Just In
- 51 min ago ವಿವೋ T3x 5G ಫೋನಿನ ಫಸ್ಟ್ ಸೇಲ್ ಯಾವಾಗ?..ಆಫರ್ ಬೆಲೆ ಎಷ್ಟು?
- 2 hrs ago Infinix: ಭಾರತದಲ್ಲಿಂದು ಇನ್ಫಿನಿಕ್ಸ್ ನೋಟ್ 40 ಪ್ರೊ 5G ಮೊದಲ ಸೇಲ್: ಬೆಲೆ, ಫೀಚರ್ಸ್ ಪರಿಶೀಲಿಸಿ
- 4 hrs ago ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- 5 hrs ago WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
Don't Miss
- News ‘ಸೋಲಿನ ಭೀತಿಯಿಂದ ಕಮಲ-ದಳ ಮೈತ್ರಿ; ರಾಜ್ಯದ 25 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು’
- Automobiles ಆಕರ್ಷಕ ಯಮಹಾ ಏರಾಕ್ಸ್ 155 ವರ್ಷನ್ ಎಸ್ ಸ್ಕೂಟರ್ ಬಿಡುಗಡೆ
- Finance BMRCL: ಚಲ್ಲಘಟ್ಟ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಹೊಸ ಪಾದಚಾರಿ ಸೇತುವೆ
- Lifestyle ಮೊದಲ ಯತ್ನದಲ್ಲೇ ಯುಪಿಎಸ್ಸಿ ಪಾಸ್..! ಸ್ಫೂರ್ತಿಯಾಗಿದ್ದು ವಿರಾಟ್..!
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Movies "ದಪ್ಪ ಇದ್ದೀಯಾ ಅಂದ್ರೆ ದಿನ ಯಾರೊಂದಿಗೋ ಇದ್ದೀಯಾ ಅನ್ನೂ ಕೆಟ್ಟ ಮನ:ಸ್ಥಿತಿಯಿದೆ"; ನಟಿ ನೀತು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಶ್ವದಲ್ಲೇ ಮೊದಲ ಬಾರಿಗೆ ನಗರವೊಂದರಲ್ಲಿ 'ಮುಖಚಹರೆ ಪತ್ತೆ' ನಿಷೇಧ!?..ಏಕೆ ಗೊತ್ತಾ?
ಆಧುನಿಕ ತಂತ್ರಜ್ಞಾನದ ತವರೂರಾಗಿರುವ ಅಮೆರಿಕಾದ ಪ್ರಖ್ಯಾತ ನಗರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮುಖಚಹರೆ ಪತ್ತೆ ತಂತ್ರಜ್ಞಾನವನ್ನು ನಿಷೇಧಿಸುವ ಸಾಧ್ಯತೆ ಹೆಚ್ಚಿದೆ. ಅನುಮಾನಾಸ್ಪದ ಎನಿಸಿದ ವ್ಯಕ್ತಿಗಳ ಮುಖಚಹರೆ ಹಾಗೂ ಚಟುವಟಿಕೆಗಳನ್ನು ಟ್ರಾಕಿಂಗ್ ಮಾಡುತ್ತಿದ್ದ ಮುಖಚಹರೆ ಪತ್ತೆ ತಂತ್ರಜ್ಞಾನವು ಇದೀಗ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದು, ಇದೇ ಮೊದಲ ಬಾರಿಗೆ ವಿಶ್ವದ ನಗರವೊಂದರಲ್ಲಿ ಮುಖಚಹರೆ ಪತ್ತೆ ತಂತ್ರಜ್ಞಾನ ನಿಷೇಧವಾಗುವ ಸಾಧ್ಯತೆಯನ್ನು ಮುಂದಿಡಲಾಗಿದೆ.
ಹೌದು, ಸ್ಯಾನ್ ಫ್ರಾನ್ಸಿಸ್ಕೋ ನಗರದ ಹಲವು ಬೀದಿಗಳು ಸೇರಿದಂತೆ ಅಲ್ಲಿನ ಮೆಟ್ರೋ ನಿಲ್ದಾಣಗಳಲ್ಲಿ ಮುಖ ಚಹರೆ ಪತ್ತೆ ಹಾಗೂ ರೆಕಾರ್ಡಿಂಗ್ ತಂತ್ರಜ್ಞಾನ ಈಗಾಗಲೇ ಬಳಕೆಯಲ್ಲಿದೆ. ಎಲ್ಲರನ್ನೂ ಟ್ರ್ಯಾಕಿಂಗ್ ಮಾಡುವ ಈ ತಂತ್ರಜ್ಞಾನದಲ್ಲಿ ಸೆರೆಹಿಡಿದ ಸಿಸಿಟಿವಿ ಚಿತ್ರಗಳನ್ನು ನಿಲ್ದಾಣದ ದೊಡ್ಡ ಸ್ಕ್ರೀನ್‌ಗಳನ್ನು ಪ್ರದರ್ಶಿಸಲಾಗುತ್ತಿದ್ದು, ಇದರಿಂದ ಸಭ್ಯರು ಕೂಡ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹಾಗಾಗಿ, ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಮುಖಚಹರೆ ಪತ್ತೆ ತಂತ್ರಜ್ಞಾನವು ನಿಷೇಧವಾಗುತ್ತಿದೆ ಎಂದು ತಿಳಿದುಬಂದಿದೆ.
ನಗರದಲ್ಲಿ ಅಳವಡಿಸಿರುವ ಮುಖಚಹರೆ ಪತ್ತೆ ತಂತ್ರಜ್ಞಾನ ಸಭ್ಯ ಶ್ರೀಸಾಮಾನ್ಯರನ್ನೂ ಸಹ ಕಳ್ಳನಂತೆ ಬಿಂಬಿಸುತ್ತಿರುವುದು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದೆ. ಸಾಮಾನ್ಯನನ್ನೂ ಕಳ್ಳರಂತೆ ತೋರಿಸುತ್ತಿರುವ ಅದರಲ್ಲೂ ಕಪ್ಪು ಬಣ್ಣದ ಅಮೆರಿಕನ್ ಜನಾಂಗವು ಇದರಿಂದ ಸಮಸ್ಯೆಯನ್ನು ಎದುರಿಸಲ್ಪಟ್ಟಿರುವುದರಿಂದ ಮುಖಚಹರೆ ಪತ್ತೆ ತಂತ್ರಜ್ಞಾನವನ್ನು ನಿಷೇಧಿಸಬೇಕು ಎಂದು ಕೇಳಿಬಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಸ್ಯಾನ್‌ಫ್ರಾನ್ಸಿಸ್ಕೋ ನಗರ ಆಡಳಿತ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
'ನಗರದಲ್ಲಿ ಬಳಸಲಾಗುತ್ತಿದ್ದ ಮುಖಚಹರೆ ಪತ್ತೆ ತಂತ್ರಜ್ಞಾನ ಕ್ರಿಮಿನಲ್‌ಗಳನ್ನು ಹೆದರಿಸಲು ಮಾತ್ರ ಇದ್ದದ್ದು' ಎಂದು ಹೋರಾಟಗಾರರಿಗೆ ಸಮಜಾಯಿಷಿ ನೀಡಿರುವ ಸ್ಯಾನ್‌ಫ್ರಾನ್ಸಿಸ್ಕೋ ಆಡಳಿತ ಇಲಾಖೆ, ಮುಖಚಹರೆ ಪತ್ತೆ ತಂತ್ರಜ್ಞಾನವನ್ನು ಶೀಘ್ರವೇ ಹಿಂತೆಗೆದುಕೊಳ್ಳುವುದಾಗಿ ತಿಳಿಸಿದೆ. ಹಾಗೇನಾದರೂ ಆದಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಪಟ್ಟಣ, ಮುಖಚಹರೆ ಪತ್ತೆ ತಂತ್ರಜ್ಞಾನವನ್ನು ನಿಷೇಧಿಸುವ ವಿಶ್ವದ ಮೊದಲ ಪಟ್ಟಣ ಎನಿಸಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇನ್ನು ಇತ್ತೀಚಿಗಷ್ಟೇ ಚೀನಾದ ನಿಂಗ್ಬೋನ ನಗರದಲ್ಲಿ ಒಂದೇ ರೂಮ್ನಲ್ಲಿ ವಾಸವಿದ್ದ ರೂಮ್ ಮೇಟ್ ಓರ್ವನ ಸ್ಕ್ರೀನ್ ಅನ್ಲಾಕ್ ಮಾಡಿ ಆತನ ವಿ ಚಾಟ್ ಅಕೌಂಟ್ನಿಂದ ತಮ್ಮ ಅಕೌಂಟ್ಗೆ 10 ಸಾವಿರ ಯಾನ್ (ಸುಮಾರು 1 ಲಕ್ಷ ರೂಪಾಯಿ) ಟ್ರಾನ್ಸ್ಫರ್ ಮಾಡಿಕೊಂಡ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಆತ ಕಣ್ಣು ಮಚ್ಚಿದ್ದರು ಸಹ ಸ್ಕ್ರೀನ್ ಲಾಕ್ ಓಪನ್ ಆಗಿದೆ ಎಂದು ಪೊಲೀಸರು ಹೇಳಿದ್ದರು. ಇದು ಇತ್ತೀಚಿನ ಮುಖಚಹರೆ ಪತ್ತೆ ತಂತ್ರಜ್ಞಾನದ ವೈಪಲ್ಯಗಳಲ್ಲಿ ಒಂದೆಂದು ಹೇಳಲಾಗಿತ್ತು.
ಓದಿರಿ: 'ಟಿಕ್ ಟಾಕ್' ಬಳಕೆದಾರರಿಗೆ ಮತ್ತೊಂದು ಬಿಗ್ ಶಾಕ್!!
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999