Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಇನ್ಮುಂದೆ ಕರೆಯನ್ನು ಶೆಡ್ಯುಲ್‌ ಮಾಡಬಹುದು; ಎಂದಿನಿಂದ ಲಭ್ಯ!?

ನೀವೇನಾದರು ಯಾರಿಯಾದರೂ ಕರೆ ಮಾಡುತ್ತೇನೆ ಎಂದು ಹೇಳಿ ಆ ಸಮಯಕ್ಕೆ ಕರೆ ಮಾಡದೆ ಮರೆತಿದ್ದರೆ, ನಿಮ್ಮ ಕರೆ ಬರುತ್ತದೆ ಎಂದು ಕಾಯ್ದು ಕುಳಿತಿದ್ದವರಿಗೆ ತುಂಬಾ ನಿರಾಸೆ, ಬೇಸರ ಆಗುವುದಂತೂ ಸತ್ಯ. ಆದರೆ, ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ. ಯಾಕೆಂದರೆ ಬಳಕೆದಾರರು ವಾಟ್ಸಾಪ್‌ ಕರೆ ಫೀಚರ್ಸ್‌ ಮೂಲಕ ಮೊದಲೇ ಯಾರಿಗೆ ಕರೆ ಮಾಡಬೇಕು ಎಂಬುದನ್ನು ಶೆಡ್ಯುಲ್‌ ಮಾಡಿಕೊಳ್ಳಬಹುದಾಗಿದೆ.

ವಾಟ್ಸಾಪ್‌ನಲ್ಲಿ ಇನ್ಮುಂದೆ ಕರೆಯನ್ನು ಶೆಡ್ಯುಲ್‌ ಮಾಡಬಹುದು; ಎಂದಿನಿಂದ ಲಭ್ಯ!?

ಹೌದು, ಸಾಮಾನ್ಯ ಕರೆಗಳ ಸೇವೆಯಲ್ಲಿ ಈವರೆಗೂ ಲಭ್ಯವಾಗದ ವಿಶೇಷ ಕರೆ ಫೀಚರ್ಸ್‌ ಇನ್ಮುಂದೆ ವಾಟ್ಸಾಪ್‌ನಲ್ಲಿ ಲಭ್ಯವಾಗಲಿದೆ. ಈ ಮೂಲಕ ಬಳಕೆದಾರರು ಬೇಕಾದವರ ಜೊತೆ ಬೇಕಾದ ಸಮಯದಲ್ಲಿ ಸಂಪರ್ಕದಲ್ಲಿರಲು ಸಹಾಯ ಮಾಡಲಿದೆ. ಹಾಗಿದ್ರೆ, ಈ ಫೀಚರ್ಸ್‌ ಎಂದಿನಿಂದ ಬಳಕೆದಾರರಿಗೆ ಲಭ್ಯ?, ಇದರಿಂದ ಪ್ರಯೋಜನ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಕರೆ ಮಾಡುವ ಮುನ್ನ ಶೆಡ್ಯುಲ್‌ಮಾಡಬಹುದು!

ವಾಟ್ಸಾಪ್‌ನಲ್ಲಿ ಈಗಾಗಲೇ ವಾಯ್ಸ್‌ ಹಾಗೂ ವಿಡಿಯೋ ಕರೆ ಮಾಡಲು ಅವಕಾಶ ನೀಡಲಾಗಿದೆ. ಅದಾಗ್ಯೂ ಈ ವಿಭಾಗದಲ್ಲಿ ಇನ್ನಷ್ಟು ಹೊಸ ಸೌಲಭ್ಯ ಕಲ್ಪಿಸಿಕೊಡಲು ಮುಂದಾಗಿರುವ ವಾಟ್ಸಾಪ್ ಬಳಕೆದಾರರಿಗೆ ಮುಂಚಿತವಾಗಿಯೇ ಕರೆಯನ್ನು ನಿಗದಿಪಡಿಸುವ ಆಯ್ಕೆಯ ಫೀಚರ್ಸ್‌ ನೀಡುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ.

ಇನ್ನು ಈ ಶೆಡ್ಯೂಲ್ ಕರೆ ಸೌಲಭ್ಯ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರಲಿದ್ದು, ಈ ಮೂಲಕ ಬೇಕಾದವರ ಜೊತೆಗೆ ಸಮಯಕ್ಕಿಂತ ಮುಂಚಿತವಾಗಿ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಕರೆಯನ್ನು ಯೋಜಿಸಬಹುದಾಗಿದೆ. ಅಂದರೆ, ಇದರಲ್ಲಿ ಪ್ರಮುಖ ಸಂಭಾಷಣೆಯನ್ನು ಯಾರೂ ಸಹ ಮಿಸ್‌ ಮಾಡಿಕೊಳ್ಳುವ ಸಂಭವ ಇರುವುದಿಲ್ಲ ಎಂದು ವಾಟ್ಸಾಪ್‌ ಖಚಿತಪಡಿಸಿದೆ. ಹಾಗೆಯೇ ಈ ಫೀಚರ್ಸ್‌ ಅನ್ನು ಬಳಕೆದಾರರು ಶೀಘ್ರದಲ್ಲೇ ಪಡೆದುಕೊಳ್ಳಬಹುದು ಎಂದು ಸಹ ತಿಳಿಸಿದೆ.

ವಾಟ್ಸಾಪ್‌ನಲ್ಲಿ ಇನ್ಮುಂದೆ ಕರೆಯನ್ನು ಶೆಡ್ಯುಲ್‌ ಮಾಡಬಹುದು; ಎಂದಿನಿಂದ ಲಭ್ಯ!?

ಇದರಿಂದ ಪ್ರಯೋಜನ ಏನು?

ಈ ಫೀಚರ್ಸ್‌ ಖಂಡಿತಾ ಬಳಕೆದಾರರಿಗೆ ಹಲವಾರು ರೀತಿಯಲ್ಲಿ ಅನುಕೂಲ ಉಂಟು ಮಾಡಲಿದೆ. ಯಾಕೆಂದರೆ ವಾಟ್ಸಾಪ್ ಅನ್ನು ಇಂದು ಕೇವಲ ಸಾಮಾನ್ಯ ಚಾಟ್‌ ಮಾಡಲಷ್ಟೇ ಅಲ್ಲದೆ, ಮೀಟಿಂಗ್‌ಗಳನ್ನು ನಿಯೋಜಿಸಲು, ಯಾವುದಾದರೂ ವಿಷಯವನ್ನು ಚರ್ಚಿಸಲು, ಸಂದರ್ಶನ ನಡೆಸಲು ಸೇರಿದಂತೆ ವಿವಿಧ ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ. ಉದಾಹರಣೆ ಹೇಳಬೇಕೆಂದರೆ ಯಾರನ್ನಾದರೂ ಕೆಲಸಕ್ಕೆ ನೇಮಿಸಿಕೊಳ್ಳಲು ಸಂದರ್ಶನ ನಡೆಸುವುದು ಸಾಮಾನ್ಯ ಸಂಗತಿ, ಈ ವೇಳೆ ಸಂದರ್ಶಕರು ಸಂದರ್ಶನಕ್ಕೆ ಹಾಜರಾಗುವ ವ್ಯಕ್ತಿ ಜೊತೆ ಯಾವ ಸಮಯದಲ್ಲಿ ಮಾತನಾಡಬೇಕು ಎಂಬುದನ್ನು ಶೆಡ್ಯುಲ್‌ ಮಾಡಲು ಇದು ಸುಲಭ ಆಯ್ಕೆ ಒದಗಿಸುತ್ತದೆ.

ದಿನಾಂಕ ಮತ್ತು ಸಮಯವನ್ನು ನಿಗದಿ ಮಾಡಲು ಅವಕಾಶ

ಇನ್ನು ವಾಟ್ಸಾಪ್‌ ಬಳಕೆದಾರರು ತಮ್ಮ ಈ ವಿಶೇಷ ಕರೆಗಾಗಿ ಶೀರ್ಷಿಕೆ, ದಿನಾಂಕ ಮತ್ತು ಸಮಯವನ್ನು ಆಯ್ಕೆ ಮಾಡಲು ಅನುಕೂಲ ಮಾಡಿಕೊಡಲಾಗುತ್ತಿದ್ದು, ಹಾಗೆಯೇ ಗ್ರೂಪ್‌ ಕರೆ ವಿಚಾರದಲ್ಲೂ ನಿಗದಿತ ಕರೆಯನ್ನು ಯಾವಾಗ ಮಾಡಲಾಗುತ್ತದೆ ಎಂಬುದರ ಕುರಿತು ಗುಂಪಿನಲ್ಲಿರುವ ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದಾಗಿದೆ. ಈ ಮೂಲಕ ಸದಸ್ಯರು ಪೂರ್ವದಲ್ಲಿಯೇ ಸಿದ್ಧರಾಗಬಹುದು. ಈ ಫೀಚರ್ಸ್‌ನಿಂದಾಗಿ ನಿರಂತರ ಜ್ಞಾಪನೆಗಳನ್ನು ನೀಡುವ ಅಗತ್ಯ ಸಹ ಇರುವುದಿಲ್ಲ.

ವಾಟ್ಸಾಪ್‌ನಲ್ಲಿ ಇನ್ಮುಂದೆ ಕರೆಯನ್ನು ಶೆಡ್ಯುಲ್‌ ಮಾಡಬಹುದು; ಎಂದಿನಿಂದ ಲಭ್ಯ!?

ಕೆಲವೇ ದಿನಗಳಲ್ಲಿ ಬಳಕೆದಾರರಿಗೆ ಲಭ್ಯ!

ಈ ಫೀಚರ್ಸ್‌ ಪಡೆದುಕೊಳ್ಳಲು ಬಳಕೆದಾರರು ವಾಟ್ಸಾಪ್‌ ಆವೃತ್ತಿ 2.23.4.4 ಅನ್ನು ಹೊಂದಿರಬೇಕಿದೆ. ಸದ್ಯಕ್ಕೆ ಈ ಫೀಚರ್ಸ್ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಿಸುವ ಕೆಲಸದಲ್ಲಿ ವಾಟ್ಸಾಪ್ ಎಲ್ಲಾ ರೀತಿಯ ಕಾರ್ಯದಲ್ಲಿ ತಲ್ಲೀನವಾಗಿದೆ ಎಂದು ತಿಳಿದುಬಂದಿದೆ.

ಇನ್ಮುಂದೆ 2GB ಗಾತ್ರದ ಡಾಕ್ಯುಮೆಂಟ್‌ಗಳು ಸೆಂಡ್ ಮಾಡಬಹುದು

ಇನ್ನು ವಾಟ್ಸಾಪ್‌ ಬ್ಯಾನರ್ ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ಹೊಸ ಬ್ಯಾನರ್ ಫೀಚರ್ಸ್‌ ಅನ್ನು ಬಳಕೆದಾರರಿಗೆ ಲಭ್ಯವಾಗಿಸಲು ಕಾತುರವಾಗಿದ್ದು, ಅದರಂತೆ ಈ ಫೀಚರ್ಸ್‌ ಮೂಲಕ ಬಳಕೆದಾರರು 2GB ಗಾತ್ರದ ಡಾಕ್ಯುಮೆಂಟ್‌ಗಳು ಮತ್ತು ಫೈಲ್‌ಗಳನ್ನು ಶೇರ್‌ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನಲಾಗಿದೆ. ಇನ್ನು ಈಗ ವಾಟ್ಸಾಪ್‌ ನಲ್ಲಿ ಬಳಕೆದಾರರು ಕೇವಲ64 MB ಗಾತ್ರದ ದಾಖಲೆಗಳನ್ನು ಹಂಚಿಕೊಳ್ಳಲು ಅನುಮತಿಸಲಾಗಿದೆ.

Best Mobiles in India

English summary
WhatsApp is working on a new feature that will allow users to schedule a call in advance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+