Home
ಸುದ್ದಿಜಾಲ

ವಿಶ್ವ ಆರೋಗ್ಯ ದಿನ: ಈ ಸ್ಮಾರ್ಟ್‌ವಾಚ್‌ಗಳಿಗೆ ಅಮೆಜಾನ್‌ನಲ್ಲಿ ಸಖತ್‌ ಡಿಸ್ಕೌಂಟ್‌!

ಇಂದು ವಿಶ್ವ ಆರೋಗ್ಯ ದಿನವಾಗಿದ್ದು, ಈ ವೇಳೆ ಪ್ರೀತಿ-ಪಾತ್ರರು ಹಾಗೂ ಕುಟುಂಬದವರು ನೂರ್ಕಾಲ ಆರೋಗ್ಯದಿಂದ ಬಾಳಲಿ ಎಂದು ಪರಸ್ಪರ ಶುಭಾಶಯ ಕೋರಲಾಗುತ್ತದೆ. ಈ ಶುಭಾಶಯಗಳನ್ನು ಇನ್ನಷ್ಟು ಸ್ಮರಣೀಯವಾಗಿಸಿಕೊಳ್ಳಲು ದೈಹಿಕ ಆರೋಗ್ಯದ ಮೇಲೆ ಸದಾ ಕಣ್ಣಿಡುವ ಸುಧಾರಿತ ಫೀಚರ್ಸ್‌ ಇರುವ ಸ್ಮಾರ್ಟ್‌ವಾಚ್‌ಗಳನ್ನು ಉಡುಗೊರೆಯಾಗಿ ನೀಡಬಹುದು. ಇದಕ್ಕಾಗಿಯೇ ಅಮೆಜಾನ್‌ ಈ ವಾಚ್‌ಗಳಿಗೆ ಆಫರ್ ಘೋ‍ಷಣೆ ಮಾಡಿದೆ.

ಹೌದು, ಇಂದು ಇಂದು ವಿಶ್ವ ಆರೋಗ್ಯ ದಿನವಾಗಿದ್ದು, ಪ್ರತಿಯೊಬ್ಬರ ಆರೋಗ್ಯ ಅವರ ಕೈನಲ್ಲಿಯೇ ಇರುತ್ತದೆ ಎನ್ನುವ ಮಾತನ್ನು ನಿಜ ಮಾಡುವಂತೆ ಈಗ ಸ್ಮಾರ್ಟ್‌ವಾಚ್‌ಗಳು ಪ್ರಸಿದ್ಧಿ ಪಡೆದಿವೆ. ಈ ಸಂದರ್ಭದಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಉತ್ತಮವಾದ ಸ್ಮಾರ್ಟ್‌ವಾಚ್‌ಗಳನ್ನು ಗಿಫ್ಟ್‌ ಆಗಿ ನೀಡಬಹುದಾಗಿದೆ. ಅದೂ ಸಹ ಆಫರ್‌ ಬೆಲೆಯಲ್ಲಿ. ಹಾಗಿದ್ರೆ, ಈ ವಾಚ್‌ಗಳ ಪ್ರಮುಖ ಫೀಚರ್ಸ್‌ ಹಾಗೂ ಇದರ ಬೆಲೆ ಬಗ್ಗೆ ತಿಳಿಸಿಕೊಡಲಾಗಿದೆ ಓದಿರಿ.

ವಿಶ್ವ ಆರೋಗ್ಯ ದಿನ: ಈ ಸ್ಮಾರ್ಟ್‌ವಾಚ್‌ಗಳಿಗೆ ಅಮೆಜಾನ್‌ನಲ್ಲಿ ಸಖತ್‌ ಡಿಸ್ಕೌಂಟ್‌

ಬೋಟ್ ವೇವ್ ಲೀಪ್ ಕಾಲ್: ಈ ಸ್ಮಾರ್ಟ್‌ವಾಚ್‌ 1.83 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, 100+ ಸ್ಪೋರ್ಟ್ಸ್ ಮೋಡ್‌ಗಳನ್ನು ಪಡೆದಿದೆ. ಹಾಗೆಯೇ SpO2 ಟ್ರ್ಯಾಕಿಂಗ್‌ನೊಂದಿಗೆ ವಿವಿಧ ಆರೋಗ್ಯ ಸಂಬಂಧಿ ವಿಷಯಗಳ ಮೇಲೆ ಈ ವಾಚ್‌ ಕಣ್ಣಿಡಲಿದೆ. ಇದನ್ನು ನೀವು 1,999ರೂ. ಗಳ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಕೆಲವು ಬ್ಯಾಂಕ್‌ ಕಾರ್ಡ್‌ಗಳ ಮೇಲೆ ಇನ್ನಷ್ಟು ಆಫರ್‌ ಘೋಷಣೆ ಮಾಡಲಾಗಿದ್ದು, ಅದನ್ನೂ ಸದುಪಯೋಗಪಡಿಸಿಕೊಳ್ಳಬಹುದು.

ಫೈರ್-ಬೋಲ್ಟ್ ಎಟರ್ನೊ: ಈ ವಾಚ್‌ 1.99 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, 120+ ಸ್ಪೋರ್ಟ್ಸ್‌ ಮೋಡ್‌ ಹಾಗೂ ಹೃದಯ ಬಡಿತ ಮಾನಿಟರಿಂಗ್ ಜೊತೆಗೆ SpO2 ಟ್ರ್ಯಾಕಿಂಗ್ ಫೀಚರ್ಸ್‌ ಅನ್ನು ಹೊಂದಿದೆ. ಜೊತೆಗೆ ವಾಯ್ಸ್‌ ಅಸಿಸ್ಟೆಂಟ್‌ ಫೀಚರ್ಸ್‌ನೊಂದಿಗೆ ಬ್ಲೂಟೂತ್ ಕಾಲಿಂಗ್‌ ಸೌಲಭ್ಯ ಇರುವ ಈ ವಾಚ್‌ ಅನ್ನು 2,499ರೂ. ಗಳ ಆಫರ್‌ ಬೆಲೆಗೆ ಖರೀದಿ ಮಾಡಬಹುದಾಗಿದೆ.

ವಿಶ್ವ ಆರೋಗ್ಯ ದಿನ: ಈ ಸ್ಮಾರ್ಟ್‌ವಾಚ್‌ಗಳಿಗೆ ಅಮೆಜಾನ್‌ನಲ್ಲಿ ಸಖತ್‌ ಡಿಸ್ಕೌಂಟ್‌

ನಾಯ್ಸ್ ಪ್ರೊ 4 GPS ಸ್ಮಾರ್ಟ್ ವಾಚ್: ಈ ಸ್ಮಾರ್ಟ್‌ವಾಚ್‌ 1.85 ಇಂಚಿನ TFT ಡಿಸ್‌ಪ್ಲೇ ಹೊಂದಿದ್ದು, 100 ಸ್ಪೋರ್ಟ್ಸ್‌ ಮೋಡ್‌ ನೊಂದಿಗೆ ಹೃದಯ ಬಡಿತದ ಮಾನಿಟರಿಂಗ್ ಹಾಗೂ ನಿದ್ರೆ ಟ್ರ್ಯಾಕಿಂಗ್ ಸೇರಿದಂತೆ ವಿವಿಧ ಮಾಹಿತಿಯನ್ನು ನೀಡಲಿದೆ. ಈ ವಾಚ್ ಸಹ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಪಡೆದುಕೊಂಡಿದ್ದು, 2,999ರೂ. ಗಳ ಆಫರ್‌ ಬೆಲೆಯಲ್ಲಿ ಅಮೆಜಾನ್‌ ಮೂಲಕ ಖರೀದಿ ಮಾಡಬಹುದು.

ಫೈರ್-ಬೋಲ್ಟ್ ರಿಂಗ್: ಈ ವಾಚ್‌ 1.91 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, 100 ಸ್ಪೋರ್ಟ್ಸ್ ಮೋಡ್‌ ಹಾಗೂ ಹೃದಯ ಬಡಿತದ ಮಾನಿಟರಿಂಗ್, ನಿದ್ರೆ ಟ್ರ್ಯಾಕಿಂಗ್ ಸೇರಿದಂತೆ ವಿವಿಧ ಆರೋಗ್ಯ ವಿಚಾರಗಳನ್ನು ಟ್ರ್ಯಾಕ್‌ ಮಾಡಲಿದೆ. ಜೊತೆಗೆ ಹವಾಮಾನ ಮುನ್ಸೂಚನೆ, ಅಲಾರಂ ಮತ್ತು ರಿಮೋಟ್ ಕಂಟ್ರೋಲ್ ಕ್ಯಾಮೆರಾದಂತಹ ಸ್ಮಾರ್ಟ್ ಕಂಟ್ರೋಲ್‌ ಫೀಚರ್ಸ್‌ ಅನ್ನು ಸಹ ಈ ವಾಚ್‌ ಹೊಂದಿರುವುದು ವಿಶೇಷ. ಈ ವಾಚ್‌ ಅನ್ನು ನೀವು 3,499ರೂ. ಗಳ ಬೆಲೆಗೆ ಖರೀದಿ ಮಾಡಬಹುದು.

ವಿಶ್ವ ಆರೋಗ್ಯ ದಿನ: ಈ ಸ್ಮಾರ್ಟ್‌ವಾಚ್‌ಗಳಿಗೆ ಅಮೆಜಾನ್‌ನಲ್ಲಿ ಸಖತ್‌ ಡಿಸ್ಕೌಂಟ್‌

ನಾಯ್ಸ್ ಕಲರ್‌ಫಿಟ್ ಪ್ರೊ 3 ಆಲ್ಫಾ: ಈ ಸ್ಮಾರ್ಟ್‌ವಾಚ್‌ 1.69 ಇಂಚಿನ HD ಡಿಸ್‌ಪ್ಲೇ ಹೊಂದಿದ್ದು, 100 ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದೆ. ಜೊತೆಗೆ ಹೃದಯ ಬಡಿತದ ಮಾನಿಟರಿಂಗ್ ಜೊತೆಗೆ ನಿದ್ರೆ ಟ್ರ್ಯಾಕಿಂಗ್ ಫೀಚರ್ಸ್‌ ಅನ್ನು ಪಡೆದುಕೊಂಡಿದ್ದು, ವಿಶೇಷ ಕರೆ ಸೌಲಭ್ಯವನ್ನು ಪಡೆದುಕೊಂಡಿದೆ. ಅಂದರೆ ನಿಮ್ಮ ಸ್ಮಾರ್ಟ್‌ಫೋನ್‌ಗೆ ಬರುವ ಕರೆಗಳಿಗೆ ಇದು ಉತ್ತರಿಸಲಿದೆ ಜೊತೆಗೆ ವಾಚ್‌ ಮೂಲಕವೇ ಕರೆ ಸಹ ಮಾಡಬಹುದಾಗಿದೆ. ಈ ವಾಚ್‌ ಅನ್ನು ಅಮೆಜಾನ್‌ನಲ್ಲಿ 5,999ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.

Best Mobiles in India

English summary
Today is World Health Day and you can gift these best smartwatches to your loved ones. These are heavily discounted on Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+