Home
ಸುದ್ದಿಜಾಲ

ಶಾಕಿಂಗ್‌ ಸುದ್ದಿ!..ಇನ್ಮುಂದೆ ಈ ಫೋನ್‌ಗಳಲ್ಲಿ ವಾಟ್ಸಾಪ್‌ ಕೆಲಸ ಮಾಡಲ್ಲ.!?

ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಅಪ್ಲಿಕೇಶನ್ ವಾಟ್ಸಾಪ್‌ (WhatsApp) ಇದೀಗ ಆಪಲ್‌ ಐಫೋನ್‌ ಬಳಕೆದಾರರಿಗೆ ಬಿಗ್‌ ಶಾಕ್ ತಿಳಿಸಿದೆ. ಆಪಲ್‌ ಸಂಸ್ಥೆಯ ಇತ್ತೀಚಿನ ಅಪ್‌ಡೇಟ್ ಪ್ರಕಾರ ಇದೇ ಅಕ್ಟೋಬರ್ 24 ರಿಂದ ಹಳೆಯ ಐಓಎಸ್‌ (iOS) ನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆಲವು ಐಫೋನ್‌ಗಳಲ್ಲಿ ವಾಟ್ಸಾಪ್‌ ಕೆಲಸ ಮಾಡುವುದನ್ನು ನಿಲ್ಲಿಸಲಿದೆ ಎಂದು ಸೂಚಿಸಿದೆ.

ಆಪಲ್‌ iOS 10

ಹೌದು, ಆಪಲ್‌ iOS 10 ಮತ್ತು iOS 11 ನಲ್ಲಿ ಕಾರ್ಯನಿರ್ವಹಿಸುತ್ತಿರುವ ಐಫೋನ್‌/ ಡಿವೈಸ್‌ಗಳಲ್ಲಿ ಇದೇ ಅಕ್ಟೋಬರ್ 24 ರಿಂದ ವಾಟ್ಸಾಪ್‌ (WhatsApp) ಅಪ್ಲಿಕೇಶನ್ ಬೆಂಬಲಿಸುವುದನ್ನು ನಿಲ್ಲಿಸುತ್ತದೆ. ವಾಟ್ಸಾಪ್‌ ಇನ್ನು ಮುಂದೆ iOS 10 ಅಥವಾ iOS 11 ನಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ವಾಟ್ಸಾಪ್‌ ಬಳಕೆದಾರರಿಗೆ ತಿಳಿಸಲು ಪ್ರಾರಂಭಿಸಿದೆ.

ವಾಟ್ಸಾಪ್‌

ವಾಟ್ಸಾಪ್‌ ಆಪ್‌ ಬಳಕೆ ಮುಂದುವರಿಸಲು, ಬಳಕೆದಾರರು ತಮ್ಮ iOS ಓಎಸ್‌ ಅನ್ನು ಅಪ್‌ಡೇಟ್‌ ಮಾಡಲು ಸಂಸ್ಥೆಯು ತ್ವರಿತ ಮೆಸೆಜ್‌ ಕಳುಹಿಸುವ ಮೂಲಕ ಸೂಚಿಸಿದೆ. ಇನ್ನು ವಾಟ್ಸಾಪ್‌ (WhatsApp) ಸಹಾಯ ಕೇಂದ್ರದ ಪುಟದ ಪ್ರಕಾರ, ಐಫೋನ್‌ ಬಳಕೆದಾರರು ವಾಟ್ಸಾಪ್‌ ಆಪ್‌ ಅನ್ನು ಬಳಕೆ ಮಾಡುವುದನ್ನು ಮುಂದುವರಿಸಲು iOS 12 ಅಥವಾ ಅದಕ್ಕೂ ಮೇಲಿನ (ಇತ್ತೀಚಿನ) ಓಎಸ್‌ ಹೊಂದಿರುವುದು ಅಗತ್ಯವಿದೆ.

iOS 11 ಸಾಫ್ಟ್‌ವೇರ್

ಐಫೋನ್‌ 5 ಅಥವಾ ಐಫೋನ್‌ 5C ಬಳಸುವ ಐಫೋನ್‌ ಬಳಕೆದಾರರು iOS ಅಪ್‌ಡೇಟ್‌ ಮತ್ತು ವಾಟ್ಸಾಪ್‌ ಅಪ್‌ಡೇಟ್‌ ಮಾಡಿದ ನಂತರ ವಾಟ್ಸಾಪ್‌ ಅನ್ನು ಬಳಸಲು ಸಾಧ್ಯವಾಗಬಹುದು. ಆದಾಗ್ಯೂ, ಐಫೋನ್‌ 4 ಮತ್ತು ಐಫೋನ್‌ 4S ಡಿವೈಸ್‌ಗಳಲ್ಲಿ ಇನ್ಮುಂದೆ ವಾಟ್ಸಾಪ್‌ ಬೆಂಬಲಿಸುವುದಿಲ್ಲ ಎನ್ನಲಾಗಿದೆ. ಇನ್ನು ಆಪಲ್ iOS 10 ಮತ್ತು iOS 11 ಸಾಫ್ಟ್‌ವೇರ್ ಆವೃತ್ತಿ ಹೊಂದಿರುವ ಐಫೋನ್‌ಗಳ ಸಂಖ್ಯೆ ಹೆಚ್ಚಿಲ್ಲ ಎನ್ನಲಾಗಿದೆ.

ಅಪ್‌ಡೇಟ್‌ iOS ಇದ್ದರೆ ಮಾತ್ರ, ವಾಟ್ಸಾಪ್‌ ಸಪೋರ್ಟ್‌

ಅಪ್‌ಡೇಟ್‌ iOS ಇದ್ದರೆ ಮಾತ್ರ, ವಾಟ್ಸಾಪ್‌ ಸಪೋರ್ಟ್‌

ಆಪಲ್‌ iOS 12 ಅಥವಾ ಅದಕ್ಕಿಂತ ಮುಂದಿನ iOS ಹೊಂದಿರುವ ಐಫೋನ್‌ಗಳಲ್ಲಿ ಯಾವುದೇ ಅಡೆ ತಡೆಯಿಲ್ಲದೆ ವಾಟ್ಸಾಪ್‌ ಆಪ್ ಕಾರ್ಯ ನಿರ್ವಹಿಸಲಿದೆ. ಹಾಗೆಯೇ iOS 10 ಮತ್ತು iOS 11 ಓಎಸ್‌ ಹಳೆಯ ಆಪರೇಟಿಂಗ್ ಸಿಸ್ಟಂಗಳಾಗಿದ್ದು, ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಅನ್ನು ಸ್ವೀಕರಿಸಿರಬಹುದು. ಅದಕ್ಕಾಗಿ ಹೀಗೆ ಮಾಡಿ ಐಫೋನಿನಲ್ಲಿ ಸೆಟ್ಟಿಂಗ್‌ಗಳು (Settings ) > ಜನರಲ್‌ (General) ಹೋಗಬಹುದು, ನಂತರ ಇತ್ತೀಚಿನ iOS ಆವೃತ್ತಿಯನ್ನು ಪಡೆಯಲು ಸಾಫ್ಟ್‌ವೇರ್ ಅಪ್‌ಡೇಟ್‌ (Software Update) ಆಯ್ಕೆ ಟ್ಯಾಪ್ ಮಾಡಿ.

ವಾಟ್ಸಾಪ್‌ ಸೇರಲಿರುವ ಹೊಸ ಫೀಚರ್ಸ್‌:

ವಾಟ್ಸಾಪ್‌ ಸೇರಲಿರುವ ಹೊಸ ಫೀಚರ್ಸ್‌:

ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಕ್ಲಿಕ್ ಮಾಡಬಹುದಾದ ಲಿಂಕ್‌ಗಳು
ಇತ್ತೀಚಿನ ದಿನಗಳಲ್ಲಿ ಹಲವು ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸ್ಟೋರಿಸ್‌ ಆಯ್ಕೆ ಹೆಚ್ಚು ಜನಪ್ರಿಯವಾಗಿರುವುದನ್ನು ಕಾಣಬಹುದಾಗಿದೆ. ಈ ಸ್ಟೇಟಸ್‌ ಆಯ್ಕೆಯಲ್ಲಿ ಬದಲಾವಣೆ ತರಲಿದ್ದು, ಶೀರ್ಷಿಕೆಯಲ್ಲಿ ಹೈಪರ್‌ಲಿಂಕ್ ಮಾಡುವ URL ಗಳನ್ನು ಸಕ್ರಿಯಗೊಳಿಸುತ್ತದೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರು ತಮ್ಮ ವೆಬ್‌ಸೈಟ್‌ಗಳು ಮತ್ತು ಪೇಜ್‌ಗಳಿಗೆ URL ಗಳನ್ನು ಶೇರ್ ಮಾಡಲು ಸಾಧ್ಯವಾಗುತ್ತದೆ. ಸ್ಟೇಟಸ್‌ ನೋಡುವವರು ಲಿಂಕ್‌ಗಳ ಮೇಲೆ ಸರಳವಾಗಿ ಕ್ಲಿಕ್ ಮಾಡಿದಾಗ ಪೇಜ್‌ ತೆರೆಯಲಿದೆ.

ವಾಟ್ಸಾಪ್‌ ಸೇರಲಿದೆ ಹೊಸ ಬಿಸಿನೆಸ್ ಟೂಲ್ ಟ್ಯಾಬ್

ವಾಟ್ಸಾಪ್‌ ಸೇರಲಿದೆ ಹೊಸ ಬಿಸಿನೆಸ್ ಟೂಲ್ ಟ್ಯಾಬ್

ಸದ್ಯದಲ್ಲೇ ವಾಟ್ಸಾಪ್‌ ಬಿಸಿನೆಸ್ ಅಪ್ಲಿಕೇಶನ್‌ನ ಮುಖ್ಯ ಪುಟದಲ್ಲಿ ಹೊಸ ಟ್ಯಾಬ್ ಲಭ್ಯವಾಗಲಿದೆ. ಎಡಭಾಗದಲ್ಲಿರುವ ಕ್ಯಾಮರಾ ಟ್ಯಾಬ್ ಅನ್ನು ಬದಲಿಸಿದರೆ, ಬಿಸಿನೆಸ್ ಖಾತೆಯ ಬಳಕೆದಾರರಿಗೆ ಬಿಸಿನೆಸ್ ಟೂಲ್ ಟ್ಯಾಬ್ (Business Tool Tab) ಪ್ರಮುಖ ಕೇಂದ್ರವಾಗಲಿದೆ. ಅಲ್ಲಿ ಅವರು ಅಪ್ಲಿಕೇಶನ್‌ನಲ್ಲಿನ ಸೆಟ್ಟಿಂಗ್‌ಗಳ ಮೂಲಕ ಹೋಗದೆ ಬಿಸಿನೆಸ್ ಬಳಕೆದಾರರು ಪರಿಕರಗಳನ್ನು ಸುಲಭವಾಗಿ ಆಕ್ಸಸ್ ಮಾಡಬಹುದಾಗಲಿದೆ. ಈ ಪರಿಕರಗಳು ವ್ಯಾಪಾರ ಪ್ರೊಫೈಲ್ ನಿರ್ವಹಣೆ, ಕ್ಯಾಟಲಾಗ್ ಸೆಟ್ಟಿಂಗ್‌ಗಳು ಮತ್ತು ಜಾಹೀರಾತುಗಳ ಮೂಲಕ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ನೊಂದಿಗೆ ಲಿಂಕ್ ಆಗಿರಲಿದೆ.

ವಾಟ್ಸಾಪ್‌ ಪ್ರೀಮಿಯಂ ಆಯ್ಕೆ

ವಾಟ್ಸಾಪ್‌ ಪ್ರೀಮಿಯಂ ಆಯ್ಕೆ

ವಾಟ್ಸಾಪ್‌ ಬಿಸಿನೆಸ್ ಬಳಕೆದಾರರಿಗಾಗಿ ವಾಟ್ಸಾಪ್‌ ಪ್ರೀಮಿಯಂ (WhatsApp Premium) ಚಂದಾದಾರಿಕೆ ಮಾದರಿಯಲ್ಲಿ ವಾಟ್ಸಾಪ್‌ ಕಾರ್ಯನಿರ್ವಹಿಸುತ್ತಿದೆ. ಟೆಲಿಗ್ರಾಮ್ ಪ್ರೀಮಿಯಂನಲ್ಲಿರುವ ಸೇವೆಗಳಂತೆಯೇ, ವಾಟ್ಸಾಪ್‌ ಪ್ರೀಮಿಯಂ ಬಿಸಿನೆಸ್ ಖಾತೆಯ ಬಳಕೆದಾರರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಈ ಫೀಚರ್ಸ್‌ಗಳು ಕಸ್ಟಮ್ ಬಿಸಿನೆಸ್ ಲಿಂಕ್‌ಗಳು ಮತ್ತು ಒಂದೇ ಖಾತೆಯಲ್ಲಿ ನಾಲ್ಕಕ್ಕಿಂತ ಹೆಚ್ಚು ಡಿವೈಸ್‌ಗಳನ್ನು ಒಟ್ಟಿಗೆ ಲಿಂಕ್ ಮಾಡುವ ಸಾಮರ್ಥ್ಯವನ್ನು ಒಳಗೊಂಡಿವೆ.

Best Mobiles in India

English summary
WhatsApp will soon stop working on older iOS iPhones: Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+