ಗ್ರಾಹಕರಿಗೆ ಭಾರಿ ಅಚ್ಚರಿ ನೀಡಿದ 'ವಾಟ್ಸಪ್'‌ನ ಹೊಸ ಸುದ್ದಿ!

|

ವಿಶ್ವದ ಜನಪ್ರಿಯ ಮಲ್ಟಿಮೀಡಿಯಾ ಮೆಸ್ಸೆಜಿಂಗ್ ಆಪ್‌ 'ವಾಟ್ಸಪ್'‌ ತನ್ನ ಬಳಕೆದಾರರ ಅನುಕೂಲಕ್ಕಾಗಿ ಹಲವು ನೂತನ ಫೀಚರ್ಸ್‌ಗಳನ್ನು ಅಳವಡಿಸಿದ್ದು, ಹೀಗಾಗಿ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಆದ್ರೆ ಪ್ರಸ್ತುತ ಕಂಪನಿಯ ಪ್ರಮುಖ ಬದಲಾವಣೆ ತರುವ ನಿಟ್ಟಿನಲ್ಲಿ ಹೊಸ ಸಮಾಚಾರವನ್ನು ಹೊರಹಾಕಿದ್ದು, ಇದು ಕೆಲವರಿಗೆ ಸಿಹಿಯಾದ್ರೆ, ಮತ್ತೆ ಕೆಲವರಿಗೆ ಕಹಿ ಎನಿಸಲಿದೆ.

ಗ್ರಾಹಕರಿಗೆ ಭಾರಿ ಅಚ್ಚರಿ ನೀಡಿದ 'ವಾಟ್ಸಪ್'‌ನ ಹೊಸ ಸುದ್ದಿ!

ಹೌದು, ವಾಟ್ಸಪ್‌ ಸಂಸ್ಥೆಯು ಹೊಸ ಬದಲಾವಣೆಯತ್ತ ಹೆಜ್ಜೆ ಇಟ್ಟಿದ್ದು, ಇನ್ಮುಂದೇ ಒಂದು ವಾಟ್ಸಪ್‌ ಖಾತೆಯನ್ನು ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದು. ಯಾವುದೇ ಅಡೆ ತಡೆ ಇಲ್ಲದೇ ಬಳಕೆದಾರರು ಒಂದು ವಾಟ್ಸಪ್‌ ಖಾತೆಯನ್ನು ಒಂದೇ ವೇಳೆಗೆ ಹಲವು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಬಹುದಾಗಿ ಅವಕಾಶ ಒದಗಿಸುವ ಸಿದ್ಧತೆಯಲ್ಲಿ ವಾಟ್ಸಪ್‌ ಇದೆ ಎನ್ನಲಾಗಿದೆ. ಆದ್ರೆ ವಾಟ್ಸಪ್‌ ವೆಬ್‌ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ಗ್ರಾಹಕರಿಗೆ ಭಾರಿ ಅಚ್ಚರಿ ನೀಡಿದ 'ವಾಟ್ಸಪ್'‌ನ ಹೊಸ ಸುದ್ದಿ!

ವಾಟ್ಸಪ್‌ ಸಂಸ್ಥೆಯು UPW (Universal Windows Platform) app ಆಧಾರಿತ ವರ್ಷನ್‌ ಅನ್ನು ಅಳವಡಿಸುವ ತಯಾರಿಯಲ್ಲಿದ್ದು, ಈ ಆಪ್‌ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ. ಬಳಕೆದಾರರು ವಾಟ್ಸಪ್‌ ಬಳಸುವ ಸ್ಮಾರ್ಟ್‌ಫೋನ್‌ಗಳು ಇಂಟರ್ನೆಟ್‌ ಸಂಪರ್ಕವನ್ನು ಪಡೆದುಕೊಂಡಿರಬೇಕು. ಹಾಗೆಯೇ ಬೇರೆ ಫೋನ್‌ಗಳಲ್ಲಿ ವಾಟ್ಸಪ್‌ ಕನೆಕ್ಟ್‌ ಮಾಡಲು UPW ಆಪ್‌ನ ನೆರವಾಗಲಿದೆ.

ಗ್ರಾಹಕರಿಗೆ ಭಾರಿ ಅಚ್ಚರಿ ನೀಡಿದ 'ವಾಟ್ಸಪ್'‌ನ ಹೊಸ ಸುದ್ದಿ!

ಆಂಡ್ರಾಯ್ಡ್ ಓಎಸ್‌ ಮತ್ತು ಐಓಎಸ್‌ ಆಪರೇಟಿಂಗ್ ಸಿಸ್ಟಮ್‌ ಬಳಕೆದಾರರಿಬ್ಬರಿಗೂ ವಾಟ್ಸಪ್‌ನ ಈ ಹೊಸ ಸೇವೆಯ ಅವಕಾಶ ದೊರೆಯಲಿದ್ದು, ಈಗಾಗಲೇ ಬಳಕೆಯಲ್ಲಿರುವ ವಾಟ್ಸಪ್ ವೆಬ್‌ ವರ್ಷನ್ ಮುಂದುವರೆಯಲಿದೆ. ಹೊಸ ಮಲ್ಟಿ ಡಿವೈಸ್‌ಗಳ ಬಳಕೆಗಾಗಿ ವಾಟ್ಸಪ್‌ 'ಎಂಡ್‌ ಟು ಎಂಡ್‌ ಎನ್‌ಕ್ರಿಪ್ಶನ್‌ನಲ್ಲಿ ಮತ್ತಷ್ಟು ಕಾರ್ಯನಿರತವಾಗಿದೆ. ಈ ಕುರಿತು ಕಂಪನಿ ಯಾವುದೇ ಸ್ಕ್ರೀನ್‌ಶಾಟ್‌ಗಳನ್ನು ಹೊರಹಾಕಿಲ್ಲ.

<strong>ಓದಿರಿ : ಗ್ರಾಹಕರ ನಿರೀಕ್ಷೆಗಿಂತ ಕಡಿಮೆ ಬೆಲೆಗೆ ಎಂಟ್ರಿ ಕೊಡಲಿವೆ 'ರೆಡ್ಮಿ 4K' ಟಿವಿಗಳು! </strong>ಓದಿರಿ : ಗ್ರಾಹಕರ ನಿರೀಕ್ಷೆಗಿಂತ ಕಡಿಮೆ ಬೆಲೆಗೆ ಎಂಟ್ರಿ ಕೊಡಲಿವೆ 'ರೆಡ್ಮಿ 4K' ಟಿವಿಗಳು!

ಹಾಗೆಯೇ ವಾಟ್ಸಪ್‌ನಲ್ಲಿ ಇತ್ತೀಚಿಗೆ ಹೊಸದಾಗಿ ವಾಟ್ಸಾಪ್ ಬಿಸಿನೆಸ್, ಐಪ್ಯಾಡ್ ಆವೃತ್ತಿ, ಕೈಯೋಸ್(KaiOS) ಸೇರಿವೆ. ವಾಟ್ಸಾಪ್ ಐಪ್ಯಾಡ್ ಆವೃತ್ತಿಯನ್ನು ಬಿಡುಗಡೆ ಮಾಡುವತ್ತ ಮುನ್ನಡೆದಿದೆ. ಐಓಎಸ್‌ಗೆ ಇದ್ದ 3D ಪ್ರೊಫೈಲ್‌ ಪಿಚ್ಚರ್ ಸೌಲಭ್ಯವನ್ನು ತೆಗೆದು ಹಾಕಿದ್ದು, ಆದರೆ ಕ್ವಿಕ್ಕ್ ಮೀಡಿಯಾ ಎಡಿಟ್‌ ಆಯ್ಕೆ ಸೇರಿಕೊಂಡಿದೆ. ಸದ್ಯ ಮುಂಬರುವ ವಾಟ್ಸಪ್‌ ಅಪ್‌ಡೇಟ್ ಒಂದು ವಾಟ್ಸಪ್‌ ಖಾತೆಯನ್ನು ಹಲವು ಡಿವೈಸ್‌ಗಳಲ್ಲಿ ಬಳಸುವ ಅವಕಾಶ ನೀಡಲಿದೆ.

ಓದಿರಿ : 'ವಾಟ್ಸಪ್‌ ಪೇ' ಲಾಂಚ್‌ ಕನ್ಫರ್ಮ್‌!..ಶುರುವಾಗಿದೆ ಪೇಟಿಎಮ್‌ಗೆ ನಡುಕ! ಓದಿರಿ : 'ವಾಟ್ಸಪ್‌ ಪೇ' ಲಾಂಚ್‌ ಕನ್ಫರ್ಮ್‌!..ಶುರುವಾಗಿದೆ ಪೇಟಿಎಮ್‌ಗೆ ನಡುಕ!

Best Mobiles in India

English summary
WhatsApp is also working on improving its end-to-end encryption system for the multi-device scenario. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X