ಹೆಚ್‌ಡಿ, ಹೈ ಹೆಚ್‌ಡಿ, 4K ಟಿವಿಗಳು ಎಂದರೇನು?..ನಿಮಗೆ ಗೊತ್ತಿಲ್ಲದ ಟಿವಿ ಪ್ರಪಂಚವಿದು!!

ಇಂದು ಟಿವಿ ಖರೀದಿಸಲು ಹೋದರೆ, ಒಂದು ಟಿವಿಗೆ ಎಚ್​ಡಿ ರೆಡಿ ಎಂಬ ಹಣೆಪಟ್ಟಿಯಿದ್ದರೆ ಇನ್ನೊಂದಕ್ಕೆ ಫುಲ್ ಎಚ್​ಡಿ ಎಂದು ಬರೆಯಲಾಗಿರುತ್ತದೆ ಮತ್ತೊಂದು ಟಿವಿ ‘4ಕೆ’ ಎಂಬ ಕಿರೀಟ ಹೊತ್ತಿರುತ್ತದೆ.!!

|

ಸ್ಮಾರ್ಟ್‌ಫೋನ್‌ಗಳಂತೆ ಅತ್ಯಂತ ವೇಗವಾಗಿ ಬದಲಾಗುತ್ತಿರುವ ಮತ್ತೊಂದು ಎಲೆಕ್ಟ್ರಾನಿಕ್ ಗ್ಯಾಜೆಟ್ ಎಂದರೆ ಅದು "ಟಿವಿ" ಮಾತ್ರ.! ವೈಟ್‌ ಅಂಡ್ ಬ್ಲಾಕ್‌ ತಂತ್ರಜ್ಞಾನದ ಕಾಲದಿಂದ ಹೆಚ್‌ಡಿ ತಲುಪಿ ಇಂದು 4K, 5K ವೇಗದಲ್ಲಿ ಓಡುತ್ತಿರುವ ಟಿವಿಗಳಿಗೆ ಬಲು ಬೇಡಿಕೆ ಇರುವುದು ಮಾತ್ರ ಸುಳ್ಳಲ್ಲ.!!

ಇಂದು ಟಿವಿ ಖರೀದಿಸಲು ಹೋದರೆ, ಒಂದು ಟಿವಿಗೆ ಎಚ್​ಡಿ ರೆಡಿ ಎಂಬ ಹಣೆಪಟ್ಟಿಯಿದ್ದರೆ ಇನ್ನೊಂದಕ್ಕೆ ಫುಲ್ ಎಚ್​ಡಿ ಎಂದು ಬರೆಯಲಾಗಿರುತ್ತದೆ ಮತ್ತೊಂದು ಟಿವಿ '4ಕೆ' ಎಂಬ ಕಿರೀಟ ಹೊತ್ತಿರುತ್ತದೆ.! ಹಾಗಾದರೆ, ಏನಿದು ಹೆಚ್‌ಡಿ, ಹೈ ಹೆಚ್‌ಡಿ, 4K ಮತ್ತು 5K ಎಂಬ ಪ್ರಶ್ನೆ ಎಲ್ಲರಿಗೂ ಮೂಡುತ್ತದೆ.!! ಹಾಗಾಗಿ, ಇಂದಿನ ಲೇಖನದಲ್ಲಿ ಇವುಗಳ ಬಗ್ಗೆ ಸಂಪೂರ್ಣವಾಗಿ ತಿಳಿಯಿರಿ.!!

ರೆಸಲ್ಯೂಷನ್ ಮಾಪನ!!

ರೆಸಲ್ಯೂಷನ್ ಮಾಪನ!!

ಇದೆಲ್ಲ ಆಯಾ ಟಿವಿ ಪರದೆಯ ರೆಸಲ್ಯೂಷನ್ ಎಷ್ಟು ಎನ್ನುವುದನ್ನು ಸೂಚಿಸುತ್ತದೆ ಎನ್ನುವುದರ ಮೇಲೆ ಟಿವಿಗಳ ವೀಕ್ಷಣೆ ಗುಣಮಟ್ಟವನ್ನು ಅಳೆಯಲಾಗುತ್ತದೆ. ಸರಳವಾಗಿ ಹೇಳಬೇಕಾದರೆ ಪರದೆಯ ಉದ್ದ-ಅಗಲದಲ್ಲಿ ಎಷ್ಟು ಚುಕ್ಕೆಗಳು ಮೂಡಿ ನಮಗೆ ಚಿತ್ರವನ್ನು ತೋರಿಸುತ್ತವೆ ಎನ್ನುವುದರ ಮಾಪನ ಇದಾಗಿದೆ.

ಫುಲ್ ಎಚ್​ಡಿ vs 4ಕೆ ಟಿವಿ!!

ಫುಲ್ ಎಚ್​ಡಿ vs 4ಕೆ ಟಿವಿ!!

ಫುಲ್ ಎಚ್​ಡಿ ಟಿವಿ ಪರದೆಯ ರೆಸಲ್ಯೂಷನ್ 1920*1080 ಪಿಕ್ಸೆಲ್​ಗಳಷ್ಟಿದ್ದರೆ 4ಕೆ ಪರದೆಗಳದು 3840*2160 ಪಿಕ್ಸೆಲ್ ಆಗಿರುತ್ತದೆ. ಅಂದರೆ, ರೆಸಲ್ಯೂಷನ್ ಲೆಕ್ಕದಲ್ಲಿ 4ಕೆ ಪರದೆಗಳು ಫುಲ್ ಎಚ್​ಡಿಗಿಂತ ನಾಲ್ಕು ಪಟ್ಟು ಉತ್ತಮವಾಗಿರುತ್ತವೆ.!!

ಅಲ್ಟ್ರಾ ಎಚ್​ಡಿ!!

ಅಲ್ಟ್ರಾ ಎಚ್​ಡಿ!!

4ಕೆಗಿಂತ ನಾಲ್ಕು ಪಟ್ಟು ಉತ್ತಮವಾದ (7680*4320 ಪಿಕ್ಸೆಲ್) 8ಕೆ ರೆಸಲ್ಯೂಷನ್ ಕೂಡ ಇದೆ. 4ಕೆ - 8ಕೆಗಳೆರಡನ್ನೂ ಸೇರಿಸಿ ಇವುಗಳನ್ನು ‘ಅಲ್ಟ್ರಾ ಎಚ್​ಡಿ' ಎಂದು ಕರೆಯುವ ಅಭ್ಯಾಸವೂ ಇದೆ. ಈ ಗುಣಮಟ್ಟದ ವಿಡಿಯೋ ಚಿತ್ರಣ ಪರದೆಯ ಮೇಲೆ ಮೂಡಿತೆಂದರೆ ಅದು ನೈಜ ದೃಶ್ಯದಂತೆಯೇ ಕಂಡರೂ ಅಚ್ಚರಿಯಿಲ್ಲ!!

10ಕೆ ವೀಕ್ಷಿಸುವ ತಂತ್ರಜ್ಞಾನ ಬರಲಿದೆ.!!

10ಕೆ ವೀಕ್ಷಿಸುವ ತಂತ್ರಜ್ಞಾನ ಬರಲಿದೆ.!!

ಇಷ್ಟೆಲ್ಲಾ ವಿಷಯವನ್ನು ಇಂದು ಹೇಳಲು ಕಾರ8K ಗಿಂತಲೂ ಮಿಗಿಲಾದ ಗುಣಮಟ್ಟದ ವಿಡಿಯೋ ವೀಕ್ಷಣೆ ಸಾಧ್ಯವಾಗಿಸಲಿರು ‘ಎಚ್​ಡಿಎಂಐ 2.1' ಆವೃತ್ತಿ ತಂತ್ರಜ್ಞಾನ ಅಭಿವೃದ್ದಿಯಾಗಿದೆ.!! ಉನ್ನತ ಗುಣಮಟ್ಟದ ಚಿತ್ರಗಳನ್ನು ವೀಕ್ಷಿಸುವ ಅನುಭವ ಈ ತಂತ್ರಜ್ಞಾನದಿಂದ ದೊರಕುವುದು ಸಾಧ್ಯ ಎಂದು ತಜ್ಞರು ಹೇಳುತ್ತಾರೆ.!!

ನಿಮಗೆ ಗೊತ್ತಿರಲಿ!!

ನಿಮಗೆ ಗೊತ್ತಿರಲಿ!!

ಹೆಚ್‌ಡಿ, ಹೈ ಹೆಚ್‌ಡಿ, 4K ಮತ್ತು 5K ಯಾವುದೇ ಟಿವಿ ಇದ್ದರೂ ಕೂಡ ಉತ್ತಮವಾಗಿ ಚಿತ್ರ ನೋಡಲು ವಿಡಿಯೋ ರೆಸಲ್ಯೂಷನ್ ಕೂಡ ಹೆಚ್ಚಿರಬೇಕು.! ನಿಜ ಹೇಳಬೇಕು ಎಂದರೆ ನಾವಿಂದು 4k ಟಿವಿಗಳನ್ನು ಖರೀದಿಸುತ್ತಿದ್ದರೂ ಅಂಹ ವಿಡಿಯೋಗಳು ಮಾತ್ರ ನಮಗೆ ಸಿಗುತ್ತಿಲ್ಲ.!!

ಬಿಟ್‌ಕಾಯಿನ್ ಖರೀದಿಸಿದವರಿಗೆ ತೆರಿಗೆ ಇಲಾಖೆ ನೋಟಿಸ್!!..ಖರೀದಿಸಿದವರು ಎಷ್ಟು ಜನ ಗೊತ್ತಾ!?ಬಿಟ್‌ಕಾಯಿನ್ ಖರೀದಿಸಿದವರಿಗೆ ತೆರಿಗೆ ಇಲಾಖೆ ನೋಟಿಸ್!!..ಖರೀದಿಸಿದವರು ಎಷ್ಟು ಜನ ಗೊತ್ತಾ!?

Best Mobiles in India

English summary
Let's look at the most important difference between 4K and 1080p.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X