ಏನಿದು I’m not a robot?, ಏನಾದ್ರು ಓಪನ್ ಮಾಡಲು ಮುಂದಾದ್ರೆ ಇದ್ಯಾಕೆ ಬರುತ್ತೆ? ತಿಳಿದ್ರೆ ಅಚ್ಚರಿ ಪಡ್ತೀರಾ!
ಇಂದಿನ ದಿನಗಳಲ್ಲಿ ಬಹುಪಾಲು ಜನರು ಸ್ಮಾರ್ಟ್‌ಫೋನ್ ಹಾಗೂ ಲ್ಯಾಪ್‌ಟಾಪ್, ಪಿಸಿಯನ್ನು ಬಳಕೆ ಮಾಡುತ್ತಾರೆ. ಈ ಮೂಲಕ ಅಗತ್ಯ ಮಾಹಿತಿಗಳನ್ನು ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಂದರ್ಭದಲ್ಲಿ ಕೆಲ ವೆಬ್‌ಸೈಟ್ ಓಪನ್ ಮಾಡಲು ಮುಂದಾದಾಗ I'm not a robot ಎಂಬುದನ್ನು ನೀವು ಗಮನಿಸಿರಬಹುದು.
ಹೌದು, ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಏನದರೂ ಕೆಲಸ ಮಾಡುವಾಗ I'm not a robot ಎಂಬ ಆಯ್ಕೆ ಬಂದಾಕ್ಷಣ ಹಿಂದು ಮುಂದು ನೋಡದೆ ಅಲ್ಲಿ ಕೇಳಲಾದ ಆಯ್ಕೆ ಮೇಲೆ ಟಿಕ್ ಮಾಡಿ ನಿಮಗೆ ಅಗತ್ಯ ಇರುವ ಮಾಹಿತಿಯನ್ನು ಪಡೆಯುತ್ತೀರಿ. ಆದರೆ ಒಮ್ಮೆಯಾದರೂ ಆಲೋಚನೆ ಮಾಡಿದ್ದೀರಾ ಯಾಕೆ ಈ ರೀತಿ ಬರುತ್ತದೆ?, ಇದರಿಂದ ಪ್ರಯೋಜನ ಏನು?, ಅಷ್ಟಕ್ಕೂ ರೋಬೋಟ್ ವಿಷಯ ಯಾಕೆ ಇಲ್ಲಿ ಕೇಳಲಾಗುತ್ತದೆ ಎಂದು?. ಹಾಗಿದ್ರೆ, ಬನ್ನಿ ಅಚ್ಚರಿ ವಿಷಯವನ್ನು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಐ ಆಮ್ ನಾಟ್ ಎ ರೋಬೋಟ್: ಇಂದಿನ ದಿನಗಳಲ್ಲಿ ಮೊದಲೇ ತಿಳಿಸಿದಂತೆ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಹಾಗೂ ಪಿಸಿ (Smartphone, Laptop, PC) ಇಲ್ಲದೆ ಯಾವ ಕೆಲಸವೂ ಆಗುವುದಿಲ್ಲ ಎಂಬಂತೆ ಆಗಿದೆ. ಯಾವುದೇ ಚಿಕ್ಕ ವಿಷಯಕ್ಕಾದರೂ ಸಹ ತಕ್ಷಣ ಗೂಗಲ್ ಮೂಲಕ ತಿಳಿದುಕೊಳ್ಳುತ್ತಿದ್ದಾರೆ. ಈ ಮೂಲಕ ಕಂಪ್ಯೂಟರ್ ನಮ್ಮ ನಿತ್ಯಜೀವನದಲ್ಲಿ ಒಂದು ಭಾಗವಾಗಿ ಹೋಗಿದ್ದು, ಹೊಸದಾಗಿ ಇವುಗಳನ್ನು ಬಳಕೆ ಮಾಡುವ ಬಹುಪಾಲು ಮಂದಿ ಐ ಆಮ್ ನಾಟ್ ಎ ರೋಬೋಟ್ ಎಂಬ ಆಯ್ಕೆ ನೋಡಿ ಗೊಂದಲಕ್ಕೆ ಒಳಗಾಗುವುದು ಸಾಮಾನ್ಯ.
ಕಂಪ್ಯೂಟರ್ ಬಳಸುವಾಗ ಆಗಾಗ್ಗೆ ಕಾಣಿಸಿಕೊಳ್ಳುವ ವಿಷಯ ಏನೆಂದರೆ ಐ ಆಮ್ ನಾಟ್ ಎ ರೋಬೋಟ್ (I'm not a robot). ಕೆಲವು ಬಾರಿ ಇದು ಕಾಣಿಸಿಕೊಂಡಾಗ ತಿಳಿದವರು ಇದು ಕೇಳಿದ ಪ್ರಶ್ನೆಗೆ ಉತ್ತರಿಸಿ ಅವರಿಗೆ ಬೇಕಾದ ಕಂಟೆಂಟ್ ಗೆ ಪ್ರವೇಶ ಪಡೆಯುತ್ತಾರೆ. ಆದರೆ, ಇನ್ನೂ ಕೆಲವರು ಸರಿಯಾಗಿ ಉತ್ತರಿಸಲಾಗದೆ ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಿಂದ ಬೇಕಾದ ಕಂಟೆಂಟ್ ಪಡೆಯಲು ವಿಫಲರಾಗುತ್ತಾರೆ.
ವಾಸ್ತವವಾಗಿ ಗೂಗಲ್‌ನಲ್ಲಿ ಬಹಳಷ್ಟು ವೆಬ್‌ಸೈಟ್‌ಗಳು ಇದ್ದು, ಇದರಲ್ಲಿ ಕೆಲವನ್ನು ತೆರೆಯಬೇಕೆಂದರೆ ನಾವು ಆ ವೆಬ್‌ಸೈಟ್‌ಗಳಿಗೆ ಐ ಆಮ್ ನಾಟ್ ಎ ರೋಬೋಟ್ ಎಂದು ತಿಳಿಸಬೇಕಾಗುತ್ತದೆ. ಈ ಮೂಲಕ ವೆಬ್‌ಸೈಟ್ ಸುಲಭವಾಗಿ ಓಪನ್ ಆಗುತ್ತದೆ. ಇನ್ನು ಈ ಆಯ್ಕೆ ನೋಡಿದಾಕ್ಷಣ ಅದರ ಕೆಳಗೆ ಕಾಣಿಸುವ ಬಾಕ್ಸ್ ಮೇಲೆ ಟಿಕ್ ಮಾಡುತ್ತಾರೆ. ಆಗ ಬಳಕೆದಾರರು ರೋಬೋ ಅಲ್ಲ ಎಂದು ಗೂಗಲ್ ಭಾವಿಸುತ್ತದೆ.
ಇನ್ನು ಇದು ಯಾಕೆ ಬಳಕೆ ಆಗುತ್ತಿದೆ ಎಂದು ತಿಳಿದರೆ ಹಾಗೂ ಇದರ ಹಿಂದೆ ಇರುವ ಸತ್ಯ ತಿಳಿದರೆ ಖಂಡಿತಾ ಆಶ್ಚರ್ಯ ಪಡುತ್ತೀರಾ. ಯಾಕೆಂದರೆ ಆ ಬಾಕ್ಸ್ ಮೇಲೆ ಕ್ಲಿಕ್ ಮಾಡಿದ ತರುವಾಯ ನಿಮ್ಮ ವೆಬ್‌ಸೈಟ್ ಬ್ರೌಸಿಂಗ್ ಇತಿಹಾಸವನ್ನು ಗೂಗಲ್ ಪಡೆದುಕೊಳ್ಳುತ್ತದೆ. ಜೊತೆಗೆ ಕೆಟ್ಟ ಬಾಟ್‌ಗಳನ್ನು ಸ್ಪ್ಯಾಮಿಂಗ್‌ನಿಂದ ನಿರ್ಬಂಧಿಸಲು ಕ್ಯಾಪ್ಚ (CAPTCHA) ವನ್ನು ಈ ವೇಳೆ ನೀಡಲಾಗುತ್ತದೆ. ಈ ಕ್ಯಾಪ್ಚ ವಿಕೃತವಾಗಿರುತ್ತದೆ.
ಕ್ಯಾಪ್ಚ ಗಳು ಈ ವಿಭಾಗದಲ್ಲಿ ಭಿನ್ನವಾಗಿದ್ದು ಮನುಷ್ಯರು ಮಾತ್ರ ಇದಕ್ಕೆ ಉತ್ತರಿಸುವಂತೆ ಇರುತ್ತವೆ. ಈ ಆಯ್ಕೆ ಮೂಲಕ ನಕಲಿ ಖಾತೆಗಳಿಂದ ಸ್ಪ್ಯಾಮ್ ನೋಂದಣಿಗಳಿಂದ ವೆಬ್‌ಸೈಟ್‌ಗಳನ್ನು ರಕ್ಷಣೆ ಮಾಡುವ ಮಾರ್ಗವಾಗಿದೆ. ಅಂದರೆ ಹ್ಯಾಕರ್‌ಗಳು ಮತ್ತು ಸ್ಪ್ಯಾಮರ್‌ಗಳು ಆಟೋಮ್ಯಾಟಿಕ್ ಆಗಿ ನಕಲಿ ಖಾತೆಗಳನ್ನು ರಚಿಸಲು, ಸ್ಪ್ಯಾಮ್ ಕಾಮೆಂಟ್‌ಗಳನ್ನು ಮಾಡಲು ಮತ್ತು ಇತರ ದುರುದ್ದೇಶಪೂರಿತ ಚಟುವಟಿಕೆಗಳನ್ನು ನಿರ್ವಹಿಸಲು ಬಾಟ್‌ಗಳನ್ನು ಬಳಕೆ ಮಾಡುತ್ತಾರೆ. ಆದರೆ ಇದೆಲ್ಲದಕ್ಕೂ ಇದು ನಿರ್ಬಂದ ಹೇರಲಿದೆ.
ಅದರಲ್ಲೂ ಕ್ಯಾಪ್ಚ ಎಂಬುದು ಮಾನವ ಮತ್ತು ಬಾಟ್‌ಗಳನ್ನು ಪ್ರತ್ಯೇಕಿಸಲು ಮಾಡುವ ಆಯ್ಕೆ ಆಗಿದೆ. ವಿಶೇಷ ಏನೆಂದರೆ ಇದನ್ನು ಪರಿಹರಿಸಲು ಮಾನವರಿಗೆ ಸುಲಭವಾದ ಕೆಲಸ ಆದರೆ ಬಾಟ್‌ಗಳು ಮತ್ತು ಇತರ ದುರುದ್ದೇಶಪೂರಿತ ಸಾಫ್ಟ್‌ವೇರ್‌ಗಳನ್ನು ಕಂಡುಹಿಡಿಯಲು ಕಷ್ಟ ಪಡುತ್ತವೆ. ಈ ಮೂಲಕ ಗೂಗಲ್ ಆ ವೆಬ್‌ಸೈಟ್‌ಗಳು ಬಳಕೆದಾರರಿಗೆ ಭದ್ರತೆಯನ್ನು ಖಾತರಿಪಡಿಸುತ್ತವೆ.

ಇಷ್ಟೇ ಅಲ್ಲದೆ ನೀವು ರೋಬೋಟ್ ಅಲ್ಲ ಎಂದು ದೃಢೀಕರಿಸುವ ಮೂಲಕ, ನೀವು ವೆಬ್‌ಸೈಟ್‌ಗೆ ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತಿದ್ದೀರಿ ಎಂದರ್ಥ ಹಾಗೂ ಎಲ್ಲರಿಗೂ ಉತ್ತಮ ಬಳಕೆದಾರ ಅನುಭವವನ್ನು ಖಚಿತಪಡಿಸಿಕೊಳ್ಳುತ್ತೀರಿ ಎಂದರ್ಥ. ಅದಾಗ್ಯೂ ನೀವು ಕ್ಯಾಪ್ಚ ವನ್ನು ಎಂಟ್ರಿ ಮಾಡದೆ ನಿಮಗೆ ಬೇಕಾದ ಕಂಟೆಂಟ್ ಸೇವೆ ಪಡೆಯಬಹುದು. ಅಂದರೆ ಐ ಆಮ್ ನಾಟ್ ಎ ರೋಬೋಟ್ ಕೆಳಗೆ ಕಾಣಿಸುವ ಬಾಕ್ಸ್ ಮೇಲೆ ದೀರ್ಘವಾಗಿ ಒತ್ತಿ ಹಿಡಿದರೆ ಕ್ಯಾಪ್ಚ ಇಲ್ಲದೆ ವೆಬ್‌ಸೈಟ್‌ಗೆ ಎಂಟ್ರಿ ಕೊಡಬಹುದು. ಆದರೆ ಇದು ಎಲ್ಲಾ ವೆಬ್‌ಸೈಟ್‌ಗಳಿಗೂ ಅನುಮತಿಸುವುದಿಲ್ಲ.


Click it and Unblock the Notifications








