ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್! ಈ ಲಾಕ್ ಚಾಟ್‌ನಿಂದ ಹಲವು ಪ್ರಯೋಜನ!
ವಾಟ್ಸಾಪ್ ಇಂದು ಸ್ಮಾರ್ಟ್‌ಫೋನ್ ಬಳಕೆದಾರರ ಅಗತ್ಯ ಮೆಸೆಜಿಂಗ್ ಆಪ್ ಆಗಿ ಮಾರ್ಪಟ್ಟಿದೆ. ಯಾಕೆಂದರೆ ಈ ಆಪ್ ಕೇವಲ ಮೆಸೆಜ್ ಮಾಡಲಷ್ಟೇ ಬಳಕೆಗೆ ಬರದೆ ಇದನ್ನು ಹಲವಾರು ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದಾಗಿದೆ. ಅದರಂತೆ ನಿಮ್ಮ ಫೋನ್ ಅನ್ನು ಯಾರಾದರೂ ಕೆಲಕಾಲ ಬಳಕೆ ಮಾಡಲು ತೆಗೆದುಕೊಂಡಾದ ವಾಟ್ಸಾಪ್‌ನಲ್ಲಿ ಖಾಸಗಿ ಚಾಟ್ ವೀಕ್ಷಿಸುತ್ತಾರೆ ಎನ್ನುವ ಆತಂಕ ಬೇಡ.
ಹೌದು, ಮೊದಲೇ ತಿಳಿಸಿದಂತೆ ವಾಟ್ಸಾಪ್ ಕೇವಲ ಸಂವಹನಕ್ಕಷ್ಟೇ ಸೀಮಿತವಾಗದೆ ಇದನ್ನು ಬ್ಯಾಂಕಿಂಗ್ ವ್ಯವಹಾರ, ಹಾಗೂ ಪ್ರೀತಿ ಪಾತ್ರರ ಜೊತೆಗೆ ಖಾಸಗಿಯಾಗಿ ಆಡಿಯೋ, ವಿಡಿಯೋ ಹಾಗೂ ಫೋಟೋಗಳನ್ನು ಬಳಕೆ ಮಾಡಿಕೊಂಡು ಸಂವಹನ ನಡೆಸಲು ಅನುಕೂಲ ಮಾಡಿಕೊಡುತ್ತದೆ. ಈ ವೇಳೆ ನಿಮ್ಮ ಫೋನ್ ಅನ್ನು ಯಾರಾದರೂ ಕೆಲ ಕಾಲ ಬಳಕೆ ಮಾಡಲು ಮುಂದಾದರೆ ಇನ್ಮುಂದೆ ಭಯ ಪಡುವ ಅಗತ್ಯ ಇರುವುದಿಲ್ಲ. ಯಾಕೆಂದರೆ ವಾಟ್ಸಾಪ್ ಹೊಸ ಪೀಚರ್ಸ್ ಪರಿಚಯಿಸುತ್ತಿದೆ.

ಏನಿದು ಹೊಸ ಫೀಚರ್ಸ್?: ವಾಟ್ಸಾಪ್ ನಿರಂತರವಾಗಿ ಹೊಸ ಸೌಲಭ್ಯವನ್ನು ಗ್ರಾಹಕರಿಗೆ ಕಲ್ಪಿಸಿಕೊಡುತ್ತಿದ್ದು, ಈ ನಡುವೆ ಶೀಘ್ರದಲ್ಲೇ ಚಾಟ್‌ಗಳನ್ನು ಲಾಕ್ ಮಾಡಲು ಮತ್ತು ನಿಮ್ಮ ಫೋನ್ ಅನ್ನು ಸಾಂದರ್ಭಿಕವಾಗಿ ಪಡೆಯುವ ಜನರಿಂದ ಚಾಟ್ ಅನ್ನು ಮರೆಮಾಡಲು ನಿಮಗೆ ಅನುಮತಿಸುತ್ತದೆ. ಇದರಿಂದಾಗಿ ಮುಂದಾಗುವ ಅನಾನುಕೂಲ ಅಥವಾ ಇರುಸು ಮುರುಸನ್ನು ತಪ್ಪಿಸಿದಂತೆ ಆಗುತ್ತದೆ.
ಅದರಂತೆ ವಾಟ್ಸಾಪ್‌ನ ಎಲ್ಲಾ ವಿಷಯಗಳನ್ನು ಟ್ರ್ಯಾಕ್ ಮಾಡುತ್ತಿರುವ Wabetainfo ವರದಿ ಮಾಡಿದ್ದು, ಚಾಟ್ ಅನ್ನು ಲಾಕ್ ಮಾಡಿದಾಗ, ಬಳಕೆದಾರರು ಮಾತ್ರ ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಅದನ್ನು ಪ್ರವೇಶಿಸಬಹುದು. ಹೀಗಾಗಿ ಇದನ್ನು ಬೇರೆ ಯಾರೂ ಸಹ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ಉಲ್ಲೇಖಿಸಿದೆ. ಹಾಗೆಯೇ ಈ ವಿಶಿಷ್ಟ ಫೀಚರ್ಸ್‌ನಲ್ಲಿ ವಾಟ್ಸಾಪ್ ಕೆಲಸ ಮಾಡುತ್ತಿದೆ ಎಂದು ಹೇಳಿದೆ.
ಇದರಿಂದ ಪ್ರಯೋಜನ ಏನು? :ವಾಟ್ಸಾಪ್ ಯಾವುದೇ ಫೀಚರ್ಸ್ ಪರಿಚಯಿಸಲು ಮುಂದಾದರೂ ಸಹ ಅದರಿಂದ ಸಾಕಷ್ಟು ಅನುಕೂಲ ಲಭ್ಯವಾಗುತ್ತವೆ. ಅದರಂತೆ ಚಾಟ್ ಅನ್ನು ಲಾಕ್ ಮಾಡಿದಾಗ, ಬಳಕೆದಾರರು ಮಾತ್ರ ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಅನ್ನು ಬಳಸಿಕೊಂಡು ಅದನ್ನು ಪ್ರವೇಶಿಸಬದಾಗಿದ್ದು, ತಮಾಷೆ ದೃಷ್ಟಿಯಿಂದ ಮೊಬೈಲ್ ಕಸಿದುಕೊಳ್ಳುವ ನಿಮ್ಮ ಸ್ನೇಹಿತರು ಚಾಟಿಂಗ್ ವಿಭಾಗಕ್ಕೆ ಎಂಟ್ರಿ ಕೊಡುವುದು ಸಾಮಾನ್ಯ. ಆದರೆ, ಈ ಫೀಚರ್ಸ್‌ನಿಂದ ನಿಮ್ಮ ಖಾಸಗಿ ಚಾಟ್ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ.

ಇದಿಷ್ಟೇ ಅಲ್ಲದೆ ಬ್ಯಾಂಕಿಂಗ್ ದಾಖಲೆಗಳನ್ನು ಸ್ಟೋರೇಜ್ ಮಾಡಿ ಇಡಲು ಇದು ಸಹಕಾರಿಯಾಗಿದೆ. ಇದರಿಂದಾಗಿ ಮೊಬೈಲ್ ಕಳ್ಳತನ ಆದಾಗ ಅಥವಾ ನಿಮ್ಮನ್ನು ಶಂಕಿಸಿ ಯಾರಾದರೂ ನಿಮ್ಮ ವಾಟ್ಸಾಪ್ ಖಾತೆಗೆ ಎಂಟ್ರಿಯಾಗಲು ಮುಂದಾದರೆ ಇದು ಬೇರೆಯವರಿಗೆ ಅನುಮತಿ ನೀಡುವುದಿಲ್ಲ. ಹೀಗಾಗಿ ನಿಮ್ಮ ಖಾಸಗಿ ತನಕ್ಕೆ ಆಗುವ ಧಕ್ಕೆಯನ್ನು ತಡೆಯಲಿದೆ.
ಅಗತ್ಯ ದೃಢೀಕರಣವನ್ನು ಒದಗಿಸದೆಯೇ ಯಾರಾದರೂ ಬಳಕೆದಾರರ ಫೋನ್ ಅನ್ನು ಪ್ರವೇಶಿಸಲು ಪ್ರಯತ್ನಿಸಿದರೆ ಅದನ್ನು ಪ್ರವೇಶಿಸುವ ಮೊದಲು ಚಾಟ್ ಅನ್ನು ತೆರವುಗೊಳಿಸಲು ಅವರನ್ನು ಪ್ರೇರೇಪಿಸಲಾಗುತ್ತದೆ. ಇದರಿಂದಾಗಿ ಅಕಸ್ಮಾತ್‌ಆಗಿ ನಿಮ್ಮ ಖಾಸಗಿ ಚಾಟ್‌ಗೆ ಅವರು ಎಂಟ್ರಿಯಾದರೂ ಸಹ ಅವು ಅಲ್ಲಿ ಇರುವುದಿಲ್ಲ. ಬದಲಾಗಿ ಎಲ್ಲವೂ ಡಿಲೀಟ್ ಆಗಿರಲಿವೆ.
ಈ ಲಾಕ್ ಚಾಟ್ ಫೀಚರ್ಸ್‌ನಲ್ಲಿ ಕಳುಹಿಸಲಾದ ಫೋಟೋಗಳು ಮತ್ತು ವಿಡಿಯೋಗಳನ್ನು ಡಿವೈಸ್‌ನ ಗ್ಯಾಲರಿಯಲ್ಲಿ ಆಟೋಮ್ಯಾಟಿಕ್ ಆಗಿ ಉಳಿಸುವುದಿಲ್ಲ ಎಂದು ಖಚಿತಪಡಿಸುತ್ತದೆ. ಈ ಹೆಚ್ಚುವರಿ ರಕ್ಷಣೆಯ ಲೇಯರ್ ಸೂಕ್ಷ್ಮ ಸ್ವೀಕರಿಸುವವರನ್ನು ಹೊರತುಪಡಿಸಿ ಬೇರೆ ಯಾರಿಂದಲೂ ವೀಕ್ಷಣೆ ಮಾಡಲು ಸಾಧ್ಯ ಇರುವುದಿಲ್ಲ. ಇದರಿಂದಾಗಿ ಬಳಕೆದಾರರ ಮನಸ್ಸಿಗೆ ಶಾಂತಿ ಸಿಗುವುದರಲ್ಲಿ ಡೌಟೇ ಇಲ್ಲ.

ಯಾವೆಲ್ಲಾ ಬಳಕೆದಾರರಿಗೆ ಇದು ಲಭ್ಯ?: ಸದ್ಯಕ್ಕೆ ಈ ಫೀಚರ್ಸ್ ಅಭಿವೃದ್ಧಿ ಹಂತದಲ್ಲಿದೆ. ಹಾಗೆಯೇ, ಆಂಡ್ರಾಯ್ಡ್ ಬೀಟಾ ಆವೃತ್ತಿಯಲ್ಲಿ ಪರೀಕ್ಷಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಬಳಕೆದಾರರು ಈ ಫೀಚರ್ಸ್ ಅನ್ನು ಬಳಕೆ ಮಾಡಬಹುದು ಎಂದು ತಿಳಿದುಬಂದಿದೆ. ಇದಾದ ನಂತರ ನೀವು ನಿಮ್ಮ ಚಾಟ್‌ನ ಸಂಪರ್ಕ ಅಥವಾ ಗ್ರೂಪ್‌ನ ಮಾಹಿತಿಯೊಳಗೆ ಖಾಸಗಿ ಚಾಟ್‌ಗಳನ್ನು ಲಾಕ್ ಮಾಡಲು ಅವಕಾಶ ಸಿಗಲಿದೆ ಎನ್ನಲಾಗಿದೆ.


Click it and Unblock the Notifications








