ಸೊಳ್ಳೆ ಕೊಲ್ಲುವ ಡಿವೈಸ್‌ಗಳಲ್ಲಿ ಯಾಕೆ ನೀಲಿ ಬಣ್ಣದ ಲೈಟ್‌ಗಳೇ ಇರುತ್ತವೆ? ನಿಮಗೆ ಈ ವಿಷಯ ಗೊತ್ತಾ!?
ಸೊಳ್ಳೆ ಅಥವಾ ಇತರೆ ಕೀಟಗಳ (Mosquitoes, insects) ಆರ್ಭಟಕ್ಕೆ ಇಂತಹುದೇ ಕಾಲ ಬೇಕು ಅಂತೇನು ಇಲ್ಲ. ಅದರೂ ಮಳೆಗಾಲದ ಸಂದರ್ಭದಲ್ಲಿ ಸೊಳ್ಳೆಗಳ ಆರ್ಭಟ ಮನೆಗಳಲ್ಲಿ ಜೋರಾಗಿಯೇ ಇರುತ್ತದೆ. ಸೊಳ್ಳೆಗಳ ಈ ಆರ್ಭಟವನ್ನು ನಾಶ ಮಾಡಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸೊಳ್ಳೆ ಕೊಲ್ಲುವ ಸ್ಮಾರ್ಟ್ ಡಿವೈಸ್ ಇವೆ. ಆದರೆ, ಈ ಎಲ್ಲಾ ಡಿವೈಸ್‌ಗಳಲ್ಲಿ ನೀಲಿ ಬಣ್ಣದ ಲೈಟ್ ಯಾಕೆ ಇರುತ್ತದೆ ಎಂದು ಗಮನಿಸಿದ್ದೀರಾ.?
ಹೌದು, ಸೊಳ್ಳೆಗಳನ್ನು ಕೊಲ್ಲಲು ಕಾಯಿಲ್ ಮತ್ತು ಲಿಕ್ವಿಡ್ ಡಿವೈಸ್‌ಗಳು ಅಪಾರವಾಗಿ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅದರಲ್ಲೂ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಈ ಡಿವೈಸ್‌ಗಳಿಗೆ ಆಫರ್ ಸಹ ಇದೆ. ಈ ನಡುವೆ ಜನರು ಆರೋಗ್ಯವನ್ನು ಹಾಳು ಮಾಡುವ ಸೊಳ್ಳೆ ಕಿಲ್ಲರ್ ಡಿವೈಸ್‌ಗಳು ಯಾಕೆ ನೀಲಿ ಲೈಟ್ ಅನ್ನು ಹೊಂದಿರಲಿವೆ?, ಈ ಡಿವೈಸ್‌ಗಳು ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಇಂಟ್ರೆಸಿಂಗ್ ಮಾಹಿತಿ ಇಲ್ಲಿದೆ ನೋಡಿ.

ಸೊಳ್ಳೆ ಕಿಲ್ಲರ್ ಡಿವೈಸ್‌ನಲ್ಲಿ ನೀಲಿ ಲೈಟ್ ಯಾಕೆ?: ಸದ್ಯಕ್ಕೆ ಅಲ್ಲಲ್ಲಿ ಮಳೆಯಾಗುತ್ತಿದ್ದು, ಸೊಳ್ಳೆ ಸಂತತಿ ಹೆಚ್ಚಾಗಲು ಇಷ್ಟು ಸಾಕು. ಇನ್ನು ಸೊಳ್ಳೆ ಕಿಲ್ಲರ್ ಡಿವೈಸ್‌ಗಳಲ್ಲಿ ನೀಲಿ ಲೈಟ್ ಅನ್ನು ನೀಡಲು ಕಾರಣ ಏನೆಂದರೆ ಕೀಟಗಳು ಮತ್ತು ಸೊಳ್ಳೆಗಳು ಬಣ್ಣದ ಬೆಳಕಿನ ಕಡೆಗೆ ಬೇಗನೆ ಆಕರ್ಷಿತವಾಗುತ್ತವೆ. ಇದೇ ಪ್ರಮುಖ ಕಾರಣವನ್ನು ಇಟ್ಟುಕೊಂಡು ಈ ಲೈಟ್ ಆಯ್ಕೆ ನೀಡಲಾಗುತ್ತದೆ.
ಅಷ್ಟೇ ಅಲ್ಲದೆ ರಾತ್ರಿ ವೇಳೆ ಈ ಡಿವೈಸ್‌ಗಳನ್ನು ಬಳಕೆ ಮಾಡುವುದರಿಂದಾಗಿ ನಿದ್ರೆಗೆ ಯಾವುದೇ ಭಂಗ ಉಂಟಾಗಬಾರದು ಎಂದು ಈ ಬಣ್ಣವನ್ನು ಆಯ್ಕೆ ಮಾಡಲಾಗುತ್ತದೆ. ಯಾಕೆಂದರೆ ಇದು ಕಡಿಮೆ ಬೆಳಕನ್ನು ಹೊರಸೂಸುತ್ತದೆ. ಈ ಮೂಲಕ ಒಂದು ಕಡೆ ಸೊಳ್ಳೆ ನಾಶ ಆಗುತ್ತದೆ, ಇನ್ನೊಂದು ಕಡೆ ಉತ್ತಮ ನಿದ್ದೆ ಬರುತ್ತದೆ. ಇದರಿಂದಾಗಿ ಈ ಡಿವೈಸ್‌ಗಳಲ್ಲಿ ನೀಲಿ ಲ್ಯಾಂಪ್ ಅನ್ನು ಜೋಡಿಸಲಾಗಿರುತ್ತದೆ.
ಈ ಡಿವೈಸ್‌ಗಳು ಹೇಗೆ ಕೆಲಸ ಮಾಡುತ್ತವೆ?: ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸೊಳ್ಳೆಗಳನ್ನು ಕಂಟ್ರೋಲ್ ಮಾಡುವ ಪೋರ್ಟಬಲ್ ಡಿವೈಸ್‌ಗಳು ಲಭ್ಯ ಇವೆ. ಈಗಾಗಲೇ ಸಾಕಷ್ಟು ಜನರು ಇವುಗಳನ್ನು ಬಳಕೆ ಮಾಡುತ್ತಾರೆ. ಈ ಸೊಳ್ಳೆಗಳನ್ನು ಕೊಲ್ಲುವ ಯಂತ್ರದಲ್ಲಿ ಒಂದು ಅಥವಾ ಎರಡು ನೀಲಿ ಬಣ್ಣದ ಟ್ಯೂಬ್ ಲೈಟ್‌ಗಳನ್ನು ಇರಿಸಲಾಗುತ್ತೆ. ವಿದ್ಯುತ್ ಪೂರೈಕೆಯಿಂದಾಗಿ ಟ್ಯೂಬ್ ಲೈಟ್‌ಗಳು ಬಿಸಿಯಾಗಲಿದ್ದು ಸೊಳ್ಳೆಗಳು ನೀಲಿ ದೀಪದ ಕಡೆಗೆ ಆಕರ್ಷಿತವಾಗಿ ಅಲ್ಲಿ ಬಂದಾಗ ಸುಟ್ಟುಹೋಗುತ್ತವೆ.
ಬೆಸ್ಟ್ ಸೊಳ್ಳೆ ಕಿಲ್ಲರ್ ಡಿವೈಸ್‌ಗಳಿವು: ಸಿಟ್ರೋಡಾ ಎಲೆಕ್ಟ್ರಿಕ್ ಫ್ಲೈ ಇನ್ಸೆಕ್ಟ್ ಕಿಲ್ಲರ್ ಮೆಷಿನ್ ಅನ್ನು ನೀವು 1,603 ರೂ.ಗಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದು. ಈ ಡಿವೈಸ್ ಸಾಮಾನ್ಯ ದರ 5,699ರೂ.ಗಳಾಗಿದೆ. ಇದನ್ನು ಮನೆ, ಕಿಡ್ಸ್ ಬೆಡ್‌ರೂಮ್ ಹೋಟೆಲ್, ಕಛೇರಿ ಸೇರಿದಂತೆ ಹೊರಾಂಗಣ ಹಾಗೂ ಒಳಾಂಗಣದಲ್ಲಿ ಬಳಕೆ ಮಾಡಬಹುದಾಗಿದೆ.
ಕಿಚನೀರ್ ಮಸ್ಕಿಟೋಸ್ ಟ್ರ್ಯಾಪ್ ಲ್ಯಾಂಪ್ ಅನ್ನು ಇದೇ ಪ್ಲಾಟ್‌ಫಾರ್ಮ್‌ನಲ್ಲಿ ಕೇವಲ 265ರೂ.ಗಳಿಗೆ ಕೊಂಡುಕೊಳ್ಳಬಹುದು. ಇದರ ಸಾಮಾನ್ಯ ದರ 1,930ರೂ.ಗಳಾಗಿದೆ. ಇದು ಎಲೆಕ್ಟ್ರಾನಿಕ್ ಪರಿಸರ ಸ್ನೇಹಿ ಡಿವೈಸ್ ಆಗಿದ್ದು, ಒಳಾಂಗಣ ಹಾಗೂ ಹೊರಾಂಗಣ ದಲ್ಲಿ ಬಳಕೆ ಮಾಡಬಹುದಾಗಿದೆ. ಯುಎಸ್‌ಬಿ ಕೇಬಲ್ ಮೂಲಕವೇ ಇದು ರನ್ ಆಗಲಿದೆ. ಅಂದರೆ ನೀವು ಲ್ಯಾಪ್‌ಟಾಪ್ ಬಳಕೆ ಮಾಡುತ್ತಿದ್ರೆ ಸುಲಭವಾಗಿ ಸಂಪರ್ಕಿಸಿಕೊಳ್ಳಬಹುದು.
ಗಿಲ್ಟನ್ ಎಲೆಕ್ಟ್ರಾನಿಕ್ ಎಲ್ಇಡಿ ಮಸ್ಕಿಟೋಸ್ ಕಿಲ್ಲರ್ ಮೆಷಿನ್ : ಈ ಡಿವೈಸ್ ಅನ್ನು ನೀವು 327ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರ ಸಾಮಾನ್ಯ ದರ 899 ರೂ.ಗಳಾಗಿದೆ. ಇನ್ನು ಇದನ್ನು ಮನೆಯಲ್ಲಿ ಬಳಕೆ ಮಾಡಬಹುದಾಗಿದ್ದು, ಅಪ್ಪಿ ತಪ್ಪಿ ಮಕ್ಕಳು ಸಾಥವಾ ಸಾಕು ಪ್ರಾಣಿಗಳು ಮುಟ್ಟಿದರೂ ಯಾವುದೇ ಸಮಸ್ಯೆ ಆಗುವುದಿಲ್ಲ. ಜೊತೆಗೆ ಅಪಾಯಕಾರಿ ರಾಸಾಯನಿಕಗಳ ಬಳಕೆಯಿಲ್ಲದೆ ಕೆಲಸ ಮಾಡುವ ಈ ಡಿವೈಸ್ ಹಾನಿಕಾರಕ ಹೊಗೆಯನ್ನು ಹೊರಸೂಸುವುದಿಲ್ಲ.

ಈ ಡಿವೈಸ್ ಅನ್ನು ಸಹ ನೀವು ಪವರ್ ಬ್ಯಾಂಕ್‌ನೊಂದಿಗೆ ಬಳಕೆ ಮಾಡಬುದಾಗಿದ್ದು, ಯುಎಸ್‌ಬಿ ಕೇಬಲ್ ಆಯ್ಕೆ ನೀಡಲಾಗಿದೆ. ಇದನ್ನು ಮನೆ, ಕಚೇರಿ, ಜಿಮ್, ಟ್ರಿಪ್ ಇತ್ಯಾದಿಗಳಲ್ಲಿ ಎಲ್ಲಿ ಬೇಕಾದರೂ ಬಳಕೆ ಮಾಡಬಹುದು. ಅದರಲ್ಲೂ ಈ ಡಿವೈಸ್‌ನಿಂದ ಯಾವುದೇ ಸುಟ್ಟ ವಾಸನೆ ಬರುವುದಿಲ್ಲ. ಜೊತೆಗೆ ಸತ್ತ ಸೊಳ್ಳೆಗಳನ್ನು ಸುಲಭವಾಗಿ ಕ್ಲೀನ್ ಮಾಡುವ ಆಯ್ಕೆ ನೀಡುತ್ತದೆ.


Click it and Unblock the Notifications








