Home
ಸುದ್ದಿಜಾಲ

ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ವಾಚ್‌, ಇಯರ್‌ಬಡ್ಸ್‌ ಲಾಂಚ್‌! ಬೊಂಬಾಟ್‌ ಫೀಚರ್ಸ್‌ ಆಯ್ಕೆ

ಭಾರತದಲ್ಲಿ ಹಲವಾರು ಸ್ಮಾರ್ಟ್‌ವಾಚ್‌ಗಳು ಹಾಗೂ ಇಯರ್‌ಬಡ್ಸ್‌ಗಳು ಲಭ್ಯ ಇವೆ. ಆದರೆ, ಇವುಗಳಲ್ಲಿ ಮೇಡ್‌ ಇನ್ ಇಂಡಿಯಾ (Made in India) ವಾಚ್‌ಗಳ ಸಂಖ್ಯೆ ಕಡಿಮೆ ಎಂದರೆ ತಪ್ಪಾಗಲಾರದು. ಈ ನಡುವೆ ವಿಂಗ್ಸ್ (Wings) ಮೇಡ್ ಇನ್ ಇಂಡಿಯಾ ಪ್ರೈಮ್ ಸ್ಮಾರ್ಟ್ ವಾಚ್ ಹಾಗೂ ಫ್ಲೋಬಡ್ಸ್ 300 ಇಯರ್‌ಬಡ್ಸ್‌ ಅನ್ನು ಅನಾವರಣ ಮಾಡಲಾಗಿದೆ.

ಹೌದು, ವಿಂಗ್ಸ್ ಭಾರತದಲ್ಲಿ ಹೊಸ ಡಿವೈಸ್‌ಗಳನ್ನು ಅನಾವರಣ ಮಾಡಿದ್ದು, ಈ ಮೂಲಕ ಧರಿಸಬಹುದಾದ ಡಿವೈಸ್‌ಗಳ ವಿಭಾಗದಲ್ಲಿ ದೊಡ್ಡ ಸಂಚಲನ ಉಂಟು ಮಾಡಿದೆ. ವಿಂಗ್ಸ್ ಪ್ರೈಮ್ ಸ್ಮಾರ್ಟ್ ವಾಚ್ (Wings Prime Smartwatch) 60Hz ರಿಫ್ರೆಶ್ ರೇಟ್‌ ಹೊಂದಿದ್ದರೆ, ವಿಂಗ್ಸ್ ಫ್ಲೋಬಡ್ಸ್ 300 ಇಯರ್‌ಬಡ್ (Flobuds 300 earbuds) 13mm ಹೈ ಫಿಡೆಲಿಟಿ ಡ್ರೈವರ್‌ ಮೂಲಕ ಉತ್ತಮ ಆಡಿಯೋ ಅನುಭವ ನೀಡಲಿದೆ. ಹಾಗಿದ್ರೆ, ಈ ಎರಡು ಡಿವೈಸ್‌ಗಳ ಬೆಲೆ ಹಾಗೂ ಫೀಚರ್ಸ್‌ ಬಗ್ಗೆ ತಿಳಿಯೋಣ ಬನ್ನಿ.

ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ವಾಚ್‌, ಇಯರ್‌ಬಡ್ಸ್‌ ಲಾಂಚ್‌! ಬೊಂಬಾಟ್‌ ಫೀಚರ್ಸ್

ವಿಂಗ್ಸ್ ಪ್ರೈಮ್ ಸ್ಮಾರ್ಟ್ ವಾಚ್ : ಈ ವಿಶೇಷ ಸ್ಮಾರ್ಟ್‌ವಾಚ್‌ 60Hz ರಿಫ್ರೆಶ್ ರೇಟ್‌ನೊಂದಿಗೆ 500 ನಿಟ್ಸ್ ಬ್ರೈಟ್‌ನೆಸ್‌ ಆಯ್ಕೆ ಪಡೆದಿದ್ದು, ಈ ಮೂಲಕ ಸ್ಪಷ್ಟವಾದ 1.96 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡಲಿದೆ. ಅದರಲ್ಲೂ ಈ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಮತ್ತು ಸ್ಮಡ್ಜ್‌ ನಿರೋಧಕವಾಗಿದ್ದು, ಈ ಮೂಲಕ ಯಾವಾಗಲೂ ಹೊಸತರಂತೆ ಕಾಣಿಸಿಕೊಳ್ಳಲಿದೆ.

ಇದರೊಂದಿಗೆ ಸುಧಾರಿತ ಸಿಂಗಲ್ ಚಿಪ್ ಬ್ಲೂಟೂತ್ ಕರೆ ಸೌಲಭ್ಯದ ಆಯ್ಕೆ ಇದ್ದು ಇದಕ್ಕಾಗಿ ಬ್ಲೂಟೂತ್ ಆವೃತ್ತಿ v5.3 ಹೊಂದಿದೆ. 120 ಸ್ಪೋರ್ಟ್ಸ್‌ ಮೋಡ್‌ಗಳು, ಹೃದಯ ಬಡಿತ ಮಾನಿಟರಿಂಗ್ ಮತ್ತು SpO2 ಟ್ರ್ಯಾಕಿಂಗ್ ಆಯ್ಕೆ 200+ ವಾಚ್ ಫೇಸ್‌ಗಳು, 2 ಇನ್‌ಬಿಲ್ಟ್‌ ಗೇಮ್‌, ಇ-ಕಾರ್ಡ್ ಬೆಂಬಲ, ಪಾಸ್‌ವರ್ಡ್ ಲಾಕ್, ಕ್ಯಾಮೆರಾ ಕಂಟ್ರೋಲ್‌ ಸೇರಿದಂತೆ ಅನೇಕ ಅಗತ್ಯ ಫೀಚರ್ಸ್‌ ಆಯ್ಕೆ ನೀಡಲಾಗಿದೆ.

ಉಳಿದಂತೆ ಈ ಸ್ಮಾರ್ಟ್‌ವಾಚ್(Smartwatch)‌ ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಕರೆ ಆಯ್ಕೆ ಇಲ್ಲದೆ 7 ದಿನಗಳವರೆಗೆ ಹಾಗೂ ಬ್ಲೂಟೂತ್‌ ಕರೆ ಸಕ್ರಿಯ ಆಗಿದ್ದಾಗ 3 ದಿನಗಳವರೆಗೆ ಬ್ಯಾಕಪ್‌ ನೀಡಲಿದೆ ಹಾಗೂ IP68 ರೇಟ್ ನೀಡಲಾಗಿದ್ದು, ಈ ಮೂಲಕ ವಾಟರ್‌ ಹಾಗೂ ಡಸ್ಟ್‌ ನಿರೋಧಕವಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ವಿಂಗ್ಸ್ ಲೈಫ್‌ಸ್ಟೈಲ್ ಫಿಟ್ ಆಪ್‌ಗೆ(Wings Lifestyle Fit App) ಬೆಂಬಲ ನೀಡಲಿದೆ.

ವಿಂಗ್ಸ್ ಫ್ಲೋಬಡ್ಸ್ 300 ಇಯರ್‌ಬಡ್ಸ್‌: ಇದೇ ವೇಳೆ ಆಕರ್ಷಕವಾದ ಇಯರ್‌ಬಡ್ಸ್‌ ಅನ್ನು ಸಹ ಅನಾವರಣ ಮಾಡಲಾಗಿದೆ. ಈ ಬಡ್ಸ್‌ ನಯವಾದ ಲೆದರ್ ತರಹದ ಫಿನಿಷ್ ಹೊಂದಿದ್ದು, ಉತ್ತಮ ಆಡಿಯೋ ಅನುಭವಕ್ಕಾಗಿ 13 ಎಂಎಂ ಹೈ-ಫಿಡೆಲಿಟಿ ಡ್ರೈವರ್‌ ಆಯ್ಕೆ ಪಡೆದುಕೊಂಡಿದೆ. ಅದರಲ್ಲೂ ಎಲ್ಇಡಿ ಆಯ್ಕೆ ಇದ್ದು, ವಿಶೇಷವಾಗಿ ಕಾಣಿಸಿಕೊಂಡಿವೆ.

ಇದರೊಂದಿಗೆ ಬ್ಲೂಟೂತ್ ಆವೃತ್ತಿ v5.3 ಅನ್ನು ಹೊಂದಿದ್ದು, 15 ಮಿಮೀ ಶ್ರೇಣಿಯೊಳಗೆ ಕೆಲಸ ಮಾಡಲಿದೆ. ಜೊತೆಗೆ ಬೋಲ್ಡ್ ಬೇಸ್‌ ತಂತ್ರಜ್ಞಾನದ ಆಯ್ಕೆ ಇದ್ದು, 40ms ವರೆಗಿನ ಅಲ್ಟ್ರಾ ಕಡಿಮೆ ಲೇಟೆನ್ಸಿಯೊಂದಿಗೆ ಗೇಮಿಂಗ್ ಮೋಡ್ ಆಯ್ಕೆ ಇದ್ದು, ಸ್ಮಾರ್ಟ್ ENC ಕರೆ ಸೌಲಭ್ಯ ಹಾಗೂ ಟಚ್‌ ಕಂಟ್ರೋಲ್‌ ಆಯ್ಕೆ ಮೂಲಕ ಬಳಕೆದಾರರು ಮ್ಯೂಸಿಕ್‌,ಕರೆ ಯನ್ನು ನಿಯಂತ್ರಣ ಮಾಡಬಹುದಾಗಿದೆ.

ಉಳಿದಂತೆ ಈ ವಿಂಗ್ಸ್‌ನ ಇಯರ್‌ಬಡ್ಸ್‌(Earbuds) ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ 50 ಗಂಟೆಗಳ ಪ್ಲೇ ಟೈಮ್‌ ನೀಡಲಿದೆ. ಇದಕ್ಕಾಗಿ ಟೈಪ್‌-ಸಿ ಚಾರ್ಜಿಂಗ್ ಇದ್ದು, IPX5 ರೇಟಿಂಗ್‌ ಹೊಂದುವ ಮೂಲಕ ವಾಟರ್‌ ರೆಸಿಸ್ಟೆಂಟ್‌ ಆಯ್ಕೆ ಪಡೆದಿದೆ. ಇದು ನಿಮಗೆ ಕಪ್ಪು ಮತ್ತು ಬಿಳಿಯ ಎರಡು ಬಣ್ಣದ ಆಯ್ಕೆಯಲ್ಲಿ ಲಭ್ಯ ಇರಲಿದೆ.

ಮೇಡ್‌ ಇನ್‌ ಇಂಡಿಯಾ ಸ್ಮಾರ್ಟ್‌ವಾಚ್‌, ಇಯರ್‌ಬಡ್ಸ್‌ ಲಾಂಚ್‌! ಬೊಂಬಾಟ್‌ ಫೀಚರ್ಸ್

ವಿಂಗ್ಸ್ ಪ್ರೈಮ್ ಸ್ಮಾರ್ಟ್ ವಾಚ್ ಬೆಲೆ ಹಾಗೂ ಲಭ್ಯತೆ: ಇನ್ನು ಬೆಲೆ ವಿಚಾರಕ್ಕೆ ಬರುವುದಾದರೆ ಇದರ ಸಾಮಾನ್ಯ ದರ 1,799ರೂ.ಗಳನ್ನು ಹೊಂದಿದ್ದು, ನೀವು ಈಗ ಇದನ್ನು 1,499ರೂ.ಗಳ ಬೆಲೆಗೆ ಖರೀದಿ ಮಾಡಬಹುದು. ಇದು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ಇದೆ. ಅದೇ ರೀತಿ ಫ್ಲೋಬಡ್ಸ್ 300 ಸಾಮಾನ್ಯ ಬೆಲೆ 1,299ರೂ.ಗಳಾಗಿದ್ದು, ಇದನ್ನೂ ಸಹ ಫ್ಲಿಪ್‌ಕಾರ್ಟ್‌, ಅಮೆಜಾನ್‌ ಹಾಗೂ ವಿಂಗ್ಸ್‌ ಮೂಲಕ 999 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

Best Mobiles in India

English summary
Wings has launched the Prime smartwatch and Wings Flobuds 300 earbuds in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+