ಏಪ್ರಿಲ್‌‌ನಲ್ಲಿ ವಿಂಡೋಸ್‌ ಎಕ್ಸ್‌ಪಿಗೆ ಮೈಕ್ರೋಸಾಫ್ಟ್‌ ಬೆಂಬಲ ಸ್ಥಗಿತ

Posted By:

ಏಪ್ರಿಲ್‌ ಬಳಿಕ ಬ್ಯಾಂಕ್‌ ಎಟಿಎಂ, ಕಂಪ್ಯೂಟರ್ ಆಧಾರಿತ ಕೈಗಾರಿಕಾ ನಿಯಂತ್ರಣ ವ್ಯವಸ್ಥೆಗಳು ಹ್ಯಾಕರ್‌ ದಾಳಿಗೆ ತುತ್ತಾಗುವ ಸಾಧ್ಯತೆಯಿದೆ.

ಹೌದು. ಮೈಕ್ರೋಸಾಫ್ಟ್‌ ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಂಗೆ ನೀಡುತ್ತಿದ್ದ ತಾಂತ್ರಿಕ ಬೆಂಬಲವನ್ನು ಏಪ್ರಿಲ್‌ 8ಕ್ಕೆ ಸ್ಥಗಿತಗೊಳಿಸಲಿದೆ. ಏಪ್ರಿಲ್‌ 8 ಒಳಗೆ ಓಎಸ್‌ ಅಪ್‌ಗ್ರೇಡ್‌ ಮಾಡದಿದ್ದಲ್ಲಿ ಬ್ಯಾಂಕ್‌ ಎಟಿಎಂ, ಸೇರಿದಂತೆ ವಿವಿಧ ಕಂಪೆನಿಗಳ ಮಾಹಿತಿಗಳು ಹ್ಯಾಕರ್‌ಗಳ ಕೈಗೆ ಸುಲಭವಾಗಿ ಸಿಗುವ ಸಾಧ್ಯತೆಯಿದೆ.

ಮೈಕ್ರೋಸಾಫ್ಟ್‌ ಈ ಹಿಂದೆಯೇ ಎಕ್ಸ್‌ಪಿಗೆ ಬೆಂಬಲ ನಿಲ್ಲಿಸುವ ವಿಚಾರವನ್ನು ಪ್ರಕಟಿಸಿದ್ದು, ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಂ ಬದಲಾಗಿ ವಿಂಡೋಸ್‌ 7,ವಿಂಡೋಸ್‌ 8 ಅಥವಾ ವಿಂಡೋಸ್‌ 8.1ಗೆ ಅಪ್‌ಗ್ರೇಡ್‌ ಮಾಡಿಕೊಳ್ಳಿ ಎಂದು ಬ್ಯಾಂಕ್‌ಗಳಿಗೆ ಸೂಚಿಸಿತ್ತು. ಆದರೆ ವಿಶ್ವದ ಶೇ.95 ಎಟಿಎಂಗಳು ಈಗಲೂ ವಿಂಡೋಸ್‌ ಎಕ್ಸ್‌ಪಿಯಲ್ಲಿ ಕಾರ್ಯ‌ನಿರ್ವ‌ಹಿಸುತ್ತಿದ್ದು.ಬಡ ದೇಶಗಳಲ್ಲಿರುವ ಬ್ಯಾಂಕ್‌ಗಳು ಅರ್ಥಿ‌ಕ ಸಂಕಷ್ಟದಿಂದಾಗಿ ಇನ್ನೂ ವಿಂಡೋಸ್‌ ಎಕ್ಸ್‌‌ಪಿಯನ್ನೇ ನೆಚ್ಚಿಕೊಂಡಿದೆ.

 ಏಪ್ರಿಲ್‌‌ನಲ್ಲಿ ವಿಂಡೋಸ್‌ ಎಕ್ಸ್‌ಪಿಗೆ ಮೈಕ್ರೋಸಾಫ್ಟ್‌ ಬೆಂಬಲ ಸ್ಥಗಿತ

ವಿಂಡೋಸ್ ಜನರಲ್ ಮ್ಯಾನೇಜರ್ ಅಮರೀಶ್ ಗೋಯಲ್ ಪ್ರಕಾರ ಭಾರತದಲ್ಲಿ 34 ಸಾವಿರಕ್ಕೂ ಅಧಿಕ ಬ್ಯಾಂಕ್‌ಗಳು ಈಗಲೂ ವಿಂಡೋಸ್ ಎಕ್ಸ್‌‌ಪಿಯನ್ನೇ ಬಳಸುತ್ತಿದೆ.ಈ ಪಟ್ಟಿಯಲ್ಲಿ ಸಾರ್ವ‌ಜನಿಕ ವಲಯದ ಬ್ಯಾಂಕ್‌ಗಳ ಸಂಖ್ಯೆ ಸಾಕಷ್ಟಿದೆ. ಒಂದು ವೇಳೆ ಓಎಸ್‌ ಅಪ್‌ಗ್ರೇಡ್‌ ಮಾಡದಿದ್ದಲ್ಲಿ ಡೆಡ್‌ಲೈನ್‌ ಬಳಿಕ ಬ್ಯಾಂಕ್‌‌ಗಳಲ್ಲಿ ಭದ್ರತಾ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಸಿದ್ದಾರೆ.

ಬ್ಯಾಂಕ್‌ಗಳು ನಿಧಾನಗತಿಯಲ್ಲಿ ಓಎಸ್‌ ಅಳವಡಿಸುತ್ತಿರುವುದರಿಂದಾಗಿ ಮೈಕ್ರೋಸಾಫ್ಟ್‌ ಎಕ್ಸ್‌‌ಪಿಗೆ ಜುಲೈ 2015ರವರೆಗೆ ಆಂಟಿ ಮಾಲ್‌ವೇರ್‌‌ ಬೆಂಬಲ ನೀಡುವುದಾಗಿ ಹೇಳಿದೆ.ಆದರೂ ಸುರಕ್ಷತೆಯ ದೃಷ್ಟಿಯಿಂದಾಗಿ ಬ್ಯಾಂಕ್‌ಗಳು ಅದಷ್ಟು ಬೇಗ ಓಎಸ್‌ ಅಪ್‌ಗ್ರೇಡ್‌ ಮಾಡುವುದು ಉತ್ತಮ ಎಂದು ಮೈಕ್ರೋಸಾಫ್ಟ್‌‌ ಸಲಹೆ ನೀಡಿದೆ.ಮೈಕ್ರೋಸಾಫ್ಟ್‌ 2001 ಅಗಸ್ಟ್‌ 24 ರಂದು ವಿಂಡೋಸ್‌ ಎಕ್ಸ್‌ಪಿಯನ್ನು ಬಿಡುಗಡೆ ಮಾಡಿತ್ತು.

ಇದನ್ನೂ ಓದಿ: ಅರವಿಂದ್‌ ಕೇಜ್ರಿವಾಲ್‌ ಮೈಕ್ರೋಸಾಫ್ಟ್ ಸಿಇಒ ಆದ್ರೆ ಹೇಗಿರುತ್ತೆ?

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot