ಒಂದು ಬಾರಿ ಚಾರ್ಜ್‌ ಮಾಡಿದ್ರೆ 15 ವರ್ಷ ಬಾಳಿಕೆ ಬರುತ್ತೆ ಈ ವಾಚ್‌!

Written By:

ಪುಟ್ಟ ಮೊಬೈಲ್‌ ಚಾರ್ಜರ್‌ ಸುದ್ದಿ ನೀವು ಓದಿರಬಹುದು.ಈಗ ಕೈಗಡಿಯಾರದ ಸರದಿ. ವಿಶ್ವದ ಅತ್ಯಂತ ತೆಳ್ಳಗಿನ ಕೈಗಡಿಯಾರ ಬಿಡುಗಡೆಯಾಗಿದೆ. ಚಿಕಾಗೋ ಮೂಲದ ಕಂಪೆನಿ ಈ ವಾಚನ್ನು ತಯಾರಿಸಿದ್ದು ಹೇಗೆ ಬೇಕಾದ್ರೂ ಅದನ್ನು ಬಾಗಿಸಿದರೂ ಇದಕ್ಕೆ ಏನು ಆಗುದಿಲ್ಲ. ಅಷ್ಟೇ ಅಲ್ಲದೇ ಈ ಕೈಗಡಿಯಾರದಲ್ಲಿರುವ ಬ್ಯಾಟರಿಗೆ ಕೇವಲ 10 ನಿಮಿಷ ಚಾರ್ಜ್‌ ಮಾಡಿದ್ದಲ್ಲಿ, ಬ್ಯಾಟರಿ 15 ವರ್ಷದವರೆಗೆ ಬಾಳಿಕೆ ಬರುತ್ತದೆ. ಒಟ್ಟಿನಲ್ಲಿ ಈ ಕೈ ಗಡಿಯಾರ ಬಿಡುಗಡೆಯಾಗಿ ಭಾರೀ ಫೇಮಸ್ಸಾಗಿದೆ.ಹೀಗಾಗಿ ಈ ತೆಳು ಕೈಗಡಿಯಾರದ ಬಗ್ಗೆ ಕೆಲವು ಮಾಹಿತಿಗಳಿವೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ಈ ಕೈ ಗಡಿಯಾರ 0.8ಮಿಮೀ ಮಿಮೀಗಳಷ್ಟು ತೆಳ್ಳಗಿನ ಗಾತ್ರ ಹೊಂದಿದೆ..ಈಗ ಬಳಸುತ್ತಿರುವ ಕ್ರೆಡಿಟ್‌ ಕಾರ್ಡ್‌ಗಿಂತಲೂ ತೆಳುವಿದೆ.

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ಬಾಗಿಸಬಲ್ಲ ಉಕ್ಕಿನಿಂದ (bendy stainless steel) ಈ ಕೈ ಗಡಿಯಾರವನ್ನು ವಿನ್ಯಾಸ ಮಾಡಲಾಗಿದೆ

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ಎಲೆಕ್ಟ್ರಿಕ್‌ ಇಂಕ್‌ ಸ್ಕ್ರೀನ್ ಬಳಸಿ ಈ ಕೈಗಡಿಯಾರವನ್ನು ತಯಾರಿಸಿದ್ದಾರೆ.

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

Thinergy Micro-Energy ಬ್ಯಾಟರಿ ನೀಡಲಾಗಿದ್ದು,ಈ ಬ್ಯಾಟರಿಯನ್ನು 10 ನಿಮಿಷ ಚಾರ್ಜ್‌ ಮಾಡಿದ್ದಲ್ಲಿ, ಬ್ಯಾಟರಿ 15 ವರ್ಷದವರೆಗೆ ಬಾಳಿಕೆ ಬರುತ್ತದೆ ಎಂದು ವಾಚನ್ನು ತಯಾರಿಸಿದ ಕಂಪೆನಿ ಹೇಳಿದೆ.

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ಒಂದು ಮೈಕ್ರೋ ಎನರ್ಜಿ ಬ್ಯಾಟರಿ 10 ಸಾವಿರ ಸಲ ರಿಚಾರ್ಜ್‌ ಮಾಡಬಲ್ಲ ಸಾಮರ್ಥ್ಯ‌ ಹೊಂದಿದೆ.

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ಚಿಕಾಗೋ ಮೂಲದ ಸೆಂಟ್ರಲ್ Central Standard Timing ಕಂಪೆನಿ ಈ ವಾಚನ್ನು ತಯಾರಿಸಿದ್ದು, ಈ ವಾಚ್‌ಗೆ CST-01 ಎಂದು ಹೆಸರು ನೀಡಿದೆ.

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ವಿಶ್ವದ ಅತಿ ತೆಳ್ಳಗಿನ ಕೈಗಡಿಯಾರ

ಕಪ್ಪು,ಬಿಳಿ,ಹಳದಿ,ಕೆಂಪು ಬಣ್ಣದಲ್ಲಿ ಈ ಕೈಗಡಿಯಾರ ಡಿಸೆಂಬರ್‌ನಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಕೈ ಗಡಿಯಾರಕ್ಕೆ 109 ಡಾಲರ್‌(6 ಸಾವಿರ) ಬೆಲೆಯನ್ನು ಕಂಪೆನಿ ನಿಗದಿ ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot