ನು ರಚಿಸಲು ನೆರವಾಗುತ್ತದೆ.
ಅದೇ ರೀತಿ ಮೆಟಾ ಒಡೆತನದ ವಾಟ್ಸಾಪ್ ಕೆಲವು ಉಪಯುಕ್ತ ಆಯ್ಕೆಗಳನ್ನು ಒಳಗೊಂಡಿದ್ದು, ಅವುಗಳ ಪೈಕಿ ಎಡಿಟ್ ಮೆಸೆಜ್ ಆಯ್ಕೆ ಸಹ ಬಳಕೆದಾರರಿಗೆ ಉಪಯುಕ್ತ ಎನಿಸಿದೆ. ಇದು ಕಳುಹಿಸಿದ ಮೆಸೆಜ್ ಅನ್ನು ಎಡಿಟ್ ಮಾಡಲು ಬಳಕೆದಾರರಿಗೆ ನೆರವಾಗುತ್ತದೆ. ಒಂದು ವೇಳೆ ಬಳಕೆದಾರರು ತಪ್ಪಾಗಿ ಮೆಸೆಜ್ ಸೆಂಡ್ ಮಾಡಿದ್ದರೆ, ಎಡಿಟ್ ಆಯ್ಕೆ ಮೂಲಕ ಅದನ್ನು ಸರಿ ಮಾಡಲು ಅವಕಾಶ ಇದೆ.
ವಾಟ್ಸಾಪ್‌ನ ಚಾಟ್ ಲಾಕ್ ಫೀಚರ್ ಸಹ ಬಳಕೆದಾರರಿಗೆ ಉತ್ತಮ ಎನಿಸಿದ್ದು, ಇದು ಬಳಕೆದಾರರು ಪರ್ಸನಲ್ ಚಾಟ್‌ಗಳನ್ನು ಲಾಕ್ ಮಾಡುವ ಅವಕಾಶ ನೀಡುತ್ತದೆ. ಈ ಆಯ್ಕೆ ಆಕ್ಟಿವ್ ಮಾಡಲು ಬಳಕೆದಾರರು ಚಾಟ್‌ನ ಪ್ರೊಫೈಲ್ ಆಯ್ಕೆಯಲ್ಲಿ ಭೇಟಿ ಬೇಕು, ನಂತರ ಚಾಟ್ ಲಾಕ್ ಫೀಚರ್ಸ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಪ್ರತಿ ಚಾಟ್‌ಗೆ ಇದೇ ಕ್ರಮವನ್ನು ಅನುಸರಿಸಬೇಕು. ಇನ್ನು ಲಾಕ್ ಮಾಡಿದ ಚಾಟ್‌ಗಳನ್ನು ಫೋಲ್ಡರ್‌ಗೆ ಸೇರಿಸಲಾಗುತ್ತದೆ ಹಾಗೂ ಅದು ಸ್ಕ್ರೀನ್ ಮೇಲ್ಭಾಗದಲ್ಲಿ ಕಾಣಿಸುತ್ತದೆ.
ಇನ್ನು ಸಂಸ್ಥೆಯ ಅಪರಿಚಿತ ನಂಬರ್ ಕರೆ ಮ್ಯೂಟ್ ಮಾಡುವ ಆಯ್ಕೆ ಸಹ ಬಳಕೆದಾರರಿಗೆ ನೆರವಾಗಿದೆ. ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ಕರೆ ಬಂದರೆ ಬೇಗನೆ ಕರೆ ಸ್ವೀಕಾರ ಮಾಡುವುದು ವಿರಳ. ಮುಖ್ಯವಾಗಿ ಅನೇಕ ಬಳಕೆದಾರರು ಅಪರಿಚಿತ ಕರೆಗಳನ್ನು ರೀಸಿವ್ ಮಾಡುವುದು ಕಡಿಮೆ. ಆದರೆ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ಅಪರಿಚಿತ ಕರೆ ಮಾಡುವವರ ಕರೆಗಳನ್ನು ಸೈಲೆಂಟ್/ ಮ್ಯೂಟ್ ಮಾಡಬಹುದಾಗಿದೆ. ಈ ಫೀಚರ್ ಮೂಲಕ ಬಳಕೆದಾರರು ಗೌಪ್ಯತೆಯನ್ನು ಕಾಪಾಡುವ ಮತ್ತು ಅನಗತ್ಯ ಕಾಂಟ್ಯಾಕ್ಟ್ ತಡೆಯುವ ಸಂದರ್ಭದಲ್ಲಿ ಉಪಯುಕ್ತ.


Click it and Unblock the Notifications








