ಅನಗತ್ಯ ಆಪ್‌ಗಳಿಗೆ ಈ ಅನುಮತಿ ಯಾಕೆ ಬೇಕು?... ಪೋನ್‌ನಲ್ಲಿ ಮೊದಲು ಈ ಕೆಲಸ ಮಾಡಿ
ಸ್ಮಾರ್ಟ್‌ಫೋನ್ ಸದ್ಯಕ್ಕೆ ಕರೆ ಹಾಗೂ ಮೆಸೆಜ್ ಮಾಡುವ ಸಂವಹನದ ಭಾಗವಾಗಿಯಷ್ಟೇ ಉಳಿದುಕೊಳ್ಳದೆ ಅಗತ್ಯ ಸೇವೆಗಳನ್ನು ನೀಡುವ ಅತ್ಯಾವಶ್ಯಕವಾದ ಡಿವೈಸ್ ಆಗಿದೆ. ಮುಂಜಾನೆಯಿಂದ ಮಲಗುವವರೆಗೂ ಬಹುಪಾಲು ಮಂದಿ ಸ್ಮಾರ್ಟ್‌ಫೋನ್‌ಅನ್ನು ಬಿಟ್ಟಿರುವುದಿಲ್ಲ. ಅಷ್ಟರ ಮಟ್ಟಿಗೆ ಸ್ಮಾರ್ಟ್‌ಫೋನ್‌ಅನ್ನು ಜನರು ದೈನಂದಿನ ಬದುಕಿನ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಈ ನಡುವೆ ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಕೆಲವು ಸಮಸ್ಯೆಗಳು ಸಹ ಕಂಡುಬರುವುದುಂಟು ಅವುಗಳನ್ನು ಸುಲಭವಾಗಿ ಪರಿಹರಿಸಿಕೊಳ್ಳಬಹುದು.

ಹೌದು, ಸ್ಮಾರ್ಟ್‌ಫೋನ್ ಖರೀದಿ ಮಾಡಿದ ತಕ್ಷಣ ಯಾರೇ ಆದರೂ ಅಗತ್ಯವಾದ ಆಪ್‌ಗಳನ್ನು ಫೋನ್‌ಗೆ ಇನ್‌ಸ್ಟಾಲ್ ಮಾಡಲು ಕಾತುರರಾಗಿರುತ್ತಾರೆ. ಈ ಕಾತುರ ಹೆಚ್ಚಾದಷ್ಟು ಫೋನ್‌ಗೆ ಸಮಸ್ಯೆ. ಯಾಕೆಂದರೆ ಫೋನ್‌ನಲ್ಲಿ ಆಪ್ ಇನ್‌ಸ್ಟಾಲ್ ಮಾಡುವುದಕಷ್ಟೇ ಕೇಂದ್ರೀಕರಿಸುವ ಬಹುಪಾಲು ಮಂದಿ ಆ ಆಪ್ ಯಾವೆಲ್ಲಾ ವಿಷಯಗಳಿಗೆ ಅನುಮತಿ ಪಡೆದುಕೊಂಡಿದೆ ಎನ್ನುವುದನ್ನ ಗಮನಿಸುವುದೇ ಇಲ್ಲ. ಇದನ್ನು ಯಾರೇ ಆದರೂ ಪ್ರಮುಖವಾಗಿ ತಿಳಿದುಕೊಳ್ಳಲೇಬೇಕು. ಇಲ್ಲವಾದರೆ ನಿಮ್ಮ ಫೋನ್‌ನ ಬ್ಯಾಟರಿಗೆ ಸಮಸ್ಯೆಯಾವುದರ ಜೊತೆಗೆ ಇತರೆ ಗಂಭೀರ ಸಮಸ್ಯೆಗಳಿಗೆ ಸಿಲುಕಬೇಕಾಗುತ್ತದೆ. ಹೀಗಾಗಿ ಇದನ್ನು ಹೇಗೆ ಪರಿಹರಿಸಿಕೊಳ್ಳಬೇಕು ಎಂಬ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಸ್ಮಾರ್ಟ್‌ಫೋನ್‌ನಲ್ಲಿ ನಾವು ಇನ್‌ಸ್ಟಾಲ್ ಮಾಡುವ ಆಪ್‌ಗಳಿಗೆ ಬೇಕಾದ ಅನುಮತಿ ನೀಡುವುದು ಅನಿವಾರ್ಯ. ಇಲ್ಲವಾದರೆ ಆಪ್‌ಗಳು ಕೆಲಸ ಮಾಡುವುದಿಲ್ಲ ಉದಾಹರಣೆ ಸಹಿತ ಹೇಳಬೇಕೆಂದರೆ ಹವಾಮಾನ ಸಂಬಂಧದ ಆಪ್ ಕೆಲಸ ಮಾಡಲು ಲೊಕೇಶನ್ ಅನಿವಾರ್ಯ, ಹಾಗೆಯೇ ಕರೆ ಆಪ್‌ಗೆ ಮೈಕ್ರೊಫೋನ್ ಅನುಮತಿ ಅನಿವಾರ್ಯ ಜೊತೆಗೆ ಕ್ಯಾಮೆರಾ ಆಪ್ ಬಳಕೆಗೆ ಸ್ಟೋರೇಜ್ ಮತ್ತು ಕ್ಯಾಮೆರಾ ಅನುಮತಿ ಅಗತ್ಯ.

ಆದರೂ ಸಹ ಕೆಲವೊಮ್ಮೆ ಕೆಲವು ಆಪ್‌ಗಳು ನಿಮ್ಮ ಡೇಟಾ ಹಾಗೂ ಇತರೆ ಮಾಹಿತಿಯನ್ನು ಕದಿಯುವ ಉದ್ದೇಶದಿಂದ ಅಗತ್ಯವಿಲ್ಲದ ಆಯ್ಕೆಗಳ ಅನುಮತಿಗಳನ್ನು ಕೇಳುತ್ತವೆ. ಉದಾಹರಣೆ ಸಹಿತ ಹೇಳುವುದಾದರೆ ಕರೆ ಮಾಡುವ ಆಪ್‌ಗೆ ಜಿಪಿಎಸ್ ಅನುಮತಿ ಬೇಕಿಲ್ಲ. ಹಾಗೆಯೇ ಹಲವಾರು ಆಪ್‌ಗಳು ಲೊಕೇಶನ್‌ಗೆ ಅನುಮತಿ ಕೇಳುತ್ತಲೇ ಇರುತ್ತವೆ. ಆದರೆ ಅನಗತ್ಯ ಎಂದಾಗ ನೀವು ಯಾವುದೇ ಕಾರಣಕ್ಕೂ ಅದಕ್ಕೆ ಅನುಮತಿ ನೀಡಬೇಡಿ.

ಅನುಮತಿ ನೀಡಿದರೆ ಏನಾಗುತ್ತದೆ?
ಪ್ರಸ್ತುತ ಅನಗತ್ಯ ಆಪ್‌ಗಳಿಗೆ ನೀವು ಲೊಕೇಶನ್ ಆಯ್ಕೆಗೆ ಅನುಮತಿ ನೀಡಿದರೆ ನಿಮ್ಮ ಮೊಬೈಲ್ ಅನ್ನು ಹ್ಯಾಕರ್ಸ್‌ಗಳು ಅಥವಾ ಆಪ್ ಡೆವಲಪರ್ಸ್‌ಗಳು ತಮ್ಮ ವಶಕ್ಕೆ ಪಡೆದು ಬೇಕಾದ ಮಾಹಿತಿಯನ್ನು ಅವರು ಬೇರೆಯವರಿಗೆ ಮಾರಬಹುದು. ಉದಾಹರಣೆಗೆ ನೀವು ಎಲ್ಲೇ ಸಂಚರಿಸಿದರೂ ಸಹ ಈ ಲೊಕೇಶನ್ ಆಯ್ಕೆಯಿಂದ ಅವರಿಗೆ ತಿಳಿಯುತ್ತದೆ. ಆಗ ಅವರು ನಿಮ್ಮ ಇಷ್ಟ ಕಷ್ಟಗಳನ್ನು ಅರ್ಥ ಮಾಡಿಳ್ಳುತ್ತಾರೆ. ಅದೇ ರೀತಿ ಅಗತ್ಯ ಇರುವವರಿಗೆ ನಿಮ್ಮ ಡೇಟಾವನ್ನು ಮಾರುತ್ತಾರೆ.

ಈ ಮೂಲಕ ನಿಮಗೆ ಕರೆಗಳು ಬರುತ್ತವೆ ಹಾಗೆಯೇ ನಿಮ್ಮ ಇಷ್ಟಕ್ಕೆ ಅನುಗುಣವಾಗಿ ಅವರು ಕೆಲವು ಆಫರ್‌ಗಳನ್ನು ನೀಡಲು ಮುಂದಾಗುತ್ತಾರೆ. ಈ ಪ್ರಕ್ರಿಯೆ ನಿರಂತರವಾಗಿರುತ್ತದೆ. ನೀವೇನಾದರೂ ತಕ್ಷಣವೇ ಈ ಅನುಮತಿ ನಿಷ್ಕ್ರಿಯಗೊಳಿಸಲು ಇಚ್ಚಿಸಿದರೆ ಈ ಹಂತಗಳನ್ನು ಅನುಸರಿಸುವ ಮೂಲಕ ಆಪ್‌ಗಳು ಪಡೆದುಕೊಂಡಿರುವ ಅನುಮತಿಯನ್ನು ನಿಷ್ಕ್ರಿಯಗೊಳಿಸಬಹುದು.

ಹಂತ 1
ಮೊದಲು ನಿಮ್ಮ ಆಂಡ್ರಾಯ್ಡ್ ಫೋನ್‌ನ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ಅಲ್ಲಿ ಕೆಳಗೆ ಸ್ಕ್ರಾಲ್ ಮಾಡಿದರೆ ಲೊಕೇಶನ್ ಆಯ್ಕೆ ಕಾಣಿಸಿಕೊಳ್ಳುತ್ತದೆ. ಅದನ್ನು ಟ್ಯಾಪ್ ಮಾಡಿ ನಂತರ ಅಪ್ಲಿಕೇಶನ್ ಸ್ಥಳ ಅನುಮತಿಗಳ ಆಯ್ಕೆಯನ್ನು ಒತ್ತಿರಿ.

ಹಂತ 2
ಇದಾದ ಬಳಿಕ ಲೊಕೇಶನ್ ಅನುಮತಿ ಪಡೆದುಕೊಂಡಿರುವ ಎಲ್ಲಾ ಆಪ್‌ಗಳ ಅನುಮತಿಯನ್ನು ರಿಮೂವ್ ಮಾಡಬಹುದು ಅಥವಾ ಆಪ್‌ಗಳಲ್ಲಿ ಯಾವುದಾದರೂ ಒಂದರಲ್ಲಿ ಮಾತ್ರ ಈ ಅನುಮತಿ ನಿಷ್ಕ್ರಿಯಗೊಳಿಸಲು ಮುಂದಾದರೆ ಆ ಅಪ್ ಐಕಾನ್ ಮೇಲೆ ಟ್ಯಾಪ್ ಮಾಡಬಹುದು.

ಇದಿಷ್ಟೇ ಅಲ್ಲದೆ ನಿಖರವಾದ ಲೊಕೇಶನ್ ಪ್ರವೇಶವನ್ನು ಸಹ ಆಫ್ ಮಾಡಬಹುದು. ಇದಕ್ಕಾಗಿ ಮೇಲಿನ ಮೊದಲ ಮಾರ್ಗವನ್ನೇ ಅನುಸರಿಸಿ. ಇದಾದ ನಂತರ ಲೊಕೇಶನ್ ಅನುಮತಿಗಳ ಮೇಲೆ ಟ್ಯಾಪ್ ಮಾಡಿ ಬಳಿಕ ಆಪ್ ಪಟ್ಟಿಯಿಂದ ನೀವು ಬದಲಾವಣೆಗಳನ್ನು ಮಾಡಲು ಮುಂದಾದರೆ ಯಾವುದಕ್ಕೆ ಅನುಮತಿ ಬೇಡವೋ ಅದನ್ನು ಟ್ಯಾಪ್ ಮಾಡಿ.

ಈ ಆಯ್ಕೆಯ ಮೂಲಕ ಲೊಕೇಶನ್ ಅನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಬಹುದು ಅಥವಾ ನಿಖರವಾದ ಸ್ಥಳವನ್ನು ಬಳಸಿ ಟಾಗಲ್ ಅನ್ನು ಆಫ್ ಮಾಡಬಹುದು. ಇದರಿಂದ ನಿಖರವಾದ ಲೊಕೇಶನ್‌ಗೆ ಆಪ್‌ಗಳು ಪ್ರವೇಶಿಸುವುದನ್ನು ತಡೆಯುತ್ತದೆ.


Click it and Unblock the Notifications








