ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!

|

ಪ್ರಸ್ತುತ ಅತೀ ಜನಪ್ರಿಯವಾಗಿರುವ ಮೆಸೆಜಿಂಗ್ ಆಪ್‌ ವಾಟ್ಸಪ್‌ ಇಲ್ಲದೇ ಸ್ಮಾರ್ಟ್‌ಫೋನ್‌ ಬಳಕೆದಾರರು ಇರುವುದನ್ನು ಬಹುಶಃ ಊಹಿಸುವುದು ಕಷ್ಟ ಎನಿಸಬಹುದು. ಡಿಸೆಂಬರ 2019ರಿಂದ ವಿಂಡೊಸ್‌ ಓಎಸ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್‌ ಕಾರ್ಯನಿರ್ವಹಿಸುವುದಿಲ್ಲ ಎಂದು ಇತ್ತೀಚಿಗಷ್ಟೆ ವಾಟ್ಸಪ್‌ ಹೇಳಿ ವಿಂಡೊಸ್‌ ಬಳಕೆದಾರರಿಗೆ ಶಾಕ್‌ ನೀಡಿತ್ತು. ಆದ್ರೆ ವಾಟ್ಸಪ್‌ನ ಹೊಸ ಸುದ್ದಿ ಇದೀಗ ಆಂಡ್ರಾಯ್ಡ್‌ ಓಎಸ್‌ ಬಳಕೆದಾರರಿಗೂ ದೊಡ್ಡ ಆಘಾತ ನೀಡಲಿದೆ.

ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!

ಹೌದು, ಫೇಸ್‌ಬುಕ್‌ ಒಡೆತನದ ವಾಟ್ಸಪ್‌ ಆಂಡ್ರಾಯ್ಡ್‌ ಓಎಸ್‌ ಮತ್ತು ಆಪಲ್‌ನ ಐಓಎಸ್‌ ಬಳಕೆದಾರಿಗೂ ಆಘಾತಕಾರಿ ಸುದ್ದಿಯೊಂದನ್ನು ಹೊರಹಾಕಿದ್ದು, ಫೆಬ್ರುವರಿ 1, 2020ರಿಂದ ಓಲ್ಡ್‌ ವರ್ಷನ್‌ ಓಎಸ್‌ ಇರುವ ಸ್ಮಾರ್ಟ್‌ಫೋನ್‌ ಮತ್ತು ಐಫೋನ್‌ಗಳಲ್ಲಿ ವಾಟ್ಸಪ್‌ ಸ್ಥಗಿತಗೊಳ್ಳಲಿದೆ. ಆಂಡ್ರಾಯ್ಡ್‌ 2.3.7 ಓಎಸ್‌ ವರ್ಷನ್‌ ಮತ್ತು ಐಫೋನ್‌ iOS 7 ಓಎಸ್‌ ವರ್ಷನ್‌ ಫೋನ್‌ಗಳಿಗೆ ವಾಟ್ಸಪ್‌ ಬೆಂಬಲ ನೀಡುವುದಿಲ್ಲ ಎಂದು ಸಂಸ್ಥೆ ತಿಳಿಸಿದೆ.

ವಾಟ್ಸ್ ಆಪ್ ಕರೆಗಳನ್ನು ಹೇಗೆ ರೆಕಾರ್ಡ್ ಮಾಡುವುದು ಗೊತ್ತಾ?

ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!

ವಾಟ್ಸಪ್‌ನ ಮುಂಬರುವ ಅಪ್‌ಡೇಟ್‌ ವರ್ಷನ್‌, ಆಂಡ್ರಾಯ್ಡ್‌ 2.3.7 ವರ್ಷನ್‌ ಮತ್ತು ಐಫೋನ್‌ iOS 7 ವರ್ಷನ್‌ ಫೋನ್‌ಗಳಲ್ಲಿ ವಾಟ್ಸಪ್‌ ಬಳಕೆಮಾಡುತ್ತಿರುವ ಬಳಕೆದಾರಿಗೆ ಫೆಬ್ರುವರಿ 1, 2020ರಿಂದ ಹೊಸ ವಾಟ್ಸಪ್‌ ಅಕೌಂಟ್‌ ತೆರೆಯಲು ಸಾಧ್ಯವಿಲ್ಲ ಮತ್ತು ಈಗಾಗಲೇ ಇರುವ ಎಕ್ಸಿಸ್ಟಿಂಗ್ ಖಾತೆಯನ್ನು ರೀ ವೈರಿಫೈ ಮಾಡಿಕೊಳ್ಳಲು ಸಹ ವಾಟ್ಸಪ್‌ ಸಪೋರ್ಟ್‌ ಮಾಡುವುದಿಲ್ಲ ಎನ್ನಲಾಗಿದೆ.

ಆಂಡ್ರಾಯ್ಡ್‌ ಮತ್ತು ಐಫೋನ್‌ ಬಳಕೆದಾರರಿಗೆ ಆಘಾತಕರ ಸುದ್ದಿ ನೀಡಿದ ವಾಟ್ಸಪ್!

ಹಳೇ ಓಎಸ್‌ ಫೋನ್‌ ಬಳಕೆದಾರರು ವಾಟ್ಸಪ್‌ ಮೆಸೆಜಿಂಗ್‌ ಆಪ್‌ ಸೇವೆಯನ್ನು ಮುಂದುವರೆಸಲು ಇತ್ತೀಚಿನ ಓಎಸ್‌ ಬೆಂಬಲಿತ ಫೋನ್‌ ಬಳಸಬೇಕು ಎಂದಿದೆ. ಆಂಡ್ರಾಯ್ಡ್ ಬಳಕೆದಾರರು 4.0.3 ವರ್ಷನ್‌ ಅಥವಾ ಇತ್ತೀಚಿನ ಹೊಸ ವರ್ಷನ್‌ ಬೆಂಬಲಿತ ಸ್ಮಾರ್ಟ್‌ಫೋನ್‌ಗಳನ್ನು ಬಳಸಿರಿ ಹಾಗೂ ಐಫೋನ್‌ ಬಳಕೆದಾರರಿಗೂ iOS 8 ಓಎಸ್‌ ಅಥವಾ ಇತ್ತೀಚಿನ ಹೊಸ ಓಎಸ್‌ ಬೆಂಬಲಿತ ಐಫೋನ್‌ ಬಳಸಿರಿ ಎಂದು ತಿಳಿಸಿದೆ.

ಓದಿರಿ : ಹೊಸ ದಾಖಲೆ ಬರೆದ ಶಿಯೋಮಿ : 'ಮಿ ಬ್ಯಾಂಡ್ 4' ಭರ್ಜರಿ ಮಾರಾಟ!ಓದಿರಿ : ಹೊಸ ದಾಖಲೆ ಬರೆದ ಶಿಯೋಮಿ : 'ಮಿ ಬ್ಯಾಂಡ್ 4' ಭರ್ಜರಿ ಮಾರಾಟ!

ಇದೇ ಜುಲೈ 1ರಿಂದ ಮೈಕ್ರೋಸಾಫ್ಟ್‌ ಆಪ್‌ ಸ್ಟೋರ್‌ನಲ್ಲಿ ವಾಟ್ಸಪ್‌ನ ಅಲಭ್ಯವಾಗಲಿದೆ ಹೀಗಾಗಿ ವಿಂಡೊಸ್‌ ಫೋನ್‌ಗಳಿಗೆ ಇನ್ನು ವಾಟ್ಸಪ್ ಆಪ್‌ ಲಭ್ಯವಾಗುವುದಿಲ್ಲ ಎನ್ನಲಾಗಿದೆ. ಇನ್ನು ನಿರ್ಧಾರದಿಂದ ಹೆಚ್ಚಿನ ಬಳಕೆದಾರರಿಗೆ ತೊಂದರೆ ಇಲ್ಲ ಎನ್ನಲಾಗಿದೆ. ಏಕೆಂದರೇ ಆಂಡ್ರಾಯ್ಡ್‌ 2.3.7 ಓಎಸ್‌ ವರ್ಷನ್‌ ಮತ್ತು ಐಫೋನ್‌ iOS 7 ಫೋನ್‌ ಬಳಕೆದಾರರು ಕಡಿಮೆ ಎನ್ನಲಾಗಿದೆ. ಆದರೆ ಇತ್ತೀಚಿನ ಲೇಟೆಸ್ಟ್‌ ಓಎಸ್‌ ಫೋನ್‌ಗಳಿಗಲ್ಲಿ ಯಾವುದೇ ತೊಂದರೇ ಇರುವುದಿಲ್ಲ.

<strong>ಓದಿರಿ : ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!</strong>ಓದಿರಿ : ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!

ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!

ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಈ ಕ್ರಮಗಳನ್ನು ಮರೆಯದೇ ಅನುಸರಿಸಿ!

ಪ್ರಸ್ತುತ ಸ್ಮಾರ್ಟ್‌ಫೋನ್‌ಗಳು ಅವಶ್ಯಕ ಡಿವೈಸ್‌ ಆಗಿದ್ದು, ಪ್ರತಿಯೊಬ್ಬರಿಗೂ ಅತ್ಯಗತ್ಯ. ಆದರೆ ಸ್ಮಾರ್ಟ್‌ಪೋನ್‌ ಬ್ಯಾಟರಿ ಬ್ಯಾಕ್‌ಅಪ್‌ ಸರಿಯಾಗಿ ಬರ್ತಿಲ್ಲಾ ಎನ್ನುವುದು ಬಹುತೇಕರ ಗೋಳು. ಸಾಮಾನ್ಯವಾಗಿ ರಾತ್ರಿಯಿಡಿ ಚಾರ್ಜ್‌ಹಾಕಿ ಮಲಗುವವರು ಒಂದೆಡೆಯಾದರೇ, ಮೇಲಿಂದ ಮೇಲೆ ಚಾರ್ಜ್‌ ಮಾಡುವ ಬಳಕೆದಾರರಿಗೆನು ಕಡಿಮೆ ಇಲ್ಲ. ಪೋನ್‌ ಸರಿಯಾದ ಕ್ರಮದಲ್ಲಿ ಚಾರ್ಜ್‌ ಮಾಡುವವರು ತುಂಬಾ ವಿರಳ.

ಹೌದು, ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ ಖಾಲಿಯಾಗುವುದು ಬಳಕೆದಾರರ ಬಳಕೆಯ ಮೇಲೆ ಅವಲಂಭಿತವಾಗಿದ್ದು, ಆದರೆ ನಿರಂತರ ಇಂಟರ್ನೆಟ್‌ ಆಧಾರಿತ ಆಪ್‌ಗಳ ಬಳಕೆ ಮತ್ತು ಗೇಮ್ಸ್‌ ಆಡುವುದು ಬ್ಯಾಟರಿ ಬಾಳಿಕೆಯನ್ನು ಹೆಚ್ಚಾಗಿ ನುಂಗುತ್ತದೆ. ಇದರಿಂದಾಗಿ ಪದೇ ಪದೇ ಚಾರ್ಜ್‌ ಹಾಕಬೇಕಾಗುತ್ತದೆ. ಕೇಲವರಂತು ಪವರ್‌ಬ್ಯಾಂಕ್‌ ಮೋರೆ ಹೋಗುತ್ತಾರೆ. ಚಾರ್ಜ್‌ ಮಾಡುವಾಗ ಸರಿಯಾದ ಕ್ರಮಗಳನ್ನು ಅನುಸರಿಸುವುದು ಉತ್ತಮ.

ಚಾರ್ಜ್‌ ನಿಲ್ಲುತ್ತಿಲ್ಲವೆಂದು ಯಾವಾಗಲೂ ಚಾರ್ಜ್‌ ಮಾಡುತ್ತಲೇ ಇರುವುದು ಒಳ್ಳೆಯದಲ್ಲಾ. ಫೋನ್‌ ಅನ್ನು ಅತೀಯಾಗಿ ಚಾರ್ಜ್‌ ಮಾಡುವುದರಿಂದ ಅವಘಡಗಳು ಸಂಭವಿಸುವ ಸಾಧ್ಯತೆಗಳು ಇರುತ್ತದೆ. ಅದಕ್ಕಾಗಿ ಇಂದಿನ ಲೇಖನದಲ್ಲಿ ಫೋನ್‌ ಚಾರ್ಜಿಂಗ್ ಕುರಿತು ಕೇಲವು ಟಿಪ್ಸ್‌ ನೀಡಲಾಗಿದೆ. ಹಾಗಾದರೇ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡುವಾಗ ಅನುಸರಿಸಬೇಕಾದ ಕೇಲವು ಕ್ರಮಗಳು ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಯಾವಾಗ ಚಾರ್ಜ್‌ ಮಾಡಬೇಕು?

ಯಾವಾಗ ಚಾರ್ಜ್‌ ಮಾಡಬೇಕು?

ಸ್ಮಾರ್ಟ್‌ಫೋನ್‌ ಅನ್ನು ಇದೇ ಟೈಮಿನಲ್ಲಿ ಚಾರ್ಜ್‌ ಮಾಡಬೇಕೆಂದು ಯಾವುದೇ ರೂಲ್ಸ್‌ ಇಲ್ಲ. ಆದರೆ ಬ್ಯಾಟರಿ ಸಾಧ್ಯವಾದಷ್ಟು ಶೇ.50% ಟು ಶೇ.100% ಅಡುವಿನ ಅಂತರದಲ್ಲಿರಲಿ. ಅಂದರೇ 50 ಪರ್ಸೆಂಟ್‌ಗಿಂತ ಕಡಿಮೆಯಾದಾಗ ಚಾರ್ಜ್‌ ಮಾಡಬೇಕು ಮತ್ತು ಚಾರ್ಜಿಂಗ್ ಪೂರ್ಣ 100 ಪರ್ಸೆಂಟ್‌ ತಲುಪುವುದಕ್ಕೆ ಬಿಡಬಾರದು. 90ರ ಗಡಿ ದಾಟಿದಾಗ ಅನ್‌ಪ್ಲಗ್‌ ಮಾಡುವುದು ಒಳಿತು. ಇದು ಬ್ಯಾಟರಿಗೆ ದಕ್ಕೆ ಎನಿಸುವುದಿಲ್ಲ.

ಫುಲ್‌ 100 ಪರ್ಸೆಂಟ್ ಚಾರ್ಜ್‌ ಮಾಡಬೇಕಾ?

ಫುಲ್‌ 100 ಪರ್ಸೆಂಟ್ ಚಾರ್ಜ್‌ ಮಾಡಬೇಕಾ?

ಫುಲ್‌ 100 ಪರ್ಸೆಂಟ್ ಚಾರ್ಜ್‌ ಮಾಡಬೇಕಾ?. ಖಂಡಿತಾ ಮಾಡಬೇಡಿ. ಚಾರ್ಜಿಂಗ್ ಪಾಯಿಂಟ್ ನೂರರ ಸನಿಹ ಬಂದಾಗ ಚಾರ್ಜ್‌ ತೆಗೆದುಬಿಡಿ. ಆದರೆ ಎಕ್ಸ್‌ಪರ್ಟ್ಸ್‌ಗಳು ಹೇಳುವ ಪ್ರಕಾರ ತಿಂಗಳಿಗೆಮ್ಮೆ ಸ್ಮಾರ್ಟ್‌ಫೋನ್‌ ಅನ್ನು 0 ದಿಂದ 100 ವರೆಗೂ ಪೂರ್ಣಚಾರ್ಜ್‌ ಮಾಡಬೇಕಂತೆ. ಇದು ಸ್ಮಾರ್ಟ್‌ಫೋನ್‌ ಬ್ಯಾಟರಿಗೆ ರೀಸ್ಟಾರ್ಟ್‌ ಮಾಡಿದಂತೆ.

ರಾತ್ರಿಯಿಡಿ ಚಾರ್ಜ್‌ ಹಾಕಬಹುದೇ?

ರಾತ್ರಿಯಿಡಿ ಚಾರ್ಜ್‌ ಹಾಕಬಹುದೇ?

ರಾತ್ರಿ ಚಾರ್ಜ್‌ ಹಾಕಬಹುದು ಆದರೆ ಫೋನ್‌ 100 ಪರ್ಸೆಂಟ್‌ ಆಗಿದ್ದರು ಚಾರ್ಜ್‌ ಹಾಗೇ ಇರುತ್ತದೆ. ಆಫ್‌ ಮಅಡುವುದೇ ಇಲ್ಲ. ಇದರಿಂದ ಫೋನ್‌ ಬಿಸಿಯಾಗಿ ಅವಘಡಗಳು ಆಗುವ ಛಾನ್ಸ್‌ ಇರುತ್ತದೆ. ಹೀಗಾಗಿ ರಾತ್ರಿಯಿಡಿ ಚಾರ್ಜ್‌ ಹಾಕುವುದು ಒಳ್ಳೆಯದಲ್ಲ. ಇತ್ತೀಚಿನ ನೂತನ ಸ್ಮಾರ್ಟ್‌ಫೋನ್‌ಗಳು ಚಾರ್ಜ್‌ ಪೂರ್ಣವಾದ ನಂತರ ಚಾರ್ಜಿಂಗ್ ತೆಗೆದುಕೊಳ್ಳುವುದನ್ನು ಸ್ಟಾಪ್ ಮಾಡಿಕೊಳ್ಳುತ್ತವೆ.

ಬೇರೆಫೋನ್‌ ಚಾರ್ಜರ್‌ ಬಳಸಬಹುದೇ?

ಬೇರೆಫೋನ್‌ ಚಾರ್ಜರ್‌ ಬಳಸಬಹುದೇ?

ನಿಮ್ಮ ಸ್ಮಾರ್ಟ್‌ಫೋನ್‌ಗೆ ಕಂಪನಿಯು ನೀಡಿರುವ ಚಾರ್ಜರ್‌ ಮಾತ್ರ ಬಳಸಿ. ಥರ್ಡ್‌ಪಾರ್ಟಿ ಚಾರ್ಜರ್ ಮತ್ತು ಬೇರೆ ಕಂಪನಿಯ ಚಾರ್ಜರ್‌ಗಳನ್ನು ಬಳಸದಿರಿ. ಅದರಲ್ಲೂ ಕಡಿಮೆ ಬೆಲೆಗೆ ಸೀಗುವ ಚಾರ್ಜರ್‌ಗಳನ್ನು ಬಳಸುವ ಮುನ್ನ ಯೋಚಿಸಿ. ಯಾಕಂದ್ರೆ ಇವುಗಳು ನಿಮ್ಮ ಫೋನ್‌ ಬ್ಯಾಟರಿ ಬಾಳಿಕೆಯನ್ನು ಹಾಳುಮಾಡುವ ಸಾಧ್ಯತೆಗಳಿರುತ್ತವೆ.

ಫಾಸ್ಟ್‌ ಚಾರ್ಜಿಂಗ್ ಉತ್ತಮವೇ?

ಫಾಸ್ಟ್‌ ಚಾರ್ಜಿಂಗ್ ಉತ್ತಮವೇ?

ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಚಾರ್ಜರ್‌ ನೀಡುತ್ತಿದ್ದು, ಇದರಿಂದ ಫೋನ್‌ಗಳು ಬೇಗನೆ ಚಾರ್ಜ್‌ ಪಡೆದುಕೊಳ್ಳುತ್ತವೆ. ಫೋನ್‌ಗಳ ಬ್ಯಾಟರಿಯಲ್ಲಿ ಪವರ್‌ ಮ್ಯಾನೇಜಮೆಂಟ್‌ ಐಸಿ ಚಿಪ್‌ ಇರುತ್ತದೆ(PMIC). ಫಾಸ್ಟ್‌ಚಾರ್ಜ್‌ ತಂತ್ರಜ್ಞಾನದ ಬೆಂಬಲವನ್ನು ಹೊಂದಿದ್ದರೇ, ಫೋನ್‌ಗಳಿಗೆ ಏನು ಸಮಸ್ಯೆ ಇಲ್ಲ.

ಬ್ಯಾಟರಿ ಸ್ಟೋರೇಜ್‌ ಹೇಗೆ?

ಬ್ಯಾಟರಿ ಸ್ಟೋರೇಜ್‌ ಹೇಗೆ?

ಲಿಥೀಯಮ್ ಬ್ಯಾಟರಿಗಳನ್ನು ಬಹಳ ದಿನಗಳ ಕಾಲ ಚಾರ್ಜ್‌ ಮಾಡದೇ ಖಾಲಿಯಾಗಿಡಬೇಡಿ. ನೀವು ಫೋನ್‌ ಬಳಸದಿದ್ದರೂ 50 ಪರ್ಸೆಂಟ್‌ ಆದ್ರೂ ಚಾರ್ಜ್‌ ಇರಬೇಕು. ಇಲ್ಲದಿಂದರೇ ಫೋನ್‌ ಬ್ಯಾಟರಿ ಬಾಳಿಕೆ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಆಗ ಪ್ರತಿ ತಿಂಗಳು ಫೋನ್‌ ಬ್ಯಾಟರಿಯು 5-10 ಪರ್ಸೆಂಟ್‌ ಚಾರ್ಜ್‌ನಲ್ಲಿ ಹೆಚ್ಚಾಗಿ ಕಂಡು ಬರುತ್ತವೆ.

Best Mobiles in India

English summary
According to the WhatsApp's updated FAQs, the instant messaging app will no longer work for some of Android and iPhone users after February 2020. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X