Home
ಸುದ್ದಿಜಾಲ

WhatsApp: ವಾಟ್ಸಾಪ್‌ನಲ್ಲಿ ಶೀಘ್ರದಲ್ಲೇ ಸಿಗಲಿದೆ ಈ ವಿಶೇಷ ಫೀಚರ್ಸ್‌! ಬಳಕೆದಾರರಿಗೆ ಹಲವು ಅನುಕೂಲ

ವಾಟ್ಸಾಪ್‌ (Whatsapp) ಬಳಕೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿದೆ. ಅದರಲ್ಲೂ ಈ ಪ್ಲಾಟ್‌ಫಾರ್ಮ್‌ನಲ್ಲಿ ಭಿನ್ನ ವಿಭಿನ್ನ ಫೀಚರ್ಸ್‌ಗಳನ್ನು ನೀಡುತ್ತಿದ್ದು, ಈ ಮೂಲಕ ಬಳಕೆದಾರರು ಇದರಲ್ಲಿ ಉತ್ತಮ ಅನುಭವ ಪಡೆದುಕೊಳ್ಳಬಹುದಾಗಿದೆ. ಈ ನಡುವೆ ಮಗದೊಂದು ವಿಶೇಷ ಫೀಚರ್ಸ್‌ ಅನ್ನು ಶೀಘ್ರದಲ್ಲೇ ನೀಡಲಿದೆ ಎಂಬ ವಿಷಯ ತಿಳಿದುಬಂದಿದೆ.

ಹೌದು, ವಾಟ್ಸಾಪ್‌ ಈಗಾಗಲೇ ಸಾಕು ಎನ್ನುವಷ್ಟು ಫೀಚರ್ಸ್‌ ಅನ್ನು ಹೊಂದಿದೆ. ಈ ನಡುವೆ ಯೂಟ್ಯೂಬ್‌ (YouTube) ಅನ್ನೇ ಹೋಲುವ ಹೊಸ ಫೀಚರ್ಸ್‌ವೊಂದು ಕಾಣಿಸಿಕೊಳ್ಳಲಿದ್ದು, ಈ ಮೂಲಕ ಬಳಕೆದಾರರು ಭಿನ್ನ ಅನುಭವ ಪಡೆದುಕೊಳ್ಳಬಹುದಾಗಿದೆ. ಹಾಗಿದ್ರೆ, ಏನಿದು ಹೊಸ ಫೀಚರ್ಸ್‌?, ಎಂದಿನಿಂದ ಲಭ್ಯವಾಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ವಾಟ್ಸಾಪ್‌ನಲ್ಲಿ ಶೀಘ್ರದಲ್ಲೇ ಸಿಗಲಿದೆ ಈ ವಿಶೇಷ ಫೀಚರ್ಸ್‌! ಬಳಕೆದಾರರಿಗೆ ಅನುಕೂಲ

ವಾಟ್ಸಾಪ್‌ನಲ್ಲಿ ಹೊಸ ಫೀಚರ್ಸ್‌: ಹಲವು ರೀತಿಯ ಹೊಸ ಫೀಚರ್ಸ್‌ ಪರಿಚಯಿಸುವ ಮೂಲಕ ಬಳಕೆದಾರರಿಗೆ ಬೇಕಾದುದನ್ನು ತಲುಪಿಸುವಲ್ಲಿ ಮೆಟಾ ಹೆಚ್ಚು ಗಮನಹರಿಸುತ್ತಿದೆ. ಸ್ಕ್ರೀನ್‌ಶಾಟ್‌ಗಳನ್ನು ನಿರ್ಬಂಧಿಸುವುದರಿಂದ ಹಿಡಿದು ಗ್ರೂಪ್‌ ಕರೆಗಳಲ್ಲಿ 31 ಭಾಗವಹಿಸುವವ ವರೆಗೆ ಹಲವಾರು ರೀತಿಯ ಸೌಕರ್ಯ ಕಲ್ಪಿಸಿಕೊಟ್ಟಿದೆ. ಇದರೊಂದಿಗೆ ಬಳಕೆದಾರರಿಗೆ ಆಪ್‌ನಲ್ಲಿ ವಿಡಿಯೋ ಪ್ಲೇಬ್ಯಾಕ್ ಮೇಲೆ ಹೆಚ್ಚಿನ ಕಂಟ್ರೋಲ್‌ (Video playback control) ನೀಡಲು ಮುಂದಾಗಿದೆ.

ಅಂದರೆ ನೀವು ಯೂಟ್ಯೂಬ್‌ನಲ್ಲಿ ಈಗಾಗಲೇ ಪಡೆಯುವ ಸೌಲಭ್ಯಗಳಲ್ಲಿ ಒಂದನ್ನು ವಾಟ್ಸಾಪ್‌ನಲ್ಲಿ ನೀಡಲು ಎಲ್ಲಾ ತಯಾರಿ ನಡೆದಿದೆ. ಅಂದರೆ ಯೂಟ್ಯೂಬ್‌ ನ ಪ್ಲೇಬ್ಯಾಕ್ ಕಂಟ್ರೋಲ್‌ನಂತೆಯ ಪ್ರೋಗ್ರೆಸ್ ಬಾರ್ ಅನ್ನು ಬಳಕೆ ಮಾಡದೆಯೇ ವಿಡಿಯೋಗಳನ್ನು ರಿವೈಂಡ್ ಮಾಡುವ ಮತ್ತು ವೇಗವಾಗಿ ಫಾರ್ವರ್ಡ್ ಮಾಡುವ ಸಾಮರ್ಥ್ಯವನ್ನು ಈ ಫೀಚರ್ಸ್‌ ಬಳಕೆದಾರರಿಗೆ ನೀಡಲಿದೆ.

ಈ ಸಂಬಂಧ WABetaInfo ಮಾಹಿತಿ ಉಲ್ಲೇಖ ಮಾಡಿದೆ. ಹೊಸ ವಿಡಿಯೋ ಪ್ಲೇಬ್ಯಾಕ್ ಕಂಟ್ರೋಲ್‌ಗಳು ಬಳಕೆದಾರರಿಗೆ 10 ಸೆಕೆಂಡುಗಳಷ್ಟು ಮುಂದಕ್ಕೆ ಮತ್ತು ಹಿಂದಕ್ಕೆ ಸ್ಕಿಪ್ ಮಾಡಲು ಅನುಮತಿಸುತ್ತದೆ. ಹೊಸ ಬಟನ್‌ಗಳು ಯೂಟ್ಯೂಬ್‌ನಲ್ಲಿ ಇರುವಂತೆಯೇ ಕಾಣಿಸಿಕೊಳ್ಳಲಿವೆ ಎಂದು ತಿಳಿಸಲಾಗಿದೆ. ಹೊಸ ವಿಡಿಯೋ ಪ್ಲೇಬ್ಯಾಕ್ ಕಂಟ್ರೋಲ್ ಪ್ರಸ್ತುತ ಆಂಡ್ರಾಯ್ಡ್‌ 2.23.24 ಗಾಗಿ ವಾಟ್ಸಾಪ್‌ನ ನ ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಾಟ್ಸಾಪ್‌ನಲ್ಲಿ ಶೀಘ್ರದಲ್ಲೇ ಸಿಗಲಿದೆ ಈ ವಿಶೇಷ ಫೀಚರ್ಸ್‌! ಬಳಕೆದಾರರಿಗೆ ಅನುಕೂಲ

ಇನ್ನು ಈ ವಿಶೇಷ ಫೀಚರ್ಸ್‌ ಕೆಲವೇ ದಿನಗಳಲ್ಲಿ ಎಲ್ಲಾ ಸಾಮಾನ್ಯ ಬಳಕೆದಾರರಿಗೆ ಲಭ್ಯ ಆಗಲಿದೆ ಎಂದು ವಾಟ್ಸಾಪ್‌ ಮಾಹಿತಿ ನೀಡಿದೆ. ಭವಿಷ್ಯದ ಆಪ್‌ ನವೀಕರಣಗಳಲ್ಲಿ ಅವುಗಳನ್ನು ಎಲ್ಲರಿಗೂ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿದುಬಂದಿದ್ದು, ಅಧಿಕೃತ ಬಿಡುಗಡೆಗೆ ನಿಖರವಾದ ದಿನಾಂಕದ ಬಗ್ಗೆ ಮಾಹಿತಿ ಇಲ್ಲ. ಖುಷಿ ಪಡುವ ಸಂಗತಿ ಏನೆಂದರೆ ಈ ಕಂಟ್ರೋಲ್‌ ಆಯ್ಕೆ ಬಳಕೆದಾರರಿಗೆ ವಿಡಿಯೋದ ಪ್ರಮುಖ ಭಾಗಗಳಿಗೆ ಸುಲಭವಾಗಿ ಸ್ಕಿಪ್ ಮಾಡಲು ಅನುಮತಿಸಲಿದೆ.

ವಾಟ್ಸಾಪ್‌ನಲ್ಲಿ ಶೀಘ್ರದಲ್ಲೇ ಸಿಗಲಿದೆ ಈ ವಿಶೇಷ ಫೀಚರ್ಸ್‌! ಬಳಕೆದಾರರಿಗೆ ಅನುಕೂಲ

ಈ ವಿಡಿಯೋ ಪ್ಲೇಬ್ಯಾಕ್ ಕಂಟ್ರೋಲ್‌ ಫೀಚರ್ಸ್‌ನೊಂದಿಗೆ ವಾಟ್ಸಾಪ್‌ನಲ್ಲಿ ಹೊಸ ಗೌಪ್ಯತೆ ಕೇಂದ್ರಿತ ಪರ್ಯಾಯ ಪ್ರೊಫೈಲ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿದುಬಂದಿದೆ. ಅದು ಪ್ರೊಫೈಲ್ ಫೋಟೋ ಸೇರಿದಂತೆ ಇತರೆ ಮಾಹಿತಿಯನ್ನು ಮರೆಮಾಡುತ್ತದೆ ಮತ್ತು ಬಳಕೆದಾರರು ತಮ್ಮ ಸಂಪರ್ಕ ಪಟ್ಟಿಯಲ್ಲಿಲ್ಲದ ಸಂಪರ್ಕಗಳಿಗೆ ಬೇರೆ ಫೋಟೋ ಮತ್ತು ಹೆಸರನ್ನು ವೀಕ್ಷಣೆ ಮಾಡುವಂತೆ ಅನುಮತಿಸುತ್ತದೆ.

WABetaInfo ಪ್ರಕಾರ, ಪರ್ಯಾಯ ಪ್ರೊಫೈಲ್ ಫೀಚರ್ಸ್ ಬಳಕೆದಾರರ ಪ್ರೊಫೈಲ್ ಫೋಟೋ ಗೌಪ್ಯತೆ ಸೆಟ್ಟಿಂಗ್‌ಗಳಲ್ಲಿ ಸಂಯೋಜಿಸಲಾಗುತ್ತದೆ. ಬಳಕೆದಾರರಿಗೆ ತಮ್ಮ ಪ್ರಾಥಮಿಕ ಪ್ರೊಫೈಲ್ ಮಾಹಿತಿಯನ್ನು ಬೇರೆಯವರಿಂದ ಮರೆಮಾಡುವಾಗ ನಿರ್ದಿಷ್ಟ ಸಂಪರ್ಕಗಳಿಗೆ ವಿಭಿನ್ನ ಪ್ರೊಫೈಲ್ ಫೋಟೋ ಮತ್ತು ಹೆಸರನ್ನು ಹೊಂದಿಸಲು ಇದು ಅನುಮತಿಸುತ್ತದೆ ಎಂದು ಉಲ್ಲೇಖಿಸಿದೆ. ಆದರೆ ಈ ಆಲ್ಟರ್ನೇಟ್ ಪ್ರೊಫೈಲ್ ಫೀಚರ್ಸ್ ಇನ್ನೂ ಅಭಿವೃದ್ಧಿ ಹಂತದಲ್ಲಿದೆ.

ಈ ಎಲ್ಲಾ ಬೆಳವಣಿಗೆ ನಡುವೆ ಸೆಪ್ಟೆಂಬರ್​ನಲ್ಲಿ 71.1 ಲಕ್ಷ ಅಕೌಂಟ್​ಗಳನ್ನು ಬ್ಯಾನ್ ಮಾಡಲಾಗಿದೆ. ಐಟಿ ನಿಯಮಗಳಿಗೆ ಪೂರಕವಾಗಿ ಅಕ್ರಮ ಎಂದು ಅನಿಸಿದ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ. ಈ ರೀತಿಯ ಬ್ಯಾನ್‌ ಪ್ರಕ್ರಿಯೆ ನಿರಂತರವಾಗಿ ವಾಟ್ಸಾಪ್‌ನಲ್ಲಿ ಜರುಗುತ್ತಲೇ ಇರುತ್ತವೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರಿಗೆ ಹೆಚ್ಚಿನ ಭದ್ರತೆಯನ್ನು ಖಾತರಿಪಡಿಸುತ್ತದೆ.

Best Mobiles in India

English summary
WhatsApp is now offering users more control over video playback in the app. It will give you the experience of using YouTube.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+