ವಾಟ್ಸಾಪ್‌ಗೆ ಮಗದೊಂದು ಹೊಸ ಫೀಚರ್ಸ್... ನೀವು ಖಂಡಿತಾ ಇಷ್ಟ ಪಡ್ತೀರಾ!
ವಾಟ್ಸಾಪ್ (WhatsApp) ಈಗಂತೂ ಪ್ರತಿ ಬಳಕೆದಾರರಿಗೂ ಅಗತ್ಯ ಆಪ್‌ಗಿದೆ. ನಿತ್ಯವೂ ಹಲವಾರು ಬಾರಿ ಈ ಆಪ್ ಅನ್ನು ಓಪನ್ ಮಾಡುವ ಮೂಲಕ ಇತರರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬಹುದಾಗಿದೆ. ಈ ನಡುವೆ ವಾಟ್ಸಾಪ್ ಹೊಸ ಹೊಸ ಫೀಚರ್ಸ್ ಅನ್ನು ಅನಾವರಣ ಮಾಡುವ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡುತ್ತಾ ಬರುತ್ತಿದ್ದು, ಇದೀಗ ಮಗದೊಂದು ಫೀಚರ್ಸ್ ಅನ್ನು ಪರಿಚಯಿಲಿದೆ.
ಹೌದು, ವಾಟ್ಸಾಪ್ ಇಲ್ಲದ ಫೋನ್‌ಗಳೇ ಇಂದು ಇಲ್ಲ ಎಂದು ಹೇಳಿದರೆ ತಪ್ಪಾಗಲಾರದು. ವಾಟ್ಸಾಪ್ ಅಷ್ಟರಮಟ್ಟಿಗೆ ಇಂದು ಎಲ್ಲಾ ಕಡೆ ವ್ಯಾಪಿಸಿಬಿಟ್ಟಿದೆ. ಕೆಲವು ದಿನಗಳ ಹಿಂದೆ ಸ್ಕ್ರೀನ್ ಶೇರ್ ಫೀಚರ್ಸ್ (Screen share features) ಹಾಗೂ ಹೆಚ್‌ಡಿ ಫೋಟೋ ಶೇರ್ ಫೀಚರ್ಸ್(HD photo share features) ಸೇರಿದಂತೆ ಅನೇಕ ಅಗತ್ಯ ಹಾಗೂ ಆಕರ್ಷಕ ಫೀಚರ್ಸ್ ಪರಿಚಯಿಸುವ ಮೂಲಕ ವಾಟ್ಸಾಪ್ ದೊಡ್ಡದಾಗಿ ಸೌಂಡ್ ಮಾಡಿತ್ತು. ಈಗ ಫೋಟೋ ಶೀರ್ಷಿಕೆ (Photo caption) ವಿಚಾರದಲ್ಲಿ ಹೊಸ ಸೌಲಭ್ಯ ಕಲ್ಪಿಸಿಕೊಡಲಿದೆ.

ಫೋಟೋ ಶೀರ್ಷಿಕೆ ಎಡಿಟ್ ಫೀಚರ್ಸ್: ವಾಟ್ಸಾಪ್ ಕಳೆದ ಕೆಲವು ದಿನಗಳಲ್ಲಿ ಹಲವಾರು ಫೀಚರ್ಸ್ ಗಳನ್ನು ಬಳಕೆದಾರರಿಗೆ ಲಭ್ಯವಾಗಿಸಿದೆ. ಅದರಂತೆ ಈಗ ಮತ್ತೊಂದು ಫೀಚರ್ಸ್ ಅನ್ನು ಘೋಷಿಸಿದ್ದು, ತನ್ನ ಬಳಕೆದಾರರಿಗೆ ಫೋಟೋಗಳು, ವಿಡಿಯೋಗಳು, GIF ಗಳು ಮತ್ತು ದಾಖಲೆಗಳ ಶೀರ್ಷಿಕೆಗಳನ್ನು ಎಡಿಟ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಈ ಹೊಸ ಫೀಚರ್ಸ್ ಅನ್ನು ಈಗಾಗಲೇ ಕೆಲವು ಬಳಕೆದಾರರಿಗೆ ಲಭ್ಯವಾಗಿಸಿದ್ದು, ಉಳಿದವರು ಮುಂದಿನ ದಿನಗಳಲ್ಲಿ ಬಳಕೆ ಮಾಡಲು ಅರ್ಹರಾಗಲಿದ್ದಾರೆ.
ಈ ವರ್ಷದ ಮೇ ತಿಂಗಳಲ್ಲಿ, ವಾಟ್ಸಾಪ್ ಚಾಟ್‌ನಲ್ಲಿ ಟೆಕ್ಸ್ಟ್ ಮೆಸೆಜ್‌ಗಳನ್ನು (Edit text message) ಎಡಿಟ್ ಮಾಡಲು ಫೀಚರ್ಸ್ ಅನ್ನು ಹೊರತಂದಿತ್ತು. ಈ ಮೂಲಕ ಬಳಕೆದಾರರು ಮೆಸೆಜ್‌ಗಳನ್ನು ಕಳುಹಿಸಿದ ನಂತರ 15 ನಿಮಿಷಗಳ ಒಳಗೆ ಅದನ್ನು ಎಡಿಟ್ ಮಾಡಬಹುದಾಗಿದೆ. ಈ ಮೂಲಕ ತಪ್ಪಾದ ಮೆಸೆಜ್‌ನಿಂದ ಆಗುತ್ತಿರುವ ಮುಜುಗರವನ್ನು ತಪ್ಪಿಸಿಕೊಳ್ಳಬಹುದಾಗಿದೆ.
ಈ ಸಂಬಂಧ ವಾಟ್ಸಾಪ್ ಮಾಹಿತಿ ನೀಡಿದ್ದು, 'ಸರಳ ಕಾಗುಣಿತವನ್ನು ಸರಿಪಡಿಸುವುದರಿಂದ ಹಿಡಿದು ಮೆಸೆಜ್‌ಗೆ ಇನ್ನೂ ಹೆಚ್ಚಿನ ಮಾಹಿತಿ ಸೇರಿಸುವವರೆಗೆ, ನಿಮ್ಮ ಚಾಟ್‌ಗಳ ಮೇಲೆ ನಿಮಗೆ ಹೆಚ್ಚಿನ ಕಂಟ್ರೋಲ್ ತರಲು ನಾವು ಉತ್ಸುಕರಾಗಿದ್ದೇವೆ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಕಳುಹಿಸಿದ ಮೆಸೆಜ್ ಅನ್ನ ದೀರ್ಘವಾಗಿ ಒತ್ತಿ ಮತ್ತು ಮೆನುವಿನಿಂದ 'ಸಂಪಾದಿಸು' ಆಯ್ಕೆಮಾಡಿ' ಎಂದು ತಿಳಿಸಿತ್ತು.
ಆದರೆ ಈವರೆಗೂ ಚಿತ್ರಗಳು, ವಿಡಿಯೋಗಳು ಮತ್ತು GIF ಗಳಂತಹ ಮೀಡಿಯಾ ಮೆಸೆಜ್‌ಗಳಲ್ಲಿ ಶೀರ್ಷಿಕೆಗಳನ್ನು ಎಡಿಟ್ ಮಾಡಲು ಯಾವುದೇ ಆಯ್ಕೆ ಇರಲಿಲ್ಲ. ಇತ್ತೀಚಿನ ಅಪ್‌ಡೇಟ್‌ನೊಂದಿಗೆ, ವಾಟ್ಸಾಪ್ ಈ ಸಮಸ್ಯೆಗೂ ಮುಕ್ತಿ ನೀಡಿದೆ. ಇದರಿಂದಾಗಿ ಟೆಕ್ಸ್ಟ್ ಮೆಸೆಜ್‌ಗಳ ರೀತಿಯಲ್ಲಿಯೇ ಮೀಡಿಯಾ ಫೈಲ್‌ಗಳನ್ನು(media file) ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಇನ್ನು ಶೀರ್ಷಿಕೆಯೊಂದಿಗೆ ಕಳುಹಿಸಿದ ಮೀಡಿಯಾ ಮೆಸೆಜ್‌ಅನ್ನು ದೀರ್ಘವಾಗಿ ಒತ್ತಿ ಹಿಡಿಯುವ ಮೂಲಕ ಅದನ್ನು ಎಡಿಟ್ ಮಾಡಬಹುದಾಗಿದೆ.
ಈ ನಡುವೆ ವಾಟ್ಸಾಪ್‌ನಲ್ಲಿ ಹೆಚ್‌ಡಿ ಫೋಟೋ ಕಳುಹಿಸುವ ಆಯ್ಕೆ ಸಹ ನೀಡಲಾಗಿದೆ. ಇದು ಬಹು ನಿರೀಕ್ಷಿತ ಫೀಚರ್ಸ್ ಆಗಿದ್ದು, ಅದೆಷ್ಟೋ ಜನರಿಗೆ ಸಾಕಷ್ಟು ಪ್ರಯೋಜನ ನೀಡಲಿದೆ. ಇದಕ್ಕೂ ಮೊದಲು ವಾಟ್ಸಾಪ್ ಮೂಲಕ ಕಳುಹಿಸಲಾದ ಚಿತ್ರಗಳನ್ನು ಆಟೋಮ್ಯಾಟಿಕ್ ಆಗಿ ಸಂಕುಚಿತಗೊಳಿಸಲಾಗುತ್ತಿತ್ತು. ಇದರಿಂದಾಗಿ ಕಳಪೆ ಗುಣಮಟ್ಟಕ್ಕೆ ಕಾರಣವಾಗುತ್ತಿತ್ತು. ಆದರೆ ಈ ಹೊಸ ಫೀಚರ್ಸ್‌ನಿಂದ ಉತ್ತಮವಾದ ಫೋಟೋಗಳನ್ನು ಕಳುಹಿಸಲು ಹಾಗೂ ಬೇರೆಯವರು ಕಳುಹಿಸಿದ ಫೋಟೋಗಳನ್ನು ಅದೇ ಫಾರ್ಮ್ಯಾಟ್ ನಲ್ಲಿ ನೋಡಲು ಸಾಧ್ಯವಾಗಿದೆ.
ಈ ಬಗ್ಗೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಫೇಸ್‌ಬುಕ್ ಪೋಸ್ಟ್ ಒಂದನ್ನು ಮಾಡಿದ್ದು, 'ವಾಟ್ಸಾಪ್ ನಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ವಿಭಾಗ ಇದೀಗ ನವೀಕರಣವನ್ನು ಪಡೆದುಕೊಂಡಿದೆ, ಈಗ ನೀವು ಹೆಚ್‌ಡಿನಲ್ಲಿ ಕಳುಹಿಸಬಹುದು' ಎಂದು ತಿಳಿಸಿದ್ದಾರೆ. ಜೊತೆಗೆ ಈ ಪೋಸ್ಟ್‌ನಲ್ಲಿ ಹೆಚ್‌ಡಿ ಅಥವಾ ಪ್ರಮಾಣಿತ ಗುಣಮಟ್ಟದಲ್ಲಿ ಹೇಗೆ ಕಳುಹಿಸಬೇಕು ಎಂಬುದನ್ನು ತಿಳಿಸುವ ವಿಡಿಯೋ ಸಹ ಇದೆ.

ಈ ವಿಡಿಯೋದಲ್ಲಿ ಕಾಣಿಸುವಂತೆ ಫೋಟೋಗಳನ್ನು ಕಳುಹಿಸುವ ಪ್ರಕ್ರಿಯೆಯಲ್ಲಿ ಬೇರೇ ಏನೂ ಬದಲಾವಣೆ ಆಗಿಲ್ಲ. ಆದರೆ ಪೆನ್ ಮತ್ತು ಕ್ರಾಪ್ ಟೂಲ್ಸ್ ಪಕ್ಕದಲ್ಲಿ ಅಂದರೆ ಮೇಲ್ಭಾಗದಲ್ಲಿ HD ಎಂಬ ಆಯ್ಕೆ ಇದೆಯಷ್ಟೇ. ಫೋಟೋಗಳನ್ನು ಆಯ್ಕೆ ಮಾಡಿದ ನಂತರ ಇದರ ಮೇಲೆ ಕ್ಲಿಕ್ ಮಾಡಿದ್ರೆ ಉತ್ತಮ ಕ್ವಾಲಿಟಿ ಫೋಟೋಗಳು ಸೆಂಡ್ ಆಗಲಿವೆ.


Click it and Unblock the Notifications








