Home
ಸುದ್ದಿಜಾಲ

World Television Day 2023: ನಿಮ್ಮ ಮನೆಯಲ್ಲಿ ಟಿವಿ ಇದ್ರೆ ಸಾಕೇ? ಬನ್ನಿ ಟಿವಿಯ ಹಿನ್ನೆಲೆಯನ್ನೂ ನೋಡೋಣ!

ಇಂದು ಪ್ರತಿಯೊಬ್ಬರ ಮನೆಯಲ್ಲೂ ಸಹ ಟಿವಿ (Television) ಇದೆ. ಟಿವಿ ಇಲ್ಲದ ಮನೆಗಳು ಅಷ್ಟೇ ಯಾಕೆ ಗುಡಿಸಲುಗಳ ಸಹ ಇಲ್ಲ ಎಂದರೆ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ದೂರದರ್ಶನ ಎಲ್ಲಾ ಕಡೆ ತನ್ನ ಪ್ರಾಬಲ್ಯ ಸಾಧಿಸಿದೆ. ಇಂದು ಎಂತಹ ಎಆರ್‌ ವಿಆರ್‌ ತಂತ್ರಜ್ಞಾನ ಬಂದರೂ, ದೊಡ್ಡ ಡಿಸ್‌ಪ್ಲೇ ಇರುವ ಟ್ಯಾಬ್ಲೆಟ್‌ಗಳು, ಲ್ಯಾಪ್‌ಟಾಪ್‌ಗಳು ಇದ್ದರೂ ಸಹ ಟಿವಿ ಮೇಲೆ ಇರುವ ಕ್ರೇಜ್‌ ಕಡಿಮೆ ಆಗಿಲ್ಲ.

ಹೌದು, ಇಂದು ಜಾಗತಿಕವಾಗಿ ವಿಶ್ವ ದೂರದರ್ಶನ ದಿನ ಆಚರಣೆ (world television day) ಮಾಡಲಾಗುತ್ತಿದೆ. ಈ ಮೂಲಕ ದೂರದರ್ಶನದ ಮಹತ್ವವನ್ನು ಚರ್ಚಿಸಲು ಚರ್ಚಿಸಲಾಗುತ್ತದೆ. ಹಾಗೆಯೇ ಈ ಆರಚಣೆಯನ್ನು 1996 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ ಘೋಷಣೆ ಮಾಡಿದೆ. ಹಾಗಿದ್ರೆ, ಈ ವಿಶ್ವ ದೂರದರ್ಶನ ದಿನ ಆಚರಣೆ ಇತಿಹಾಸ, ಮಹತ್ವ ಮತ್ತು ಅದನ್ನು ಏಕೆ ಆಚರಿಸಲಾಗುತ್ತದೆ ಎಂಬಿತ್ಯಾದಿ ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ನಿಮ್ಮ ಮನೆಯಲ್ಲಿ ಟಿವಿ ಇದ್ರೆ ಸಾಕೇ? ಬನ್ನಿ ಟಿವಿಯ ಹಿನ್ನೆಲೆಯನ್ನೂ ನೋಡೋಣ!

ವಿಶ್ವ ದೂರದರ್ಶನ ದಿನ: ಪ್ರತಿ ವರ್ಷ ನವೆಂಬರ್ 21 ರಂದು ನಾವು ವಿಶ್ವ ದೂರದರ್ಶನ ದಿನವನ್ನು ಆಚರಿಸಲಾಗುತ್ತದೆ. ದೂರದರ್ಶನವು ಪ್ರತಿ ಭಾರತೀಯರ ಮನೆಯ ಅವಿಭಾಜ್ಯ ಅಂಗವಾಗಿದ್ದು, ಎಲ್ಲರಿಗೂ ಮಾಹಿತಿ, ಮನರಂಜನೆಯ ಮೂಲವಾಗಿ ಕಾರ್ಯನಿರ್ವಹಿಸುತ್ತದೆ. ಅದರಲ್ಲೂ ದೂರದರ್ಶನವು ಪ್ರತಿ ಕುಟುಂಬದ ಕೇಂದ್ರಬಿಂದುವಾಗಿದ್ದು, ಮನೆಯಲ್ಲಿನ ಎಲ್ಲರಿಗೂ ಎಲ್ಲಾ ರೀತಿಯಲ್ಲೂ ಅನುಕೂಲಕರವಾದ ಡಿವೈಸ್‌ ಆಗಿದೆ.

ಯಾವಾಗ ಈ ದಿನಾಚರಣೆ ಘೋಷಣೆ ಮಾಡಲಾಯಿತು?: 1996 ರಲ್ಲಿ ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ (UNGA) ನವೆಂಬರ್ 21 ಅನ್ನು ವಿಶ್ವ ದೂರದರ್ಶನ ದಿನವೆಂದು ಘೋಷಣೆ ಮಾಡಿದೆ. ದೂರದರ್ಶನವನ್ನು 1924 ರಲ್ಲಿ ಸ್ಕಾಟಿಷ್ ಎಂಜಿನಿಯರ್ ಜಾನ್ ಲಾಗಿ ಬೈರ್ಡ್ ಕಂಡುಹಿಡಿದರು ಎಂದು ಹೇಳಲಾಗುತ್ತದೆ. ಇದಾದ ನಂತರ 1927 ರಲ್ಲಿ ಫಾರ್ನ್ಸ್‌ವರ್ತ್ ವಿಶ್ವದ ಮೊದಲ ಕೆಲಸ ಮಾಡುವ ದೂರದರ್ಶನವನ್ನು ನಿರ್ಮಾಣ ಮಾಡಿದರು.

ನಿಮ್ಮ ಮನೆಯಲ್ಲಿ ಟಿವಿ ಇದ್ರೆ ಸಾಕೇ? ಬನ್ನಿ ಟಿವಿಯ ಹಿನ್ನೆಲೆಯನ್ನೂ ನೋಡೋಣ!

ಇನ್ನು ವರ್ಕಿಂಗ್ ಟಿವಿಯ ಆವಿಷ್ಕಾರದ ನಂತರ ಅದನ್ನು 01 ಸೆಪ್ಟೆಂಬರ್ 1928 ರಂದು ಪ್ರಸ್ತುತಪಡಿಸಲಾಯಿತು. ಆರಂಭದಲ್ಲಿ ಟಿವಿ ಕಪ್ಪು ಮತ್ತು ಬಿಳಿಯಾಗಿತ್ತು, 1928 ರಲ್ಲಿ ಜಾನ್ ಲೋಗಿ ಬೈರ್ಡ್ ಬಣ್ಣದ ದೂರದರ್ಶನವನ್ನು ಕಂಡುಹಿಡಿದರು. ಇದಾದ ನಂತರ ಸಾರ್ವಜನಿಕ ಪ್ರಸಾರವು 1940 ರಲ್ಲಿ ಆರಂಭವಾಯಿತು.

ಭಾರತದಲ್ಲಿ ಟಿವಿಯ ಪಯಣ ಸ್ವಾತಂತ್ರ್ಯದ ನಂತರ ಆರಂಭವಾಗಿದೆ ಅನ್ನೋದು ನಿಮಗೆ ಗೊತ್ತಿರಲಿ. ಇದರಲ್ಲಿ ಯುನೆಸ್ಕೋ ಪ್ರಮುಖ ಪಾತ್ರ ವಹಿಸಿದೆ. 15 ಸೆಪ್ಟೆಂಬರ್ 1959 ರಂದು ನವದೆಹಲಿಯಲ್ಲಿ ಆಲ್ ಇಂಡಿಯಾ ರೇಡಿಯೊ ಅಡಿಯಲ್ಲಿ ಟಿವಿಯನ್ನು ಪ್ರಾರಂಭಿಸಲಾಯಿತು. ಟಿವಿಯ ಮೊದಲ ಆಡಿಟೋರಿಯಂ ಅನ್ನು ಆಕಾಶವಾಣಿ ಭವನದಲ್ಲಿ ನಿರ್ಮಿಸಲಾಯಿತು. ಇದನ್ನು ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಉದ್ಘಾಟಿಸಿದ್ದರು.

ಆರಂಭದಲ್ಲಿ ನಾಗರಿಕರ ಕರ್ತವ್ಯಗಳು ಮತ್ತು ಹಕ್ಕುಗಳು, ಸಂಚಾರ ನಿಯಮಗಳು, ಆರೋಗ್ಯ ಮುಂತಾದ ವಿಷಯಗಳ ಕುರಿತು ಒಂದು ಗಂಟೆಯ ಕಾರ್ಯಕ್ರಮಗಳು ವಾರಕ್ಕೆ ಎರಡು ಬಾರಿ ಟಿವಿಯಲ್ಲಿ ಪ್ರಸಾರ ಆಗುತ್ತಿದ್ದವು. 1972 ರಲ್ಲಿ ಟಿವಿ ಸೇವೆಗಳು ಮುಂಬೈ ಮತ್ತು ಅಮೃತಸರವನ್ನು ತಲುಪಿದವು ಮತ್ತು 1975 ರ ಹೊತ್ತಿಗೆ, ಅದರ ಸೇವೆಗಳು ಭಾರತದ 7 ನಗರಗಳಲ್ಲಿ ಆರಂಭ ಆಯಿತು. 1980 ರ ಹೊತ್ತಿಗೆ ಟಿವಿ ದೇಶದ ಎಲ್ಲಾ ಭಾಗಗಳನ್ನು ತಲುಪಿದ್ದು ಈಗ ಇತಿಹಾಸ. ಹಾಗೆಯೇ ಭಾರತದಲ್ಲಿ ಮೊದಲ ಬಣ್ಣದ ಟಿವಿ 15 ಆಗಸ್ಟ್ 1982 ರಂದು ಕಾಣಿಸಿಕೊಂಡಿತು.

ನಿಮ್ಮ ಮನೆಯಲ್ಲಿ ಟಿವಿ ಇದ್ರೆ ಸಾಕೇ? ಬನ್ನಿ ಟಿವಿಯ ಹಿನ್ನೆಲೆಯನ್ನೂ ನೋಡೋಣ!

ಮೊದಲ ಟಿವಿ ದಾರವಾಹಿ ಯಾವುದು ಗೊತ್ತಾ?: ನಾವು ಭಾರತದ ಮೊದಲ ಟಿವಿ ಧಾರಾವಾಹಿಯ ಬಗ್ಗೆ ಹೇಳುವುದಾದರೆ ಅದರ ಹೆಸರು 'ಹಮ್ ಲೋಗ್'. ಈ ಧಾರಾವಾಹಿಯನ್ನು ಸಿನಿಮಾ ನಟ ಅಶೋಕ್ ಕುಮಾರ್ ನಿರ್ಮಿಸಿದ್ದರು. ಮನೋಜ್ ಪಹ್ವಾ, ಸೀಮಾ ಪಹ್ವಾ, ದಿವ್ಯಾ ಸೇಠ್ ಶಾ, ಸುಷ್ಮಾ ಸೇಠ್, ರಾಜೇಶ್ ಪುರಿ, ವಿನೋದ್ ನಾಗ್ಪಾಲ್, ಲವ್ಲೀನ್ ಮಿಶ್ರಾ, ಜಯಶ್ರೀ ಅರೋರಾ ಮುಂತಾದ ಅನೇಕ ನಟರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಈ ಧಾರಾವಾಹಿಯ ಕೊನೆಯ ಸಂಚಿಕೆಯು 17 ಡಿಸೆಂಬರ್ 1985 ರಂದು ಪ್ರಸಾರವಾಯಿತು.
Best Mobiles in India

English summary
In 1996, the United Nations General Assembly (UNGA) declared November 21 as World Television Day. Know how this television initially worked, when it debuted in India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+