ಸ್ನೇಹಿತರ ವಾಟ್ಸ್‌ಆಪ್ ಸ್ಟೇಟಸ್ ಡೌನ್‌ಲೋಡ್ ಮಾಡುವುದು ಗೊತ್ತಾ ನಿಮಗೆ..?

|

ಫೇಸ್‌ಬುಕ್ ಒಡೆತನಕ್ಕೆ ಸೇರಿಕೊಂಡಿರುವ ವಾಟ್ಸ್‌ಆಪ್ ಹೊಸದಾಗಿ ನೀಡಿರುವ ಸ್ಟೇಟಸ್ ಆಪ್‌ಡೇಟ್ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದೆ. ವಿಡಿಯೋ, ಇಮೇಜ್ ಮತ್ತು ಜಿಫ್ ಗಳನ್ನು ಹಾಗೂ ಟೆಕ್ಸ್ಟ್‌ಗಳನ್ನು ಸ್ಟೇಟಸ್ ಮಾದರಿಯಲ್ಲಿ ಹಾಕಿಕೊಳ್ಳಬಹುದಾಗಿದೆ. ಆದರೆ ಈ ಸ್ಟೇಟಸ್ ಗಳನ್ನು ನೋಡಲು ಮಾತ್ರವೇ ಸಾಧ್ಯವಿತ್ತು ಆದರೆ ಅದನ್ನು ಡೌನ್‌ಲೋಡ್ ಮಾಡುವ ಆಯ್ಕೆ ಲಭ್ಯವಿರಲಿಲ್ಲ.

ಸ್ನೇಹಿತರ ವಾಟ್ಸ್‌ಆಪ್ ಸ್ಟೇಟಸ್ ಡೌನ್‌ಲೋಡ್ ಮಾಡುವುದು ಗೊತ್ತಾ ನಿಮಗೆ..?

ಓದಿರಿ: ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಫೋನ್ ಮೆಗಾ ಸೇಲ್: ಮಿಸ್‌ ಮಾಡಿದ್ರೆ ನಿಮಗೆ ಲಾಸ್‌...!

ಆದರೆ ನಾವು ಇಂದು ವಾಟ್ಸ್‌ಆಪ್ ಸ್ಟೇಟಸ್‌ಗಳನ್ನು ಸೇವ್ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡಲಿದ್ದೇವೆ, ಮುಂದಿನ ದಿನಗಳಲ್ಲಿ ನಿಮ್ಮ ಸ್ನೇಹಿತರು ಆಪ್‌ಡೇಟ್ ಮಾಡುವ ಸ್ಟೋರಿಯನ್ನು ನೀವು ಡೌನ್‌ಲೋಡ್ ಇಲ್ಲವೇ ಸೇವ್ ಮಾಡಿಕೊಳ್ಳಬಹುದಾಗಿದೆ.

ಡೌನ್‌ಲೋಡ್ ಮಾಡಬಹುದು:

ಡೌನ್‌ಲೋಡ್ ಮಾಡಬಹುದು:

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಟ್ಸ್‌ಆಪ್‌ನಲ್ಲಿ ನೋಡಿರುವ ಸ್ಟೇಟಸ್‌ಗಳನ್ನು ಕಾಣಬಹುದಾಗಿದೆ. ಅಲ್ಲಿ ನೀವು ನಿಮಗೆ ಬೇಕಾದ ಸ್ಟೇಟಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅದು ಹೇಗೆ ಎಂಬುದನ್ನು ತಿಳಿಯಿರಿ.

ಹಂತ  01:

ಹಂತ 01:

ನಿಮ್ಮ ಸ್ಮಾರ್ಟ್‌ಫೋನಿನ ಫೈಲ್ ಮ್ಯಾನೇಜರ್ ಓಪನ್ ಮಾಡಿರಿ, ಅಲ್ಲಿ ವಾಟ್ಸ್‌ಆಪ್ ಎಂಬ ಹೆಸರಿನ ಫೋಲ್ಡರ್ ಇರಲಿದೆ. ಅಲ್ಲಿ Whatsapp folder > Media> Statues ಗೆ ಹೋಗಿ. ನಂತರ ಅಲ್ಲಿರುವ Media ಫೈಲ್‌ನಲ್ಲಿ ಸ್ಟೇಟಸ್ ಆಯ್ಕೆ ಇರಲಿದೆ.

ಹಂತ 02:

ಹಂತ 02:

ನಂತರ ಮೆಲ್ಭಾಗದಲ್ಲಿರುವ ಮೂರು ಡಾಟ್ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ನೀವು ವಾಟ್ಸ್‌ಆಪ್ ನಲ್ಲಿ ನೋಡಿದ ಸ್ಟೇಟಸ್‌ಗಳು ಹಿಡನ್ ಆಗಿರುತ್ತವೆ, ಅವುಗಳೆಲ್ಲವೂ ತೆರೆದುಕೊಳ್ಳಲಿದೆ.

ಹಂತ 03:

ಹಂತ 03:

ಹಿಡನ್ ಫೈಲ್ಗಳು ತೆರೆದುಕೊಂಡ ನಂತರದಲ್ಲಿ make it appear ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡ ನಂತರ ನೀವು ಸ್ಟೇಟಸ್ ಆಯ್ಕೆಯನ್ನು ಕಾಣಬಹುದಾಗಿದೆ.

How to save WhatsApp Status other than taking screenshots!! Kannada
ಹಂತ 04:

ಹಂತ 04:

ಇಲ್ಲಿ ನೀವು ನೋಡಿದ ಎಲ್ಲಾ ವಾಟ್ಸ್‌ಆಪ್ ಸ್ಟೇಟಸ್ ಗಳನ್ನು ಅಲ್ಲಿ ಕಾಣಬಹುದಾಗಿದ್ದು, ಅದನ್ನು ಸೇವ್ ಮಾಡಿಕೊಳ್ಳಲು ಸ್ಟೇಟಸ್ ಮೇಲೆ ಲಾಂಗ್ ಪ್ರೆಸ್ ಮಾಡಿದರೆ ಸೇವ್ ಆಯ್ಕೆಯೂ ಲಭ್ಯವಾಗಲಿದೆ. ಈ ಮೂಲಕ ನೀವು ಸ್ಟೇಟಸ್ ಸೇವ್ ಮಾಡಿಕೊಳ್ಳಬಹುದು.

Best Mobiles in India

English summary
how to save whatsapp status. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X