ಇನ್ನಷ್ಟು ಸುಂದರಿಯಾಗಿ ಕಾಣಲು ಯಾವ ಸೆಲ್ಫೀ ಸೂಕ್ತ ಗೊತ್ತೇ?

Posted By:

ನಿಮ್ಮ ಸ್ನೇಹಿತೆ ಸೆಲ್ಫೀ ತೆಗೆಯುವಾಗ ತನ್ನ ಬಲಭಾಗಕ್ಕೆ ನಿಂತು ಸೆಲ್ಫೀ ತೆಗೆಯುವುದನ್ನು ನೀವು ಗಮನಿಸಿದ್ದೀರಾ? ಹೌದು ಹೆಚ್ಚಿನ ಮಹಿಳೆಯರು ಸೆಲ್ಫೀ ತೆಗೆಯಲು ತಮ್ಮ ಬಲಭಾಗವೇ ಸೂಕ್ತವೆಂದು ಕಂಡುಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ. 1,000 ಮಹಿಳೆಯರಲ್ಲಿ ಈ ಅನ್ವೇಷಣೆಯನ್ನು ನಡೆಸಲಾಗಿದ್ದು ಹೆಚ್ಚಿನವರು ತಮ್ಮ ಬಲಭಾಗದ ಸೆಲ್ಫೀಗೆ ಹೆಚ್ಚು ಆದ್ಯತೆಯನ್ನು ನೀಡಿದ್ದಾರೆ ಎಂಬುದು ತಿಳಿದು ಬಂದಿದೆ. [ಬಿಲಿಯಗಟ್ಟಲೆ ಹಣವಿರುವ ಮಹಾನ್ ಟೆಕ್ ವ್ಯಕ್ತಿಗಳು]

ತಮ್ಮ ಕೇಶವಿನ್ಯಾಸ, ಮುಖದ ಕೆಲವು ಭಂಗಿಗಳನ್ನು ನಿವಾರಿಸಲು ಬಲಭಾಗದ ಸೆಲ್ಫೀಗೆ ಮಹಿಳೆಯರು ಆದ್ಯತೆಯನ್ನು ನೀಡುತ್ತಾರೆ ಎಂಬುದು ಗೊತ್ತಾಗಿದೆ. ಸೆಲ್ಫೀ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತಿರುವ ಟ್ರೆಂಡ್ ಆಗಿದ್ದು ತಮ್ಮ ಪ್ರೊಫೈಲ್ ಫೋಟೋ ಸೆಲ್ಫೀಯಲ್ಲಿ ಚೆನ್ನಾಗಿ ಕಾಣಲಿ ಎಂಬುದು ಇವರ ಆಶಯವಾಗಿದೆ. [ಭಾರತಕ್ಕೆ ಕಾಲಿರಿಸಲಿರುವ ಅತ್ಯುನ್ನತ ಗ್ಯಾಜೆಟ್‌ಗಳು]

ಇನ್ನಷ್ಟು ಸುಂದರಿಯಾಗಿ ಕಾಣಲು ಯಾವ ಸೆಲ್ಫೀ ಸೂಕ್ತ ಗೊತ್ತೇ?

ಇನ್ನು 23 ಶೇಕಡದಷ್ಟು ಮಹಿಳೆಯರು ಬಲಭಾಗದ ಸೆಲ್ಫೀಗೆ ಆದ್ಯತೆಯನ್ನು ನೀಡಿದ್ದು ಬರೇ 18 ಶೇಕಡ ಮಹಿಳೆಯರು ಸೆಲ್ಫೀ ತೆಗೆಯಲು ತಮ್ಮ ಎಡಪಕ್ಕ ಸೂಕ್ತ ಎಂದು ಮತಚಲಾಯಿಸಿದ್ದಾರೆ. ಇನ್ನು 16 ಶೇಕಡ ಮಹಿಳೆಯರು ಎರಡೂ ಬದಿಯು ಸೆಲ್ಫೀ ತೆಗೆಯಲು ಅತ್ಯುತ್ತಮವಾಗಿದ್ದು, 43 ಶೇಕಡ ಮಹಿಳೆಯರು ಯಾವ ಬದಿಯಾದರೂ ಪರಿಣಾಮಕಾರಿಯಲ್ಲ ಎಂದು ಅಭಿಪ್ರಾಯಿಸಿದ್ದಾರೆ.

English summary
If your girlfriend insists on clicking her selfie from the right-hand side, then she is not alone. Women ensure that the camera always captures their best side -- and almost half of women say that they will always turn a particular way when confronted with a camera.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot