Subscribe to Gizbot

ನಿಮಗಿದು ಗೋತ್ತಾ?..ಶಿಯೋಮಿ ಯಾವುದೇ ಸ್ಮಾರ್ಟ್‌ಫೋನ್‌ ಜೋತೆಯಲ್ಲಿ ಹೆಡ್ಫೋನ್ ಏಕೆ ನೀಡುವುದಿಲ್ಲ?

Written By:

ನೀವು ಯಾವುದೇ ಕಂಪೆನಿಯ, ಯಾವುದೇ ಸ್ಮಾರ್ಟ್‌ಫೋನ್ ಖರೀದಿಸಿದರೂ ಕೂಡ ಆ ಸ್ಮಾರ್ಟ್‌ಫೋನ್ ಜೊತೆಗೆ ಚಾರ್ಜರ್, ಹೆಡ್‌ಫೋನ್ ನೀಡುವುದು ವಾಡಿಕೆ. ಆದರೆ, ಇದೀಗ ಭಾರತದಲ್ಲಿ ನಂಬರ್ ಒನ್ ಮೊಬೈಲ್ ಮಾರಾಟಗಾರ ಕಂಪೆನಿಯಾಗಿ ಬೆಳೆದುನಿಂತಿರುವ ಶಿಯೋಮಿ ಮಾತ್ರ ತನ್ನ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಹೆಡ್‌ಫೋನ್‌ಗಳನ್ನು ನೀಡುವುದಿಲ್ಲ.!

ಹೌದಲ್ಲವೆ?.ಇತರೆ ಕಂಪೆನಿಗಳಿಂಗಿತ ಹೆಚ್ಚು ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಶಿಯೋಮಿ ಕಂಪೆನಿ ಹೆಡ್‌ಫೋನ್‌ಗಳನ್ನು ಏಕೆ ನೀಡುವುದಿಲ್ಲ ಎಂದು ನಿಮಗೆ ಅನಿಸಿರಬಹುದು. ಹಾಗಾಗಿ, ಇಂದಿನ ಲೇಖನದಲ್ಲಿ ಭಾರತದ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ ಶಿಯೋಮಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಹೆಡ್‌ಫೋನ್‌ ನೀಡದೇ ಇರಲು ಕಾರಣಗಳನ್ನು ತಿಳಿಯೋಣ.!

ಶಿಯೋಮಿ ಯಾವುದೇ ಸ್ಮಾರ್ಟ್‌ಫೋನ್‌ ಜೋತೆಯಲ್ಲಿ ಹೆಡ್ಫೋನ್ ಏಕೆ ನೀಡುವುದಿಲ್ಲ?

ನೀವು ಈವರೆಗೆ ನೋಡಿರುವ ಎಲ್ಲಾ ಶಿಯೋಮಿ ಸ್ಮಾರ್ಟ್‌ಫೋನಗಳ ಬೆಲೆಗಳನ್ನು ನೋಡಿದರೆ ಎಲ್ಲವೂ ಮಧ್ಯಮ ಬಜೆಟ್ ಫೋನ್‌ಗಳೆಂದು ಹೇಳಬವುದು. ಅಲ್ಲದೆ ಶಿಯೋಮಿಯ ಪವರ್ ಬ್ಯಾಂಕ್ ಮತ್ತು ಕೆಲ ಹೆಡ್‌ಫೋನ್‌ಗಳು ಸಹ ಮಧ್ಯಮ ವ್ಯಾಪ್ತಿಯಲ್ಲಿವೆ ಎಂಬುದನ್ನು ನೀವು ಗಮನಿಸಿರುತ್ತೀರಾ ಅಲ್ಲವೇ.? ಇದನ್ನೇ ಪ್ರೈಸ್ ಕಟ್ಟಿಂಗ್ ಸ್ಟಾರ್ಟರ್ಜಿ ಎಂದು ಕರೆಯುತ್ತಾರೆ.

ವಾಟ್ಸ್ಆಪ್‌ನಲ್ಲಿ ಫುಲ್ ರೆಸಲ್ಯೂಶನ್ ಫೋಟೋ ಸೆಂಡ್ ಮಾಡುವುದು ಹೇಗೆ? GIZBOT

ಯಾವುದೇ ಒಂದು ವಸ್ತುವನ್ನು ಇತರೆ ಯಾವುದೇ ವೆಚ್ಚಗಳನ್ನು ಸೇರಿಸದೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ತಂತ್ರಗಾರಿಕೆಯನ್ನು ಮೊಬೈಲ್ ಕಂಪೆನಿಗಳು ಹೊಂದಿರುತ್ತವೆ. ಇದೇ ತಂತ್ರವನ್ನು ಶಿಯೋಮಿ ಕೂಡ ಬಳಸಿದ್ದು, ಅತ್ಯುತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ಒದಗಿಸಿ ಅತ್ಯಂತ ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನು ಮಾರುತ್ತಿದೆ.

ಶಿಯೋಮಿ ಯಾವುದೇ ಸ್ಮಾರ್ಟ್‌ಫೋನ್‌ ಜೋತೆಯಲ್ಲಿ ಹೆಡ್ಫೋನ್ ಏಕೆ ನೀಡುವುದಿಲ್ಲ?

ಸ್ಮಾರ್ಟ್‌ಫೋನ್‌ಗಳ ಜೊತೆಗೆ ಹೆಡ್‌ಫೋನ್‌ ನೀಡಿದರೆ ಸ್ಮಾರ್ಟ್‌ಫೋನಿನ ಒಟ್ಟಾರೆಯ ವೆಚ್ಚ ಹೆಚ್ಚಾಗುತ್ತದೆ ಮತ್ತು ಲಾಭಾಂಶ ಕಡಿಮೆಯಾಗುತ್ತದೆ. ಒಂದು ವೇಳೆ ಅವರು ಹೆಡ್‌ಫೋನ್‌ಗಳನ್ನು ಒದಗಿಸಿದರೂ ಕೂಡ ಅದು ಕಡಿಮೆ ಗುಣಮಟ್ಟದ್ದಾಗಿರುತ್ತದೆ. ಹಾಗಾಗಿ, ಇಂದಿನ ಮಾರುಕಟ್ಟೆಯಲ್ಲಿ ಹೆಚ್ಚಿನ ಮೊಬೈಲ್ ಕಂಪೆನಿಗಳು ಫೋನ್ ಜೊತೆಗೆ ಇಯರ್‌ಫೋನ್ ಒದಗಿಸುವುದಿಲ್ಲ.

ಭಾರತದಂತಹ ಬಜೆಟ್ ಸ್ಮಾರ್ಟ್‌ಫೋನ್ ಪ್ರಿಯ ದೇಶದಲ್ಲಿ ಶಿಯೋಮಿ ತಂತ್ರಗಾರಿಗೆ ಕೈಗೂಡಿದೆ. ಆದರೆ, ಬೇರೆ ದೇಶಗಳಲ್ಲಿ ಮೊಬೈಲ್ ಗ್ರಾಹಕರು ಎಲ್ಲವನ್ನು ಪೂರ್ತಿಯಾಗಿ ಗಮನಿಸಿರುತ್ತಾರೆ. ಹಾಗಾಗಿಯೇ, ಚೀನಾದಲ್ಲಿಯೇ ಹುಟ್ಟಿರುವ ಶಿಯೋಮಿ ಈಗಲೂ ಚೀನಾದಲ್ಲಿ ಮೊಬೈಲ್ ಮಾರಾಟದಲ್ಲಿ 5 ರಿಂದ 6 ನೇ ಸ್ಥಾನದಲ್ಲಿದೆ. ಆದರೆ, ಇಲ್ಲಿ ಅವರು ಫಸ್ಟ್!!

ಓದಿರಿ: 20MP ಸೆಲ್ಫಿ ಕ್ಯಾಮೆರಾವಿರುವ ಈ ಸ್ಮಾರ್ಟ್‌ಫೋನ್ ಬೆಲೆ ಕೇವಲ 8,999 ರೂ.!!

English summary
That is a cost cutting strategy! Xiaomi showcases itself as China's Apple but that is not correct!to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot