Home
ಸುದ್ದಿಜಾಲ

ವೆಬ್‌ ವಾಟ್ಸಾಪ್‌ ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಸೌಲಭ್ಯ; ಏನದು!?

ಬಹುಪಾಲು ಜನರು ಬಳಕೆ ಮಾಡುವ ಪ್ರಮುಖ ಮೆಸೆಜಿಂಗ್‌ ಆಪ್‌ ಆದ ವಾಟ್ಸಾಪ್‌ ಇಂದು ಹಲವಾರು ರೀತಿಯ ಸೌಲಭ್ಯಗಳನ್ನು ಬಳಕೆದಾರರಿಗೆ ನೀಡಿದೆ. ಅದರಲ್ಲೂ ಇತ್ತೀಚೆಗೆ ಸ್ಮಾರ್ಟ್‌ಫೋನ್‌ ಬಳಕೆದಾರರು ಉತ್ತಮ ಕ್ವಾಲಿಟಿಯ ಫೋಟೋಗಳನ್ನು ಬೇಕಾದವರಿಗೆ ಸೆಂಡ್ ಮಾಡಲು ಅನುವು ಮಾಡಿಕೊಟ್ಟಿತ್ತು. ಇದೇ ಸೌಲಭ್ಯವನ್ನು ಈಗ ವೆಬ್‌ ಬಳಕೆದಾರರಿಗೆ ನೀಡಲು ಮುಂದಾಗಿದೆ.

ವೆಬ್‌ ವಾಟ್ಸಾಪ್‌ ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಸೌಲಭ್ಯ; ಏನದು!?

ಹೌದು, ವಾಟ್ಸಾಪ್‌ ವೆಬ್‌ ಬಳಕೆದಾರರು ಇನ್ಮುಂದೆ ಈ ಹೊಸ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ಉತ್ತಮ ಕ್ವಾಲಿಟಿ ಇರುವ ಫೋಟೋ ಹಾಗೂ ಫೈಲ್‌ಗಳನ್ನು ಬೇಕಾದವರಿಗೆ ಸೆಂಡ್‌ ಮಾಡಬಹುದು ಎಂದು ವಾಟ್ಸಾಪ್‌ ತಿಳಿಸಿದೆ. ಹಾಗಿದ್ರೆ. ಯಾವೆಲ್ಲಾ ಬಳಕೆದಾರರಿಗೆ ಈ ಸೌಲಭ್ಯ ಲಭ್ಯವಾಗಲಿದೆ, ಸ್ಮಾರ್ಟ್‌ಫೋನ್‌ ಬಳಕೆದಾರರು ಉತ್ತಮ ಕ್ವಾಲಿಟಿ ಫೋಟೋಗಳನ್ನು ಹೇಗೆ ಸೆಂಡ್‌ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವೆಬ್ ಬಳಕೆದಾರರಿಗೆ ಈ ಸೌಲಭ್ಯ

ಈಗಾಗಲೇ ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಯಾವುದೇ ಫೋಟೋ ಸಂಕುಚಿತಗೊಳಿಸದೆಯೇ ಮೂಲ ಗುಣಮಟ್ಟದಲ್ಲಿಯೇ ಸೆಂಡ್‌ ಮಾಡಲು ಅನುಕೂಲ ಮಾಡಿಕೊಟ್ಟಿದೆ. ಅದರಂತೆ ಯಾರ್ಯಾರು ವೆಬ್‌ ಮೂಲಕ ವಾಟ್ಸಾಪ್‌ ಬಳಕೆ ಮಾಡುತ್ತಾರೋ ಅವರಿಗೆ ಇನ್ಮುಂದೆ ಈ ಸೌಲಭ್ಯ ಲಭ್ಯವಾಗಲಿದೆ. ಅಂದರೆ ಹೆಚ್ಚಿನ ರೆಸಲ್ಯೂಶನ್ ಫೋಟೋಗಳನ್ನು ಕಳುಹಿಸಲು ಅವಕಾಶ ನೀಡಲಾಗುತ್ತದೆ.

ಈ ಫೋಟೋ ವಿಚಾರದಲ್ಲಿ ವಾಟ್ಸಾಪ್‌ ಶೀಘ್ರಗತಿಯಲ್ಲಿ ಹಲವಾರು ಬದಲಾವಣೆಗಳನ್ನು ತರುತ್ತಿದೆ. ಯಾಕೆಂದರೆ ವಾಟ್ಸಾಪ್‌ನಲ್ಲಿ ಚಾಟ್‌ ನಷ್ಟೇ ಮುಖ್ಯವಾಗಿ ಫೋಟೋಗಳನ್ನೂ ಸೆಂಡ್‌ ಮಾಡಲಾಗುತ್ತದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ವಾಟ್ಸಾಪ್‌ ಬಾಕಿ ಉಳಿದಿದ್ದ ವೆಬ್‌ ಬಳಕೆದಾರರಿಗೂ ಈ ಫೀಚರ್ಸ್‌ ಪರಿಚಯಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ಯಾವಾಗ ಲಭ್ಯ?

Wabetainfo ವರದಿಯ ಪ್ರಕಾರ ವಾಟ್ಸಾಪ್‌ ತನ್ನ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಾಗಿ ಮೂಲ ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಬಳಕೆದಾರರನ್ನು ಅನುಮತಿಸಲು ಹೊಸ ಫೀಚರ್ಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಉಲ್ಲೇಖಿಸಿದೆ. ಈ ಫೀಚರ್ಸ್‌ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದು, ಡೆಸ್ಕ್‌ಟಾಪ್ ಅಪ್ಲಿಕೇಶನ್‌ನ ಭವಿಷ್ಯದ ನವೀಕರಣದೊಂದಿಗೆ ಇದು ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.

ವೆಬ್‌ ವಾಟ್ಸಾಪ್‌ ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಸೌಲಭ್ಯ; ಏನದು!?

ವಾಟ್ಸಾಪ್‌ನಲ್ಲಿ ಮೂಲ ಗುಣಮಟ್ಟದಲ್ಲಿ ಫೋಟೋ ಕಳುಹಿಸುವುದು ಹೇಗೆ?

ಫೋಟೋ ಗುಣಮಟ್ಟದ ಫೀಚರ್ಸ್‌ ಪ್ರಸ್ತುತ ಐಓಎಸ್‌ ಹಾಗೂ ಆಂಡ್ರಾಯ್ಡ್‌ ಬಳಕೆದಾರರಿಗೆ ಲಭ್ಯವಿದ್ದು, ಅಪ್ಲಿಕೇಶನ್‌ನ ಸೆಟ್ಟಿಂಗ್‌ಗಳಲ್ಲಿ ಬಳಕೆದಾರರು ಈಗ ಮೀಸಲಾದ ಫೋಟೋ ಅಪ್‌ಲೋಡ್ ಗುಣಮಟ್ಟದ ವಿಭಾಗವನ್ನು ಕಾಣಬಹುದಾಗಿದೆ. ಇದಕ್ಕಾಗಿ ನೀವು ಸೆಟ್ಟಿಂಗ್‌ ವಿಭಾಗದಲ್ಲಿ ಕೆಲವು ಬದಲಾವಣೆ ಮಾಡಬೇಕಿದೆ.

ಮೊದಲು ವಾಟ್ಸಾಪ್‌ ಓಪನ್‌ ಮಾಡಿ ನಂತರ ಸೆಟ್ಟಿಂಗ್‌ ವಿಭಾಗವನ್ನು ಗಮನಿಸಿ, ಅಲ್ಲಿ ಸ್ಟೋರೇಜ್‌ ಹಾಗೂ ಡೇಟಾ ಮೇಲೆ ಕ್ಲಿಕ್‌ ಮಾಡಿದರೆ ಮೀಡಿಯಾ ಅಪ್‌ಲೋಡ್ ಗುಣಮಟ್ಟದ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್ ಮಾಡಿ.

ಈ ವಿಭಾಗದಲ್ಲಿ ನೀವು ಫೋಟೋವನ್ನು ಯಾವ ಗುಣಮಟ್ಟದಲ್ಲಿ ಸೆಂಡ್‌ ಮಾಡಬೇಕು ಎಂದು ಮೂರು ಆಯ್ಕೆಗಳನ್ನು ನೀಡಲಾಗುತ್ತದೆ. ಅಂದರೆ ಆಟೋ, ಬೆಸ್ಟ್‌ ಕ್ವಾಲಿಟಿ ಹಾಗೂ ಡಾಟಾ ಸೇವರ್‌ ಎಂಬ ಆಯ್ಕೆಗಳು ಕಾಣಿಸಿಕೊಳ್ಳುತ್ತವೆ. ಈ ಮೂಲಕ ನಿಮಗೆ ಯಾವ ಆಯ್ಕೆ ಬೇಕೋ ಅದನ್ನು ಟ್ಯಾಪ್‌ ಮಾಡಿ. ಇದರಲ್ಲಿ ಗಮನಿಸಬೇಕಾದ ಅಂಶಎಂದರೆ ಉತ್ತಮ ಗುಣಮಟ್ಟದಲ್ಲಿ ಫೋಟೋ ಸೆಂಡ್‌ ಮಾಡಲು ವಾಟ್ಸಾಪ್ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

ವೆಬ್‌ ವಾಟ್ಸಾಪ್‌ ಬಳಕೆದಾರರಿಗೆ ಶೀಘ್ರದಲ್ಲೇ ಹೊಸ ಸೌಲಭ್ಯ; ಏನದು!?

ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಬದಲಾವಣೆ

ಇನ್ನು ವಾಟ್ಸಾಪ್ ಸ್ಟೇಟಸ್‌ಗಾಗಿ ಇತ್ತೀಚಿಗೆ ಕೆಲವು ಹೊಸ ಫೀಚರ್ಸ್‌ಗಳನ್ನು ಘೋಷಣೆ ಮಾಡಲಾಗಿದೆ. ಈ ಮೂಲಕ ಬಳಕೆದಾರರು ತಮ್ಮ ಸ್ಥಿತಿಯನ್ನು ವ್ಯಕ್ತಪಡಿಸಲು ಮತ್ತು ಇತರರೊಂದಿಗೆ ಸಂಪರ್ಕ ಸಾಧಿಸಲು ಇದು ಸುಲಭವಾಗುತ್ತದೆ.

ಖಾಸಗಿ ವೀಕ್ಷಕರ ಆಯ್ಕೆ ಮೂಲಕ ವಾಟ್ಸಾಪ್‌ ಸ್ಟೇಟಸ್‌ ವಿಭಾಗದಲ್ಲಿ ಬಳಕೆದಾರರು ಪ್ರತಿ ಸ್ಟೇಟಸ್‌ಗೆ ಗೌಪ್ಯತೆ ಸೆಟ್ಟಿಂಗ್‌ಗಳನ್ನು ನವೀಕರಿಸಲು ಅವಕಾಶ ನೀಡಲಾಗುತ್ತದೆ. ಆದ್ದರಿಂದ ಬಳಕೆದಾರರು ತಮ್ಮ ಸ್ಟೇಟಸ್‌ ಯಾರು ವೀಕ್ಷಿಸಬಹುದು ಎಂಬುದನ್ನು ಆಯ್ಕೆ ಮಾಡಬಹುದು. ಹಾಗೆಯೇ ವಾಯ್ಸ್‌ ಸ್ಟೇಟಸ್‌ ಮೂಲಕ ಬಳಕೆದಾರರು 30 ಸೆಕೆಂಡುಗಳವರೆಗೆ ವಾಯ್ಸ್ ನೋಟ್‌ ಶೇರ್‌ ಸಹ ಮಾಡಿಕೊಳ್ಳಬಹುದಾಗಿದೆ.

ಇನ್ನು ಸ್ಟೇಟಸ್‌ ರಿಯಾಕ್ಷನ್‌ ಮೂಲಕ ಬಳಕೆದಾರರು ಸುಲಭವಾಗಿ ಸ್ಟೇಟಸ್‌ಗೆ ಪ್ರತಿಕ್ರಿಯೆ ನೀಡಬಹುದಾಗಿದೆ. ಅಂದರೆ, ಈ ವಿಭಾಗದಲ್ಲಿ ಎಂಟು ಎಮೋಜಿಗ ಆಯ್ಕೆ ನೀಡಲಾಗಿದ್ದು, ಯಾವುದು ಅವಶ್ಯಕವೋ ಅದನ್ನು ಸ್ವೈಪ್ ಮಾಡುವ ಮೂಲಕ ಅಥವಾ ಟ್ಯಾಪ್ ಮಾಡುವ ಮೂಲಕ ತ್ವರಿತವಾಗಿ ಪ್ರತ್ಯುತ್ತರಿಸಬಹುದಾಗಿದೆ.

Best Mobiles in India

English summary
WhatsApp is developing a feature to allow users to send photos in their original quality for its desktop app.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+