ಇನ್ಮುಂದೆ ಹಾರ್ಟ್ ಅಟ್ಯಾಕ್‌ನಿಂದ ಸಾಯುವವರ ಸಂಖ್ಯೆ ಕಡಿಮೆ ಆಗಬಹುದೇನೋ? ವೈದ್ಯಲೋಕದಲ್ಲಿ ಎಐ ಅಧಿಪತ್ಯ!
ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಹೃದಯ ಸಂಬಂಧಿ (heart attack) ಸಮಸ್ಯೆಗಳಿಂದ ಸಾವಿಗೀಡಾಗುತ್ತಿದ್ದಾರೆ. ಕೇವಲ ಈ ವಿಷಯಕ್ಕೆ ಮಾತ್ರವಲ್ಲದೆ ಹಲವಾರು ಹೊಸ ಹೊಸ ಖಾಯಿಲೆಗಳು ಜನರನ್ನು ಆಕ್ರಮಿಸಿಕೊಳ್ಳುತ್ತಿವೆ. ಈ ಕಾರಣಕ್ಕೆ ಈಗ ಈ ರೀತಿಯ ಖಾಯಿಲೆಗಳನ್ನು ಪತ್ತೆ ಮಾಡಲು ಅಥವಾ ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಎಐ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಎಐ ತನ್ನದೇ ಆದ ರೀತಿಯಲ್ಲಿ ವೈದ್ಯಲೋಕಕ್ಕೆ ಸೇವೆ ಸಲ್ಲಿಸಲಿದೆ.
ಹೌದು, ಖಾಯಿಲೆಗಳು ಯಾರಿಗೆ ಆದರೂ ಹೇಳಿ ಕೇಳಿ ಬರುವುದಿಲ್ಲ. ಪರಿಣಾಮ ಅವು ನಮ್ಮ ದೇಹವನ್ನು ಆಕ್ರಮಿಸಿಕೊಳ್ಳುವ ಮೊದಲು ಅವನ್ನು ಪತ್ತೆ ಮಾಡಿ ನಮ್ಮ ದೇಹದಿಂದ ಹೊರದಬ್ಬಬೇಕಿದೆ. ಇದರಿಂದ ಈಗ ವೈದ್ಯರು ಹಾಗೂ ವಿಜ್ಞಾನಿಗಳು ಹೊಸ ರೀತಿಯಲ್ಲಿ ಎಐ ಬಳಕೆ ಮಾಡಲು ಮುಂದಾಗಿದ್ದಾರೆ. ಅಂದರೆ ಎಐ ಬಳಕೆ ಮಾಡಿಕೊಂಡು ವಿವಿಧ ರೀತಿಯ ಖಾಯಿಲೆಗಳನ್ನು ಪತ್ತೆ ಮಾಡಲಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಹೊಸದಾಗಿ RETFound ಟೂಲ್ಸ್ ಅಭಿವೃದ್ಧಿಪಡಿಸಲಾಗಿದೆ. ಇದರೊಂದಿಗೆ ಹಲವು ಎಐ ಟೂಲ್‌ಗಳು ವೈದ್ಯರಿಗೆ ಸಹಾಯ ಮಾಡುತ್ತಿವೆ.

ಕೃತಕ ಬುದ್ಧಿಮತ್ತೆ (AI) ಕಾರ್ಪೊರೇಟ್ ವಿಭಾಗದಿಂದ ಹಿಡಿದು ವೈದ್ಯಕೀಯ ಕ್ಷೇತ್ರದ ವರೆಗೂ ಪ್ರತಿಯೊಂದು ಜಾಗವನ್ನು ಕ್ರಾಂತಿಗೊಳಿಸುತ್ತಿದೆ. ಎಐ ತನ್ನ ಕೆಲಸ ನಿರ್ವಹಿಸುವಲ್ಲಿ ಮತ್ತು ಹೆಚ್ಚಿನ ವಿಶ್ಲೇಷಣಾತ್ಮಕ ಮಾಹಿತಿಯನ್ನು ಒದಗಿಸುವಲ್ಲಿ ಮಾನವರಿಗೆ ಸಹಾಯ ಮಾಡುತ್ತದೆ. ಇದರೊಂದಿಗೆ ಈಗ ವಿಜ್ಞಾನಿಗಳು ಎಐ ಉಪಕರಣವನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ಹೃದಯ ವೈಫಲ್ಯ ಸೇರಿದಂತೆ ಅನೇಕ ಆರೋಗ್ಯ ಪರಿಸ್ಥಿತಿಗಳನ್ನು ಕಂಡುಕೊಂಡು ಅದಕ್ಕೆ ಪರಿಹಾರ ನೀಡುವ ಕೆಲಸ ಮಾಡಲಿದೆ.
RETಪೌಂಡ್ (RETFound) : RETಪೌಂಡ್ ಎಂಬ ಹೊಸ ಎಐ ಚಾಲಿತ ಡಿವೈಸ್ ಅನ್ನು ಅಭಿವೃದ್ಧಿ ಪಡಿಸಲಾಗಿದೆ. ಇದು ವ್ಯಕ್ತಿಗಳ ಅಕ್ಷಿಪಟಲದ ಚಿತ್ರಗಳ ವಿಶ್ಲೇಷಣೆಯ ಮೂಲಕ ಕಣ್ಣಿನ ಕಾಯಿಲೆಗಳಿಂದ ಹೃದಯ ವೈಫಲ್ಯ ಮತ್ತು ಪಾರ್ಕಿನ್ಸನ್ ಕಾಯಿಲೆಯವರೆಗಿನ ಎಲ್ಲ ಮಾಹಿತಿಯನ್ನು ಕಲೆ ಹಾಕುತ್ತದೆ. ಅಂದರೆ ಖಾಯಿಲೆಗಳನ್ನು ಉಲ್ಬಣ ಮಾಡುವ ಅಂಶಗಳನ್ನು ಪತ್ತೆ ಮಾಡಿ ಮಾಹಿತಿ ನೀಡಲಿದ್ದು, ಈ ಮೂಲಕ ಚಿಕಿತ್ಸೆಗೆ ಸಹಾಯ ಮಾಡಲಿದೆ.
ಈ ಸಂಬಂಧ ನೇಚರ್.ಕಾಮ್ ಸಾಪ್ತಾಹಿಕ ಅಂತರಾಷ್ಟ್ರೀಯ ಜರ್ನಲ್‌ನಲ್ಲಿ ಈ ಸಂಬಂಧ ವರದಿಯೊಂದು ಪ್ರಕಟ ಆಗಿದೆ. RETFound ನವೀನ ಸ್ವಯಂ-ಮೇಲ್ವಿಚಾರಣೆಯ ಕಲಿಕೆಯ ವಿಧಾನವನ್ನು ಬಳಸಿಕೊಂಡು ತರಬೇತಿ ಪಡೆದಿದ್ದು, ಈ ಟೂಲ್ ಮುನ್ಸೂಚನೆಯನ್ನು ಊಹಿಸಲು 1.6 ಮಿಲಿಯನ್ ರೆಟಿನಾದ ಚಿತ್ರಗಳಿಂದ ಎಲ್ಲವನ್ನೂ ಕಲಿತುಕೊಂಡಿದೆ. ಇದರಿಂದಾಗಿ ನಿಖರ ಮಾಹಿತಿಯನ್ನು ಪಡೆಯಲಾಗುತ್ತದೆ ಎಂದು ಉಲ್ಲೇಖ ಮಾಡಲಾಗಿದೆ.
ಮೆರೇಟಿವ್ : ಇದನ್ನು ಈ ಹಿಂದೆ IBM ವ್ಯಾಟ್ಸನ್ ಹೆಲ್ತ್ ಎಂದು ಕರೆಯಲಾಗುತ್ತಿತ್ತು. ಇದು ವೈದ್ಯಕೀಯ ವೃತ್ತಿಪರರಿಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ, ದೈನಂದಿನ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸುತ್ತದೆ. ಇದು ನೈಜ ಸಮಯದಲ್ಲಿ ವೈದ್ಯಕೀಯ ಡೇಟಾವನ್ನು ಸಂಗ್ರಹಿಸಲು, ನಿರ್ವಹಿಸಲು ಮತ್ತು ವಿಶ್ಲೇಷಿಸಲು ಕ್ಲೌಡ್‌ನಲ್ಲಿ ಎಐ ಅನ್ನು ಬಳಸುವ ವೇದಿಕೆಯಾಗಿದೆ.
ಈ ಎಐ ಅಲ್ಗಾರಿದಮ್‌ಗಳ ಬಳಕೆಯು ಆರಂಭಿಕ ಹಂತದಲ್ಲಿ ಆರೋಗ್ಯದಲ್ಲಿನ ಅರ್ಥಪೂರ್ಣ ಪ್ರವೃತ್ತಿಗಳನ್ನು ಪತ್ತೆ ಮಾಡಲು ಸಹಾಯಕ. ಉದಾಹರಣೆಗೆ ವಿಕಿರಣಶಾಸ್ತ್ರಜ್ಞರು ತಮ್ಮ ಕೆಲಸದ ಹರಿವನ್ನು ಅಡ್ಡಿಪಡಿಸದೆ ತಮ್ಮ ನಿರ್ಧಾರಗಳನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಇದೇ ರೀತಿಯಲ್ಲಿ, ಆಂಕೊಲಾಜಿಸ್ಟ್‌ಗಳು ಸುಧಾರಿತ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಯಾನ್ಸರ್ ರೋಗನಿರ್ಣಯದ ನಿಖರತೆ ಮತ್ತು ದಕ್ಷತೆಯನ್ನು ಹೆಚ್ಚಿಸಬಹುದು
Viz.ai : ಇದನ್ನೂ ಸಹ ವೈದ್ಯಲೋಕದಲ್ಲಿ ಬಳಕೆ ಮಾಡಲಾಗುತ್ತದೆ. ಈ ಕ್ಲೌಡ್-ಆಧಾರಿತ ರೋಗಿಯ ದಾಖಲೆ ನಿರ್ವಹಣಾ ವ್ಯವಸ್ಥೆಯು ಆರೋಗ್ಯ ವೃತ್ತಿಪರರು ಮತ್ತು ರೋಗಿಗಳಿಗೆ ಮಾಹಿತಿಯನ್ನು ಹೆಚ್ಚು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಪ್ರವೇಶಿಸಲು ಇದು ಸಹಾಯ ಮಾಡಲಿದೆ. ಇದಲ್ಲದೆ ರೋಗಿಯು ವೈದ್ಯಕೀಯ ಸಮಸ್ಯೆಯನ್ನು ಎದುರಿಸಿದಾಗ ಅಥವಾ ಔಷಧಿಗಳನ್ನು ತೆಗೆದುಕೊಳ್ಳುವಾಗ ಇದು ಕೆಲವು ಸಲಹೆಗಳನ್ನು ನೀಡುತ್ತದೆ.

ಎನ್ಲಿಟಿಕ್: ಇದು ಆರೋಗ್ಯ ದತ್ತಾಂಶದ ನಿಖರತೆಯನ್ನು ಸುಧಾರಿಸಲು ಬಳಕೆ ಆಗುತ್ತಿದೆ. ಅಂದರೆ ಇದೊಂದು ಹೆಲ್ತ್‌ಕೇರ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಆಗಿದೆ. ನಿಖರವಾದ ರೋಗನಿರ್ಣಯ ಮತ್ತು ಕ್ಲಿನಿಕಲ್ ನಿರ್ಧಾರ ಬೆಂಬಲದ ಮೂಲಕ ರೋಗಿಗಳ ಆರೈಕೆಯನ್ನು ಹೆಚ್ಚಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಈ ವ್ಯವಸ್ಥೆಯು ಆರೋಗ್ಯ ಸ್ಥಿತಿಗಳ ಆರಂಭಿಕ ಚಿಹ್ನೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.


Click it and Unblock the Notifications








