ಇನ್ಮುಂದೆ ವಿಮಾನಯಾನದ ವೇಳೆ ಇಂಟರ್‌ನೆಟ್ ಬಳಕೆ ಮಾಡಬಹುದು!!

Written By:

ಭಾರತೀಯ ವಿಮಾನದೊಳಗೆ ಇರುವ ಇಂಟರ್‌ನೆಟ್ ಬಳಕೆ ನಿಯಂತ್ರಣವನ್ನು ಭದ್ರತಾ ಏಜೆನ್ಸಿ ಸ್ವಲ್ಪ ಸಡಿಲಗೊಳಿಸಲು ಮುಂದಾಗಿದೆ. ಹೌದು, ವೈಫೈ ಬಳಕೆಗೆ ಅವಕಾಶವಿದ್ದು, ಇನ್ನು ವಿಮಾನಯಾನ ಮಾಡುವಾಗ ಪ್ರಯಾಣಿಕರು ಇಮೇಲ್ ಮತ್ತು ಇತರ ಡೇಟಾ ಉಪಯೋಗಿಸಲು ಅನುಮತಿ ನೀಡಿದೆ.!!

ಆದರೆ, ವಿಮಾನಯಾನದಲ್ಲಿ ಇಂಟರ್‌ನೆಟ್ ದುರುಪಯೋಗವನ್ನು ತಡೆಗಟ್ಟಲು ಕೆಲವು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಸೋಮವಾರ, ಗೃಹ ಸಚಿವಾಲಯದ ಅಧಿಕಾರಿಯೋರ್ವರು ವಿಮಾನದಲ್ಲಿ ವೈಫೈ ಅಳವಡಿಸಲು ಅನುಮತಿ ನೀಡಲಾಗುವುದು ಎಂದು ಹೇಳಿದ್ದಾರೆ

ಇನ್ಮುಂದೆ ವಿಮಾನಯಾನದ ವೇಳೆ ಇಂಟರ್‌ನೆಟ್ ಬಳಕೆ ಮಾಡಬಹುದು!!

ಪ್ರಯಾಣಿಕರು ತಮ್ಮ ಮೊಬೈಲ್ ಮತ್ತು ಕಂಪ್ಯೂಟರ್ ಸಾಧನ ಬಳಕೆ ಮಾಡಲು ಅನುಮತಿ ನೀಡಲಾದರೂ, ವಿಮಾನ ಸಿಬ್ಬಂದಿ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ನಡುವಿನ ಸಂವಹನದಲ್ಲಿ ವೈಫೈ ಸಿಗ್ನಲ್‌ಗಳ ಬಳಕೆ ಇಲ್ಲ ಎನ್ನುವ ಷರತ್ತನ್ನು ಹೊಸ ನಿಯಮ ಒಳಗೊಂಡಿದೆ.

ವಿಮಾನ ಸುರಕ್ಷತೆಗೆ ಅಪಾಯವನ್ನು ಉಂಟುಮಾಡಬಹುದು ಎಂಬುದಕ್ಕೆ ಇದಕ್ಕೆ ಕಾರಣವಾಗಿದೆ. ಇನ್ನು ಕೆಲ ಭದ್ರತಾ ಸಂಸ್ಥೆಗಳು ವಿಮಾನಗಳಲ್ಲಿ ಅಂತರ್ಜಾಲ ಸೇವೆಗಳನ್ನು ಟೀಕಿಸಿವೆ. ಯಾವುದೇ ಸಂಭಾವ್ಯ ಅಪಹರಣಕಾರ ಅಥವಾ ಭಯೋತ್ಪಾದಕರು ಭೂಮಿಯನ್ನು ಸಂಪರ್ಕಿಸಲು ಸಾಧ್ಯವಾಗುತ್ತದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಇನ್ಮುಂದೆ ವಿಮಾನಯಾನದ ವೇಳೆ ಇಂಟರ್‌ನೆಟ್ ಬಳಕೆ ಮಾಡಬಹುದು!!

ಅಂತರರಾಷ್ಟ್ರೀಯ ವಿಮಾನಯಾನಗಳಲ್ಲಿ ವಿದೇಶಿ ವಿಮಾನಯಾನ ಸಂಸ್ಥೆಗಳು ವೈಫೈ ಸೇವೆ ನೀಡುತ್ತಿದ್ದಯ, ಭಾರತೀಯ ವಾಯುಪ್ರದೇಶದ ಮೇಲೆ ದೇಶಿ ವಿಮಾನಯಾನ ಸಂಸ್ಥೆಗಳು ವೈಫೈ ಸೇವೆ ನೀಡುವುದನ್ನು ಅಮಾನತುಗೊಳಿಸಲಾಗಿದೆ.!!

ಓದಿರಿ: 5,999 ರೂ. ಬೆಲೆಯ 'ಮೋಟೊ ಸಿ' ಸ್ಮಾರ್ಟ್‌ಫೋನ್ ಫೀಚರ್ಸ್ ಏನು?

English summary
security agencies have given the go-ahead for in-flight WiFi services . to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot