ಕಂಡಕಂಡಲ್ಲಿ ಸೆಲ್ಪಿ ತೆಗೆದುಕೊಳ್ಳುವ ಮುನ್ನ ಈ ವರದಿ ನೋಡಿ..!
ಕಳೆದ ಒಂದು ವರ್ಷದಲ್ಲಿ ಒಟ್ಟು 127 ಮಂದಿ ಸೆಲ್ಫಿಗೆ ಬಲಿಯಾಗಿದ್ದಾರೆ, ಮೊನ್ನೆ ತಾನೇ ಬೆಂಗಳೂರಿನ ಬಿಡದಿಯ ಬಳಿ ಸೆಲ್ಫಿ ತೆಗದುಕೊಳ್ಳಲು ಹೋಗಿ ಮೂವರು ಸಾವನ್ನಪಿದ್ದ ಘಟನೆಯೂ ಮಾಸುವ ಮುನ್ನವೇ ಈ ಬೆಚ್ಚಿ ಬಿಳಿಸುವ ವರದಿ ಹೊರ ಬಿದಿದೆ.
ಭಾರತೀಯ ಮಾರುಕಟ್ಟೆಯಲ್ಲಿ ದಿನಕ್ಕೊಂದು ಸೆಲ್ಫಿ ಸಪೋರ್ಟ್ ಮಾಡುವ ಸ್ಮಾರ್‌ಫೋನ್‌ಗಳು ಕಾಣಿಸಿಕೊಳ್ಳುತ್ತಿದ್ದು, ಕಂಡಕಂಡಲ್ಲಿ ಸೆಲ್ಫಿ ತೆಗೆದುಕೊಳ್ಳುವ ಪರಿಪಾಠವು ಹೆಚ್ಚಾಗುತ್ತಿದೆ. ಇದೇ ಮಾದರಿಯಲ್ಲಿ ಸೆಲ್ಪಿ ಕ್ಲಿಕಿಸಲು ಹೋಗಿ ಪ್ರಾಣ ತೆತ್ತಂತಹ ಘಟನೆಗಳು ವರದಿಯಾಗುತ್ತಲೆ ಇದೆ.

ಓದಿರಿ: ಅಮೆಜಾನ್ ಸೇಲ್: ರೂ. 20,999ಕ್ಕೆ ಓನ್‌ಪ್ಲಸ್ 5, ರೂ. 14,999ಕ್ಕೆ ಹಾನರ್ 8.!
ಕಳೆದ ಒಂದು ವರ್ಷದಲ್ಲಿ ಒಟ್ಟು 127 ಮಂದಿ ಸೆಲ್ಫಿಗೆ ಬಲಿಯಾಗಿದ್ದಾರೆ, ಮೊನ್ನೆ ತಾನೇ ಬೆಂಗಳೂರಿನ ಬಿಡದಿಯ ಬಳಿ ಸೆಲ್ಫಿ ತೆಗದುಕೊಳ್ಳಲು ಹೋಗಿ ಮೂವರು ಸಾವನ್ನಪಿದ್ದ ಘಟನೆಯೂ ಮಾಸುವ ಮುನ್ನವೇ ಈ ಬೆಚ್ಚಿ ಬಿಳಿಸುವ ವರದಿ ಹೊರ ಬಿದಿದ್ದು, ಸೆಲ್ಫಿಗೆ ಬಲಿಯಾದವರಲ್ಲಿ ಭಾರತೀಯರೇ ನಂಬರ್ ಒನ್ ಎನ್ನಲಾಗಿದೆ.

ಭಾರತವೇ ನಂಬರ್ ಒನ್:
ಕಳೆದ ಒಂದು ವರ್ಷದಲ್ಲಿ ಭಾರತದಲ್ಲಿ ಸೆಲ್ಪಿ ತೆಗೆದುಕೊಳ್ಳಲು ಹೋಗಿ ಸುಮಾರು 76 ಮಂದಿ ಹತರಾಗಿದ್ದು, ನಂತರದಲ್ಲಿ ಸ್ಥಾನದಲ್ಲಿ ಪಾಕಿಸ್ಥಾನವನ್ನು ಕಾಣಬಹುದಾಗಿದೆ. ಭಾತರದಲ್ಲಿ ದಿನದಿಂದ ದಿನಕ್ಕೆ ಸೆಲ್ಫಿ ಕ್ರೆಜ್ ಹೆಚ್ಚಾಗುತ್ತಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.

ಹಲವೆಡೆ ಸೆಲ್ಫಿಗೆ ನಿಷೇಧ:
ದಿನೇ ದಿನೇ ಭಾರತದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಬಲಿಯಾಗುತ್ತಿರುವ ಪ್ರಕರಣಗಳು ಹೆಚ್ಚಗುತ್ತಿರುವ ಹಿನ್ನಲೆಯಲ್ಲಿ ದೇಶದ ಹಲವು ಕಡೆಗಳಲ್ಲಿ ಸೆಲ್ಫಿ ತೆಗದುಕೊಳ್ಳುವುದನ್ನು ನಿಷೇಧಿಸಲಾಗಿದೆ.

ಎಚ್ಚರವಾಗಿ:
ಅಪಾಯದ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗವ ಸಾಹಸ ಮಾಡದರಿ. ಒಂದೇ ಒಂದು ಫೋಟೋಗಾಗಿ ನಿಮ್ಮ ಜೀವನ್ನು ಕಳೆದುಕೊಳ್ಳಬೇಡಿ. ಜೀವ ಅಮೂಲ್ಯವಾದ್ದು.


Click it and Unblock the Notifications