ವಾಟ್ಸಾಪ್ ಲಾಸ್ಟ್ ಸೀನ್ ಹೈಡ್‌ನಲ್ಲಿ ಬರಲಿದೆ ಹೊಸ ಆಯ್ಕೆ!..ಬಳಕೆದಾರರಿಗೆ ಅಚ್ಚರಿ!
ಜನಪ್ರಿಯ ವಾಟ್ಸಾಪ್ ಆಪ್ ಈಗಾಗಲೇ ಬಳಕೆದಾರರಿಗೆ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಹಾಗೆಯೇ ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಬ್ಬರಿಗೂ ಉಪಯುಕ್ತ ಸೇವೆಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಮುಖ್ಯವಾಗಿ ಪ್ರೈವಸಿ ಆಯ್ಕೆಗಳು ಹೆಚ್ಚು ಅನುಕೂಲಕರ ಎನಿಸಿವೆ. ಆ ಪೈಕಿ ಲಾಸ್ಟ್ ಸೀನ್ (Last Seen) ಇತರರಿಗೆ ಕಾಣದಂತೆ ಮರೆಮಾಡುವ ಆಯ್ಕೆ ನೀಡಿದೆ. ಅದರಲ್ಲಿ ಈಗ ಮತ್ತೊಂದು ಹೊಸ ಅಪ್‌ಡೇಟ್ ಮಾಡಿದೆ.

ಹೌದು, ವಾಟ್ಸಾಪ್ ಸಂಸ್ಥೆಯು ಬಳಕೆದಾರರಿಗೆ ನಿರ್ದಿಷ್ಟ ಸಂಪರ್ಕ (specific contact) ಸಂಖ್ಯೆಗೆ ಲಾಸ್ಟ್ ಸೀನ್ ಕಾಣದಂತೆ ಮಾಡುವ ಆಯ್ಕೆ ಅಳವಡಿಸಲು ಸಜ್ಜಾಗಿದೆ ಎಂದು WABetaInfo ವರದಿ ಮಾಡಿದೆ. ಸದ್ಯ ವಾಟ್ಸಾಪ್‌ನಲ್ಲಿ ಲಾಸ್ಟ್ ಸೀನ್ ಮರೆಮಾಡಲು ಅನುಮತಿಸುವ ಅವಕಾಶ ಇದ್ದು, ಎಲ್ಲರೂ, ನನ್ನ ಸಂಪರ್ಕಗಳು ಹಾಗೂ ಯಾರೂ ಇಲ್ಲ ಎನ್ನುವ ಮೂರು ಆಯ್ಕೆಗಳನ್ನು ಇದು ಹೊಂದಿದೆ. ಆದ್ರೆ ಬರಲಿರುವ ಹೊಸ ಆಯ್ಕೆಯು ನಿರ್ದಿಷ್ಟ ಸಂಪರ್ಕಗಳಿಗೆ ಮಾತ್ರ ಮರೆಮಾಡುವ ಆಯ್ಕೆ ಇರಲಿದೆ.

ಬಳಕೆದಾರರು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ನಿರ್ದಿಷ್ಟ ಸಂಪರ್ಕಕ್ಕೆ ಲಾಸ್ಟ್ ಸೀನ್ ಮರೆಮಾಡುವ ಆಯ್ಕೆ ಸದ್ಯ ಪರೀಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎನ್ನಲಾಗಿದೆ. ಇತರ ಫೀಚರ್ಸ್‌ಗಳಂತೆ, ವಾಟ್ಸಾಪ್ ಬೀಟಾ ಬಳಕೆದಾರರಿಗೆ ಈ ಫೀಚರ್ ಬಿಡುಗಡೆ ಮಾಡಲಿದೆ ಎಂದು ನಾವು ನಿರೀಕ್ಷಿಸಬಹುದು.

ವಾಟ್ಸಾಪ್‌ಗೆ ಬರುವ Important ಮೆಸೆಜ್ ಅನ್ನು ಸೇವ್ ಮಾಡುವುದು ಹೇಗೆ ಗೊತ್ತಾ?
ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್ ವಾಟ್ಸಾಪ್, ಈಗಾಗಲೇ ಹಲವು ಉಪಯುಕ್ತ ಫೀಚರ್ಸ್ ಪರಿಚಯಿಸಿದೆ. ವಿಡಿಯೋ ಕರೆ, ವಾಯಿಸ್ ಮೆಸೆಜ್ ಸೇರಿದಂತೆ ಹಲವು ಸೇವೆಗಳಲ್ಲಿ ಅಪ್‌ಡೇಟ್ ಆಗಿದೆ. ಹಾಗೆಯೇ ಇಂಪಾರ್ಟೆಂಟ್ ಮೆಸೆಜ್‌ಗಳನ್ನು ಸೇವ್ ಮಾಡಿ ಕೊಳ್ಳಲು ಅವಕಾಶ ಮಾಡಿ ಕೊಟ್ಟಿದೆ. ಬಳಕೆದಾರರಿಗೆ ವಾಟ್ಸಾಪ್‌ನಲ್ಲಿ ಬರುವ ಅನೇಕ ಮೆಸೆಜ್‌ಗಳಲ್ಲಿ ಕೆಲವೊಂದು ಅತೀ ಮುಖ್ಯವಾದ ಮೆಸೆಜ್ ಆಗಿರುತ್ತವೆ. ಕೆಲವೊಮ್ಮೆ ಅವು ಮತ್ತೆ ಬೇಕಾಗಬಹುದಾದ ಸಂದರ್ಭಗಳು ಇರುತ್ತವೆ. ಅಂತಹ ವೇಳೆ ಥಟ್ ಅಂತಾ ಮೆಸೆಜ್ ತೆರೆಯಬಹುದು.

ಹೌದು, ವಾಟ್ಸಾಪ್ ಪ್ಲಾಟ್‌ಫಾರ್ಮ್ ಸ್ಟಾರ್ ಮೆಸೆಜ್ (Starred messages) ಆಯ್ಕೆಯನ್ನು ಹೊಂದಿದ್ದು, ಬಳಕೆದಾರರು ವಾಟ್ಸಾಪ್‌ನಲ್ಲಿ ಬರುವ ಮೆಸೆಜ್‌ಗಳಲ್ಲಿ ಅತೀ ಮುಖ್ಯ ಎನಿಸುವ ಮೆಸೆಜ್‌ಗಳನ್ನು ಸ್ಟಾರ್ ಮಾರ್ಕ್ ಮಾಡುವ ಮೂಲಕ ಅವುಗಳನ್ನು ಸೇವ್ ಮಾಡಬಹುದಾಗಿದೆ. ಅಲ್ಲದೇ ಯಾವಾಗಲಾದರೂ ಆ ಮೆಸೆಜ್ ಅಗತ್ಯ ಎಂದಾಗ ಮತ್ತೆ ಥಟನೇ ಅವುಗಳನ್ನು ತೆರೆಯಲು ಈ ಆಯ್ಕೆಯು ಉಪಯುಕ್ತ ಆಗಿದೆ. ಹಾಗಾದರೆ ವಾಟ್ಸಾಪ್‌ನಲ್ಲಿ ಸ್ಟಾರ್ ಮೆಸೆಜ್ / ಮೆಸೆಜ್ ಸೇವ್ ಮಾಡುವುದು ಹೇಗೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ವಾಟ್ಸಾಪ್‌ನಲ್ಲಿ ಅತೀ ಮುಖ್ಯವಾದ ಮೆಸೆಜ್‌ಗೆ ಸ್ಟಾರ್ ಮಾರ್ಕ್ ಮಾಡಲು ಹೀಗೆ ಮಾಡಿರಿ:
* ವಾಟ್ಸಾಪ್‌ನಲ್ಲಿ, ನೀವು ಸಂದೇಶಗಳನ್ನು ಅಥವಾ ಸಂದೇಶಗಳನ್ನು ಹೊಂದಿರುವ ಸಂಭಾಷಣೆಯನ್ನು ತೆರೆಯಿರಿ.
* ಅದರ ಮೇಲೆ ದೀರ್ಘವಾಗಿ ಒತ್ತುವ ಮೂಲಕ ನಿಮಗೆ ಬೇಕಾದ ಸಂದೇಶವನ್ನು ಆಯ್ಕೆ ಮಾಡಿ. ನೀವು ಈ ರೀತಿ ಅನೇಕ ಸಂದೇಶಗಳನ್ನು ಆಯ್ಕೆ ಮಾಡಬಹುದು.
* ಒಮ್ಮೆ ನೀವು ಸಂದೇಶ ಅಥವಾ ಸಂದೇಶಗಳನ್ನು ಆಯ್ಕೆ ಮಾಡಿದರೆ, ಚಾಟ್ ವಿಂಡೋದ ಮೇಲಿನ ಟ್ಯಾಬ್‌ನಲ್ಲಿ ನೀವು ಸ್ಟಾರ್ ಐಕಾನ್ ಅನ್ನು ಗುರುತಿಸುತ್ತೀರಿ.
* ಈ ಸಂದೇಶವನ್ನು ಬುಕ್‌ಮಾರ್ಕ್ ಮಾಡಲು ಸ್ಟಾರ್ ಐಕಾನ್ ಮೇಲೆ ಟ್ಯಾಪ್ ಮಾಡಿ.

ವಾಟ್ಸಾಪ್‌ನಲ್ಲಿ ಸ್ಟಾರ್ ಮಾರ್ಕ್ ಮಾಡಿದ ಮೆಸೆಜ್ ಮತ್ತೆ ಓದಲು ಈ ಕ್ರಮ ಫಾಲೋ ಮಾಡಿ:
- ವಾಟ್ಸಾಪ್ ತೆರೆಯಿರಿ ಮತ್ತು ಪರದೆಯ ಮೇಲಿನ ಬಲ ಭಾಗ ದಲ್ಲಿರುವ ಮೂರು-ಡಾಟ್ ಮೆನುವನ್ನು ಟ್ಯಾಪ್ ಮಾಡಿ.
- ಡ್ರಾಪ್-ಡೌನ್ ಮೆನುವಿನಲ್ಲಿ ನೀವು "ಸ್ಟಾರ್ ಮಾರ್ಕ್ ಮಾಡಿದ ಮೆಸೆಜ್‌ಗಳು" ಆಯ್ಕೆಯನ್ನು ನೋಡುತ್ತೀರಿ.
- ಇದನ್ನು ಟ್ಯಾಪ್ ಮಾಡುವುದರಿಂದ ಸಂಪರ್ಕಗಳು ಮತ್ತು ಸಂಭಾಷಣೆಗಳಲ್ಲಿ ನಿಮ್ಮ ಸ್ಟಾರ್ ಹಾಕಿದ ಎಲ್ಲಾ ಸಂದೇಶಗಳನ್ನು ತೋರಿಸುತ್ತದೆ.
- ಸಂಭಾಷಣೆಯನ್ನು ತೆರೆಯುವ ಮೂಲಕ, ಸಂಪರ್ಕದ ಪ್ರೊಫೈಲ್ ಫೋಟೋ ಮೇಲೆ ಕ್ಲಿಕ್ ಮಾಡುವ ಮೂಲಕ ಮತ್ತು ನಂತರ ಅವರ ಪ್ರೊಫೈಲ್ ಅಡಿಯಲ್ಲಿರುವ "ಸ್ಟಾರ್ ಹಾಕಿದ ಮೆಸೆಜ್" ಆಯ್ಕೆಗೆ ಸ್ಕ್ರೋಲ್ ಮಾಡುವ ಮೂಲಕ ನಿರ್ದಿಷ್ಟ ಚಾಟ್‌ನಿಂದ ನೀವು ನಕ್ಷತ್ರ ಹಾಕಿದ ಸಂದೇಶಗಳನ್ನು ಸಹ ನೋಡಬಹುದು.


Click it and Unblock the Notifications








