Home
ಸುದ್ದಿಜಾಲ

ಕೀಬೋರ್ಡ್‌ಗಳು ಹೆಚ್ಚಾಗಿ ಕಪ್ಪು ಬಣ್ಣದಲ್ಲಿಯೇ ಯಾಕಿರುತ್ತವೆ ಗೊತ್ತಾ?; ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ!

ನಾವು ನಿತ್ಯ ಸಾಮಾನ್ಯವಾಗಿ ಸ್ಮಾರ್ಟ್‌ಡಿವೈಸ್‌ಗಳನ್ನು ಬಳಕೆ ಮಾಡೇ ಮಾಡುತ್ತೇವೆ. ಅದರಲ್ಲಿ ಮೊಬೈಲ್ ಆಗಿರಬಹುದು, ಲ್ಯಾಪ್‌ಟಾಪ್‌ ಆಗಿರಬಹುದು ಅಥವಾ ಸ್ಮಾರ್ಟ್‌ಟಿವಿ ಆಗಿರಬಹುದು. ಅದರಲ್ಲೂ ಲ್ಯಾಪ್‌ಟಾಪ್‌ ಬಳಕೆ ಇದೀಗ ಹೆಚ್ಚಾಗುತ್ತಿದೆ. ಈ ನಡುವೆ ಲ್ಯಾಪ್‌ಟಾಪ್‌ ಕೀಬೋರ್ಡ್‌ ಅಥವಾ ಲ್ಯಾಪ್‌ಟಾಪ್‌‌ ಬಣ್ಣ ಬಹುಪಾಲು ಕಪ್ಪು ಬಣ್ಣವನ್ನೇ ಯಾಕೆ ಹೊಂದಿರುತ್ತದೆ ಎಂದು ನಿಮಗೆ ತಿಳಿದಿದೆಯಾ?.

ಹೌದು, ಎಲ್ಲಾ ಲ್ಯಾಪ್‌ಟಾಪ್‌ಗಳು ಕಪ್ಪು ಬಣ್ಣವನ್ನೇ ಹೊಂದಿರುತ್ತವೆ ಎಂದು ಹೇಳುವುದು ಕಷ್ಟ. ಯಾಕೆಂದರೆ ಇತ್ತೀಚೆಗೆ ವಿವಿಧ ಬಣ್ಣಗಳನ್ನೂ ಹೊಂದಿರುವ ಲ್ಯಾಪ್‌ಟಾಪ್‌ ಹಾಗೂ ಕೀಬೋರ್ಡ್‌ಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅದಾಗ್ಯೂ ಕಪ್ಪು ಬಣ್ಣ ಮಾತ್ರ ಜನಪ್ರಿಯ ಆಯ್ಕೆಯಾಗಿದೆ ಎಂಬುದನ್ನು ನೀವು ನಂಬಲೇ ಬೇಕು. ಕೀಬೋರ್ಡ್‌ನ ಬಣ್ಣವನ್ನು ಪ್ರಾಥಮಿಕವಾಗಿ ಲ್ಯಾಪ್‌ಟಾಪ್‌ನ ಒಟ್ಟಾರೆ ವಿನ್ಯಾಸ ಮತ್ತು ತಯಾರಕರು ಮಾಡಿದ ಬ್ರ್ಯಾಂಡಿಂಗ್ ನಿರ್ಧಾರಗಳಿಂದ ನಿರ್ಧರಿಸಲಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಈ ಲೇಖನ ಓದಿರಿ.

ಕೀಬೋರ್ಡ್‌ಗಳು ಹೆಚ್ಚಾಗಿ ಕಪ್ಪು ಬಣ್ಣದಲ್ಲಿಯೇ ಯಾಕಿರುತ್ತವೆ ಗೊತ್ತಾ?...

ಸಾಮಾನ್ಯವಾಗಿ ಕಪ್ಪು ಮತ್ತು ಬಿಳಿ ಬಣ್ಣವನ್ನು ತಟಸ್ಥ ಬಣ್ಣಗಳೆಂದು ಪರಿಗಣಿಸಲಾಗುತ್ತದೆ. ಈ ಬಣ್ಣಗಳ ಸಂಯೋಜನೆ ಯಾವುದೇ ಲ್ಯಾಪ್‌ಟಾಪ್ ವಿನ್ಯಾಸಗಳಿಗೆ ಪೂರಕವಾಗಿ ಹೊಂದಿಕೆಯಾಗುತ್ತದೆ. ಜೊತೆಗೆ ಇದು ಗ್ರಾಹಕರಿಗೂ ಸಹ ಇಷ್ಟವಾಗುತ್ತದೆ. ಈ ಕಾರಣಕ್ಕಾಗಿಯೇ ಈ ಬಣ್ಣಗಳನ್ನು ಟೈಮ್ಲೆಸ್ ಮತ್ತು ಬಹುಮುಖ ಎಂದು ಪರಿಗಣಿಸಲಾಗುತ್ತದೆ.ಆದಾಗ್ಯೂ, ಲ್ಯಾಪ್‌ಟಾಪ್ ವಿನ್ಯಾಸಗಳು ಮತ್ತು ಗ್ರಾಹಕರ ಆದ್ಯತೆಗಳು ವಿಕಸನಗೊಳ್ಳುತ್ತಿದ್ದಂತೆ, ಹೆಚ್ಚಿನ ಬಣ್ಣ ಆಯ್ಕೆಗಳ ಕೀಬೋರ್ಡ್‌ ಸಹ ಲಭ್ಯವಾಗುತ್ತಿವೆ. ಹಾಗಿದ್ರೆ, ಈ ಕಪ್ಪು ಹಾಗೂ ಬಿಳಿ ಕೀಬೋರ್ಡ್‌ನ ಮಹತ್ವ ತಿಳಿಯೋಣ ಬನ್ನಿ.

ಕಾಂಟ್ರಾಸ್ಟ್ ಮತ್ತು ಗೋಚರತೆ: ಸಾಮಾನ್ಯವಾಗಿ ಕಪ್ಪು ಕೀಲಿಗಳು ಅವುಗಳ ಮೇಲೆ ಮುದ್ರಿಸಲಾದ ಬಿಳಿ ಅಥವಾ ತಿಳಿ ಬಣ್ಣದ ಅಕ್ಷರಗಳು ಮತ್ತು ಚಿಹ್ನೆಗಳ ವಿರುದ್ಧ ಹೆಚ್ಚಿನ ವ್ಯತಿರಿಕ್ತತೆಯನ್ನು ನೀಡುತ್ತವೆ. ಅಂದರೆ ನೀವು ತುಂಬಾ ಸುಲಭವಾಗಿ ಅವುಗಳನ್ನು ಪತ್ತೆ ಮಾಡಬಹುದು. ಜೊತೆಗೆ ಓದಲು ಸುಲಭವಾಗುತ್ತದೆ. ಈ ವ್ಯತಿರಿಕ್ತತೆಯು ಎಂತಹ ಬೆಳಕಿನ ಸಂದರ್ಭದಲ್ಲೂ ಸಹ ಅಕ್ಷರಗಳು ಗೋಚರವಾಗುವಂತೆ ಮಾಡುತ್ತದೆ.

ಕೀಬೋರ್ಡ್‌ಗಳು ಹೆಚ್ಚಾಗಿ ಕಪ್ಪು ಬಣ್ಣದಲ್ಲಿಯೇ ಯಾಕಿರುತ್ತವೆ ಗೊತ್ತಾ?...

ಕೊಳಕು ಮತ್ತು ಸ್ಮಡ್ಜ್ ಕಾಣಿಸುವುದಿಲ್ಲ: ಕಪ್ಪು ಬಣ್ಣದಂತಹ ಗಾಢ ಬಣ್ಣದ ಕೀಗಳಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ಗೋಚರಿಸುವಂತೆ ಕೊಳಕನ್ನು ತೋರಿಸುವುದಿಲ್ಲ.ಸಾಮಾನ್ಯವಾಗಿ ನೀವೇ ಗಮನಿಸಿ ಬಿಳಿ ಬಣ್ಣದ ಕೀಬೋರ್ಡ್‌ ಕಾಲಾನಂತರದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತದೆ. ಇದು ಬಳಕೆ ಮಾಡುವಾಗ ಇರುಸು ಮುರುಸಿನ ಅನುಭವ ನೀಡುತ್ತದೆ. ಆದರೆ, ಈ ಕಪ್ಪು ಬಣ್ಣದಲ್ಲಿ ಇರುವ ಕೀಬೋರ್ಡ್‌ನಲ್ಲಿ ಎಂತಹುದೇ ಕಲೆ ಇದ್ದರೂ ಕಾಣಿಸಿಕೊಳ್ಳುವುದಿಲ್ಲ, ಜೊತೆಗೆ ಕಾಲಾನಂತರದಲ್ಲಿ ಅದು ತಂತಾನೆ ಮಾಯವಾಗುತ್ತದೆ.

ಸಂಪ್ರದಾಯ: ಲ್ಯಾಪ್‌ಟಾಪ್‌ನಲ್ಲಿ ಪ್ರಮುಖವಾಗಿ ಈ ಕಪ್ಪು ಬಣ್ಣದ ಕೀಬೋರ್ಡ್‌ ಯಾಕಿದೆ ಎಂದರೆ ಇದೂ ಸಹ ಒಂದು ಸಂಪ್ರದಾಯ. ಯಾಂತ್ರಿಕ ಟೈಪ್‌ರೈಟರ್‌ಗಳನ್ನು ಒಳಗೊಂಡಂತೆ ಕಂಪ್ಯೂಟರ್ ಕೀಬೋರ್ಡ್‌ಗಳು ಹೆಚ್ಚಾಗಿ ಕಪ್ಪು ಕೀಲಿಗಳನ್ನೇ ಹೊಂದಿದ್ದವು. ಇದೇ ಅಭ್ಯಾಸ ಈಗಿನ ಆಧುನಿಕ ಕೀಬೋರ್ಡ್‌ಗಳಿಗೂ ಅನ್ವಯಿಸಿದೆ. ಈ ಮೂಲಕ ಅನಾದಿಕಾಲದಿಂದಲೂ ಈ ಬಣ್ಣಕ್ಕೆ ಮಹತ್ವದ ಸ್ಥಾನ ನೀಡುತ್ತಾ ಬರಲಾಗುತ್ತಿದೆ.

ಸೌಂದರ್ಯಶಾಸ್ತ್ರ(Aesthetics) ಹಾಗೂ ವಿನ್ಯಾಸ: ಯಾವುದೇ ಸ್ಮಾರ್ಟ್‌ಡಿವೈಸ್‌ಗಳನ್ನು ತಯಾರಿಸುವಾಗ ಅದರಲ್ಲಿ ನೀಡಲಾಗುವ ಫೀಚರ್ಸ್‌ಗಳೊಂದಿಗೆ ಅದರ ವಿನ್ಯಾಶಕ್ಕೂ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಈ ಕಾರಣಕ್ಕಾಗಿಯೇ ಕಪ್ಪು ಶ್ರೇಷ್ಠ ಮತ್ತು ತಟಸ್ಥ ಬಣ್ಣವಾಗಿದ್ದು, ಅದು ಹೆಚ್ಚಿನ ಲ್ಯಾಪ್‌ಟಾಪ್ ಅಥವಾ ಡೆಸ್ಕ್‌ಟಾಪ್ ಕಂಪ್ಯೂಟರ್ ವಿನ್ಯಾಸಗಳೊಂದಿಗೆ ಚೆನ್ನಾಗಿ ಮಿಶ್ರಣಗೊಳ್ಳುತ್ತದೆ. ಜೊತೆಗೆ ವಿಭಿನ್ನ ಶೈಲಿಗಳು ಮತ್ತು ಬಣ್ಣದ ಸಂಯೋಜನೆಗಳೊಂದಿಗೆ ಇದು ತನ್ನದೇ ಆದ ಪ್ರಾಮುಖ್ಯತೆ ವಹಿಸುತ್ತದೆ.

ಕೀಬೋರ್ಡ್‌ಗಳು ಹೆಚ್ಚಾಗಿ ಕಪ್ಪು ಬಣ್ಣದಲ್ಲಿಯೇ ಯಾಕಿರುತ್ತವೆ ಗೊತ್ತಾ?...

ಆದಾಗ್ಯೂ ಮಾರುಕಟ್ಟೆಯಲ್ಲಿ ಬಿಳಿ, ಬೆಳ್ಳಿ, ಚಿನ್ನ ಮತ್ತು ಕೆಂಪು, ನೀಲಿ ಮತ್ತು ಹಸಿರು ಮುಂತಾದ ರೋಮಾಂಚಕ ಬಣ್ಣಗಳನ್ನು ಒಳಗೊಂಡಂತೆ ವಿವಿಧ ಬಣ್ಣಗಳಲ್ಲಿ ಇರುವ ಕೀಬೋರ್ಡ್‌ ಆಯ್ಕೆಯ ಲ್ಯಾಪ್‌ಟಾಪ್‌ ಲಭ್ಯವಿದೆ ಎಂಬುದನ್ನೂ ಗಮನಿಸುವುದು ಮುಖ್ಯ. ಈ ಬಣ್ಣದ ಆಯ್ಕೆಗಳು ಗ್ರಾಹಕರ ಬೇಡಿಕೆಯನ್ನು ಅವಲಂಬಿಸಿರುತ್ತದೆ. ಅದರಲ್ಲೂ ಇಂದು ಬ್ಯಾಕ್‌ಲಿಟ್ ಕೀಬೋರ್ಡ್‌ಗಳಿಗೆ ಹೆಚ್ಚಿನ ಬೇಡಿಕೆ ಸಹ ಇದೆ.

Best Mobiles in India

English summary
It is difficult to say that all laptops are black in color. Because latest laptops and keyboards of different colors are available in the market. Meanwhile, learn why most laptops have black keyboards.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+