Subscribe to Gizbot

ಅಪಾಯ ತಿಳಿದಿದ್ದರೂ ತಪ್ಪು ಮಾಡುತ್ತಿದ್ದಾರೆ ಎಲ್ಲಾ ಸ್ಮಾರ್ಟ್‌ಫೋನ್ ಬಳಕೆದಾರರು!!

Written By:

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಸೈಬರ್ ಕ್ರಿಮಿನಲ್‌ಗಳ ಬಗ್ಗೆ ಎಷ್ಟೇ ತಿಳಿದಿದ್ದರೂ ಕೂಡ ಸಾರ್ವಜನಿಕ ವೈಫೈಗಳ ಬಳಕೆ ಮಾಡುವುದಿಲ್ಲ ಎಂದು ವರದಿಯೊಂದು ಆಘಾತ ವ್ಯಕ್ತಪಡಿಸಿದೆ.! ಸಾರ್ವಜನಿಕ ವೈಫೈ ಬಳಸುವುದು ಅಪಾಯ ಎಂದು ತಿಳಿದಿದ್ದರೂ ಬಳಕೆದಾರರು ಅದಕ್ಕೆ ಕೇರ್ ಮಾಡುವುದಿಲ್ಲ ಎಂದು ಮ್ಯಾಕ್ಫೀ ಆಂಟಿವೈರಸ್ ಸಂಸ್ಥೆ ತಿಳಿಸಿದೆ.!!

ಸಾರ್ವಜನಿಕ ವೈಫೈಗಳ ಮೊರೆ ಹೋಗುವವರು ಮತ್ತು ಪ್ರತಿನಿತ್ಯ ಇ-ಮೇಲ್ ಬಳಕೆ ಮಾಡದ ಬಳಕೆದಾರರ ಅನುಭವ ಮತ್ತು ಮಾಹಿತಿ ಹಂಚಿಕೆಯನ್ನು ಆಧರಿಸಿ ಈ ವಿಸ್ತೃತ ವರದಿಯನ್ನು ಮ್ಯಾಕ್ಫೀ ಅಧ್ಯಯನ ಸಂಸ್ಥ ತಯಾರಿಸಿದ್ದು, ಈ ಎರಡು ಪ್ರಮುಖ ಕಾರ್ಯಗಳಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರಾರು ಮಾಡುತ್ತಿರುವ ತಪ್ಪೇನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
1,504 ಜನರನ್ನು ಅಧ್ಯಯನ!!

1,504 ಜನರನ್ನು ಅಧ್ಯಯನ!!

ಎಂಸಿಎಎಫ್ಇಇ ಅಧ್ಯಯನ ಸಂಸ್ಥೆಯು ಭಾರತದಲಗಲಿ 1,504 ಜನರನ್ನು ಅಧ್ಯಯನಕ್ಕೆ ಒಳಪಡಿಸಿ ಈ ವರದಿ ತಯಾರಿಸಿದೆ. ಸಾರ್ವಜನಿಕ ವೈಫೈಗಳ ಮೊರೆ ಹೋಗುವವರು ಮತ್ತು ಪ್ರತಿನಿತ್ಯ ಇ-ಮೇಲ್ ಬಳಕೆ ಮಾಡದ ಬಳಕೆದಾರರ ಅನುಭವ ಮತ್ತು ಮಾಹಿತಿ ಹಂಚಿಕೆಯನ್ನು ವರದಿಯಲ್ಲಿ ತಿಳಿಸಿದೆ.!!

ರಜಾ ದಿನಗಳಲ್ಲಿ ಶೇ 74 ರಷ್ಟು!!

ರಜಾ ದಿನಗಳಲ್ಲಿ ಶೇ 74 ರಷ್ಟು!!

ಸಾರ್ವಜನಿಕ ವೈಫೈ ಬಳಸುವುದು ಅಪಾಯ ಎಂದು ತಿಳಿದಿದ್ದರೂ ರಜಾ ದಿನಗಳಲ್ಲಿ ಶೇ 74 ರಷ್ಟು ಸ್ಮಾರ್ಟ್‌ಫೋನ್ ಬಳಕೆದಾರರು ಸಾರ್ವಜನಿಕ ವೈಫೈಗಳ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಇದರಿಂದ ಸೈಬರ್ ಕಳ್ಳರ ಕೈಗೆ ಸಿಕ್ಕಿಹಾಕಿಕೊಂಡು ಪರದಾಡುತ್ತಿದ್ದಾರೆ.!!

ಇ-ಮೇಲ್ ಪರಿಶೀಲಿಸುವುದಿಲ್ಲ!!

ಇ-ಮೇಲ್ ಪರಿಶೀಲಿಸುವುದಿಲ್ಲ!!

ದೇಶದಲ್ಲಿನ ಒಟ್ಟಾರೆ ಇ-ಮೇಲ್ ಬಳಕೆದಾರರಲ್ಲಿ ಶೇ 52 ರಷ್ಟು ಜನರು ದಿನದ ಕೊನೆಯಲ್ಲಿ ಇ-ಮೇಲ್ ಪರಿಶೀಲಿಸುವುದಿಲ್ಲ ಮಾಡುವುದಿಲ್ಲ ಎಂದು ವರದಿ ತಿಳಿಸಿದೆ. ವೈಯಕ್ತಿಕ ಮಾತ್ರವಲ್ಲದೆ ವೃತ್ತಿ ಸಂಬಂಧಿಸಿದ ಇ-ಮೇಲ್‌ಗಳನ್ನು ಚೆಕ್ ಮಾಡದೇ ಹೋಗುವವರಿದ್ದಾರಂತೆ!!

ಜಾಲತಾಣಗಳಲ್ಲಿ ಇಣುಕುತ್ತಾರೆ.!

ಜಾಲತಾಣಗಳಲ್ಲಿ ಇಣುಕುತ್ತಾರೆ.!

ಇ-ಮೇಲ್ , ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಡಿಜಿಟಲ್ ಹವ್ಯಾಸ ಎಂದು ಕರೆಯಲಾಗುತ್ತದೆ. ಶೇ 60 ರಷ್ಟು ಜನರು ಪ್ರತಿ ಗಂಟೆಗೊಮ್ಮೆ ಮೇಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಇಣುಕುತ್ತಾರೆ. ಇವರಲ್ಲಿ ಡೆಸ್ಕ್‌ಟಾಪ್‌ ಬಳಕೆದಾರರಿಗಿಂತ ಸ್ಮಾರ್ಟ್‌ಫೋನ್‌ ಬಳಕೆದಾರರೆ ಹೆಚ್ಚಿನ ಪ್ರಮಾಣದಲ್ಲಿದ್ದಾರೆ.

ಮಾನಸಿಕ ಒತ್ತಡ ಕಾರಣ!!

ಮಾನಸಿಕ ಒತ್ತಡ ಕಾರಣ!!

ಒಟ್ಟಾರೆ ಇ-ಮೇಲ್ ಬಳಕೆದಾರರಲ್ಲಿ ಶೇ 52 ರಷ್ಟು ಜನರು ಪ್ರತಿದಿನ ಇ-ಮೇಲ್ ಚೆಕ್ ಮಾಡದಿದ್ದರೂ, ಶೇ 29 ರಷ್ಟು ಬಳಕೆದಾರರು ನಿಯಮಿತವಾಗಿ ಮೇಲ್‌ಗಳನ್ನು ಚೆಕ್ ಮಾಡುತ್ತಾರೆ.!! ಉಳಿದವರು ಇ-ಮೇಲ್ ನೋಡದಿರುವುದಕ್ಕೆ ಕೆಲಸ ಹಾಗೂ ಮಾನಸಿಕ ಒತ್ತಡವೇ ಕಾರಣ ಎಂಬುದು ಈ ಅಧ್ಯಯನ ವರದಿ ಹೇಳಿದೆ.!!

ಓದಿರಿ:ಹೆಚ್‌ಡಿ, ಹೈ ಹೆಚ್‌ಡಿ, 4K ಟಿವಿಗಳು ಎಂದರೇನು?..ನಿಮಗೆ ಗೊತ್ತಿಲ್ಲದ ಟಿವಿ ಪ್ರಪಂಚವಿದು!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
We all recognize to a large degree the attackers are collaborating.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot