Home
ಸುದ್ದಿಜಾಲ

Apple iPhone: ಪ್ರತಿ ವರ್ಷ ಹೊಸ ಐಫೋನ್ ಅಗತ್ಯವಿದೆಯೇ...? ಆಪಲ್ ಸಿಇಒ ಹೇಳಿದ್ದಿಷ್ಟು!

ಆಪಲ್‌ನ ಐಫೋನ್‌ಗಳು (Apple iPhone) ಪ್ರತಿವರ್ಷ ವಿವಿಧ ರೀತಿಯ ಹೊಸ ಫೀಚರ್ಸ್‌ ಹಾಗೂ ಡಿಸೈನ್‌ ಮೂಲಕ ಗಮನ ಸೆಳೆಯುತ್ತವೆ. ಈ ನಡುವೆ ಈ ವರ್ಷ ಐಫೋನ್ 15 ಸರಣಿ ಫೋನ್‌ಗಳನ್ನು ಲಾಂಚ್‌ ಮಾಡಲಾಗಿದ್ದು, ಈ ಫೋನ್‌ಗಳು ಇನ್ನೂ ಸಹ ಸರಿಯಾಗಿ ಮುಂಗಡ ಬುಕ್‌ ಮಾಡಿದ್ದ ಎಲ್ಲರಿಗೂ ತಲುಪಿಲ್ಲ. ಈ ನಡುವೆ ಐಫೋನ್ 16 (iPhone 16) ಬಗ್ಗೆ ಮಾಹಿತಿ ಲೀಕ್‌ ಆಗಿದೆ.

ಹೌದು, ಆಪಲ್‌ ಪ್ರತಿ ವರ್ಷ ಹೊಸ ಹೊಸ ಸರಣಿಯ ಫೋನ್‌ಗಳನ್ನು ಮಿಸ್‌ ಮಾಡದೆ ಲಾಂಚ್‌ ಮಾಡಿಕೊಂಡು ಬರುತ್ತಿದೆ. ಈ ಫೋನ್‌ಗಳಿಗೆ ಅಪ್‌ಗ್ರೇಡ್‌ ಆಗಲು ಆಪಲ್‌ ಪ್ರಿಯರು ಸಹ ಕಾದು ಕುಳಿತಿರುತ್ತಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಆಪಲ್‌ ಯಾಕೆ ಪ್ರತಿವರ್ಷ ಕಡ್ಡಾಯವಾಗಿ ಹೊಸ ಸರಣಿಯ ಫೋನ್‌ಗಳನ್ನು ಲಾಂಚ್‌ ಮಾಡಲಿದೆ ಎಂಬ ಇಂಟ್ರೆಸಿಂಗ್ ಮಾಹಿತಿ ಹೊರಬಿದ್ದಿದೆ. ಹಾಗಿದ್ರೆ, ಆಪಲ್ ಸಿಇಒ ಹೇಳಿದ್ದೇನು ಅನ್ನೋದನ್ನು ತಿಳಿದುಕೊಳ್ಳಿ.

ಪ್ರತಿ ವರ್ಷ ಹೊಸ ಐಫೋನ್ ಅಗತ್ಯವಿದೆಯೇ...?  ಆಪಲ್ ಸಿಇಒ ಹೇಳಿದ್ದಿಷ್ಟು!

ಐಫೋನ್ ವಿಶ್ವದ ಅತ್ಯಂತ ಬೇಡಿಕೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಆಪಲ್‌ ಫೋನ್‌ಗಳು ಪ್ರಮುಖಸ್ಥಾನದಲ್ಲಿವೆ. ಪ್ರತಿ ವರ್ಷ ಹೊಸ ವೇರಿಯಂಟ್ ಅನ್ನು ಪ್ರಾರಂಭಿಸಿದಾಗ ಜನರು ಇವುಗಳಿಗೆ ಅಪ್‌ಗ್ರೇಡ್‌ ಆಗಲು ಉತ್ಸುಕರಾಗಿರುತ್ತಾರೆ. ಈ ವರ್ಷ ಐಫೋನ್ 15 (iPhone 15) ಅನ್ನು ಸೆಪ್ಟೆಂಬರ್ 12 ರಂದು ಆಪಲ್‌ ನ ವಂಡರ್‌ಲಸ್ಟ್ ಈವೆಂಟ್‌ನಲ್ಲಿ ಲಾಂಚ್ ಮಾಡಲಾಗಿದ್ದು, ಸೆಪ್ಟೆಂಬರ್ 22 ಕ್ಕೆ ಸೇಲ್‌ ಆರಂಭ ಆಗಿದೆ.

ಐಫೋನ್ ಅನ್ನು ಪ್ರತಿ ವರ್ಷ ಯಾಕೆ ಲಾಂಚ್ ಮಾಡಲಾಗುತ್ತದೆ?: ಐಫೋನ್ ನ ಹೊಸ ಸರಣಿ ಫೋನ್‌ಗಳಿಗೆ ಇನ್ನೂ ಬೇಡಿಕೆ ಇರುವಾಗಲೇ ಮತ್ತೇ ಹೊಸ ಫೋನ್‌ ಅನ್ನು ಒಂದು ವರ್ಷದ ಅಂತರದಲ್ಲಿ ಯಾಕೆ ಲಾಂಚ್‌ ಮಾಡಲಾಗುತ್ತದೆ ಎಂಬ ಪ್ರಶ್ನೆಯನ್ನು ಆಪಲ್ ಸಿಇಒ ಟಿಮ್ ಕುಕ್‌ (Apple CEO Tim Cook) ಅವರ ಮುಂದೆ ಇಡಲಾಗಿದೆ. ಬ್ರೂಟ್ ಅವರೊಂದಿಗಿನ ಸಂದರ್ಶನದಲ್ಲಿ ಈ ಪ್ರಶ್ನೆ ಮಾಡಲಾಗಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಅವರು, ಐಫೋನ್ ಬಯಸುವವರಿಗೆ ಪ್ರತಿ ವರ್ಷ ಹೊಸ ಐಫೋನ್ ಹೊಂದಿರುವುದು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.

ಬಳಕೆದಾರರು ತಮ್ಮ ಹಳೆಯ ಐಫೋನ್‌ಗಳನ್ನು ಹೊಸದಕ್ಕೆ ವಿನಿಮಯ ಅಥವಾ ಸೇಲ್‌ ಮಾಡಲು ಅನುಮತಿಸುವ ಆಪಲ್‌ನ ನೀತಿಯ ಬಗ್ಗೆಯೂ ಕುಕ್‌ ಈ ವೇಳೆ ಮಾಡತನಾಡಿದ್ದಾರೆ. ಹಳೆಯ ಫೋನ್‌ಗಳು ಇನ್ನೂ ಕಾರ್ಯನಿರ್ವಹಿಸುತ್ತಿದ್ದರೆ ನಾವು ಅವುಗಳನ್ನು ಮರುಮಾರಾಟ ಮಾಡುತ್ತೇವೆ ಎಂದಿದ್ದಾರೆ. ಹಾಗೆಯೇ ಕಾರ್ಯನಿರ್ವಹಿಸದ ಫೋನ್‌ಗಳ ಕುರಿತು ಮಾಹಿತಿ ನೀಡಿ, ಆಪಲ್ ಅವುಗಳನ್ನು ಡಿಸ್ಅಸೆಂಬಲ್ ಮಾಡುತ್ತದೆ ಮತ್ತು ಹೊಸ ಐಫೋನ್ ತಯಾರಿಸಲು ಅದರ ವಸ್ತುಗಳನ್ನು ಬಳಕೆ ಮಾಡಿಕೊಳ್ಳುತ್ತದೆ ಎಂದಿದ್ದಾರೆ.

ಐಫೋನ್ 15 ಫೀಚರ್ಸ್‌: ಈ ಎಲ್ಲಾ ಬೆಳವಣಿಗೆ ನಡುವೆ ಐಫೋನ್‌ನ ಹೊಸ ಸರಣಿ ಫೋನ್‌ಗಳಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಫೋನ್ 6.1 ಇಂಚಿನ ಡಿಸ್ಪ್ಲೇಯೊಂದಿಗೆ ಬರಲಿದ್ದು, ಐಫೋನ್ 14 (iPhone 14) ಮತ್ತು ಹಿಂದಿನ ಮಾದರಿಗಳಂತೆಯೇ ಅದೇ ವಿನ್ಯಾಸವನ್ನು ಉಳಿಸಿಕೊಂಡಿದೆ. ಆದಾಗ್ಯೂ, ಸಾಮಾನ್ಯ ದರ್ಜೆಯ ಬದಲಿಗೆ ಡೈನಾಮಿಕ್ ಐಲ್ಯಾಂಡ್ ನಾಚ್ ಅನ್ನು ಈ ಫೋನ್‌ನಲ್ಲಿ ನೋಡಬಹುದು.

ಈ ಬಾರಿ 48 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಸೆನ್ಸರ್‌ ಆಯ್ಕೆ ನೀಡಲಾಗಿದ್ದು, ಇದು ದೊಡ್ಡ ಬದಲಾವಣೆ ಎನ್ನಬಹುದು. ಇದರೊಂದಿಗೆ ಐಫೋನ್ 15 ಆಪಲ್‌ನ A16 ಬಯೋನಿಕ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಈ ಪ್ರೊಸೆಸರ್ ಕೂಡ ಅಪ್‌ಗ್ರೇಡ್ ಅನ್ನು ಪಡೆದುಕೊಂಡಿದೆ. ಕಳೆದ ವರ್ಷ ಆಪಲ್ ಐಫೋನ್ 14 ಮತ್ತು ಐಫೋನ್ 14 ಪ್ಲಸ್‌ನಲ್ಲಿ A15 ಬಯೋನಿಕ್ ಚಿಪ್‌ಸೆಟ್ ಅನ್ನು ಬಳಕೆ ಮಾಡಲಾಗಿತ್ತು. ಆದರೆ, ಪ್ರೊ ಮಾದರಿಗಳು A16 ಚಿಪ್ ಅನ್ನು ನೀಡಲಾಗಿತ್ತು.

ಪ್ರತಿ ವರ್ಷ ಹೊಸ ಐಫೋನ್ ಅಗತ್ಯವಿದೆಯೇ...?  ಆಪಲ್ ಸಿಇಒ ಹೇಳಿದ್ದಿಷ್ಟು!

ಇಷ್ಟೆಲ್ಲಾ ಬೆಳವಣಿಗೆ ನಡುವೆ ಐಫೋನ್‌ 15 ನ ಮತ್ತೊಂದು ವಿಶೇಷತೆ ಏನೆಂದರೆ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್‌ ಆಯ್ಕೆ. ಆಪಲ್ ಈ ಬದಲಾವಣೆಯೊಂದಿಗೆ ತನ್ನದೇ ಆದ ಚಾರ್ಜಿಂಗ್‌ ಪೋರ್ಟ್‌ಗೆ ಸಂಪೂರ್ಣವಾಗಿ ವಿದಾಯ ಹೇಳಿದೆ. ಸಾಮಾನ್ಯವಾಗಿ ಬಳಸುವ ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಈಗ ಇದರಲ್ಲೂ ಲಭ್ಯ ಇದ್ದು, ಈ ಮೂಲಕ ಇ ತ್ಯಾಜ್ಯವನ್ನು ಕಡಿಮೆ ಮಾಡಲು ಕೈಜೋಡಿಸಿದೆ.

Best Mobiles in India

English summary
Apple is launching new series of iPhone every year without missing a beat. Cook has informed why he does this.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+