ಮೊಬೈಲ್‌ ಗೇಮ್ಸ್‌ ಹೆಚ್ಚಾಗಿ ಆಡುವವರು ಪುರುಷರೇ?.ಇಲ್ಲ ಮಹಿಳೆಯರೇ?.ಇಲ್ಲಿದೆ ಉತ್ತರ!

|

ಪ್ರಸ್ತುತ ಪಬ್‌ಜಿ, ಕ್ಯಾಂಡಿ ಕ್ರಶ್ ಮತ್ತು ಕ್ಲ್ಯಾಶ್‌ ಆಫ್‌ ಕ್ಲೇನ್ಸ್‌ ಗೇಮ್ಸ್‌ಗಳು ಸಖತ್ ಟ್ರೆಂಡ್‌ ಹುಟ್ಟುಹಾಕಿದ್ದು, ಬಹುತೇಕ ಸ್ಮಾರ್ಟ್‌ಫೋನ್‌ ಬಳಕೆದಾರರು ಈ ಗೇಮ್ಸ್‌ಗೆ ಅಡಿಕ್ಟ್ ಆಗಿದ್ದಾರೆ. ಸಾಮಾನ್ಯವಾಗಿ ಹುಡುಗರೇ ಸ್ಮಾರ್ಟ್‌ಫೋನ್‌ಗಳಲ್ಲಿ ಅಧಿಕ ಸಮಯವನ್ನು ಗೇಮ್ಸ್‌ ಆಡುವುದರಲ್ಲಿಯೇ ಕಳೆಯುತ್ತಾರೆ ಎನ್ನುವವರೇ ಹೆಚ್ಚು. ಆದರೆ ನಿಮಗೆ ಗೊತ್ತಾ ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಗೇಮ್ಸ್‌ ಆಡುತ್ತಾರೆ.

ಸ್ಮಾರ್ಟ್‌ಫೋನ್‌ ಗೇಮಿಂಗ್

ಹೌದು, ಸ್ಮಾರ್ಟ್‌ಫೋನ್‌ ಗೇಮಿಂಗ್ ಬಳಕೆ ಅಧಿಕವಾಗಿದ್ದು, ಪ್ರಸ್ತುತ ದೇಶದಲ್ಲಿ ಪುರುಷರಿಂಗಿತ ಮಹಿಳೆಯರೇ ಹೆಚ್ಚು ಗೇಮ್ಸ್‌ ಆಡುತ್ತಾರೆ ಎನ್ನುವ ಸಂಗತಿಯನ್ನು 'ಸೈಬರ್‌ ಮೀಡಿಯಾ ರಿಸರ್ಚ್' ತಿಳಿಸಿದೆ. ಸೈಬರ್‌ ಮೀಡಿಯಾ ಸಂಸ್ಥೆಯ ಸರ್ವೇ ವರದಿಯಂತೆ ದೇಶದಲ್ಲಿ ಮಹಿಳೆಯರು ಶೇ.45% ಪ್ರತಿಶತ 'ಪಬ್‌ಜಿ' ಗೇಮ್‌ ಅನ್ನು ಆಡಿದರೇ, ಶೇ. 35% ಪ್ರತಿಶತದಷ್ಟು 'ಕ್ಯಾಂಡಿಕ್ರಶ್ ಗೇಮ್‌' ಆಡುತ್ತಾರಂತೆ.

ಸೈಬರ್‌ ಮೀಡಿಯಾ

ಸೈಬರ್‌ ಮೀಡಿಯಾ ಈ ಸರ್ವೇ ಮಾಡಲು ಸುಮಾರು 2000 ಸ್ಮಾರ್ಟ್‌ಫೋನ್‌ ಬಳಕೆದಾರರನ್ನು ಬಳಕೆಮಾಡಿಕೊಂಡಿದೆ. ಸರ್ವೇಯ ವರದಿಯಂತೆ ಶೇ.86%ನಷ್ಟು ಪುರುಷರು ಸ್ಮಾರ್ಟ್‌ಫೋನ್ ಗೇಮ್ಸ್‌ನಲ್ಲಿ ಸಕ್ರಿಯವಾಗಿದ್ದರೇ, ಮಹಿಳೆಯರು ಶೇ.95% ಪ್ರತಿಶತದಷ್ಟು ಸ್ಮಾರ್ಟ್‌ಫೋನ್‌ ಗೇಮ್ಸ್‌ನಲ್ಲಿ ಸಕ್ರಿಯರಾಗಿರುವುದು ತಿಳಿಸಿದೆ. ಅದರಲ್ಲಿ ಶೇ.75%ರಷ್ಟು ಜನರು ಎರಡು ಗಂಟೆಗಳ ಕಾಲ ಸ್ಮಾರ್ಟ್‌ಫೋನಿನಲ್ಲಿ ಗೇಮ್ಸ್‌ ಆಡಿದ್ದಾರೆ.

ಯ್ಯೂನಿಕ್ ಗೇಮ್ಸ್‌

ಮಹಿಳೆಯರು ಹೆಚ್ಚಾಗಿ ಗೇಮ್ಸ್ ಆಡುವುದರಲ್ಲಿ ಸಕ್ರಿಯರಾಗಿರುತ್ತಾರೆ ಎನ್ನವ ಅಂಶಗಳನ್ನು ಹೊರಹಾಕಿದ್ದು, ಬಹುತೇಕ ಮಹಿಳೆಯರು ಹೈಪರ್ ಕ್ಯಾಶುವಲ್‌ ಗೇಮರ್ಸ್‌ ಆಗಿದ್ದು, ಹಾಗೆಯೇ ಯ್ಯೂನಿಕ್ ಗೇಮ್ಸ್‌ಗಳನ್ನು ಆಡಲು ಇಷ್ಟಪಡುತ್ತಾರೆ. ಗೇಮ್ಸ್‌ ಆಡುವುದರಲ್ಲಿ ತೊಡಗಿಸಿಕೊಳ್ಳುವುದರಿಂದ ದೈನಂದಿನ ಕೆಲಸಗಳ ಒತ್ತಡದಿಂದ ನಿವಾರಣೆ ಸಿಗಲಿದೆ ಮತ್ತು ಮೋಡ್ ರೀಫ್ರೇಶ್ ಆಗುತ್ತದೆ ಎನ್ನುತ್ತಾರೆ ಗೇಮ್ಸ್‌ ಪ್ರಿಯ ಮಹಿಳೆಯರು.

ಪಬ್‌ಜಿ

ಭಾರತದಲ್ಲಿ ಪಬ್‌ಜಿ, ಕ್ಯಾಂಡಿ ಕ್ರಶ್, ವರ್ಲ್ಡ್‌ ಪಜಲ್ ಮತ್ತು ಕ್ಲ್ಯಾಶ್‌ ಆಫ್‌ ಕ್ಲೇನ್ಸ್ ಗೇಮ್ಸ್‌ಗಳು ಹೆಚ್ಚು ಜನಪ್ರಿಯವಾಗಿದ್ದು, ಅವುಗಳಲ್ಲಿ ಮಹಿಳೆಯರು ಪಬ್‌ಜಿ ಗೇಮ್‌ ಅನ್ನು ಶೇ.45% ಪ್ರತಿಶತ ಆಡುತ್ತಾರೆ, ಶೇ.35% ಪ್ರತಿಶತದಷ್ಟು ಕ್ಯಾಂಡಿ ಕ್ರಶ್ ಹಾಗೆಯೇ ಕ್ಲ್ಯಾಶ್‌ ಆಫ್‌ ಕ್ಲೇನ್ಸ್‌ ಗೇಮ್‌ ಅನ್ನು ಶೇ.22% ಪ್ರತಿಶತದಷ್ಟು ಮತ್ತು ವರ್ಲ್ಡ್‌ ಪಜಲ್ ಗೇಮ್‌ ಅನ್ನು ಶೇ.22% ಪ್ರತಿಶತದಷ್ಟು ಆಡುವರು ಎನ್ನುವ ಅಂಶಗಳನ್ನು ಸೈಬರ್ ಮೀಡಿಯಾ ರಿಸರ್ಚ್ ಸರ್ವೇ ರಿಪೋರ್ಟ್ ತಿಳಿಸಿದೆ.

Best Mobiles in India

English summary
women are more active than men when it comes to playing mobile games on their smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X