Home
ಸುದ್ದಿಜಾಲ

ಯೂಟ್ಯೂಬರ್‌ನಿಂದ ಜಗತ್ತಿನ ದೊಡ್ಡ ಐಫೋನ್‌ ನಿರ್ಮಾಣ; ಇದರ ವಿಶೇಷತೆ ಏನು?

ಐಫೋನ್‌ ಅಂದ್ರೇನೇ ಹಲವರಿಗೆ ಕ್ರೇಜ್‌. ಈ ಫೋನ್‌ಗಳು ಇತರೆ ಸಾಮಾನ್ಯ ಫೋನ್‌ಗಳಂತೆ ಕಂಡರೂ ಸಹ ಇವುಗಳ ಕಾರ್ಯಕ್ಷಮತೆ, ಕ್ಯಾಮೆರಾ ಫೀಚರ್ಸ್‌ ಹಾಗೂ ಇನ್ನಿತರೆ ಹೊಸ ಹೊಸ ಸೌಲಭ್ಯಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತವೆ. ಈ ನಡುವೆ ಈ ಬೃಹತ್ ಐಫೋನ್‌ ಭಾರೀ ಸದ್ದು ಮಾಡುತ್ತಿದ್ದು, ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿರುವುದರಲ್ಲಿ ಅನುಮಾನವೇ ಇಲ್ಲ.

ಹೌದು, ನಿಮಗೆ ಅಚ್ಚರಿ ಎನಿಸಬಹುದು. ಜೊತೆಗೆ ಸುಧಾರಿತ ತಂತ್ರಜ್ಞಾನ ಮೂಲಕ ಫೋನ್‌ಗಳು ಚಿಕ್ಕ ಗಾತ್ರ ಪಡೆಯುತ್ತಿದ್ದರೆ ಈ ಐಫೋನ್ ಮಾತ್ರ ಯಾಕೆ ಇಷ್ಟೊಂದು ಬೃಹದಾಕಾರವಾಗಿದೆ?. ಇದನ್ನು ಬಳಕೆ ಮಾಡುವುದಾದರೂ ಹೇಗೆ?. ಈ ಫೋನ್ ಅನ್ನು ಹೇಗೆ ತಯಾರಿಸಲಾಗಿದೆ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮ ಮನಸ್ಸಲ್ಲಿ ಖಂಡಿತಾ ಮೂಡಿರುತ್ತವೆ. ಯಾಕೆಂದರೆ ಈ ಫೋನ್‌ ಅಂತಹ ಗಾತ್ರವನ್ನು ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಅಸಲಿಯತ್ತೇನು?, ಇದನ್ನು ತಯಾರು ಮಾಡಿದವರು ಯಾರು? ಎಂಬಿತ್ಯಾದಿ ಮಾಹಿತಿಯನ್ನು ತಿಳಿಯೋಣ ಬನ್ನಿ.

ಯೂಟ್ಯೂಬರ್‌ನಿಂದ ಜಗತ್ತಿನ ದೊಡ್ಡ ಐಫೋನ್‌ ನಿರ್ಮಾಣ; ಇದರ ವಿಶೇಷತೆ ಏನು?

ಬೃಹತ್‌ ಐಫೋನ್ ಅಲ್ಟ್ರಾ?: ಯೂಟ್ಯೂಬ್‌ ಕ್ರಿಯೇಟರ್ಸ್‌ಗಳು ತಮ್ಮ ವಿಡಿಯೋ ಮೂಲಕ ಹೆಚ್ಚಿನ ವೀಕ್ಷಣೆ ಪಡೆಯಲು ಹಾಗೂ ಹೊಸ ಹೊಸ ಚಂದಾದಾರನ್ನು ಪಡೆದುಕೊಳ್ಳುವ ಉದ್ದೇಶದಿಂದ ಏನಾದರೂ ಹೊಸ ಕಂಟೆಂಟ್‌ ಅನ್ನು ನೀಡುತ್ತಲೇ ಬರುತ್ತಿರುತ್ತಿರುತ್ತಾರೆ. ಅದರಂತೆ ಇಲ್ಲೋರ್ವ ಯೂಟ್ಯೂಬರ್ ಹಾಗೂ ಅವರ ಟೀಮ್‌ ಈ ಬೃಹತ್‌ ಐಫೋನ್‌ ಅನ್ನು ನಿರ್ಮಾಣ ಮಾಡಿದ್ದು, ಇದು ಥೇಟ್‌ ಐಫೋನ್ ಅಲ್ಟ್ರಾ ಎಂದು ಊಹಿಸಲಾಗಿದೆ.

ಈ ಫೋನ್‌ ನಿರ್ಮಾಣದ ವಿಡಿಯೋವನ್ನು ಖ್ಯಾತ ಯೂಟ್ಯೂಬ್‌ ಚಾನಲ್‌ ಆಗಿರುವ ಮ್ಯಾಥ್ಯೂ ಬೀಮ್ (Matthew Beem) ಎಂಬ ಚಾನಲ್ ನಲ್ಲಿ ಅಪ್‌ಲೋಡ್‌ ಮಾಡಲಾಗಿದೆ. ಇದೇ ರೀತಿಯ ಐಫೋನ್‌ ಅನ್ನು ಈ ಹಿಂದೆ ಯೂಟ್ಯೂಬರ್‌ ZHC ಎಂಬುವರು ತಯಾರು ಮಾಡಿದ್ದರು. ಇನ್ನು ಈ ಹೊಸ ಫೋನ್‌ ಬರೋಬ್ಬರಿ 8 ಅಡಿ ಎತ್ತರ ಹೊಂದಿದ್ದು, ಈ ಮೂಲಕ ಜಗತ್ತಿನಲ್ಲಿ ತನ್ನದೇ ಆದ ದಾಖಲೆಯನ್ನು ಬರೆದಿದೆ. ಅಷ್ಟು ಮಾತ್ರವಲ್ಲ ಈ ಫೋನ್‌ ನಿಜವಾದ ಐಫೋನ್‌ ರೀತಿಯಲ್ಲಿಯೇ ಕೆಲಸ ಮಾಡುತ್ತದಂತೆ.

ಈ ಫೋನ್‌ನಲ್ಲಿ ಏನೆಲ್ಲಾ ಮಾಡಬಹುದು?: ಈ ದೊಡ್ಡ ಫೋನ್‌ನಲ್ಲಿ ಬಳಕೆದಾರರು ಗೇಮ್‌ ಆಡಬಹುದು, ಚಿತ್ರಗಳನ್ನು ಕ್ಲಿಕ್ ಮಾಡಬಹುದು, ಆಪ್‌ಗಳನ್ನು ಬಳಕೆ ಮಾಡಬಹುದು ಹಾಗೂ ಇತರ ಹಲವು ಕೆಲಸಗಳನ್ನು ಈ ಫೋನ್‌ನಲ್ಲಿ ಮಾಡಬಹುದಾಗಿದೆ. ಅದರಂತೆ ಯೂಟ್ಯೂಬ್‌ನಲ್ಲಿ ಶೇರ್‌ ಮಾಡಿರುವ ವಿಡಿಯೋದಲ್ಲಿ, ನ್ಯೂಯಾರ್ಕ್ ನಗರದಲ್ಲಿ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳಲು ಈ ಫೋನ್‌ ಅನ್ನು ಮೆರವಣಿಗೆ ಮಾಡಲಾಗಿದೆ.

ಇನ್ನು ಇದೇ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ವಿಚಾರ ಏನೆಂದರೆ ಆಪಲ್‌ ಪೇ ಸಹ ಇದರಲ್ಲಿ ಕೆಲಸ ಮಾಡುತ್ತದೆ ಎಂಬುದು. ಜೊತೆಗೆ ಐಕಾನಿಕ್ ಸೈಟ್‌ಗಳ ಸೆಲ್ಫಿಗಳು ಮತ್ತು ಫೋಟೋಗಳನ್ನು ಕ್ಲಿಕ್ ಮಾಡಲಾಗಿದೆ. ಇನ್ನು ಈ ಸಂಬಂಧ ಪ್ರಸಿದ್ಧ ಟೆಕ್ ವಿಮರ್ಶಕರಾದ MKBHDಯ ಸ್ಟುಡಿಯೋದಲ್ಲಿ ಇದನ್ನು ಪರೀಕ್ಷಿಸಲಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗಿದೆ. ಜೊತೆಗೆ ಇದನ್ನು ಆಪಲ್‌ ಐಫೋನ್‌ 14 ಪ್ರೊ ಮ್ಯಾಕ್ಸ್‌ ಪ್ಲಸ್‌ ಅಲ್ಟ್ರಾ ಎಂದು ತಮಾಷೆಯಾಗಿ ವಿಮರ್ಷಕರು ಕರೆದಿದ್ದಾರೆ.

ಇದರ ನಿರ್ಮಾಣ ಹೇಗಾಯ್ತು?: ಈ 8 ಅಡಿಯ ಐಫೋನ್ ಅನ್ನು ವಿಶೇಷ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅಂದರೆ ಟಿವಿ ಡಿಸ್‌ಪ್ಲೇಯನ್ನು ಇದರಲ್ಲಿ ಬಳಕೆ ಮಾಡಲಾಗಿದೆಯಂತೆ. ಈ ಡಿಸ್‌ಪ್ಲೇಯನ್ನು ಇದರ ಒಳಗೆ ಇರುವ ಮ್ಯಾಕ್‌ ಮಿನಿ ಕಂಪ್ಯೂಟರ್‌ಗೆ ಲಗತ್ತಿಸಲಾಗಿದೆ. ಇದರಿಂದಾಗಿಯೇ ಐಫೋನ್‌ನಲ್ಲಿ ಬಳಸುವ ಆಪ್‌ಗಳನ್ನು ಚಲಾಯಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಇದರೊಂದಿಗೆ ಪವರ್ ಬಟನ್, ವಾಲ್ಯೂಮ್ ರಾಕರ್ಸ್ ಮತ್ತು ಮ್ಯೂಟ್ ಸ್ವಿಚ್ ಸೇರಿದಂತೆ ಆಫಲ್‌ ಫೋನ್‌ಗಳು ಏನೆಲ್ಲಾ ಬಾಹ್ಯ ಬಟನ್‌ಗಳನ್ನು ಹೊಂದಿವೆಯೋ ಆ ಎಲ್ಲಾ ಬಟನ್‌ ಈ ಫೋನ್‌ನಲ್ಲಿ ಕಾಣಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ ಇದು ಫೇಸ್‌ಟೈಮ್ ಮತ್ತು ಹಿಂಭಾಗ ಮತ್ತು ಮುಂಭಾಗದಲ್ಲಿ ಗ್ಲಾಸ್ ಫಿನಿಶ್ ಅನ್ನು ಸಹ ಹೊಂದಿದ್ದು, ಇದು ನಿಜವಾದ ಆಪಲ್‌ ಫೋನ್‌ಗಳನ್ನೇ ಮೀರಿಸುವಂತೆ ಕಾಣಿಸುತ್ತದೆ.

ಈ ಹೊಸ ಐಫೋನ್‌ ಈ ಹಿಂದೆ ಯೂಟ್ಯೂಬರ್ ZHC ತಯಾರು ಮಾಡಿದ್ದ 6 ಅಡಿ ಎತ್ತರದ ಐಫೋನ್‌ನ ದಾಖಲೆಯನ್ನು ಮೀರಿಸಿದೆ. ಯೂಟ್ಯೂಬರ್ ZHC ಯಲ್ಲಿ ಅಪ್ಲೋಡ್ ಮಾಡಿದ ಈ ವಿಡಿಯೋ 33,590,947 ವೀಕ್ಷಣೆ ಹೊಂದಿದ್ದು, ಇದನ್ನು ನವೆಂಬರ್‌ 23, 2020 ರಂದು ಅಪ್‌ಲೋಡ್‌ ಮಾಡಲಾಗಿದೆ. ಆದರೆ, ಈ ದಾಖಲೆಯನ್ನು ಮೀರಿಸುವತ್ತ ಬೀಮ್‌ ಮುಂದೆ ಸಾಗಿದೆ.

Best Mobiles in India

English summary
A YouTuber has created an eight-foot-long iPhone with his team. It is called the biggest phone in the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+