Home
ಸುದ್ದಿಜಾಲ

ಶೌಚಾಲಯದಲ್ಲಿ ಸ್ಮಾರ್ಟ್‌ಫೋನ್‌ ಬಳಸುವವರು ತಪ್ಪದೇ ಈ ವಿಷಯ ತಿಳಿದುಕೊಳ್ಳಿ!

ಸ್ಮಾರ್ಟ್‌ಫೋನ್‌ಗಳು ಬಳಕೆದಾರರಿಗೆ ಇಂದು ಎಲ್ಲಾ ರೀತಿಯ ಅಗತ್ಯತೆಗಳನ್ನು ಈಡೇರಿಸುತ್ತಾ ಬರುತ್ತಿವೆ. ಆದರೆ, ಹೆಚ್ಚಾಗಿ ಸ್ಮಾರ್ಟ್‌ಫೋನ್‌ ಬಳಕೆ ಮಾಡಿದಷ್ಟು ಹಲವು ಆರೋಗ್ಯ ಸಮಸ್ಯೆಗಳು ಉಂಟಾಗುವ ಬಗ್ಗೆ ನಮಗೆಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಈ ವಿಷಯ ಮಾತ್ರ ನಿಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಯಾಕೆಂದರೆ ಇದರಿಂದ ನಿಮಗೆ ಭಯಾನಕವಾದ ಸಮಸ್ಯೆ ಸಹ ಉಂಟಾಗಬಹುದು.

ಹೌದು, ಇಂದು ಬಹುಪಾಲು ಮಂದಿ ಶೌಚಕ್ಕೆ ಹೋದಾಗ ಕಡ್ಡಾಯವಾಗಿ ಸ್ಮಾರ್ಟ್‌ಫೋನ್‌ ಅನ್ನು ಜೊತೆಗೆ ಕೊಂಡೊಯ್ಯುತ್ತಾರೆ. ಸ್ಮಾರ್ಟ್‌ಫೋನ್‌ ಇಲ್ಲದೆ ಬೆಳಗಿನ ಕಾರ್ಯ ಆಗುವುದೇ ಇಲ್ಲ ಎನ್ನುವ ಮಟ್ಟಕ್ಕೆ ಬಹಳಷ್ಟು ಮಂದಿ ಬಂದಿದ್ದಾರೆ.ಆದರೆ, ಶೌಚಾಲಯದಲ್ಲಿ ಫೋನ್ ಬಳಸುವುದು ಹಾನಿಕಾರಕವಾಗಿದ್ದು, ಮಾರಣಾಂತಿಕ ರೋಗಗಳಿಗೆ ನಿಮ್ಮನ್ನು ಒಡ್ಡಬಹುದು ಎಂಬುದು ನಿಮಗೆ ತಿಳಿದಿರಲಿ. ಹಾಗಿದ್ರೆ, ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತದೆ?, ಹೇಗೆ ಎಚ್ಚರಿಕೆ ವಹಿಸಬೇಕು ಎಂಬ ಮಾಹಿತಿಯನ್ನು ತಿಳಿಸಿಕೊಡಲಾಗಿದೆ ಓದಿರಿ.

ಶೌಚಾಲಯದಲ್ಲಿ ಸ್ಮಾರ್ಟ್‌ಫೋನ್‌ ಬಳಸುವವರು ತಪ್ಪದೇ ಈ ವಿಷಯ ತಿಳಿದುಕೊಳ್ಳಿ!

ಟಾಯ್ಲೆಟ್ ಸೀಟ್‌ನಲ್ಲಿ ಭಯಾನಕ ಸೂಕ್ಷ್ಮಾಣು: ಟಾಯ್ಲೆಟ್ ಸೀಟ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಸೂಕ್ಷ್ಮಾಣುಜೀವಿಗಳು ಎಂದರೆ ಅವು ಸ್ಟ್ಯಾಫಿಲೋಕೊಕಸ್ ಔರೆಸ್. ಟಾಯ್ಲೆಟ್ ಸೀಟ್‌ಗಳ ಮೇಲೆ ಇರುವ ಸ್ಟ್ಯಾಫಿಲೋಕೊಕಸ್‌ನ ಇತರ ತಳಿಗಳು ಮನುಷ್ಯರಿಗೆ ಸಮಾನವಾಗಿ ಹಾನಿಕಾರಕವಾಗಿದೆ. ಇವು ಹೆಚ್ಚಾಗಿ ಮೂತ್ರನಾಳದ ಸೋಂಕನ್ನು ಉಂಟುಮಾಡುತ್ತವೆ. ಟಾಯ್ಲೆಟ್ ಸೀಟಿನ ಮೇಲೆ ಇ.ಕೊಲಿ ಮತ್ತು ಎಂಟರೊಕೊಕಸ್, ಸಾಲ್ಮೊನೆಲ್ಲಾ, ಶಿಗೆಲ್ಲ ಮತ್ತು ಕ್ಯಾಂಪಿಲೋಬ್ಯಾಕ್ಟರ್ ಸಮಸ್ಯೆಗೆ ನಿಮ್ಮನ್ನು ಒಡ್ಡುತ್ತದೆ.

ಫೋನ್‌ಗೂ ಸೂಕ್ಷ್ಮಾಣುಗಳಿಗಿರುವ ಸಂಬಂಧ ಏನು?: ಫೋನ್‌ಗಳು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಬಳಕೆದಾರರಿಗೆ ರೋಗ ತಂದಿಡುತ್ತವೆ. ಅಂದರೆ ಫೋನ್‌ ನಲ್ಲಿ ಕಂಡುಬರುವ ಸೂಕ್ಷ್ಮ ಕಣಗಳು ಹೊಟ್ಟೆ ನೋವು, ಅತಿಸಾರ, ಸೋಂಕುಗಳನ್ನು ಉಂಟು ಮಾಡುತ್ತವೆ. ಹಾಗೆಯೇ ಬಾವುಗಳಂತಹ ಚರ್ಮದ ಸೋಂಕುಗಳು, ಸೈನುಟಿಸ್ನಂತಹ ಉಸಿರಾಟದ ಸೋಂಕುಗಳು ಇದರಿಂದ ಕಂಡುಬರುತ್ತದೆ.

ಶೌಚಾಲಯದಲ್ಲಿ ಸ್ಮಾರ್ಟ್‌ಫೋನ್‌ ಬಳಸುವವರು ತಪ್ಪದೇ ಈ ವಿಷಯ ತಿಳಿದುಕೊಳ್ಳಿ!

ಫೋನ್‌ ನಿಮ್ಮನ್ನು ಅಗತ್ಯಕ್ಕಿಂತ ಹೆಚ್ಚಿನ ಸಮಯ ಕೂರುವಂತೆ ಮಾಡುತ್ತದೆ: ಫೋನ್‌ ತೆಗೆದುಕೊಂಡು ಶೌಚಕ್ಕೆ ಹೋದರೆ ಕೆಲವರು ಅರ್ಧಗಂಟೆಗೂ ಹೆಚ್ಚು ಕಾಲ ಕೂತಿರುತ್ತಾರೆ. ಆದರೆ, ಈ ಅಭ್ಯಾಸದ ವಿರುದ್ಧ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಟಾಯ್ಲೆಟ್ ಸೀಟ್‌ಗಳ ಮೇಲೆ ದೀರ್ಘಕಾಲ ಕುಳಿತುಕೊಳ್ಳುವುದು ಹೆಮೊರೊಯಿಡ್ಸ್ ಅಪಾಯವನ್ನು ಹೆಚ್ಚಿಸುತ್ತದೆ. ಈ ಮೂಲಕ ನಿಮ್ಮ ಗುದದ್ವಾರದ ಸುತ್ತಲಿನ ರಕ್ತನಾಳಗಳು ಒತ್ತಡದಲ್ಲಿ ಹಿಗ್ಗುತ್ತವೆ ಮತ್ತು ಉಬ್ಬಿಕೊಳ್ಳಬಹುದು ಅಥವಾ ಊದಿಕೊಳ್ಳಬಹುದು.

ಈ ಕೆಟ್ಟ ಅಭ್ಯಾಸವನ್ನು ಯಾಕೆ ನಿಲ್ಲಿಸಬೇಕು? : ನೀವು ಕೂರುವ ಟಾಯ್ಲೆಟ್ ಆಸನಗಳು ಸೂಕ್ಷ್ಮಜೀವಿಗಳ ಸಂತಾನೋತ್ಪತ್ತಿಯ ಸ್ಥಳಗಳಾಗಿದೆ. ಅದರಲ್ಲೂ ಟಾಯ್ಲೆಟ್ ಸೀಟ್‌ ಅನ್ನು ಸಹ ಮೇಲಕ್ಕೆ ಮತ್ತು ಕೆಳಕ್ಕೆ ಸ್ಕ್ರಾಲ್ ಮಾಡುವಾಗ ಕೈ ಬಳಕೆ ಮಾಡುವುದರಿಂದ ಹಾಗೂ ಇದೇ ಕೈ ಅನ್ನು ಫೋನ್‌ ಹಿಡಿದುಕೊಳ್ಳಲು ಬಳಕೆ ಮಾಡುವುದರಿಂದ ಸಾಕಷ್ಟು ಸೂಕ್ಷ್ಮಜೀವಿಗಳು ನಮಗೆ ಅರಿವಿಲ್ಲದಂತೆ ನಮ್ಮ ದೇಹಕ್ಕೆ ಸೇರುತ್ತವೆ.

ವರದಿಗಳ ಪ್ರಕಾರ ಈ ಸೂಕ್ಷ್ಮಾಣುಗಳು ಮೊಬೈಲ್ ಫೋನ್ ಪರದೆಯ ಮೇಲೆ 28 ದಿನಗಳವರೆಗೆ ಬದುಕಬಲ್ಲವಂತೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳು ಟಾಯ್ಲೆಟ್ ಸೀಟ್‌ಗಳಿಗಿಂತ ಹತ್ತು ಪಟ್ಟು ಹೆಚ್ಚು ಸೂಕ್ಷ್ಮಾಣುಗಳನ್ನು ಸಾಗಿಸಬಲ್ಲವು ಎಂಬುದು ನಿಮಗೆ ಗೊತ್ತೇ ಇರುವ ಸತ್ಯ. ಹಾಗೆಯೇ ಟಚ್‌ಸ್ಕ್ರೀನ್‌ಗಳನ್ನು ಡಿಜಿಟಲ್ ಯುಗದ ಸೊಳ್ಳೆ ಹಾಗೂ ಸಾಂಕ್ರಾಮಿಕ ರೋಗದ ವಾಹಕಗಳು ಎಂದೂ ಸಹ ಕರೆಯಲಾಗುತ್ತದೆ.

ಶೌಚಾಲಯದಲ್ಲಿ ಸ್ಮಾರ್ಟ್‌ಫೋನ್‌ ಬಳಸುವವರು ತಪ್ಪದೇ ಈ ವಿಷಯ ತಿಳಿದುಕೊಳ್ಳಿ!

ಎಚ್ಚರಿಕೆ ವಹಿಸುವುದು ಹೇಗೆ?: ಇದಕ್ಕೆ ನಿಮಗೆ ನೀವೆ ಕಡಿವಾಣ ಹಾಕಿಕೊಳ್ಳಬೇಕಿದೆ. ಮುಂದೆ ಆಗುವ ಅನಾಹುತಗಳನ್ನು ಈಗಲೇ ತಡೆಯಬೇಕು ಎಂದರೆ ಇದು ಅನಿವಾರ್ಯ. ಸಾಮಾನ್ಯವಾಗಿ ಶೌಚದಿಂದ ಹೊರ ಬಂದ ನಂತರ ಕೈ ಕಾಲುಗಳನ್ನು ಎಷ್ಟೇ ಸ್ವಚ್ಛ ಮಾಡಿದರೂ ನೀವು ಬಳಕೆ ಮಾಡುವ ಮೊಬೈಲ್‌ ಅನ್ನು ತೊಳೆಯಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಸಾಧ್ಯವಾದಷ್ಟು ಮೊಬೈಲ್‌ ಕೊಂಡು ಹೋಗುವುದನ್ನು ತಪ್ಪಿಸಿ.

Best Mobiles in India

English summary
young people often take their smartphones to the toilet. there are a lot of germs that cause infections on the toilet seat, which will enter your body through the phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+