ಸ್ಯಾಮ್‌ಸಂಗ್, ಆಪಲ್, ಶಿಯೋಮಿ, ಒನ್‌ಪ್ಲಸ್ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್? ಜನರ ಅಭಿಪ್ರಾಯವೇನು?
ಭಾರತದಲ್ಲಿ ಯಾವುದೇ ಹಬ್ಬ ಬಂದರೂ ಅದರ ಸಂಭ್ರಮಕ್ಕೆ ಪ್ರಮುಖ ಇ-ಕಾಮರ್ಸ್ ಸೈಟ್‌ಗಳು ಜೊತೆಯಾಗುತ್ತವೆ. ಈ ಮೂಲಕ ಹಬ್ಬಗಳು ಇನ್ನಷ್ಟು ಸಡಗರ ಸಂಭ್ರಮದಿಂದ ನಡೆಯುತ್ತವೆ. ಈ ನಡುವೆ ಸ್ಮಾರ್ಟ್‌ಫೋನ್ (smartphones) ಹಾಗೂ ಇತರೆ ಸ್ಮಾರ್ಟ್ ಡಿವೈಸ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡಲಾಗಿದ್ದು, ಹಲವಾರು ಜನರು ಯಾವ ಬ್ರ್ಯಾಂಡ್‌ನ ಫೋನ್ ಬೆಸ್ಟ್ ಎಂಬ ಆಲೋಚನೆಯಲ್ಲಿದ್ದಾರೆ.
ಹೌದು, ಆಫರ್ ಮೇಲೆ ಆಫರ್ ನೀಡಿದರೆ ಜನರಿಗೆ ಸಂತಸ ಆಗುವುದಂತೂ ಪಕ್ಕಾ. ಅದರಲ್ಲೂ ಟೆಕ್ ದೈತ್ಯ ಎನಿಸಿಕೊಂಡಿರುವ ಸ್ಯಾಮ್‌ಸಂಗ್,ಆಪಲ್, ಶಿಯೋಮಿ, ಒನ್‌ಪ್ಲಸ್(Samsung, Apple, Xiaomi, OnePlus ) ಕಂಪೆನಿಗಳ ಫೋನ್‌ಗಳು ಆಫರ್ ಬೆಲೆಗೆ ಲಭ್ಯವಾಗುತ್ತಿವೆ ಎಂದರೆ ಕೇಳಬೇಕೇ?. ಹಾಗಿದ್ರೆ ಭಾರತೀಯರು ಯಾವ ಬೆಲೆಯ ಫೋನ್‌ಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ ಹಾಗೂ ಯಾವ ಬ್ರ್ಯಾಂಡ್ ಜನರಿಗೆ ಇಷ್ಟ ಆಗಲಿವೆ ಎಂಬ ವರದಿಯ ವಿವರ ಇಲ್ಲಿದೆ ನೋಡಿ.

ಭಾರತದಲ್ಲಿ ಸರಿಸುಮಾರು 31 ಪ್ರತಿಶತ ಗ್ರಾಹಕರು ಇತ್ತೀಚಿನ ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದು, ಇದು ಸ್ಮಾರ್ಟ್‌ಫೋನ್ ಖರೀದಿಗೆ ಪ್ರಾಥಮಿಕ ಕಾರಣವೆಂದು ಉಲ್ಲೇಖಿಸಿದ್ದಾರೆ. 5G ಸಾಮರ್ಥ್ಯ, ಇತ್ತೀಚಿನ ಪ್ರೊಸೆಸರ್‌ಗಳು ಮತ್ತು ಸಾಕಷ್ಟು RAM ಪ್ರಮುಖ ಫೀಚರ್ಸ್ ಮೇಲೆ ಬಲವಾದ ಗಮನವನ್ನು ಹೊಂದಿರುವ ಸುಮಾರು 42 ಪ್ರತಿಶತ ಭಾರತೀಯರು ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಹೂಡಿಕೆ ಮಾಡಲು ಯೋಜಿಸಿದ್ದಾರೆ ಎಂದು ಇತ್ತೀಚಿನ ವರದಿಯಿಂದ ತಿಳಿದುಬಂದಿದೆ.
ಕೌಂಟರ್ಪಾಯಿಂಟ್ ರಿಸರ್ಚ್ ಪ್ರಕಾರ, ಶಾಪಿಂಗ್ ಚಾನೆಲ್‌ಗಳಿಗೆ ಬಂದಾಗ, 86 ಪ್ರತಿಶತದಷ್ಟು ಜನರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಪರಿಗಣಿಸುತ್ತಿದ್ದಾರೆ. ಅದರಲ್ಲೂ ಅಮೆಜಾನ್ ಗೆ (amazon india) ಹೆಚ್ಚು ಒಲವು ತೋರುತ್ತಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ. ಈ ನಡುವೆ ಸ್ಯಾಮ್‌ಸಂಗ್,ಆಪಲ್, ಶಿಯೋಮಿ, ಒನ್‌ಪ್ಲಸ್ ಈ ಹಬ್ಬದ ಋತುವಿನಲ್ಲಿ ಆದ್ಯತೆಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಾಗಿ ಹೊರಹೊಮ್ಮಿವೆ.
ಗ್ರಾಹಕರು ಸ್ಮಾರ್ಟ್‌ಫೋನ್ ಗುಣಮಟ್ಟ ಮತ್ತು ಫೀಚರ್ಸ್‌ಗಳ ಬಗ್ಗೆ ಹೆಚ್ಚು ವಿವೇಚನೆ ಮಾಡುತ್ತಿದ್ದು, ಖರೀದಿ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಹಲವು ಮೂಲಗಳನ್ನು ಸಂಪರ್ಕಿಸಲು ಮುಂದಾಗಿದ್ದಾರಂತೆ. ಅದರಲ್ಲೂ ಭಾರತೀಯರು ಟ್ರೆಂಡ್ ಆಗಿರುವ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳತ್ತ ವಾಲುತ್ತಿದ್ದಾರೆ ಎನ್ನುವ ಪ್ರಮುಖ ವಿಷಯ ಸಹ ಬಹಿರಂಗವಾಗಿದೆ. ಇದು ಗ್ರಾಹಕರ ಆದ್ಯತೆಗಳಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಹಿರಿಯ ವಿಶ್ಲೇಷಕ ಅರುಷಿ ಚಾವ್ಲಾ ಹೇಳಿದ್ದಾರೆ.
ಪ್ರತಿಕ್ರಿಯಿಸಿದ 33 ಪ್ರತಿಶತದಷ್ಟು ಜನರು ಸ್ಯಾಮ್‌ಸಂಗ್‌ಗೆ (Samsung) ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಈ ಮೂಲಕ ಅಗ್ರ ಆದ್ಯತೆಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ನಲ್ಲಿ ಮುಂಚೂಣಿಯಲ್ಲಿದೆ. ನಂತರ ಆಪಲ್ 18 %, ಶಿಯೋಮಿ 11 % ಮತ್ತು ಒನ್‌ಪ್ಲಸ್ 10 % ಇದೆ. ವರದಿಯ ಪ್ರಕಾರ ಅಮೆಜಾನ್‌ನಲ್ಲಿನ ಆಫರ್‌ಗಳ ಕಡೆ ಹೆಚ್ಚಿನ ಜನರು ವಾಲುತ್ತಿದ್ದಾರಂತೆ. ವೇಗದ ವಿತರಣೆ ಮತ್ತು ವಿಶ್ವಾಸಾರ್ಹತೆಯನ್ನು ಈ ಮೂಲಕ ಅಮೆಜಾನ್ ಕಾಯ್ದುಕೊಂಡಿದೆ.

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ವಿಭಾಗಗಳಲ್ಲಿ (10,000ರೂ. ಮತ್ತು ಅದಕ್ಕಿಂತ ಕಡಿಮೆ) 5G ತಂತ್ರಜ್ಞಾನದ ಉಪಸ್ಥಿತಿಯು ಮುಂಬರುವ ವರ್ಷಗಳಲ್ಲಿ ಸ್ಮಾರ್ಟ್‌ಫೋನ್ ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ. ಈ ಸಂಬಂಧ ಪ್ರತಿಕ್ರಿಯೆ ನೀಡಿದವರಲ್ಲಿ 20 % ಜನರು ಆಫ್‌ಲೈನ್‌ನಿಂದ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ಬದಲಾವಣೆಯನ್ನು ಪರಿಗಣಿಸುತ್ತಿದ್ದಾರೆ. ಇದಲ್ಲದೆ, 22 % ಪ್ರತಿಕ್ರಿಯಿಸಿದ ಜನರಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸುವಾಗ ತಮ್ಮ ಆದ್ಯತೆಯ ಕೊಡುಗೆಯಾಗಿ ಕ್ಯಾಶ್‌ಬ್ಯಾಕ್ ಮತ್ತು ಬಹುಮಾನಗಳಿಗೆ ಆದ್ಯತೆ ನೀಡುತ್ತಾರಂತೆ. ಜೊತೆಗೆ ಬ್ಯಾಂಕ್ ಕೊಡುಗೆಗಳಿಗೆ 21 % ಮತ್ತು ನೋ-ಕಾಸ್ಟ್ ಇಎಂಐಗಳಿಗೆ 16 % ಜನರು ಮೆಚ್ಚಿಗೆ ಸೂಚಿಸಿದ್ದಾರೆ.


Click it and Unblock the Notifications








