ಹೈ ಟೆನ್ಶನ್ ವಿದ್ಯುತ್ ಲೈನ್‌ನಿಂದ ಸೌಂಡ್ ಯಾಕೆ ಬರುತ್ತದೆ? ಇದು ಹೇಗೆ ಉತ್ಪತ್ತಿ ಆಗುತ್ತದೆ?
ಮಳೆಗಾಲ ಹಾಗೂ ವಿದ್ಯುತ್ ಇವೆರಡೂ ಆ ಜನ್ಮ ವೈರಿಗಳು ಎಂದೇ ಹೇಳಬಹುದು. ಮಳೆಗಾಲ ಆರಂಭ ಆದ್ರೆ ಸಾಕು ವಿವಿಧ ರೀತಿಯ ವಿದ್ಯುತ್ ಸಮಸ್ಯೆಗಳು ಜನರನ್ನು ಇನ್ನಿಲ್ಲದಂತೆ ಕಾಡುತ್ತವೆ. ಅಷ್ಟು ಮಾತ್ರವಲ್ಲದೆ ಈ ವೇಳೆ ಕೆಲವು ಜನರು ತಾವು ಮಾಡದ ತಪ್ಪಿಗೆ ಪ್ರಾಣ ಸಹ ಕಳೆದುಕೊಳ್ಳುವುದೂ ಉಂಟು.
ಹೌದು, ವಿದ್ಯುತ್‌ನೊಂದಿಗೆ ಎಚ್ಚರಿಕೆಯಿಂದ ಇರಬೇಕು. ಇಲ್ಲವಾದರೆ ಕ್ಷಣಮಾತ್ರದಲ್ಲಿ ಪ್ರಾಣ ಹಾರಿಹೋಗುತ್ತದೆ. ಈ ನಡುವೆ ನಗರದ ಹೊರಹೊಲಯಗಳು ಅಥವಾ ಹಳ್ಳಿಗಳ ಸಮೀಪ ಹೈ ಟೆನ್ಶನ್ ಲೈನ್ ನೋಡಿರಬಹುದು. ಇವು ದೂರದೂರು ಹಾಗೂ ನಗರಗಳಿಗೆ ವಿದ್ಯುತ್ ಸಂಪರ್ಕಿಸುವ ಕೆಲಸ ಮಾಡುತ್ತವೆ. ಆದರೆ, ಈ ಮಳೆಗಾಲದ ಸಂದರ್ಭದಲ್ಲಿ ಈ ತಂತಿಗಳಿಂದ ವಿಚಿತ್ರವಾದ ಶಬ್ದ ಬರುವುದನ್ನು ಸಹ ನೀವು ಗಮನಿಸಿರಬಹುದು?, ಹಾಗಿದ್ರೆ ಈ ಸೌಂಡ್ ಯಾಕೆ ಬರುತ್ತದೆ? ಇದರಿಂದ ಸಮಸ್ಯೆಗಳೇನು ಎಂಬುದನ್ನು ತಿಳಿಯೋಣ ಬನ್ನಿ.

ವಿದ್ಯುತ್ ಇಲ್ಲದ ಪ್ರಪಂಚವನ್ನು ಒಮ್ಮೆಯೂ ಸಹ ಊಹಿಸಿಕೊಳ್ಳಲೂ ಸಹ ಸಾಧ್ಯವಿಲ್ಲ.ದಿನದ 24 ಗಂಟೆಗಳೂ ಸಹ ಜನರು ವಿದ್ಯುತ್ ಅನ್ನೇ ಅವಲಂಬನೆ ಮಾಡಿಕೊಂಡು ಬದುಕುವ ಪರಿಸ್ಥಿತಿ ನಿರ್ಮಾಣ ಆಗಿದೆ.ಈ ನಡುವೆ ನಿಮ್ಮ ಸುತ್ತ ಮುತ್ತ ಅಥವಾ ರಸ್ತೆಯಲ್ಲಿ ಹೈ ಟೆನ್ಶನ್ ಲೈನ್ ಅನ್ನು ನೀವು ನೋಡಿರಬೇಕು.ಈ ಹೈ ಟೆನ್ಶನ್ ಲೈನ್‌ನಿಂದ ಬರುವ ಶಬ್ದವು ನಿಮಗೆ ನಿಜವಾಗಿಯೂ ಹಾನಿಕಾರಕವೇ ಹಾಗೂ ಹೈ ಟೆನ್ಶನ್ ಲೈನ್‌ನಿಂದ ಎಷ್ಟು ಅಂತರವನ್ನು ಕಾಯ್ದುಕೊಳ್ಳಬೇಕು ಎಂಬುದು ಕೆಲವು ಮಂದಿಗಷ್ಟೇ ತಿಳಿದಿದೆ.
ಮಳೆಗಾಲದಲ್ಲಿಯೇ ಹೈ ಟೆನ್ಶನ್ ಲೈನ್‌ನಲ್ಲಿ ಹೆಚ್ಚು ಶಬ್ದ:ಈಗಾಗಲೇ ಹಲವಾರು ಕಡೆ ಮಳೆ ಜೋರಾಗಿದ್ದು, ಕೆಲವು ಕಡೆ ವಿದ್ಯುತ್ ಸ್ಥಗಿತಗೊಳಿಸಲಾಗಿದೆ. ಅದರಲ್ಲೂ ಈ ಮಳೆಗಾಲದಲ್ಲಿಯೇ ವಿದ್ಯುತ್ ಲೈನ್‌ಗಳು ಹೆಚ್ಚು ಶಬ್ದ ಮಾಡುತ್ತವೆ.ಇದಕ್ಕೆ ಪ್ರಮುಖ ಕಾರಣವೆಂದರೆ ಹೈ ಟೆನ್ಶನ್ ಲೈನ್‌ನ ಸುತ್ತಲೂ ಇರುವ ಪರ್ಯಾಯ ಹರಿವು, ಈ ಪರ್ಯಾಯ ಹರಿವು ಹೆಚ್ಚಿನ ಒತ್ತಡದ ರೇಖೆಯಲ್ಲಿ ಹೆಚ್ಚಿನ ವೋಲ್ಟೇಜ್ ಹರಿವಿನಿಂದ ಉತ್ಪತ್ತಿಯಾಗುತ್ತದೆ.ಅದರಂತೆ ಮಳೆಯಾದಾಗ ನೀರು-ತಂತಿಗಳ ನಡುವೆ ವಿದ್ಯುತ್ಕಾಂತೀಯ ಕ್ಷೇತ್ರ ಬೆಳೆದು ಈ ಶಬ್ದ ಬರುತ್ತದೆ.
ಮತ್ತೊಂದು ರೀತಿ ಹೇಳುವುದಾದರೆ ಹೆಚ್ಚಿನ ಒತ್ತಡದ ವಿದ್ಯುತ್ ತಂತಿಗಳಿಂದ ಬರುವ ಚಿಲಿಪಿಲಿ ಅಥವಾ ಝೇಂಕರಿಸುವ ಶಬ್ದಕ್ಕೆ ಕರೋನಾ ಡಿಸ್ಚಾರ್ಜ್ ಎಂದು ಹೇಲಾಗುತ್ತದೆ. ವಿದ್ಯುತ್ ಲೈನ್ ಮತ್ತು ಸುತ್ತಮುತ್ತಲಿನ ಗಾಳಿಯ ನಡುವೆ ಹೆಚ್ಚಿನ ವಿದ್ಯುತ್ ಸಂಭಾವ್ಯ ವ್ಯತ್ಯಾಸ ಆದಾಗ ಕರೋನಾ ಡಿಸ್ಚಾರ್ಜ್ ಪ್ರಕ್ರಿಯೆ ನಡೆಯುತ್ತದೆ. ಈ ವೋಲ್ಟೇಜ್ ಒಂದು ನಿರ್ದಿಷ್ಟ ಮಿತಿಯನ್ನು ಮೀರಿದಾಗ ವಿದ್ಯುತ್ ರೇಖೆಯ ಸುತ್ತಲಿನ ಗಾಳಿಯ ಅಣುಗಳನ್ನು ಅಯಾನೀಕರಿಸುತ್ತದೆ. ಈ ಪ್ರಕ್ರಿಯೆ ಹೆಚ್ಚಿನ ಗಾಳಿ ಇದ್ದಾಗ ಸಂಭವಿಸುತ್ತದೆ.
ಇನ್ನು ಗಾಳಿಯ ಅಣುಗಳು ಅಯಾನೀಕರಿಸಲ್ಪಟ್ಟಂತೆ ಅವು ವಿದ್ಯುತ್ ರೇಖೆಯ ಸುತ್ತಲೂ ವಾಹಕ ಪ್ಲಾಸ್ಮಾವನ್ನು ನಿರ್ಮಾಣ ಮಾಡುತ್ತವೆ. ಈ ನಡುವೆ ಏರಿಳಿತದ ವೋಲ್ಟೇಜ್‌ನಿಂದಾಗಿ ಈ ಪ್ಲಾಸ್ಮಾ ವಾಹಕ ಮತ್ತು ವಾಹಕವಲ್ಲದ ನಡುವೆ ವೇಗವಾಗಿ ಪರ್ಯಾಯವಾಗುತ್ತದೆ. ಈ ಕ್ಷಿಪ್ರ ಬದಲಾವಣೆಗಳು ಗಾಳಿಯಲ್ಲಿ ಕಂಪನಗಳನ್ನು ಮಾಡಲಿದ್ದು, ಇದು ಸಾಮಾನ್ಯವಾಗಿ ಹಕ್ಕಿಗಳ ಚಿಲಿಪಿಲಿ ಶಬ್ದ, ಕ್ರ್ಯಾಕ್ಲಿಂಗ್ ಅಥವಾ ಝೇಂಕರಿಸುವಂತಹ ಧ್ವನಿಯಾಗಿ ಕೇಳಿಸುತ್ತದೆ.

ಇದರಿಂದ ಸಮಸ್ಯೆ ಏನು?: ಹೈ ಟೆನ್ಶನ್ ಲೈನ್‌ನಿಂದ ಬರುವ ಈ ಶಬ್ದವು ತಂತಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ವಾಸ್ತವವಾಗಿ, ಕಂಪನದಿಂದಾಗಿ ಹೈ ವೋಲ್ಟೇಜ್ ತಂತಿಗಳು ದುರ್ಬಲವಾಗುತ್ತವೆ ಮತ್ತು ಅವುಗಳ ಕಾರ್ಯಕ್ಷಮತೆ ಕುಂಟಿತವಾಗುತ್ತಾ ಬರುತ್ತದೆ. ಈ ಕಾರಣಕ್ಕೆ ಈ ಸಮಸ್ಯೆಗಳನ್ನು ಕಡಿಮೆ ಮಾಡಲು ವಿದ್ಯುತ್ ಮಾರ್ಗದ ವಿನ್ಯಾಸ ಮತ್ತು ನಿರ್ವಹಣೆಯಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡುತ್ತಲೇ ಬರಲಾಗುತ್ತಿದೆ.
ಹೈ ಟೆನ್ಶನ್ ಲೈನ್ ಬಳಿ ಹೋಗಬಹುದೇ?: ಹೈ ಟೆನ್ಶನ್ ಲೈನ್ ತಂತಿಗಳು ಯಾವಾಗಲೂ ನೆಲದಿಂದ 100 ರಿಂದ 150 ಅಡಿ ಎತ್ತರದಲ್ಲೇ ಇರುತ್ತವೆ. ಇದಕ್ಕೆ ಕಾರಣ ಯಾರೇ ಆದರೂ ಸಹ ಈ ಶಾಕ್‌ನಿಂದ ಬದುಕುಳಿಯುವುದು ಕಷ್ಟ. ಮೊದಲೇ ಹೇಳಿದಂತೆ ಟಚ್ ಆದ ತಕ್ಷಣವೇ ಪ್ರಾಣ ಹಾರಿಹೋಗುತ್ತದೆ. ಯಾಕೆಂದರೆ ಈ ಲೈನ್‌ನಲ್ಲಿ ಕನಿಷ್ಠ 25000 ವೋಲ್ಟ್‌ಗಳ ಕರೆಂಟ್ ಹರಿಯುತ್ತದೆ. ಇದರಿಂದಾಗಿ ಸಾಧ್ಯವಾದಷ್ಟು ಇದರಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು.


Click it and Unblock the Notifications