ಹೊಸ ವರ್ಷದಿಂದ ವಿಮಾನ ಪ್ರಯಣ ಹೈ-ಫೈ: ಪ್ಲೇನ್‌ನಲ್ಲೂ ವೈ-ಫೈ.!
ಈ ಹಿಂದೆ ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಕಿರಿಕಿರಿ ಎಂದರೆ ತಮ್ಮ ಮೊಬೈಲ್ ಫೋನ್‌ಗಳನ್ನು ಆಫ್ ಮಾಡಿ ಇಡಬೇಕಾಗಿತ್ತು. ಆದರೆ ಇದಕ್ಕೆ ಪರಿಹಾರವು ದೊರೆಯುತ್ತಿದೆ ಎನ್ನಲಾಗಿದೆ. ಇನ್ನು ಮುಂದೆ ವಿಮಾನದಲ್ಲಿ ಪ್ರಯಾಣ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಕೆದಾರರು ಇಂಟರ್ನೆಟ್ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ಓದಿರಿ: ಸ್ನೇಹಿತರ ವಾಟ್ಸ್‌ಆಪ್ ಸ್ಟೇಟಸ್ ಡೌನ್‌ಲೋಡ್ ಮಾಡುವುದು ಗೊತ್ತಾ ನಿಮಗೆ..?
ಇನ್ನು ಎರಡೇ ವಾರಗಳಲ್ಲಿ ವಿಮಾನದಲ್ಲಿ ಪ್ರಯಾಣಿಸುವವರಿಗೆ ವೈ-ಫೈ ಸೇವೆಯನ್ನು ನೀಡಲು ಮುಂದಾಗಿದೆ. ಇದರಿಂದಾಗಿ ವಿಮಾನದಲ್ಲಿ ಕುಳಿತು ವಾಟ್ಸ್‌ಆಪ್ ಚಾಟ್ ಮಾಡಬಹುದಾಗಿದೆ. ಫೇಸ್‌ಬುಕ್ ಬ್ರೌಸ್ ಮಾಡಬಹುದಾಗಿದೆ. ಅಲ್ಲದೇ ಸುದೀರ್ಘ ಪ್ರಯಾಣವನ್ನು ಆರಾಮವಾಗಿ ಕಳೆಯಬಹುದಾಗಿದೆ.

ಟ್ರಾಯ್ ಹೊಸ ನಿಯಮ
ಈಗಾಗಲೇ ಹಾರುತ್ತಿರುವ ವಿಮಾನಗಳಲ್ಲಿ ಮೊಬೈಲ್ ಸಂಪರ್ಕವನ್ನು ಒದಗಿಸುವ ಸಲುವಾಗಿ ಭಾರತೀಯ ದೂರ ಸಂಪರ್ಕ ಪ್ರಾಧಿಕಾರ (ಟ್ರಾಯ್) ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ. ಇದಕ್ಕಾಗಿ ಸಮಯ ಹಿಡಿಯುತ್ತಿದ್ದು, ಶೀಘ್ರವೇ ಕಾರ್ಯಚರಣೆ ಆರಂಭವಾಗಲಿದೆ.

ಬಹುದಿನಗಳ ಕನಸು:
ಬಹಳ ಹಿಂದಿನಿಂದಲೇ ವಿಮಾನದಲ್ಲಿಯೂ ಇಂಟರ್‌ನೆಟ್ ಸೇವೆಯನ್ನು ಪ್ರಯಾಣಿಕರಿಗೆ ನೀಡಬೇಕು ಎನ್ನುವ ಮಾತು ಕೇಳಿ ಬಂದಿತ್ತು. ಕೊನೆಗೂ ವಿಮಾನ ಹಾರಾಟದ ಸಮಯದಲ್ಲಿ ಇಂಟರ್ನೆಟ್ ಸೇವೆಯನ್ನು ಬಳಸುವ ಅವಕಾಶವನ್ನು ಪಡೆದುಕೊಳ್ಳಲಿದ್ದಾರೆ.

ಕೆಲವು ನಿಯಮಗಳು:
ವಿಮಾನದಲ್ಲಿ ಮೊಬೈಲ್ ಬಳಕೆಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ವಿಧಿಸಲಾಗುತ್ತದೆ. ಎರಡು ವಾರದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ವಿದೇಶಿ ವಿಮಾನಗಳಲ್ಲೂ ಈಗಾಗಲೇ ಅಂತರ್ಜಾಲ ಬಳಕೆಗೆ ಅವಕಾಶವಿದೆ. ಭಾರತೀಯ ವಿಮಾನಗಳಲ್ಲೂ ಈ ರೀತಿಯ ಸೇವೆ ಆರಂಭವಾಗಲಿದೆ.
ಬಹುದಿನಗಳ ಕನಸು


Click it and Unblock the Notifications








