ಮಹಿಳೆಯರು ಪುರುಷರಿಗಿಂತ ಹೆಚ್ಚು ಮೊಬೈಲ್ ಬಳಸುತ್ತಾರೆ: ಅಧ್ಯಯನ!

|

ಒಟ್ಟಾರೆ ಸರಾಸರಿ ಫೋನ್ ಬಳಕೆಯ ವಿಷಯದಲ್ಲಿ, ಮಹಿಳೆಯರು ತಮ್ಮ ಫೋನ್‌ ಅನ್ನು ಪುರುಷರಿಗಿಂತ ಹೆಚ್ಚು ಸಮಯವನ್ನು ಬಳಸುತ್ತಾರೆ. 20ರ ಹರೆಯದ ಮಹಿಳೆಯರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ತಮ್ಮ ಪುರುಷ ಗೆಳೆಯರಿಗಿಂತ ಗಮನಾರ್ಹವಾಗಿ ಹೆಚ್ಚು ವೇಳೆ ಬಳಸುತ್ತಾರೆ. ಇನ್ನು ಮಹಿಳೆಯರಿಗೆ ಹೋಲಿಸಿದರೆ ಪುರುಷರು ತಮ್ಮ ಸಾಧನಗಳನ್ನು ಹಸ್ತಚಾಲಿತವಾಗಿ ಲಾಕ್ ಮಾಡುವುದರ ವಿರುದ್ಧವಾಗಿ, ಆಟೋ ಲಾಕ್‌ಗಳನ್ನು ಅವಲಂಬಿಸುವ ಸಾಧ್ಯತೆ ಹೆಚ್ಚಿದೆ ಎಂದು ವಿಶ್ವವಿದ್ಯಾಲಯದ ಬ್ರಿಟಿಷ್ ಕೊಲಂಬಿಯಾ ಅಧ್ಯಯನ ಹೇಳಿದೆ.

ಮಹಿಳೆಯರು ಪುರುಷರಿಗಿಂತ ಹೆಚ್ಚು ಮೊಬೈಲ್ ಬಳಸುತ್ತಾರೆ: ಅಧ್ಯಯನ!

ಇಷ್ಟು ಮಾತ್ರವಲ್ಲದೇ, ಹಳೆಯ ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳ ಆಟೋ ಲಾಕ್ ವೈಶಿಷ್ಟ್ಯವನ್ನು ಹೆಚ್ಚು ಅವಲಂಬಿಸುತ್ತಾರೆ ಎಂದು ಅಧ್ಯಯನವು ಅಭಿಪ್ರಾಯ ವ್ಯಕ್ತಪಡಿಸಿದೆ. ಕಿರಿಯ ಬಳಕೆದಾರರಿಗೆ ಹೋಲಿಸಿದರೆ ಹಳೆಯ ಫೋನ್ ಬಳಕೆದಾರರು ತಮ್ಮ ಫೋನ್‌ಗಳನ್ನು ಅನ್ಲಾಕ್ ಮಾಡಲು ಫಿಂಗರ್‌ಪ್ರಿಂಟ್‌ ಅಥವಾ ಪಿನ್‌ಗಳನ್ನು ಬಳಸುವುದನ್ನು ಬಯಸುತ್ತಾರೆ ಮತ್ತು ಕಿರಿಯ ಸ್ಮಾರ್ಟ್‌ಫೋನ್ ಬಳಕೆದಾರರಿಗಿಂತ ಕಡಿಮೆ ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಾರೆ ಎಂದು ಅಧ್ಯಯನದ ಮೂಲಕ ತಿಳಿಸಿದೆ.

ಹಳೆಯ ಸ್ಮಾರ್ಟ್‌ಫೋನ್ ಬಳಕೆದಾರರು ಕಿರಿಯ ಬಳಕೆದಾರರಿಗಿಂತ ಕಡಿಮೆ ಬಾರಿ ತಮ್ಮ ಫೋನ್ ಬಳಸಿದ್ದಾರೆ ಎಂದು ಅಧ್ಯಯನ ವಿಶ್ಲೇಷಣೆ ತೋರಿಸಿದೆ. ವಯಸ್ಸಿನಲ್ಲಿ ಪ್ರತಿ 10 ವರ್ಷಗಳ ಮಧ್ಯಂತರಕ್ಕೆ ಬಳಕೆದಾರರ ಫೋನ್ ಬಳಕೆ ಅವಧಿ ಸಂಖ್ಯೆಯಲ್ಲಿ ಶೇ. 25% ರಷ್ಟು ಇಳಿಕೆ ಕಂಡುಬರುತ್ತದೆ. ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, 25 ವರ್ಷ ವಯಸ್ಸಿನವರು ತಮ್ಮ ಫೋನ್ ಅನ್ನು ದಿನಕ್ಕೆ 20 ಬಾರಿ ಬಳಸುತ್ತಾರೆ. ಆದರೆ 35 ವರ್ಷದವರು ಅದನ್ನು ಕೇವಲ 15 ಬಾರಿ ಬಳಸಬಹುದು ಎಂದು ಸಂಶೋಧಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಹಿಳೆಯರು ಪುರುಷರಿಗಿಂತ ಹೆಚ್ಚು ಮೊಬೈಲ್ ಬಳಸುತ್ತಾರೆ: ಅಧ್ಯಯನ!

ಹಳೆಯ ಬಳಕೆದಾರರು ತಾವು ಸ್ಥಿರವಾಗಿರುವಾಗ ತಮ್ಮ ಫೋನ್‌ಗಳನ್ನು ಅನ್‌ಲಾಕ್ ಮಾಡುವ ಸಾಧ್ಯತೆ ಇದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಉದಾಹರಣೆಗೆ ಡೆಸ್ಕ್‌ನಲ್ಲಿ ಕೆಲಸ ಮಾಡುವಾಗ ಅಥವಾ ಮನೆಯಲ್ಲಿ ಕುಳಿತುಕೊಳ್ಳುವಾಗ ಮಾತ್ರ ಅವರು ಫೋನ್‌ಗಳನ್ನು ಅನ್‌ಲಾಕ್ ಮಾಲು ಮನಸ್ಸು ಮಾಡುತ್ತಾರೆ ಎಂದು ಹೇಳಲಾಗಿದೆ. 19 ರಿಂದ 63 ವರ್ಷ ವಯಸ್ಸಿನ 134 ಸ್ವಯಂಸೇವಕ ಆಯ್ದುಕೊಂಡು ಅವರ ಆಂಡ್ರಾಯ್ಡ್ ಫೋನ್‌ಗಳಲ್ಲಿ ಸ್ಥಾಪಿಸಲಾದ ಕಸ್ಟಮ್ ಆಪ್ ಮೂಲಕ ಅಧ್ಯಯನ ನಡೆಸಿ ಈ ರೀತಿಯ ರಿಪೋರ್ಟ್ ಅನ್ನು ತಯಾರಿಸಲಾಗಿದೆ.

ಈ ಅಧ್ಯಯನವು ವಯಸ್ಸು, ಲಿಂಗ ಮತ್ತು ಸ್ಮಾರ್ಟ್‌ಫೋನ್ ಬಳಕೆಯ ನಡುವಿನ ಸಂಬಂಧವನ್ನು ಅನ್ವೇಷಿಸಿದ ಮೊದಲನೆಯದು ಎಂದು ಸಂಶೋಧನೆಯ ಮೇಲ್ವಿಚಾರಣೆಯ ವಿದ್ಯುತ್ ಮತ್ತು ಕಂಪ್ಯೂಟರ್ ಎಂಜಿನಿಯರಿಂಗ್ ಪ್ರಾಧ್ಯಾಪಕ ಕಾನ್‌ಸ್ಟಾಂಟಿನ್ ಬೆಜ್ನೋಸೊವ್ ಅವರು ತಿಳಿಸಿದ್ದು, ಓದಿರಿ: ಬ್ರೇಕಿಂಗ್..ಇನ್ಮುಂದೆ ಮೊಬೈಲ್ ಕದ್ದರೆ ಕ್ಷಣಾರ್ಧದಲ್ಲಿ ಸಿಕ್ಕಿಬೀಳ್ತಾರೆ ಕಳ್ಳರು! ಸತತ ಎರಡು ತಿಂಗಳು ಫೋನ್ ಲಾಕ್ ಮತ್ತು ಅನ್ಲಾಕ್ ಈವೆಂಟ್‌ಗಳು, ಆಟೋ ಅಥವಾ ಮ್ಯಾನುಯಲ್ ಲಾಕ್ ಆಯ್ಕೆ ಮತ್ತು ಚಲನೆಯಲ್ಲಿರುವಾಗ ಫೋನ್ ಲಾಕ್ ಆಗಿದೆಯೇ ಅಥವಾ ಅನ್ಲಾಕ್ ಆಗಿದೆಯೇ ಎಂಬ ಡೇಟಾವನ್ನು ಸಂಗ್ರಹಿಸಿ ಅಧ್ಯಯನ ನಡೆಸಲಾಗಿದೆ.

Best Mobiles in India

English summary
women on average use their phone longer than men, with women in their 20s using their smartphones significantly longer than their male peers. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X