ಪ್ರೇಮಿಗಳಿಗಾಗಿ ಹೊಸ ಆಪ್‌!

Posted By:

ಸ್ಮಾರ್ಟ್‌‌ಫೋನ್‌ ಬಂದ ಮೇಲೆ ಪ್ರತಿಯೊಂದು ವಿಚಾರಕ್ಕೆ ಸಂಬಂಧಿಸಿಂದ ಕಂಪೆನಿಗಳು ಹೊಸ ಹೊಸ ಆಪ್‌ ತಯಾರಿಸಿವೆ.ಈಗ ನೋಡಿ ಪ್ರೇಮಿಗಳಿಗಾಗಿಯೇ ಕಂಪೆನಿಯೊಂದು ಆಪ್‌ ತಯಾರಿಸಿದೆ.

ಫೋನ್‌ ಮೂಲಕ ರಾತ್ರಿ ಕರೆ ಮಾಡಿ ಮಾತನಾಡೋಣ ಅಂದರೆ ಮನೆಯಲ್ಲಿದ್ದ ಉಳಿದವರಿಗೆ ಕಿರಿಯಾಗುತ್ತದೆ. ಇನ್ನೂ ವಾಟ್ಸ್‌ ಆಪ್‌ ಮೂಲಕ ಚಾಟ್‌ ಮಾಡಬಹುದಾದರೂ ಕೆಲವೊಮ್ಮೆ ಪ್ರಿಯಕರ/ಪ್ರಿಯತಮೆಗೆ ಹೋಗಬೇಕಾದ ಮೆಸೇಜ್‌ ತಪ್ಪಾಗಿ ವಾಟ್ಸ್‌ ಆಪ್‌ ಗ್ರೂಪ್‌ಗೆ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಆಪ್‌ ಮೂಲಕವೇ ಕಡಿಮೆ ಖರ್ಚಿ‌ನಲ್ಲಿ ಚಾಟ್‌ ಮಾಡಬೇಕು ಎಂದು ಯೋಚಿಸುತ್ತಿರುವ ಪ್ರೇಮಿಗಳಿಗಾಗಿ ಕೊರಿಯಾದ ಕಂಪೆನಿಯೊಂದ ಬಿಟ್‌ವಿನ್‌(Between) ಹೆಸರಿನ ಹೊಸ ಆಪ್‌ ತಯಾರಿಸಿದೆ.

ಈ ಆಪ್‌ನ ವಿಶೇಷತೆ ಎಂದರೆ ಇದರಲ್ಲಿ ಇಬ್ಬರು ಮಾತ್ರ ಸ್ನೇಹಿತರಾಗಬಹುದು. ಮೂರನೇ ವ್ಯಕ್ತಿ ಅಥವಾ ಗ್ರೂಪ್‌ಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ.ವಾಟ್ಸ್‌ ಆಪ್‌ನಲ್ಲಿದ್ದಂತೆ ಫೋಟೋ,ವಿಡಿಯೋ,ವಾಯ್ಸ್‌ ಸಂದೇಶಗಳನ್ನು ಉಚಿತವಾಗಿ ಈ ಆಪ್‌ ಮೂಲಕ ಕಳುಹಿಸಬಹುದು.ಜೊತೆಗೆ ಒಂದು ಕ್ಯಾಲೆಂಡರ್‌ ಆಯ್ಕೆ ಸಹ ಇದರಲ್ಲಿದ್ದು ಇಬ್ಬರ ನಡುವಿನ ಸ್ಮರಣೀಯ ಘಟನೆಯನ್ನು ಶಾಶ್ವತವಾಗಿ ದಾಖಲಿಸಬಹುದು.

6.9ಎಂಬಿ ಗಾತ್ರವನ್ನು ಈ ಆಪ್‌ ಹೊಂದಿದ್ದು, ಆಂಡ್ರಾಯ್ಡ್‌ ಜಿಂಜರ್‌ ಬ್ರಿಡ್‌ ಸೇರಿದಂತೆ ನಂತರ ಬಿಡುಗಡೆಯಾದ ಐಸಿಎಸ್‌,ಜೆಲ್ಲಿ ಬೀನ್‌,ಕಿಟ್‌ಕ್ಯಾಟ್‌ ಓಎಸ್‌ ಸ್ಮಾರ್ಟ್‌‌ಫೋನ್‌ ಹೊಂದಿರುವ  ಪ್ರೇಮಿಗಳು, ಈ ಅಪ್ಲಿಕೇಶನ್‌ ಮೂಲಕ ಸಂದೇಶಗಳನ್ನು ಕಳುಹಿಸಬಹುದು. ಐಓಎಸ್‌ನಲ್ಲೂ ಈ ಆಪ್‌ ಲಭ್ಯವಿದ್ದು,13.7 ಎಂಬಿ ಗಾತ್ರದ  ಆಪ್‌ನ್ನು ಐ ಟ್ಯೂನ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಇದನ್ನೂ ಓದಿ: ವಾಟ್ಸ್‌ಆಪ್‌ನಲ್ಲಿ ಅಂಥ ವಿಶೇಷತೆ ಏನಿದೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಪ್ರೇಮಿಗಳಿಗಾಗಿ ಹೊಸ ಆಪ್‌!

ಪ್ರೇಮಿಗಳಿಗಾಗಿ ಹೊಸ ಆಪ್‌!

1

ಬಿಟ್‌ವಿನ್‌ ಆಪ್‌

 ಪ್ರೇಮಿಗಳಿಗಾಗಿ ಹೊಸ ಆಪ್‌!

ಪ್ರೇಮಿಗಳಿಗಾಗಿ ಹೊಸ ಆಪ್‌!

2


ಬಿಟ್‌ವಿನ್‌ ಆಪ್‌

 ಪ್ರೇಮಿಗಳಿಗಾಗಿ ಹೊಸ ಆಪ್‌!

ಪ್ರೇಮಿಗಳಿಗಾಗಿ ಹೊಸ ಆಪ್‌!

3

ಬಿಟ್‌ವಿನ್‌ ಆಪ್‌

 ಪ್ರೇಮಿಗಳಿಗಾಗಿ ಹೊಸ ಆಪ್‌!

ಪ್ರೇಮಿಗಳಿಗಾಗಿ ಹೊಸ ಆಪ್‌!

4

ಬಿಟ್‌ವಿನ್‌ ಆಪ್‌

 ಪ್ರೇಮಿಗಳಿಗಾಗಿ ಹೊಸ ಆಪ್‌!

ಪ್ರೇಮಿಗಳಿಗಾಗಿ ಹೊಸ ಆಪ್‌!

5

ಬಿಟ್‌ವಿನ್‌ ಆಪ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting