Home
ಸುದ್ದಿಜಾಲ

Fastag: ಇನ್ಮುಂದೆ ಹೊಸ ಫಾಸ್ಟ್ಯಾಗ್ ಅನ್ನು ಎಲ್ಲಿ ಖರೀದಿಸಬೇಕು?: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

ಪೇಟಿಎಂನಲ್ಲಿ (Paytm) ಆದ ಕೆಲವು ಬದಲಾವಣೆಗಳಿಂದ ಫಾಸ್ಟ್ಯಾಗ್ (Fastag) ಬಳಕೆದಾರರು ಕೆಲವು ಗೊಂದಲಕ್ಕೆ ಒಳಗಾಗಿದ್ದಾರೆ. ಫಾಸ್ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಇನ್ಮುಂದೆ ಬಳಕೆದಾರರು ಹೊಸ ಫಾಸ್ಟ್ಯಾಗ್ ಅನ್ನು ಖರೀದಿ ಮಾಡಬೇಕಿದೆ.

ಹೌದು, ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ 1949 ರ ಸೆಕ್ಷನ್ 35A ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಪೇಟಿಎಂ ಪಾವತಿಗಳ ಬ್ಯಾಂಕ್ (PPBL) ಅನ್ನು ಫಾಸ್ಟ್ಯಾಗ್‌ಗೆ ಹೊಸ ಸಕ್ರಿಯಗೊಳಿಸುವಿಕೆ ಅಥವಾ ರೀಚಾರ್ಜ್‌ ಮಾಡುವ ಕೆಲಸಗಳನ್ನು ನಿಷೇಧಿಸಿದೆ. ಇದರಿಂದ ನಿಮಗೆ ಯಾವುದೇ ಚಿಂತೆ ಬೇಡ, ಬದಲಾಗಿ ನಿಮ್ಮ ವಾಹನಗಳಿಗೆ ಫಾಸ್ಟ್ಯಾಗ್ ಪಡೆಯಲು ಮುಂದಾಗಿದ್ದರೆ ಇನ್ಮುಂದೆ ಹಲವಾರು ಆಯ್ಕೆಗಳು ಲಭ್ಯ ಇವೆ. ಹಾಗಿದ್ರೆ, ಬನ್ನಿ ಹೊಸ ಫಾಸ್ಟ್ಯಾಗ್ ಅನ್ನು ಎಲ್ಲಿ ಖರೀದಿ ಮಾಡುವುದು?, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದ್ದೇನು ಅನ್ನೋದನ್ನು ತಿಳಿದುಕೊಳ್ಳಿ.

ಹೊಸ ಫಾಸ್ಟ್ಯಾಗ್ ಅನ್ನು ಎಲ್ಲಿ ಖರೀದಿಸಬೇಕು?: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

ಹೊಸ ಫಾಸ್ಟ್ಯಾಗ್ ಖರೀದಿ: ಇನ್ಮುಂದೆ ಅಂದರೆ ಮಾರ್ಚ್ 15, 2024 ರೊಳಗೆ ಹೊಸ ಅಧಿಕೃತ ವಿತರಕರಿಂದ ಹೊಸ ಫಾಸ್ಟ್ಯಾಗ್‌ಗೆ ವಾಹನ ಬಳಕೆದಾರರು ಅರ್ಜಿ ಸಲ್ಲಿಸಬೇಕಾಗುತ್ತದೆ. ಕಾರಣ ಏನೆಂದರೆ ಪೇಟಿಎಂ ಪಾವತಿಗಳ ಬ್ಯಾಂಕ್ (Paytm Payments Bank) ಫಾಸ್ಟ್ಯಾಗ್ ಅನ್ನು ಮುಚ್ಚುವ ಪ್ರಕ್ರಿಯೆಯು ಸಾಮಾನ್ಯವಾಗಿ 5-7 ದಿನಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತನ್ನ ಅಧಿಕೃತ ಫಾಸ್ಟ್ಯಾಗ್ ವಿತರಕರ ಪಟ್ಟಿಯನ್ನು ಈಗ ನವೀಕರಿಸಿದೆ.

ಬ್ಯಾಂಕ್‌ಗಳು: ಇನ್ಮುಂದೆ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಸಹ ಫಾಸ್ಟ್ಯಾಗ್‌ನ ಪ್ರಮುಖ ಪೂರೈಕೆದಾರನಾಗಿ ಕೆಲಸ ಮಾಡಲಿವೆ. ಅಸ್ತಿತ್ವದಲ್ಲಿರುವ ಬ್ಯಾಂಕ್ ಖಾತೆಯಿಂದ ನೇರವಾಗಿ ಫಾಸ್ಟ್ಯಾಗ್ ಅನ್ನು ಪಡೆಯಬಹುದಾಗಿದೆ. ಇದರಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ (HDFC Bank, ICICI Bank, SBI Bank, Axis Bank) ಸೇರಿವೆ.

ಹೊಸ ಫಾಸ್ಟ್ಯಾಗ್ ಅನ್ನು ಎಲ್ಲಿ ಖರೀದಿಸಬೇಕು?: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

ಟೋಲ್ ಪ್ಲಾಜಾಗಳು: ಭಾರತದಾದ್ಯಂತ ಅನೇಕ ಟೋಲ್ ಬೂತ್‌ಗಳನ್ನು ಫಾಸ್ಟ್ಯಾಗ್ ಕೌಂಟರ್‌ಗಳನ್ನಾಗಿ ಗೊತ್ತುಪಡಿಸಲಾಗಿದೆ. ಫಾಸ್ಟ್ಯಾಗ್ ಅನ್ನು ಸ್ಥಳದಲ್ಲೇ ನೀವು ಖರೀದಿಸಬಹುದು ಮತ್ತು ಸಕ್ರಿಯಗೊಳಿಸಬಹುದು. ನೀವು ಬ್ಯಾಂಕ್ ಖಾತೆಯನ್ನು ಹೊಂದಿಲ್ಲದಿದ್ದರೆ ಅಥವಾ ತಕ್ಷಣದ ಪರಿಹಾರವನ್ನು ಬಯಸಿದರೆ ಈ ಆಯ್ಕೆಯು ಸೂಕ್ತವಾಗಿದೆ.

ಆನ್‌ಲೈನ್ ಸ್ಟೋರ್‌ಗಳು: ಇದರೊಂದಿಗೆ ನೀವು ಪೇಟಿಎಂ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ (Paytm, Amazon and Flipkart) ನಂತಹ ಹಲವಾರು ಆನ್‌ಲೈನ್ ಸ್ಟೋರ್‌ನಲ್ಲಿಯೂ ಸಹ ಫಾಸ್ಟ್ಯಾಗ್ ಖರೀದಿ ಮಾಡಬಹುದಾಗಿದೆ. ಅಂದರೆ, ಫಾಸ್ಟ್ಯಾಗ್ ನಿಮ್ಮ ಮನೆಬಾಗಿಲಿಗೇ ಬರಲಿದೆ.

ಸರಿಯಾದ ವಿತರಕರನ್ನು ಆಯ್ಕೆ ಮಾಡುವುದು ಹೇಗೆ?: ಎಲ್ಲಾ ಎನ್‌ಎಚ್‌ಎಐ ಅನುಮೋದಿತ ವಿತರಕರು ಒಂದೇ ರೀತಿಯ ಕಾರ್ಯಗಳನ್ನು ಮಾಡುತ್ತರಾದರೂ ಸಹ ಕೆಲವು ವ್ಯತ್ಯಾಸಗಳನ್ನು ನೀವು ತಿಳಿದುಕೊಳ್ಳುವುದು ಅನಿವಾರ್ಯವಾಗಿದೆ. ಈ ಮೂಲಕ ಮುಂದೆ ಆಗುವ ಗೊಂದಲದಿಂದ ಪಾರಾಗಬಹುದು.

ಹೊಸ ಫಾಸ್ಟ್ಯಾಗ್ ಅನ್ನು ಎಲ್ಲಿ ಖರೀದಿಸಬೇಕು?: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್‌

ಬ್ಯಾಂಕ್‌ಗಳು ಮತ್ತು ಆನ್‌ಲೈನ್ ಸ್ಟೋರ್‌ಗಳು ನಿಮ್ಮ ಫಾಸ್ಟ್ಯಾಗ್ ಅನ್ನು ತಲುಪಿಸಲು ಕೆಲವು ದಿನಗಳನ್ನುತೆಗೆದುಕೊಳ್ಳಬಹುದು. ಆದರೆ, ಟೋಲ್ ಬೂತ್‌ಗಳು ತಕ್ಷಣದ ಸಕ್ರಿಯಗೊಳಿಸುವಿಕೆಯನ್ನು ಖಾತರಿಪಡಿಸುತ್ತವೆ. ಹಾಗೆಯೇ ವಿತರಕರು ಭಿನ್ನ ಕನಿಷ್ಠ ರೀಚಾರ್ಜ್ ಮೊತ್ತಗಳನ್ನು ಪಾವತಿ ಮಾಡುವಂತೆ ಕೇಳುತ್ತಾರೆ. ಇದರಿಂದ ನಿಮಗೆ ಸೂಕ್ತವಾದ ಒಂದನ್ನು ಆರಿಸಿ. ಇದರ ಜೊತೆಗೆ ಕೆಲವು ವಿತರಕರು ಟ್ಯಾಗ್ ಬದಲಿ ಅಥವಾ ಗ್ರಾಹಕ ಬೆಂಬಲದಂತಹ ಸೇವೆಗಳಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಬಹುದು.

ಫಾಸ್ಟ್ಯಾಗ್ ಖರೀದಿಸಲು ಯಾವ ದಾಖಲೆ ಬೇಕು?: ಹೊಸ ಫಾಸ್ಟ್ಯಾಗ್ ಖರೀದಿ ಮಾಡಲು ನೀವು ವಾಹನ ನೋಂದಣಿ ಪ್ರಮಾಣಪತ್ರ (RC), ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ, ಕೆವೈಸಿ ದಾಖಲೆಗಳು, ಪ್ಯಾನ್‌ ಕಾರ್ಡ್ ಅಥವಾ ವಿಳಾಸ ಪುರಾವೆಗಳಂತಹ ದಾಖಲೆಗಳು ಅಗತ್ಯವಾಗಿವೆ.

Best Mobiles in India

English summary
Under Section 35A of the Banking Regulation Act 1949, the Reserve Bank of India (RBI) has banned Paytm Payments Bank (PPBL) from any new activation or recharge operations for FASTag. In the meantime, if you are planning to buy a new FASTAG, there are several options available to you.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+