Home
ಸುದ್ದಿಜಾಲ

ತನ್ನ ಪುಟ್ಟ ಮಗನಿಗೆ ಕ್ಯಾನ್ಸರ್ ಇದೆ ಎಂದು ಸ್ಮಾರ್ಟ್‌ಫೋನ್ ಫ್ಲ್ಯಾಶ್ ಮೂಲಕ ತಿಳಿದ ಮಹಿಳೆ! ಅದೇಗೆ ಅಂತೀರಾ?

ಸ್ಮಾರ್ಟ್‌ಫೋನ್‌ಗಳು (Smartphones) ಒಂದು ಕೇವಲ ಕರೆ ಮಾಡಲು ಮೆಸೆಜ್‌ ಮಾಡಲು ಅಥವಾ ಮಾಹಿತಿ ಮನರಂಜನೆ ಪಡೆಯಲು ಅಷ್ಟೇ ಅಲ್ಲದೆ ಬಳಕೆದಾರರ ಆರೋಗ್ಯದ ವಿಚಾರದಲ್ಲೂ ಸಹ ಸಹಾಯಕವಾಗುತ್ತಿವೆ.

ಹೌದು, ಪ್ರಸ್ತುತ ಬಳಕೆ ಮಾಡುತ್ತಿರುವ ಸ್ಮಾರ್ಟ್‌ಫೋನ್ ಮತ್ತು ಸ್ಮಾರ್ಟ್ ಗ್ಯಾಜೆಟ್‌ಗಳು ಆರೋಗ್ಯದ ದೃಷ್ಟಿಯಿಂದ ಜನರಿಗೆ ಸಾಕಷ್ಟು ಸಹಾಯ ಮಾಡುತ್ತಿವೆ. ಅದರಂತೆ ಈಗ ಮಹಿಳೆಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‌ನ ಫ್ಲ್ಯಾಶ್‌ (smartphone flash) ಬಳಕೆ ಮಾಡಿಕೊಂಡು ಮಗನಿಗೆ ಇದ್ದ ಅಪರೂಪದ ಕ್ಯಾನ್ಸರ್ ಅನ್ನು ಪತ್ತೆ ಮಾಡಿದ್ದಾರೆ. ಹಾಗಿದ್ರೆ, ಬನ್ನಿ ಫ್ಲ್ಯಾಶ್‌ ಮೂಲಕ ಇದೆಲ್ಲಾ ಹೇಗೆ ಸಾಧ್ಯ ಅನ್ನೋದನ್ನು ನೋಡೋಣ.

ಮಗನಿಗೆ ಕ್ಯಾನ್ಸರ್ ಇದೆ ಎಂದು ಸ್ಮಾರ್ಟ್‌ಫೋನ್ ಫ್ಲ್ಯಾಶ್ ಮೂಲಕ ತಿಳಿದ ಮಹಿಳೆ!

ಸ್ಮಾರ್ಟ್‌ಫೋನ್ ಫ್ಲ್ಯಾಶ್ ಮೂಲಕ ಕಾಯಿಲೆ ಪತ್ತೆ: ನಾಲ್ಕು ಮಕ್ಕಳನ್ನು ಹೊಂದಿರುವ ಕೆಂಟ್‌ನ ಗಿಲ್ಲಿಂಗ್‌ಹ್ಯಾಮ್‌ನ 40 ವರ್ಷದ ತಾಯಿ ಸಾರಾ ಹೆಡ್ಜಸ್ ಎಂಬುವರು ಈ ಕೆಲಸ ಮಾಡಿ ಈಗ ಎಲ್ಲಡೆ ಸುದ್ದಿಯಲ್ಲಿದ್ದಾರೆ. ಒಂದು ದಿನ ರಾತ್ರಿ ಅಡುಗೆ ಮಾಡುವಾಗ ಸಮೀಪದಲ್ಲೇ ಇದ್ದ ಮೂರು ತಿಂಗಳ ಮಗನ ಕಡೆ ತಿರುಗಿ ನೋಡಿದ್ದಾರೆ. ಆ ವೇಳೆ ಮಗುವಿನ ಕಣ್ಣಿನಲ್ಲಿ ಏನೋ ಪ್ರಕಾಶಮಾನವಾದುದ್ದನ್ನು ಗಮನಿಸಿದ್ದಾರೆ. ಅಂದರೆ ಮಗುವಿನ ಕಣ್ಣಿನಲ್ಲಿ ವಿಚಿತ್ರವಾದ ಬಿಳಿ ಹೊಳಪು ಕಾಣಿಸುತ್ತಿತ್ತಂತೆ. ಅದು ಬೆಕ್ಕಿನ ಪ್ರತಿಬಿಂಬವನ್ನು ನೆನಪಿಸುವಂತೆ ಇತ್ತಂತೆ.

ಈ ವೇಳೆ ಅನುಮಾನಗೊಂಡು ಸ್ಮಾರ್ಟ್‌ಫೋನ್ ಫ್ಲ್ಯಾಶ್ ಬಳಕೆ ಮಾಡಿಕೊಂಡು ಹೊಳೆಯುತ್ತಿದ್ದ ಕಣ್ಣನ್ನು ಹತ್ತಿರದಿಂದ ನೋಡಲು ಮುಂದಾಗಿದ್ದಾರೆ. ಅದಾಗ್ಯೂ ಅವರಿಗೆ ಈ ವೇಳೆ ಒಂದು ಅನುಮಾನ ಬಂದಿದೆ. ಅಂದರೆ ಬೆಳಕಿನ ತೀವ್ರತೆಗೆ ಈ ರೀತಿ ಆಗುತ್ತಿದೆ ಎಂದು ಅಂದುಕೊಂಡಿದ್ದಾರೆ. ಈ ಕಾರಣಕ್ಕೆ ಕೋಣೆಗಳ ಸುತ್ತಲೂ ಹೋಗಿ ವಿಭಿನ್ನ ಬೆಳಕಿನ ಪರಿಸ್ಥಿತಿಗಳಲ್ಲಿ ಕಣ್ಣನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವಿಚಿತ್ರವಾದ ಹೊಳಪು ಮತ್ತೆ ಕಾಣಿಸಿಕೊಂಡಿದೆ.

ಮಗನಿಗೆ ಕ್ಯಾನ್ಸರ್ ಇದೆ ಎಂದು ಸ್ಮಾರ್ಟ್‌ಫೋನ್ ಫ್ಲ್ಯಾಶ್ ಮೂಲಕ ತಿಳಿದ ಮಹಿಳೆ!

ಇದಾದ ನಂತರದಲ್ಲಿ ತಾನು ನೋಡಿದ ವಿಷಯದ ಬಗ್ಗೆ ಕುತೂಹಲ ಮತ್ತು ಕಾಳಜಿ ಹೆಚ್ಚಾಗಿ ಸಾರಾ ತನ್ನ ಮಗನ ಸ್ಥಿತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಂಟರ್ನೆಟ್ ಬೆಂಬಲ ಪಡೆಯಲು ಮುಂದಾಗಿದ್ದಾರೆ. ಅಂದರೆ ಮಗುವಿನ ಕಣ್ಣಿನ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ಈ ಲಕ್ಷಣ ಕ್ಯಾನ್ಸರ್ ಎಂದು ಇಂಟರ್ನೆಟ್‌ನಲ್ಲಿ ತೋರಿಸಿದೆ. ತಕ್ಷಣವೇ ಎಚ್ಚೆತ್ತ ಅವರು ವೈದ್ಯರ ಬಳಿ ಹೋಗಿದ್ದಾರೆ.

ವೈದ್ಯರ ವರದಿಯ ಪ್ರಕಾರ ಮಗು ಥಾಮಸ್‌ಗೆ ರೆಟಿನೋಬ್ಲಾಸ್ಟೊಮಾ ಎಂಬ ಕ್ಯಾನ್ಸರ್ ಇರುವುದು ಕಂಡುಬಂದಿದೆ. ಇದು ಕಣ್ಣಿನ ಕ್ಯಾನ್ಸರ್‌ ಆಗಿದೆ. ಇನ್ನು ಥಾಮಸ್‌ನ ಕ್ಯಾನ್ಸರ್ ವಿರುದ್ಧದ ಹೋರಾಟವು ನವೆಂಬರ್ 2022 ರಿಂದ ಆರಂಭವಾಗಿ ಆರು ಕಠಿಣ ಕೀಮೋಥೆರಪಿ ಚಿಕಿತ್ಸೆಗೆ ಒಳಗಾಗಿದ್ದ. ಜೊತೆಗೆ ಥಾಮಸ್ ತನ್ನ ಕೊನೆಯ ಕೀಮೋಥೆರಪಿ ಅವಧಿಯನ್ನು ಏಪ್ರಿಲ್ 6, 2023 ರಂದು ಪೂರ್ಣಗೊಳಿಸಿದ್ದಾನೆ. ಈ ಮೂಲಕ ಕ್ಯಾನ್ಸರ್‌ ವಿರುದ್ಧ ಆ ಬಾಲಕ ಜಯಶಾಲಿಯಾಗಿದ್ದಾನೆ.

ಮಗನಿಗೆ ಕ್ಯಾನ್ಸರ್ ಇದೆ ಎಂದು ಸ್ಮಾರ್ಟ್‌ಫೋನ್ ಫ್ಲ್ಯಾಶ್ ಮೂಲಕ ತಿಳಿದ ಮಹಿಳೆ!

ಥಾಮಸ್ ಈಗ ಉತ್ತಮವಾಗಿದ್ದಾನೆ ಎಂದು ಸಾರಾ ಹೆಡ್ಜಸ್ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ ತನ್ನ ಮಗ ಆತನ ಸಹೋದರರೊಂದಿಗೆ ಆಡುವುದನ್ನು ನೋಡಿದ್ರೆ ಆನಂದವಾಗುತ್ತದೆ ಎಂದಿದ್ದಾರೆ. ಈ ಮೂಲಕ ಕೇವಲ ಒಂದು ಸಣ್ಣ ಪ್ಲ್ಯಾಶ್‌ ಲೈಟ್‌ ಅಥವಾ ಸ್ಮಾರ್ಟ್‌ಫೋನ್ ಮಗುವಿನ ಜೀವ ಉಳಿಸಲು ಪರೋಕ್ಷವಾಗಿ ಕಾರಣವಾಯಿತು ಎಂದರೆ ತಪ್ಪಾಗಲಾರದು.

ಏನಿದು ರೆಟಿನೋಬ್ಲಾಸ್ಟೊಮಾ?: ರಾಷ್ಟ್ರೀಯ ಆರೋಗ್ಯ ಸೇವೆ (NHS) ಪ್ರಕಾರ, ರೆಟಿನೋಬ್ಲಾಸ್ಟೊಮಾ ಅಪರೂಪದ ರೀತಿಯ ಕಣ್ಣಿನ ಕ್ಯಾನ್ಸರ್ ಆಗಿದ್ದು, ಇದು ಹೆಚ್ಚಾಗಿ ಮೂರು ವರ್ಷದೊಳಗಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಇದು ರೆಟಿನಾ ಎಂದು ಕರೆಯಲ್ಪಡುವ ಕಣ್ಣಿನ ಹಿಂಭಾಗದ ಭಾಗವನ್ನು ಗುರಿಯಾಗಿಟ್ಟುಕೊಂಡು ಒಮ್ಮೆ ಎರಡು ಬಾರಿಯೂ ಕಣ್ಣುಗಳ ಮೇಲೆ ಪರಿಣಾಮ ಬೀರಬಹುದು.

ರೆಟಿನೊಬ್ಲಾಸ್ಟೊಮಾದ ಸಾಮಾನ್ಯ ಚಿಹ್ನೆಗಳು ಕಣ್ಣಿನಲ್ಲಿ ಬಿಳಿ ಹೊಳಪನ್ನು ಒಳಗೊಂಡಿರುತ್ತವೆ. ಈ ಗುಣ ವಿಶೇಷವಾಗಿ ಕೆಲವು ಲೈಟ್‌ಗಳನ್ನು ಬಿಟ್ಟಾಗ ಗೋಚರಿಸುತ್ತವೆ. ಇತರ ಚಿಹ್ನೆಗಳು ಎಂದರೆ ಕಣ್ಣುಗಳು ಊದಿಕೊಳ್ಳುತ್ತವೆ.

Best Mobiles in India

English summary
A woman find out that her little son had cancer through a smartphone flash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+