Home
ಸುದ್ದಿಜಾಲ

Whatsapp: ವಾಟ್ಸಾಪ್‌ನಲ್ಲಿ ಚಾಟ್ ಫಿಲ್ಟರ್ ಫೀಚರ್ಸ್: ಬಳಕೆದಾರರಿಗೆ ಭರ್ಜರಿ ಪ್ರಯೋಜನ

ವಾಟ್ಸಾಪ್‌ (Whatsapp) ಈಗಾಗಲೇ ಸಾಕಷ್ಟು ವಿಶೇಷ ಫೀಚರ್ಸ್‌ ಆಯ್ಕೆ ಮೂಲಕ ಬಳಕೆದಾರರಿಗೆ ಹೊಸ ಹೊಸ ಅನುಭವ ನೀಡುವ ಕೆಲಸ ಮಾಡುತ್ತಿದೆ. ಅದರಲ್ಲೂ ಭದ್ರತೆ ವಿಚಾರದಲ್ಲಿ ವಾಟ್ಸಾಪ್‌ ಉತ್ತಮವಾದ ಆಪ್‌ ಆಗಿ ಗುರುತಿಸಿಕೊಂಡಿದ್ದು, ಈ ನಡುವೆ ಇನ್ನೇನು ಕೆಲವೇ ದಿನಗಳಲ್ಲಿ ಚಾಟ್ ಫಿಲ್ಟರ್ ಫೀಚರ್ಸ್ (Chat filter features) ಪ್ರಯೋಜನ ಕಲ್ಪಿಸಿಕೊಡಲಿದೆ.

ಹೌದು, ವಾಟ್ಸಾಪ್‌ನಲ್ಲಿ ಇರುವ ಸಾಕಷ್ಟು ವಿಶೇಷ ಫೀಚರ್ಸ್‌ ಆಯ್ಕೆಯ ಜೊತೆಗೆ ಇದೀಗ ಚಾಟ್ ಫಿಲ್ಟರ್ ಫೀಚರ್ಸ್ ಸಹ ಬಳಕೆದಾರರಿಗೆ ಲಭ್ಯವಾಗಲಿದೆ. ಆದರೆ, ಇದು ಪ್ರಾಯೋಗಿಕ ಹಂತದಲ್ಲಿದ್ದು, ಮುಂಬರುವ ಕೆಲವು ವಾರಗಳಲ್ಲಿ ಇದನ್ನು ಘೋಷಣೆ ಮಾಡುವ ಸಾಧ್ಯತೆ ಇದೆ. ಹಾಗಿದ್ರೆ, ಈ ಫೀಚರ್ಸ್‌ ನಿಂದ ಬಳಕೆದಾರರಿಗೆ ಏನೆಲ್ಲಾ ಲಾಭ, ಸದ್ಯಕ್ಕೆ ಯಾರಿಗೆಲ್ಲಾ ಈ ಫೀಚರ್ಸ್‌ ಲಭ್ಯ ಇದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಾಟ್ಸಾಪ್‌ನಲ್ಲಿ ಚಾಟ್ ಫಿಲ್ಟರ್ ಫೀಚರ್ಸ್: ಬಳಕೆದಾರರಿಗೆ ಭರ್ಜರಿ ಪ್ರಯೋಜನ

ವಾಟ್ಸಾಪ್ ಚಾಟ್ ಫಿಲ್ಟರ್ ಫೀಚರ್ಸ್: ವಾಟ್ಸಾಪ್‌ಈ ವಿಶೇಷ ಫೀಚರ್ಸ್‌ ಅನ್ನು ಪರೀಕ್ಷಿಸುತ್ತಿರುತ್ತದೆ. ಇದು ಸಾಕಷ್ಟು ಪ್ರಭಾವಶಾಲಿಯಾಗಿದೆ ಎನ್ನಲಾಗಿದ್ದು, ಈ ಮೂಲಕ ವಾಟ್ಸಾಪ್‌ ಬಳಕೆದಾರರ ಅನುಭವವನ್ನು ಸುಧಾರಿಸಲು ನಿರಂತರವಾಗಿ ಪ್ರಯತ್ನಿಸುತ್ತದೆ. ಅನೇಕ ಫೀಚರ್ಸ್‌ಗಳು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದರೂ, ಕೆಲವು ಬಳಕೆದಾರರು ಈಗಿನಿಂದಲೇ ಬಳಕೆ ಮಾಡಲು ಅರ್ಹರಾಗಿದ್ದಾರೆ. ಅಂದರೆ, ಇದು ಬೀಟಾ ಪರೀಕ್ಷಕರ ಗ್ರೂಪ್‌ಗೆ ಸೀಮಿತವಾಗಿದೆ.

ಇತ್ತೀಚಿನ ವಾಟ್ಸಾಪ್ ಬೀಟಾ ಆವೃತ್ತಿಯಲ್ಲಿ, ತಮ್ಮ ಚಾಟ್‌ ಪಟ್ಟಿಯ ಮೇಲ್ಭಾಗದಲ್ಲಿ ಪ್ರದರ್ಶಿಸಲಾದ ಚಾಟ್ ಫಿಲ್ಟರ್‌ ಇರುವ ಹೊಸ ಸೌಲಭ್ಯವನ್ನು ಕಾಣಬಹುದಾಗಿದೆ. ನಿರ್ದಿಷ್ಟ ಪ್ರಕಾರಗಳ ಚಾಟ್‌ಗಳನ್ನು ಪ್ರದರ್ಶಿಸುವ ಮೂಲಕ ತಮ್ಮ ಚಾಟ್ ವೀಕ್ಷಣೆಯನ್ನು ಸ್ಟ್ರೀಮ್‌ಲೈನ್ ಮಾಡಲು ಈ ಫಿಲ್ಟರ್‌ ಸಹಾಯ ಮಾಡಲಿದೆ. ಈ ವಿಭಾಗದಲ್ಲಿ ಓದದಿರುವ ಸಂಭಾಷಣೆಗಳನ್ನು ಪ್ರದರ್ಶಿಸಲು ಮತ್ತು ಗ್ರೂಪ್‌ ಚಾಟ್‌ಗಳ ಲಿಸ್ಟ್‌ ಅನ್ನು ತ್ವರಿತವಾಗಿ ಪ್ರವೇಶಿಸಲು ವಾಟ್ಸಾಪ್ ಮೀಸಲಾದ ಫಿಲ್ಟರ್‌ಗಳನ್ನು ಈ ಮೂಲಕ ನೀಡಿದೆ.

ವಾಟ್ಸಾಪ್‌ನಲ್ಲಿ ಚಾಟ್ ಫಿಲ್ಟರ್ ಫೀಚರ್ಸ್: ಬಳಕೆದಾರರಿಗೆ ಭರ್ಜರಿ ಪ್ರಯೋಜನ

ಈ ಚಾಟ್ ಫಿಲ್ಟರ್‌ಗಳನ್ನು ಇನ್ನೂ ಸ್ವೀಕರಿಸದವರು ಆಪ್‌ನಲ್ಲಿನ ಸರ್ಚ್‌ ಪಟ್ಟಿಯನ್ನು ಬಳಕೆ ಮಾಡಿಕೊಂಡು ನಿರ್ದಿಷ್ಟ ಚಾಟ್‌ ಅನ್ನು ಹುಡುಕಬಹುದು. ಈ ವೇಳೆ ಬಳಕೆದಾರರು ಸರ್ಚ್ ಬಾರ್‌ನಲ್ಲಿ ಬೇಕಾಗಿರುವ ನಿರ್ದಿಷ್ಟ ಚಾಟ್‌ಗೆ ಸಂಬಂಧಿಸಿದ ಏನನ್ನಾದರೂ ಟೈಪ್ ಮಾಡಬೇಕಾಗುತ್ತದೆ ಮತ್ತು ಈ ವೇಳೆ ಇನ್‌ಪುಟ್‌ಗೆ ಹೋಲುವ ಎಲ್ಲಾ ಫಲಿತಾಂಶಗಳನ್ನು ವಾಟ್ಸಾಪ್‌ ತೋರಿಸುತ್ತದೆ.

ಆದರೆ ಹೊಸ ಚಾಟ್ ಫಿಲ್ಟರ್ ಫೀಚರ್ಸ್‌ ಬಳಕೆದಾರರಿಗೆ ತಮ್ಮ ಸಂಭಾಷಣೆಗಳನ್ನು ಸಮರ್ಥವಾಗಿ ಸರ್ಚ್‌ ಮಾಡಲು ಅಧಿಕಾರ ನೀಡುತ್ತದೆ. ವ್ಯಾಪಕವಾದ ಲಿಸ್ಟ್‌ ಮೂಲಕ ನ್ಯಾವಿಗೇಟ್ ಮಾಡದೆಯೇ ನಿರ್ದಿಷ್ಟ ಚಾಟ್‌ಗಳನ್ನು ಪ್ರವೇಶಿಸುವ ಪ್ರಕ್ರಿಯೆಯನ್ನು ಇದು ಸುಗಮಗೊಳಿಸುತ್ತದೆ. ಇದಲ್ಲದೆ, ಗ್ರೂಪ್‌ ಚಾಟ್‌ಗಳನ್ನು ಪ್ರದರ್ಶಿಸಲು ಮೀಸಲಾದ ಫಿಲ್ಟರ್‌ನ ಸೇರ್ಪಡೆಯು ಬಳಕೆದಾರರಿಗೆ ಅವರ ಸಂವಹನ ಚಾನಲ್‌ಗಳನ್ನು ನಿರ್ವಹಿಸಲು ಸುಲಭ ವಿಧಾನದ ಆಯ್ಕೆ ನೀಡುತ್ತದೆ.

ವಾಟ್ಸಾಪ್‌ನಲ್ಲಿ ಚಾಟ್ ಫಿಲ್ಟರ್ ಫೀಚರ್ಸ್: ಬಳಕೆದಾರರಿಗೆ ಭರ್ಜರಿ ಪ್ರಯೋಜನ

ಇನ್ನು ಆಂಡ್ರಾಯ್ಡ್‌ 2.24.6.16 ಆವೃತ್ತಿಗಾಗಿ ವಾಟ್ಸಾಪ್‌ ಬೀಟಾದಲ್ಲಿ ಚಾಟ್‌ಗಳನ್ನು ಫಿಲ್ಟರ್ ಮಾಡುವ ಫೀಚರ್ಸ್‌ ಗೋಚರಿಸುತ್ತದೆ. ಈ ಫೀಚರ್ಸ್‌ ಪ್ರಯತ್ನಿಸಲು ಬಯಸುವ ಜನರು ಪ್ಲೇ ಸ್ಟೋರ್ ಮೂಲಕ ಪ್ಲಾಟ್‌ಫಾರ್ಮ್‌ನ ಬೀಟಾ ಪ್ರೋಗ್ರಾಂಗೆ ಸೈನ್ ಅಪ್ ಮಾಡಬಹುದಾಗಿದೆ. ಆದರೆ ನೋಂದಣಿ ಮಾಡಲು ನಿಮಗೆ ಕಷ್ಟವಾಗುತ್ತದೆ. ಯಾಕೆಂದರೆ ಇದಕ್ಕೆ ಈಗಾಗಲೇ ಸಾವಿರಾರು ಭಾಗಿಯಾಗಿದ್ದಾರೆ. ಇವರಲ್ಲಿ ಯಾರಾದರೂ ಅದನ್ನು ತೊರೆದರೆ ಮಾತ್ರ ನೀವು ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

ಹಾಗೆಯೇ ಬೀಟಾ ಆವೃತ್ತಿಯಲ್ಲಿ ಈ ವಿಶೇಷ ಫೀಚರ್ಸ್‌ ಉತ್ತಮವಾಗಿ ಕಾರ್ಯನಿರ್ವಹಿಸಿದರೆ ಶೀಘ್ರದಲ್ಲೇ ಸ್ಥಿರ ಆವೃತ್ತಿಯಲ್ಲಿಯೂ ಕಾಣಿಸಿಕೊಳ್ಳಲಿದೆ. ಆದರೆ, ಈ ಬಗ್ಗೆ ವಾಟ್ಸಾಪ್‌ ಇನ್ನೂ ಸಹ ಯಾವುದೇ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ.

Best Mobiles in India

English summary
Chat filter features will also be available to the users in addition to the many special features available in WhatsApp. It is in the pilot phase and is likely to be announced in the coming weeks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+